ಅನಿಲದ ವಿಚಾರದಲ್ಲಿ ಮಾತಿನ ಸ್ಫೋಟ
Team Udayavani, Jan 31, 2022, 6:30 AM IST
ಇದು ಪರಸ್ಪರ ಎದುರಾಳಿ ರಾಜಕೀಯ ಪಕ್ಷಗಳ ನಾಯಕರ ನಡುವಿನ ವಾಕ್ಸಮರ ಆಗಿದ್ದರೆ ಅದು ಸಹಜ ಎನ್ನ ಬಹುದಿತ್ತು. ಆದರೆ ಸ್ವಪಕ್ಷೀಯರೇ ತಮ್ಮ ಮಧ್ಯೆ ಕಿಡಿ ಕಾರಿಕೊಳ್ಳುತ್ತಿದ್ದಾರೆ. ಸೇರಿಗೆ ಸವ್ವಾಸೇರು ಎನ್ನುತ್ತಿದ್ದಾರೆ. ಅಭಿವೃದ್ಧಿ ವಿಚಾ ರದಲ್ಲಿ ಆರಂಭವಾದ ಮಾತು ವೈಯಕ್ತಿಕ ನಿಂದನೆ ಮಟ್ಟಕ್ಕೆ ಇಳಿದಿದೆ. ತನ್ನ ಚುನಾಯಿತ ಪ್ರತಿನಿಧಿಗಳೇ ಹೀಗೆ ಹಾದಿ ಬೀದಿಗಳಲ್ಲಿ ಪರಸ್ಪರ ಕಿಡಿಕಾರುತ್ತಿದ್ದರೆ, ಹೈಕಮಾಂಡ್ ಮೌನಕ್ಕೆ ಶರಣಾಗಿ ಬೇಜವಾಬ್ದಾರಿತನ ಪ್ರದರ್ಶಿಸಿದೆ.
ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿದೆ. ವಿಚಾರವಿಷ್ಟೇ. ಮೈಸೂರು ನಗರದಲ್ಲಿ ನೆಲದಡಿ ಗ್ಯಾಸ್ ಪೈಪ್ ಅಳವಡಿಸಿ ಗ್ರಾಹಕರಿಗೆ ಅಡುಗೆ ಅನಿಲ ಪೂರೈಸುವ ಕೇಂದ್ರ ಸರಕಾರದ ಯೋಜನೆ ಇದು. ಭಾರತೀಯ ಅನಿಲ ಪ್ರಾಧಿಕಾರ ಈ ಯೋಜನೆ ಕೈಗೆತ್ತಿಕೊಂಡಿದೆ. ಈ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಹಠ ತೊಟ್ಟಿದ್ದಾರೆ ಪ್ರತಾಪ ಸಿಂಹ.
ಮೊದಲ ಹಂತದಲ್ಲಿ ಮೈಸೂರು ನಗರದ 40 ಸಾವಿರ ಮನೆಗೆ ಸಂಪರ್ಕ ಕಲ್ಪಿಸುವ ಉದ್ದೇಶ ಇದೆ. ಈ ಯೋಜ ನೆಗಾಗಿ ಮೈಸೂರಿನಲ್ಲಿ ನೈಸರ್ಗಿಕ ಅಡುಗೆ ಅನಿಲ (ಪಿಎನ್‌ಜಿ) ಸಂಗ್ರಹ ಘಟಕ ಸ್ಥಾಪಿಸಲಾಗುತ್ತದೆ. ಶಾಸಕ ರಾದ ರಾಮದಾಸ್ ಹಾಗೂ ನಾಗೇಂದ್ರ ಅವರ ವಿರೋಧ ವೇನೂ ಈ ಯೋಜನೆಗೆ ಇಲ್ಲ. ಆದರೆ ಈಗಷ್ಟೇ ತಮ್ಮ ಕ್ಷೇತ್ರಗಳಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಗ್ಯಾಸ್ ಪೈಪ್ ಅಳವಡಿಸಲು ಮತ್ತೆ ರಸ್ತೆ ಅಗೆದರೆ ರಿಪೇರಿ ಮಾಡಲು ಹಣ ಕೊಡುವವರು ಯಾರು? ಎಂಬುದು ಅವರ ಪ್ರಶ್ನೆ.
