ಸಮುದ್ರ ಪ್ರಯೋಗಕ್ಕೆ ವಿಕ್ರಾಂತ
Team Udayavani, Aug 5, 2021, 7:40 AM IST
ದೇಶೀಯ ತಂತ್ರಜ್ಞಾನದ ನೆರವಿನಿಂದ ನಿರ್ಮಿಸಲಾಗುತ್ತಿರುವ ಮೊದಲ ಯುದ್ಧ ವಿಮಾನ ವಾಹಕ (ಐಎಸಿ), ವಿಕ್ರಾಂತ್‌ನ ಪ್ರಾಯೋಗಿಕ ಸಮುದ್ರಯಾನ ಬುಧವಾರ ಶುರುವಾಗಿದೆ. ರಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದರೆ ಭಾರತಕ್ಕೆ ಸಂಬಂಧಿಸಿದಂತೆ ಇದೊಂದು ವಿಶೇಷ ಸಾಧನೆಯೇ. ಭಾರತೀಯ ನೌಕಾಪಡೆಯ ವಿನ್ಯಾಸ ವಿಭಾಗ, ನೌಕೆಯ ಹೇಗೆ ಇರಬೇಕು ಎಂದು ವಿನ್ಯಾಸ ರೂಪಿಸಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಅದರ ನಿರ್ಮಾಣ ಪೂರ್ಣಗೊಂಡು ದೇಶಕ್ಕೆ ಸಮರ್ಪಣೆಯಾಗುವ ಸಾಧ್ಯತೆಗಳಿವೆ. ಹೀಗಾದಾಗ ಯುದ್ಧ ವಿಮಾನ ವಾಹಕ ನೌಕೆಗಳನ್ನು ಹೊಂದಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ನಮ್ಮ ದೇಶವೂ ಸೇರಲಿದೆ.
- 816 ನೌಕೆಯ ಉದ್ದ
- 203 ನೌಕೆಯ ಅಗಲ
- 45 ಸಾವಿರ ಟನ್ ತೂಕ1,700 ಯೋಧರು, ನಾವಿಕರ ಸಾಮರ್ಥ್ಯ
- 52 ಕಿಮೀ ಪ್ರತೀ ಗಂಟೆಗೆ ಗರಿಷ್ಠ ವೇಗ
- 14 ಡೆಕ್‌ಗಳು 2,300
- ಕಂಪಾರ್ಟ್‌ಮೆಂಟ್‌ಗಳು
- 20 ಸಾವಿರ ಕೋಟಿ ರೂ.ನಿರ್ಮಾಣ ವೆಚ್ಚ
ಪ್ರಾಮುಖ್ಯ ಏನು? : ದೇಶದ ನೌಕಾಪಡೆಗೆ ಹೆಚ್ಚಿನ ಯುದ್ಧ ಶಕ್ತಿ ತುಂಬಲಿದೆ. ದಕ್ಷಿಣ ಚೀನ ಸಮುದ್ರ, ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನ ದುಸ್ಸಾಹಸ ತಡೆಯಲು.
ವಿಶೇಷ ಏನು? :
- 1971ರ ಯುದ್ಧದಲ್ಲಿ ಜಯ ಸಾಧಿಸಿದ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿಯೇ ಪ್ರಾಯೋಗಿಕ ಯಾನಕ್ಕೆ ತೆರಳಿದೆ.
- ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತ ಯೋಜನೆಯ ಅನ್ವಯ ನಿರ್ಮಾಣ.
- ದೇಶದ ಮೊದಲ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್ ನೆನಪಲ್ಲಿ ಅದೇ ಹೆಸರು ಇರಿಸಲಾಗಿದೆ.
- ಸದ್ಯ ಇರುವ ಯುದ್ಧ ವಿಮಾನ ವಾಹಕ ನೌಕೆ – ಐಎನ್‌ಎಸ್ ವಿಕ್ರಮಾದಿತ
ಏನೇನು ಇರಲಿದೆ? :
- 24 ರಷ್ಯಾ ನಿರ್ಮಿತ ಮಿಗ್-29ಕೆ ಫೈಟರ್ ಜೆಟ್‌ಎಂಎಚ್-60 ಆರ್
- ಬಹೂಪಯೋಗಿ ಹೆಲಿಕಾಪ್ಟರ್
- 2023ರಿಂದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಹಾರಾಟ
ಕೊರೊನಾ ಸೋಂಕಿನ ಬಿಕ್ಕಟ್ಟಿನ ಹೊರತಾಗಿಯೂ, ದೇಶೀಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಯುದ್ಧ ವಿಮಾನ ವಾಹಕ ನೌಕೆಯ ಪ್ರಾಯೋಗಿಕ ಸಮುದ್ರಯಾನ ಶುರುವಾದದ್ದು ದೇಶಕ್ಕೆ ಹೆಮ್ಮೆ. ಇದು ನಮ್ಮ ಯೋಧರ, ವಿನ್ಯಾಸಕಾರರ ನಿಷ್ಠೆಯನ್ನು ತೋರಿಸುತ್ತದೆ.-ರಾಜನಾಥ್ ಸಿಂಗ್, ರಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.