ವರನಿಗೆ ಕೋವಿಡ್ ದೃಢ : ಪಿಪಿಇ ಕಿಟ್ ಧರಿಸಿ ಹಸೆಮಣೆ ಏರಿದ ಜೋಡಿ…!
Team Udayavani, Apr 27, 2021, 11:53 AM IST
ರತ್ಲಮ್ (ಮಧ್ಯಪ್ರದೇಶ) : ವರನಿಗೆ ಕೊವಿಡ್ 19 ಸೋಂಕು ತಗುಲಿದ್ದ ಕಾರಣ ವಧು ಮತ್ತು ವರ ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ರತ್ಲಮ್ ನಲ್ಲಿ ಬೆಳಕಿಗೆ ಬಂದಿದೆ.
ವಧು -ವರರು ಪಿಪಿಇ ಕಿಟ್ ಧರಿಸಿ ವಿವಾಹವಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸದೇ ಕೇವಲ ಪಿಪಿಇ ಕಿಟ್ ಧರಿಸಿ ಈ ಜೋಡಿ ಮದುವೆಯಾಗಿದೆ.
ಇವರಿಬ್ಬರೂ ಅಗ್ನಿಕುಂಡದ ಸುತ್ತ ತಿರುಗುವಾಗ ಹಿನ್ನೆಲೆಯಲ್ಲಿ ಮಂತ್ರಗಳ ಪಠಣೆಯನ್ನೂ ಕೇಳಬಹುದು. ಮದುವೆಗೆ ಮುಹೂರ್ತ ನಿಗದಿಯಾಗಿ ಹೋಗಿತ್ತು. ಆದರೆ ಏಪ್ರಿಲ್ 19ರಂದು ವರನಿಗೆ ಕೋವಿಡ್ ಸೋಂಕು ತಗುಲಿದ್ದ ಕಾರಣ ಮದುವೆಯನ್ನು ಮುಂದೂಡಲು ಆಗಲಿಲ್ಲ. ಇದೇ ಹಿನ್ನೆಲೆಯಲ್ಲಿ ಸ್ಥಳೀಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಈ ಜೋಡಿ, ಮದುವೆಯಾಗಿದೆ.
ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ, ಕೊವಿಡ್ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮದುವೆಯಾಗುವಂತೆ ಷರತ್ತು ವಿಧಿಸಿದ್ದ ಕಾರಣ ನಾವು ಈ ರೀತಿ ಮದುವೆಯಾಗಬೇಕಾಯಿತು ಎಂದು ನವ ಜೋಡಿ ತಿಳಿಸಿದೆ.
ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭದಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಅಲ್ಲದೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಮದುವೆಯಾಗಬೇಕು ಎಂದು ಮಧ್ಯಪ್ರದೇಶದ ಸರ್ಕಾರ ಆದೇಶ ಹೊರಡಿಸಿದೆ.
#WATCH | Madhya Pradesh: A couple in Ratlam tied the knot wearing PPE kits as the groom is #COVID19 positive, yesterday. pic.twitter.com/mXlUK2baUh
— ANI (@ANI) April 26, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.