ಪ್ರಜ್ಞಾವಂತ ಯುವ ಶಕ್ತಿಯಿಂದ ಗ್ರಾಮ ಸ್ವರಾಜ್ಯ


Team Udayavani, Dec 18, 2020, 5:44 AM IST

ಪ್ರಜ್ಞಾವಂತ ಯುವ ಶಕ್ತಿಯಿಂದ ಗ್ರಾಮ ಸ್ವರಾಜ್ಯ

ಸಾಂದರ್ಭಿಕ ಚಿತ್ರ

ಯುವ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಅತ್ಯ ಮೂಲ್ಯವಾದುದು. ದೇಶದ ಆದರ್ಶ ವಿಸ್ತೀರ್ಣ ವನ್ನು ಅವಲಂಬಿಸಿ ಇರುವುದಲ್ಲ ಅಥವಾ ಜನಗಣ ತಿಯ ಆಧಾರದಲ್ಲಿ ಕೋಟಿ ಕೋಟಿ ಪ್ರಜೆಗಳಿಂದಲ್ಲ. ಇಲ್ಲಿ ಮುಖ್ಯವಾಗಿ ಕಂಡು ಬರುವುದು ಸತøಜೆಗಳು. ಇವರಿಂದಲೇ ಆದರ್ಶ ರಾಷ್ಟ್ರ ನಿರ್ಮಾಣ. ಯುವ ಶಕ್ತಿ ಭಾರತದ ಬೆನ್ನೆಲುಬು. ಸುಸಂಸ್ಕೃತ ಯುವ ಶಕ್ತಿಯಿಂದ ದೇಶದ ಸಂಪನ್ನತೆ. ಯುವಜನತೆ ಎರಡೂ ಕಡೆಗೂ ಗಮನ ಹರಿಸಬೇಕು. ಅದ್ಯಾವು ದೆಂದರೆ ಋಷಿ-ಕೃಷಿ ಪರಂಪರೆ. ಈಗ ಸಾಕಷ್ಟು ಯುವಜನರಲ್ಲಿ ಕೃಷಿ, ಹೈನುಗಾರಿಕೆ ಇನ್ನಿತರ ಕ್ಷೇತ್ರ ಗಳ ಬಗ್ಗೆ ಪ್ರೀತಿ ಹುಟ್ಟಿರುವುದು ಸಂತಸದ ವಿಚಾರ.

ಕೃಷಿಕನು ಮನುಷ್ಯನ ದೈಹಿಕವಾದ ಬೆಳವಣಿಗೆಗೆ ಪೂರಕವಾದಂತಹ ಆಹಾರವನ್ನು ಪೂರೈಸಬಲ್ಲ ಹಾಗೂ ಹೇಗೆ ಬದುಕಬೇಕೆಂಬುದನ್ನು ಋಷಿಯು ತಿಳಿಸಿಕೊಡುತ್ತಾನೆ. ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಕೃಷಿ-ಋಷಿಯು ಬದುಕಿನ ಎರಡು ಮುಖಗಳಾಗ ಬೇಕು. ಗ್ರಾಮಗಳಲ್ಲಿ ನಡೆಯುವ ಪಂಚಾಯತ್‌ ಚುಣಾವಣೆಗಳಲ್ಲಿ ಸ್ಪರ್ಧೆಗಳನ್ನು ಕಾಣಬಹುದು. ತಪ್ಪೇನೂ ಅಲ್ಲ. ಆರೋಗ್ಯಕರ ಸ್ಪರ್ಧೆಗಳಿಂದ ಸಮಾಜಕ್ಕೆ ಒಳಿತೆ. ಜನಪ್ರತಿನಿಧಿ ಯಾಗಿ ಆಯ್ಕೆಗೊಂಡವರು ತಮ್ಮ ಹುದ್ದೆ ಏನು? ಹೇಗೆ? ಎಂಬುದನ್ನು ಅರಿತುಕೊಂಡು ತನ್ನ ಅ ಧಿಕಾರವನ್ನು ಕರ್ತವ್ಯವಾಗಿಸಿಕೊಂಡಾಗ ತಾನೂ ಬೆಳೆಯುವುದರ ಜತೆಗೆ ಗ್ರಾಮ ವಿಕಾಸವೂ ಸಾಧ್ಯವಾಗುತ್ತದೆ.

