ಪ್ರಾಚೀನ ಭಾರತದಲ್ಲಿ ಜಲ ವಿಜ್ಞಾನ!


Team Udayavani, Mar 22, 2021, 7:40 AM IST

ಪ್ರಾಚೀನ ಭಾರತದಲ್ಲಿ ಜಲವಿಜ್ಞಾನ!

ಅನಾದಿ ಕಾಲದಿಂದಲೂ ನೈಸರ್ಗಿಕ ಘಟಕಗಳು, ಶಕ್ತಿಗಳಾದ ಭೂಮಿ, ಸೂರ್ಯ, ನದಿಗಳು, ಸಮುದ್ರ, ಅಗ್ನಿ, ಗಾಳಿ ಮತ್ತು ನೀರು ಇತ್ಯಾದಿಗಳನ್ನು ದೇವರೆಂದು ಪೂಜಿಸುತ್ತಾ ಬರಲಾಗಿದೆ.ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಜಲ ವಿಜ್ಞಾನದ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು. ಮುಖ್ಯವಾಗಿ, ವೇದಗಳು, ಪುರಾಣ ಗಳು, ಮೇಘಮಾಲಾ, ಮಹಾಭಾರತ, ಮಯೂರ ಚಿತ್ರಕಾ, ವೃತಸಂಹಿತಾ ಮುಂತಾದ ಪುರಾತನ ಕೃತಿಗಳಲ್ಲಿ ಆಧುನಿಕ ಜಲವಿಜ್ಞಾನದ ಪರಿಕಲ್ಪನೆಗಳಿವೆ. ಜಲವಿಜ್ಞಾನದ ಉಲ್ಲೇಖಗಳನ್ನು ಪ್ರಾಚೀನ ವೇದಗಳಲ್ಲಿ ಕಾಣಬಹುದಾಗಿದೆ. ಮೋಡಗಳ ಗರ್ಭಧಾರಣೆ, ಗಾಳಿಯ ಗರ್ಭಧಾರಣೆ ಮತ್ತು ಮಳೆಯ ಪ್ರಮಾ ಣವನ್ನು ವರಾಹಮಿಹಿರನ ವೃತ್‌ ಸಂಹಿತಾ ನಿರೂಪಿ ಸುತ್ತದೆ. ಅಂತರ್ಜಲ ಪರಿಶೋಧನೆಯ ವಿಜ್ಞಾನದ ಮಹತ್ವವನ್ನೂ, ನೀರಿನ ಅಸ್ತಿತ್ವವನ್ನು ಶೋಧಿಸಲು ಅದು ಸಹಾಯಕಾರಿಯಾಗಿದೆ. ಲಿಂಗಪುರಾಣವೂ ಜಲವಿಜ್ಞಾನದ ಬಗ್ಗೆ ತಿಳಿಸುತ್ತದೆ.

ಮಳೆಯುಂಟಾಗುವ ಬಗೆ :

ಆದಿತ್ಯಪತೀತಂ ಸೂರ್ಯಗಣೇಹ ಸೋಮಂ ಸಂಕ್ರಮತೇ ಜಲಂ | .. .. ..   ನ ನಶ್ಶು ಉದ್ಕಸ್ಯಸ್ತಿ ತದೇವ ಪರಿವರ್ತತೇ ||

ಸೂರ್ಯನಿಂದ ಆವಿಯಾದ ನೀರು ಗಾಳಿಯ ಒಂದು ಆಕರ್ಷಣ ಶಕ್ತಿ (ಕ್ಯಾಪಿಲ್ಲರಿ)ಯ ಮೂಲಕ ವಾತಾವರಣಕ್ಕೆ ಸೇರುತ್ತದೆ. ಅಲ್ಲಿ ತಣ್ಣಗಾಗಿ ಘನೀಕ ರಣಗೊಂಡು ಮೋಡವಾಗಿ ಗಾಳಿಯ ಬಲದಿಂದ ಮಳೆಯಾಗಿ ಬೀಳುತ್ತದೆ. ನೀರು ವ್ಯರ್ಥವಾಗದೆ, ರೂಪಾಂತರಗೊಂಡು ಪರಿವರ್ತನೆಗೊಳ್ಳುತ್ತದೆ.(ಋ.ವೇ.) ಸೂರ್ಯ ಕಿರಣಗಳ ಶಾಖದಿಂದ ಗಾಳಿಯ ಮೂಲಕ ಆಕಾಶಕ್ಕೆ ಹೋಗುವ ನೀರು ಮೋಡಗಳಾಗಿ ಸೂರ್ಯ ಕಿರಣ ಶಾಖದಿಂದಾಗಿ ಮಳೆಯಾಗಿ ಭೂಮಿಗೆ ಸೇರಿ, ನದಿ, ಕೊಳ, ಸಮುದ್ರಗಳಲ್ಲಿ ಶೇಖರ ಣೆಯಾಗುತ್ತದೆ.

