Vindhyagiri: 17ರಂದು ವಿಂಧ್ಯಗಿರಿ ಅನಾವರಣ
Team Udayavani, Aug 13, 2023, 9:32 PM IST
ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ನೌಕಾ ಪರಂಪರೆಯ ಗರಿಮೆಯೊಂದಿಗೆ ಹೆಚ್ಚಿಸಲು ಸಜ್ಜುಗೊಂಡಿರುವ, ಶತ್ರುಗಳ ಹಿಮ್ಮೆಟ್ಟಿಸುವ ಅತ್ಯಾಧುನಿಕ ಸಮರ ನೌಕೆಯನ್ನು ಆ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಹಾಗೂ ಇಂಜಿನಿಯರ್ (ಜಿಆರ್‌ಎಸ್‌ಇ)ನಲ್ಲಿ ಅನಾವರಣಗೊಳಿಸಲಿದ್ದಾರೆ. ಕರ್ನಾಟಕದ ಮೇರು ಪರ್ವತ “ವಿಂಧ್ಯಗಿರಿ”ಯ ಹೆಸರಿನೊಂದಿಗೆ ನೌಕಾಪಡೆಯ ಬಲವಾಗಿ ನಿಲ್ಲಲಿರುವ ಅತ್ಯಾಧುನಿಕ ಸಮರನೌಕೆಯೇ “ವಿಂಧ್ಯಗಿರಿ” .. ಈ ಕುರಿತ ಕೆಲ ವಿವರ ಇಂತಿದೆ.
ಆತ್ಮನಿರ್ಭರ ಭಾರತದತ್ತ ಹೆಜ್ಜೆ
ದೇಶಿಯ ನೌಕಾ ತಯಾರಿಕ ಸಂಸ್ಥೆಗಳಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಹಾಗೂ ಇಂಜಿನಿಯರ್ (ಜಿಆರ್‌ಎಸ್‌ಇ) ಮತ್ತು ಮಡಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಪ್ರಾಜೆಕ್ಟ್ 17ಎ ಸಮರನೌಕೆಗಳ ಪೈಕಿ ವಿಂಧ್ಯಗಿರಿ 6ನೇ ಯುದ್ಧನೌಕೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನೌಕೆಯಲ್ಲಿ ಶೇ.75ರಷ್ಟು ದೇಶೀಯ ವಸ್ತುಗಳನ್ನೇ ಅಳವಡಿಸಲಾಗುತ್ತಿದೆ. ಈ ನೌಕೆಗಳು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಭರ ಸಾಧನೆಗೆ ಹಿಡಿದ ಕೈಗನ್ನಡಿ.
ಐಎನ್‌ಎಸ್ ವಿಂಧ್ಯಗಿರಿ ಗೌರವಾರ್ಥ
1981ರ ಜುಲೈನಿಂದ 2012ರ ಜೂನ್‌ವರೆಗೆ ಸುದೀರ್ಘ 31 ವರ್ಷಗಳ ಸೇವೆ ಸಲ್ಲಿಸಿದ್ದ ಸಮರ ನೌಕೆ, ಐಎನ್‌ಎಸ್ ವಿಂಧ್ಯಗಿರಿ! ತನ್ನ ಸಂಪೂರ್ಣ ಸೇವಾ ಅವಧಿಯಲ್ಲಿ ಹಲವಾರು ಸವಾಲುಗಳನ್ನು ಮೆಟ್ಟಿ, ದಿಗ್ವಿಜಯದ ಪತಾಕೆಗಳನ್ನು ಹಾರಿಸಿದ ನೌಕಾಪಡೆಯ ಈ ಹೆಮ್ಮೆಯ ನೌಕೆಯ ಗೌರವಾರ್ಥವಾಗಿ ಇದೀಗ ಪ್ರಾಜೆಕ್ಟ್ 17ಎ ಅನ್ವಯ ಅಭಿವೃದ್ಧಿಗೊಂಡಿರುವ ಸಮರನೌಕೆಗೆ ವಿಂಧ್ಯಗಿರಿ ಎಂದು ಹೆಸರಿಡಲಾಗಿದೆ.
ವಿಂಧ್ಯಗಿರಿ ವೈಶಿಷ್ಟ್ಯವೇನು ?
* ಸುಧಾರಿತ ರಹಸ್ಯ ತಂತ್ರಜ್ಞಾನ
* ಶಸ್ತ್ರಾಸ್ತ್ರ ಸಂವೇದಕ ವ್ಯವಸ್ಥೆ
* ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ
* ಪ್ರಬಲ ಯುದ್ಧಸಾಮರ್ಥ್ಯ
* ಶಿವಾಲಿಕ್ ಕ್ಲಾಸ್ ನೌಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.