ಭಾರತ ದೇಶವನ್ನು ಒಮ್ಮೆ ಕಣ್ತೆರೆದು ನೋಡಿದಾಗ ಭವ್ಯತೆ-ದಿವ್ಯತೆ ಎದ್ದು ಕಾಣುವುದು. ಭಾರತದ ಹೃದಯವಾಗಿರುವ ಅಧ್ಯಾತ್ಮದ ಅಂದ-ಚಂದವು ನಮ್ಮ ಬದುಕಿಗೆ ದಾರಿದೀಪ. ಹಿಂದೊಮ್ಮೆ ಯಾಜ್ಞ

ವಲ್ಕರು ಪ್ರವಚನಕ್ಕೆ ಸನ್ನದ್ಧರಾಗಿದ್ದರು. ಶ್ರೋತೃಗಳು ಸೇರಿದ್ದರೂ ಪ್ರವಚನ ಆರಂಭಿಸಲಿಲ್ಲ. ಏಕೆಂದರೆ ಜನಕ ಮಹಾರಾಜನು ಬಂದಿರಲಿಲ್ಲ. ಅನಂತರ ಆಗಮಿಸಿದ ಜನಕನು ಋಷಿಗಳಿಗೆ ನಮಸ್ಕರಿಸಿ ಪ್ರವಚನದ ಅಪೇಕ್ಷೆಯನ್ನು ಮುಂದಿ ಟ್ಟನು. ಜತೆಗೆ ಒಂದು ಪ್ರಶ್ನೆಯನ್ನೂ ಕೇಳಿದನು. ಮನುಷ್ಯನಿಗೆ ಬೆಳಕಾಗು ವುದು ಯಾವುದು? ಎಂದು. ತಟ್ಟನೆ ಋಷಿಗಳು ಸೂರ್ಯನೆಂದು ಉತ್ತ ರಿಸಿದರು. ಜನಕನು ಉದಯಿಸಿದ ಸೂರ್ಯನಿಗೆ ಅಸ್ತಮಾನವಿದೆ ಎಂದನು. ಸೂರ್ಯನಿಲ್ಲದೆ ಪ್ರಕೃತಿ ಇಲ್ಲ. ಪ್ರಕೃತಿಯ ಆಗು-ಹೋಗುಗಳಿಗೆ ಸೂರ್ಯನ ಕೃಪೆ ಇರಬೇಕು. ಸೂರ್ಯ
ನಿಲ್ಲದಿದ್ದರೆ ಏನಂತೆ ಚಂದ್ರನಿರುವನು ಎಂದರು. ಅದಕ್ಕೆ ಜನಕ ಮಹಾರಾಜನು ಚಂದ್ರನಿಗೂ ವೃದ್ಧಿ-ಕ್ಷಯವಿದೆ, ಅಮಾವಾಸ್ಯೆಗೆ ಚಂದ್ರನೆಲ್ಲಿ? ಎಂದನು. ಆಗ ಯಾಜ್ಞವಲ್ಕರು ವೃದ್ಧಿ- ಕ್ಷಯವು ಇರುವುದು ಸ್ವಾಭಾವಿಕ, ದೀಪವೊಂದನ್ನು ಹಚ್ಚಿದರಾ ಯಿತು ಎಂದರು. ಯಾಜ್ಞವಲ್ಕರ ಮಾತಿಗೆ ಜನಕ ಮಹಾರಾಜನು, ತೈಲವು ಮುಗಿದರೆ ದೀಪ ಹೇಗೆ ಉರಿಯುವುದು? ಇದು ಆಶ್ಚರ್ಯವೇನಲ್ಲ. ದೀಪಕ್ಕೆ ತೈಲವನ್ನು ಹಾಕುತ್ತಾ ಇರಬೇಕು. ಉರಿದುಹೋದಂತೆ ಬತ್ತಿಗಳನ್ನು ಮತ್ತೆ ಸೇರಿಸಬೇಕು. ಇದು ನಿಯಮ. ದೀಪವೂ ಇಲ್ಲದಿದ್ದಲ್ಲಿ ಶಬ್ದದಿಂದ ಬೆಳಕಾಗುವುದು ಎಂದರು. ಶಬ್ದವೂ ಇಲ್ಲದಿದ್ದರೆ ಮನುಷ್ಯನಿಗೆ ಬೆಳಕೆಲ್ಲಿಂದ? ಎಂದು ಜನಕನು ಪ್ರಶ್ನಿಸಿದನು.