ಈ ಯೋಜನೆ ಕುರಿತು ಕರೆದಿದ್ದ ಮೈಸೂರು ಮಹಾ ನಗರ ಪಾಲಿಕೆ ಸಭೆಯನ್ನು ಕೋರಂ ಇಲ್ಲದೆ ಮುಂದೂ ಡಬೇಕಾಯಿತು. ಮೈಸೂರಿನಲ್ಲಿ ಬಿಜೆಪಿ ಪಕ್ಷದ ಮೇಯರ್ ಇದ್ದಾರೆ. ಹೀಗಿದ್ದರೂ ಪಾಲಿಕೆ ಸಭೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರು ಗೈರಾದರು. ಇಬ್ಬರು ಶಾಸಕರೇ ಹೀಗೆ ಕೋರಂ ಅಭಾವ ಸೃಷ್ಟಿಸಿ ಪ್ರತಾಪಸಿಂಹ ಅವರಿಗೆ ಒಳ ಏಟು ನೀಡಿದರು ಎಂಬುದು ರಾಜಕೀಯ ಪಡಸಾಲೆಯಲ್ಲಿನ ಚರ್ಚೆ.
ಈ ಪ್ರಕರಣದಲ್ಲಿ ಸಂಸದರು ಹಾಗೂ ಶಾಸಕರ ಮಧ್ಯೆ ಪ್ರತಿಷ್ಠೆಯ ಪ್ರಶ್ನೆಯೂ ಅಡಗಿದೆ. ಶಾಸಕರಾದ ರಾಮ ದಾಸ್ ಹಾಗೂ ನಾಗೇಂದ್ರ ರಾಜಕೀಯವಾಗಿ ಪ್ರತಾಪ ಸಿಂಹ ಅವರಿಗಿಂತಲೂ ಹಿರಿಯರು. ಅದಕ್ಕಿಂತಲೂ ಮುಖ್ಯವಾಗಿ ಬೇರುಮಟ್ಟದ ರಾಜಕಾರಣಿಗಳು. ಅಭಿವೃದ್ಧಿ ಕಾರ್ಯಗಳ ಜತೆಗೆ ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವ, ವರ್ಚಸ್ಸು, ಬೆಂಬಲಿಗರ ಪಡೆ ಹೊಂದಿದ್ದಾರೆ. ಸಂಸದ ಪ್ರತಾಪ ಸಿಂಹ 7 ವರ್ಷಗಳಿಂದ ಲೋಕಸಭಾ ಸದಸ್ಯರಾಗಿದ್ದರೂ ತಳಮಟ್ಟದಲ್ಲಿ ತಮ್ಮದೇ ಆದ ಗಟ್ಟಿ ನಾಯಕತ್ವ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಪ್ರತಾಪ ಸಿಂಹ ರಾಜಕಾರಣಕ್ಕಿಂತಲೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಸ್ವಭಾವದವರು.
ರಾಮದಾಸ್, ನಾಗೇಂದ್ರ ಅವರಿಗೆ ಪೈಪ್‌ಲೈನ್ ಯೋಜನೆ ಬಗ್ಗೆ ತಕರಾರಿಲ್ಲ. ಈ ಇಬ್ಬರು ಶಾಸಕರು ಹಾಗೂ ಪ್ರತಾಪ ಸಿಂಹ ಮಧ್ಯೆ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲಿ ಮೇಲುಗೈ ಸಾಧಿಸಿದೆ.
ನರೇಂದ್ರ ಮೋದಿ ಅವರ ಸರಕಾರ ಯಾರಿಗೂ ಮಾಮೂಲಿ ಕೊಡುವುದಿಲ್ಲ. ತಾನು ತಿನ್ನುವುದಿಲ್ಲ, ಬೇರೆ ಯವರನ್ನೂ ತಿನ್ನಲು ಬಿಡುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಲಿ ಎಂಬ ಪ್ರತಾಪ ಸಿಂಹ ಅವರ ಹೇಳಿಕೆಗೆ ಇಬ್ಬರೂ ಶಾಸಕರು ಮತ್ತಷ್ಟು ಕೆಂಡಾಮಂಡಲರಾಗಿದ್ದಾರೆ. ಪಕ್ಷದ ಹೈಕಮಾಂಡ್‌ಗೆ ದೂರು ಒಯ್ದಿದ್ದಾರೆ. ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಸಂಸದರು, ಶಾಸಕರು ಇಬ್ಬರಿಗೂ ತಿಳಿ ಹೇಳಿ ತಮ್ಮ ರಾಜಕೀಯ ಮುತ್ಸದ್ಧಿತನ ಮೆರೆದಿದ್ದಾರೆ.
-ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.