![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Apr 30, 2021, 11:06 AM IST
ಆನೆಗಳು ಎಷ್ಟು ಬುದ್ದಿವಂತ ಪ್ರಾಣಿಗಳು ಎಂದು ಸಾಮಾನ್ಯವಾಗಿ ನಿಮಗೆ ಗೊತ್ತಿದೆ. ತುಂಬಾ ನೆನಪಿನ ಶಕ್ತಿಯನ್ನು ಹೊಂದಿರುವ ಪ್ರಾಣಿಗಳ ಪೈಕಿ ಆನೆಗಳು ಕೂಡ ಒಂದು. ಭೂಮಿಯ ಮೇಲೆ ವಾಸಿಸುವ ಎಲ್ಲಾ ಪ್ರಾಣಿಗಳಿಗಿಂತ ಆನೆಯ ಮೆದುಳಿನ ಗಾತ್ರ ತುಂಬಾ ದೊಡ್ಡದು ಮತ್ತು ಮಾನವನ ನರಕೋಶಕ್ಕೆ ಹೋಲಿಕೆ ಮಾಡಿದರೆ ಆನೆಯಲ್ಲಿ ಮೂರು ಪಟ್ಟು ಹೆಚ್ಚಿರುತ್ತದೆ.
ಆನೆಗಳ ಬಗೆಗಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾನೆ ಇರುತ್ತವೆ. ಮಾನವನ ನಡೆಯನ್ನು ಕೆಲವು ಬಾರಿ ನಕಲು ಮಾಡುವ ಮೂಲಕ ಆನೆಗಳು ಗಮನ ಸೆಳೆಯುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಯಾರಿದ ಆನೆಯು ನೀರನ್ನು ಕುಡಿಯಲು ತನ್ನ ಸೊಂಡಿಲಿನಿಂದ ಕೈ-ಪಂಪ್ ಅನ್ನು ಒತ್ತುವ ಮೂಲಕ ನೀರನ್ನು ಕುಡಿದಿದೆ. ಯಾರ ಸಹಾಯ ಇಲ್ಲದೆ ಆನೆ ನೀರನ್ನು ಕುಡಿಯುತ್ತಿರುವ ದೃಶ್ಯ ನೋಡುಗರಿಗೆ ಆಶ್ಚರ್ಯ ಮೂಡಿಸುತ್ತದೆ. ಸೊಂಡಿಲಿನಲ್ಲಿ ಹ್ಯಾಂಪ್ ಪಂಪ್ ಒತ್ತುವ ಮೂಲಕ ನೀರನ್ನು ಹೊರ ತೆಗೆಯುತ್ತದೆ. ನೀರು ಹೊರಬರುತ್ತಿದ್ದಂತೆ ಸೊಂಡಿಲ ಮೂಲಕ ಕುಡಿಯುತ್ತದೆ.
ವಿಡಿಯೋವನ್ನು ಎಲ್ಲಿಂದ ಚಿತ್ರೀಕರಣ ಮಾಡಲಾಗಿದೆ ಮತ್ತು ಯಾವ ಪ್ರದೇಶದ್ದು ಎಂದು ಗೊತ್ತಿಲ್ಲ. ಆದ್ರೆ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಸದ್ದು ಮಾಡುವ ಮೂಲಕ ನೋಡುಗರನ್ನು ಖುಷಿಪಡಿಸಿದೆ.
You seem to have an Ad Blocker on.
To continue reading, please turn it off or whitelist Udayavani.