ಯಾಜ್ಞವಲ್ಕéರು, ಶಬ್ದವಿಲ್ಲದಿದ್ದರೂ ಮನುಷ್ಯನಿಗೆ ಅವನಲ್ಲಿಯೇ ಹುದುಗಿರುವ ಅಂತಜ್ಯೋìತಿ ಯೊಂದು ಇರುವುದು. ಇದರಿಂದಲೇ ಮನುಷ್ಯನಿಗೆ ಬೆಳಕಾಗುವುದು ಎಂದರು. ಜನಕ ಮಹಾರಾಜನು ತೃಪ್ತನಾದರೂ ಇದರ ಹಿಂದೆ ಸತ್ಯ ಅಡಗಿದೆ. ಹುಟ್ಟುವಾಗಲೇ ನಾವೆಲ್ಲ ಆತ್ಮಜ್ಯೋತಿಯನ್ನು ಇರಿಸಿ ಕೊಂಡೆ ಜನ್ಮಕ್ಕೆ ಬಂದಿರುವಂತದ್ದು. ಇಲ್ಲಿ ಋಷಿಯ ಸಹಾಯದಿಂದಲೇ ಅರ್ಥಾತ್‌ ಸಂಸ್ಕಾರದಿಂದಲೇ ಬದುಕನ್ನು ಬೆಳಗಿಸಬೇಕಾಗಿದೆ.

ವೃಕ್ಷ ಸಂಸ್ಕಾರ, ದೀಪ ಸಂಸ್ಕಾರ, ಆತ್ಮ ಸಂಸ್ಕಾರ ಹೀಗೆ ಜೀವನದಲ್ಲಿ ಹತ್ತು-ಹದಿನಾರು ಸಂಸ್ಕಾರಗಳು ಇವೆ. ಎಲ್ಲವನ್ನು ಒಮ್ಮೆ ಅವಲೋಕಿಸಿ ನೋಡಬೇಕಾದ ಅನಿವಾರ್ಯವಿದೆ. ಕಾಡಿನ ರಾಜ ಸಿಂಹವು ತಾನು ನಡೆದುಹೋಗುವಾಗ ಒಂದೊಮ್ಮೆ ಕತ್ತನ್ನೆತ್ತಿ ತಾನು ಬಂದ ದಾರಿಯನ್ನು ತಿರುಗಿ ನೋಡುತ್ತದೆ. ಅನಂತರ ಮುಂದಿನ ದಾರಿಯನ್ನು ಕತ್ತೆತ್ತಿ ನೋಡುತ್ತದೆ. ಇಲ್ಲಿ ನಾವು ತಿಳಿಯಬಹುದು. ನಡೆದ ದಾರಿಯಿಂದ ಅಪಾಯವಿದೆಯೋ? ಎನ್ನುವುದು ಒಂದಾದರೆ ಇನ್ನೊಂದು ಮುಂದಿನ ದಾರಿಯಲ್ಲಿ ತೊಡಕಿದೆಯೋ? ಎಂದು.

ಮನುಷ್ಯನು ಪ್ರತೀದಿನ ಸಿಂಹಾವಲೋಕನ ಮಾಡ ಬೇಕಾದ ಅಗತ್ಯ ಇದೆ. ಒಟ್ಟಾರೆ ವ್ಯಕ್ತಿ ವಿಕಾಸದಿಂದಲೇ ದೇಶ ವಿಕಾಸ ಎನ್ನುವ ಸತ್ಯ ಎದ್ದು ಕಾಣುತ್ತದೆ. ಗ್ರಾಮ ವಿಕಾಸದ ಬಗ್ಗೆ ನಾವೊಮ್ಮೆ ಕಣ್ಣಾಡಿಸಿದಾಗ ಗ್ರಾಮದ ಸಶಕ್ತೀಕರಣ ಹೇಗೆ ಸಾಧ್ಯ ಎನ್ನುವುದನ್ನು ಮನಗಾಣಬೇಕು. ಇಲ್ಲಿ ಗೋಚರಕ್ಕೆ ಬರುವುದು ಪ್ರಜ್ಞಾವಂತ ಯುವಶಕ್ತಿಯ ಪಾತ್ರ. ವ್ಯಕ್ತಿ ವಿಕಾಸ ಎಂದರೆ ಅಂತರಂಗದ ವಿಕಾಸವೇ. ಅಂತರಂಗದ ವಿಕಾಸವಾದರೆ ಪ್ರೀತಿ ಭಾವವು ಬೆಳೆಯುತ್ತದೆ. ದ್ವೇಷ ಭಾವನೆಗೆ ಜಾಗವಿರದು. ಇಂತಹ ಕಲ್ಪನೆಗಳು ಮನಸ್ಸಿನಲ್ಲಿ ಮೂಡಿದಾಗ ಒಟ್ಟು ಸಮಾಜದ ಅಭಿವೃದ್ಧಿಗೆ ತನ್ನನ್ನು ತೊಡಗಿಸಿಕೊಳ್ಳಬೇಕಾದಂತಹ ಅನಿವಾರ್ಯ ಇರುವುದು.

ಒಂದು ಸಲ ಭಗವಾನ್‌ ಮಹಾವೀರ ತೀರ್ಥಂ ಕರರ ಬದುಕಿನಲ್ಲಿ ನಡೆದ ಘಟನೆ – ಅವರು ಮರಳಿನ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಓರ್ವ ವ್ಯಕ್ತಿ “ನೀವ್ಯಾರು? ಮಹಾರಾಜರೇ’ ಎಂದು ಪ್ರಶ್ನಿಸಿದನು. “ಹೌದೆಂದರು’ ತೀರ್ಥಂಕರರು. “ನಿಮ್ಮ ಸೈನ್ಯವೆಲ್ಲಿ? ಎಂದು ಕೇಳಿದನು. “ನನ್ನ ರಾಜ್ಯಕ್ಕೆ ನಾನೇ ರಾಜನಾದುದರಿಂದ ನನಗೆ ಮಂತ್ರಿ- ಮಹೋದಯರ, ಸೈನ್ಯದ ಅಗತ್ಯವಿರದು’ ಎಂದರು. ಹಾಗಾದರೆ “ನಿಮ್ಮ ರಾಜ್ಯ ಯಾವುದು?’ ಎಂದು ಕೇಳಿದಾಗ ತೀರ್ಥಂಕರರು, “ತನ್ನ ಶರೀರವೇ ರಾಜ್ಯ’ ಎಂದರು. ಹೇಗೆಂದರೆ “ಇಂದ್ರಿಯ, ಮನಸ್ಸುಗಳನ್ನು ನಾನು ಹೇಳಿದಂತೆ ಕೇಳುವಂತೆ ಮಾಡಿಕೊಂಡಿದ್ದೇನೆ. ಅರ್ಥಾತ್‌ ದಾಸರಾಗಿಸಿದ್ದೇನೆ. ನಾವು ಅದರ ದಾಸರಾಗಿಲ್ಲ. ಆದುದರಿಂದ ನಮ್ಮಲ್ಲಿ ದ್ವೇಷಭಾವವು ಇರದು. ಹಾಗಾಗಿ ನನ್ನ ರಾಜ್ಯಕ್ಕೆ ನಾನೇ ರಾಜ’ ಎಂದರು.

ಅಧ್ಯಾತ್ಮವು ಎಷ್ಟು ಆಳವಾಗಿದೆ? ಎಂದು ಅರ್ಥೈ ಸಬಹುದು. ಅದಕ್ಕಾಗಿಯೇ ಭಾರತವು “ಭಾ’ ಎನ್ನುವ ಬೆಳಕಿನಿಂದ ಕೂಡಿರುತ್ತದೆ. ಅದೇ ಅಧ್ಯಾತ್ಮದ ಬೆಳಕು. ಗ್ರಾಮ ಸ್ವರಾಜ್ಯವನ್ನು ಕಟ್ಟುವ ಕಾರ್ಯದಲ್ಲಿ ಅಧ್ಯಾತ್ಮವೂ ಅನಿವಾರ್ಯ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಧರ್ಮದ ಪ್ರಜ್ಞೆಯೊಂದಿಗೆ ಬೆಳೆದಾಗ ಗ್ರಾಮವು ಸುಭಿಕ್ಷವಾಗುವುದು. ಬದುಕಿ-ಬದುಕ ಬಿಡುವ ವಿಶೇಷತೆಯೊಂದಿಗೆ ಸ್ವರಾಜ್ಯದ ಕನಸು ಸಾಕಾರಗೊಳ್ಳುವುದು.
|| ಶ್ರೀ ಗುರುದತ್ತಾತ್ರೇಯೋ ವಿಜಯತೇ ||

ಚುನಾವಣೆಯ ಅನಂತರದಲ್ಲಿ ಕಾಣಿಸಿ ಕೊಳ್ಳುವ ಭಿನ್ನತೆಗಳು, ಸಮಸ್ಯೆಗಳು ಬರದಂತೆ, ಸೋತವರು- ಗೆದ್ದವರು ಎನ್ನುವ ತಿಕ್ಕಾಟವನ್ನು ಕಡಿಮೆ ಮಾಡಿ ಜತೆ ಜತೆಯಾಗಿ ಸಾಗುವ ಸಂಕಲ್ಪವನ್ನು ಮಾಡಿದಾಗ ಗ್ರಾಮ ಸ್ವರಾಜ್ಯ ಸ್ಥಾಪಿತವಾಗುತ್ತದೆ. ಸೋಲು- ಗೆಲುವು ಅನ್ನುವಂಥದ್ದು ಶಾಶ್ವತವಾದ ಸ್ಥಿತಿಯಲ್ಲ. ಅಲ್ಲಿ ಮುಂದೆ ಪರಿವರ್ತನೆಯು ಇರಬಹುದು. ಆಯ್ಕೆ ಗೊಂಡ ವ್ಯಕ್ತಿಯು ಸಂಪೂರ್ಣವಾಗಿ ತನ್ನನ್ನು ತೊಡಗಿಸಿ ಕೊಳ್ಳುವುದರಲ್ಲಿ ವ್ಯಕ್ತಿತ್ವ ವಿಕಸನವೂ ಆಗುತ್ತದೆ. ಆದರ್ಶ ಪ್ರತಿನಿ ಧಿಯಾಗಿ ಆತ ರೂಪುಗೊಳ್ಳುತ್ತಾನೆ. ವ್ಯಕ್ತಿ ವಿಕಾಸ ದಿಂದಲೇ ಗ್ರಾಮ ವಿಕಾಸ, ಗ್ರಾಮ ವಿಕಾಸದಿಂದಲೇ ದೇಶ ವಿಕಾಸ. ಶಿಕ್ಷಣದ ಉತ್ತುಂಗಕ್ಕೇರಿದರೂ ನಾವು ಮೂಲವನ್ನು ಮರೆಯಬಾರದು. ಮತ ಚಲಾವಣೆ ಸ್ವಮತಿಯಿಂದ ಕೂಡಿರಬೇಕು. ಆಶೆ-ಆಮಿಷಗಳಿಗೆ ಬಲಿಯಾಗದೆ ಅತ್ಯಮೂಲ್ಯವಾದ ಮತವನ್ನು ಚಲಾಯಿಸಬೇಕು.

ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌

ಟಾಪ್ ನ್ಯೂಸ್

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.