ಮೇಲ್ಮೈ ನೀರಿನ ರಕ್ಷಣೆ – ಪ್ರಾಚೀನರಲ್ಲಿ ನೀರಿನ ಬಳಕೆ, ಕಾಲುವೆಗಳು, ಅಣೆಕಟ್ಟುಗಳು, ನೀರಿನ ಟ್ಯಾಂಕ್‌, ಮತ್ತದರ ಉತ್ತಮ ನಿರ್ಮಾಣಕ್ಕೆ ಬೇಕಾ ಗಿರುವ ಅಂಶಗಳು, ನದಿದಂಡೆ ಸಂರಕ್ಷಣ ವಿಧಾನಗಳು, ಇತ್ಯಾದಿ ಸೂಕ್ಷ್ಮ ಅಂಶಗಳನ್ನೂ ನಮ್ಮ ಹಿರಿಯರು ಪಾಲಿಸುತ್ತಿದ್ದರು. ಸಂಘಟಿತ ನೀರಿನ ಬೆಲೆ ವ್ಯವಸ್ಥೆ ಕೌಟಿಲ್ಯರ ಕಾಲದಲ್ಲಿ ಜಾರಿಯಲ್ಲಿತ್ತು. ಬರಗಾಲ ಮತ್ತು ನೀರಿನ ಅಭಾವದ ಸಮಯದಲ್ಲಿ ನೀರನ್ನು ಹೇಗೆ ಸಮರ್ಥವಾಗಿ ಬಳಸಬೇಕೆಂಬ ವಿವರ ವೇದಗಳಲ್ಲಿದೆ.

ಮಹಾಭಾರತದಲ್ಲಿ ಸಸ್ಯಗಳು ಬೇರಿನ ಮೂಲಕ ನೀರು ಕುಡಿಯುತ್ತವೆ. ನೀರಿನ ಕೊಳವೆಯಲ್ಲಿ ನೀರು ಹೇಗೆ ಮೇಲ್ಮುಖವಾಗಿ ಚಲಿಸುತ್ತದೆ. ಅದೇ ರೀತಿಯಲ್ಲಿ ಮಣ್ಣಿನಲ್ಲಿನ ಒಂದು ಆಕರ್ಷಣ(ಕ್ಯಾಪಿಲ್ಲರಿ) ಶಕ್ತಿಯಿಂದಾಗಿ, ಸಸ್ಯಗಳಲ್ಲೂ ನೀರು ಮೇಲೆ ಕೆಳಗೆ ಹರಿಯುತ್ತದೆ ಎಂದು ಉಲ್ಲೇಖಗಳಿವೆ. ಅಥರ್ವ ವೇದದಲ್ಲಿ ನೀರಿನ ಮೂಲಗಳನ್ನು ತಿಳಿಸಲಾಗಿದೆ. ಪರ್ವತಗಳ ಮೇಲಿಂದ ನದಿ ಹುಟ್ಟಿದರೆ, ದೀರ್ಘ‌ಕಾಲಿಕ ಮತ್ತು ಅತೀ ವೇಗದಲ್ಲಿ ಹರಿಯುತ್ತದೆ. ಮಂಜುಗಡ್ಡೆ ಆವೃತ ಪರ್ವತಗಳಿಂದ ಹುಟ್ಟುವ ನದಿ ಬೇಸಗೆಯಲ್ಲೂ ಹರಿಯುತ್ತವೆ.

ಅಂತರ್ಜಲದ ಜ್ಞಾನ :

ಹರಿಯುವ ನೀರಿನ ದಾರಿಯನ್ನು ಕಂಡುಹಿಡಿದು ಆ ಪ್ರದೇಶದ ಇಳಿಜಾರನ್ನು ಖಚಿತಪಡಿಸಿಕೊಳ್ಳುವ ತಂತ್ರವನ್ನು ಅಂದಿನ ಜನರು ತಿಳಿದಿದ್ದರು. ನೀರಿನ ಮಟ್ಟದ ಎತ್ತರದಲ್ಲಿನ ವ್ಯತ್ಯಾಸ, ಬಿಸಿ ಮತ್ತು ತಣ್ಣೀರಿನ ಬುಗ್ಗೆಗಳು, ಬಾವಿಗಳ ಮೂಲಕ ನೀರಿನ ಅಂತರ್ಜಲ ಬಳಕೆ, ಬಾವಿ ರಚನ ವಿಧಾನವನ್ನು ವೃತ್‌ ಸಂಹಿತೆಯಲ್ಲಿ ನಿರೂಪಿಸಲಾಗಿದೆ. ಆವಿಯಾಗುವ ಪ್ರಕ್ರಿಯೆಗೆ ಸೂರ್ಯ ರಶ್ಮಿ, ಗಾಳಿ, ತೇವಾಂಶ ಮತ್ತು ಸಸ್ಯಗಳು ಕಾರಣ ಎಂದಿದೆ. ಜಂಬೂ ಮರದ ಪೂರ್ವದಲ್ಲಿ ಗೆದ್ದಲು ದಿಬ್ಬವಿದ್ದರೆ ಸಿಹಿ ನೀರು ಲಭ್ಯ ಮತ್ತು ನೀರು ಹೆಚ್ಚುಕಾಲ ಉಳಿಯುತ್ತದೆ. ಎರಡು ಪುರುಷರು ನಿಲ್ಲುವಷ್ಟು ಆಳದಲ್ಲಿ, ಮರದ ದಕ್ಷಿಣ ಭಾಗದಲ್ಲಿ ಮೂರು ಹಸ್ತ (ಕ್ಯುಬಿಟ್‌) ದೂರದಲ್ಲಿ ನೀರು ಪತ್ತೆಯಾಗುತ್ತದೆ. ಉತ್ತರದಲ್ಲಿ ಗೆದ್ದಲು ದಿಬ್ಬ (ಹುಂಚ) ಇರುವ ಅರ್ಜುನ ಮರದ ಪಶ್ಚಿಮಕ್ಕೆ ಮೂರು ಹಸ್ತಗಳ ದೂರದಲ್ಲಿ 3.5 ಪುರುಷರ ಗಾತ್ರದ ಆಳದಲ್ಲಿ ನೀರು ಲಭ್ಯವಾಗುತ್ತದೆ ಎಂದಿದೆ.

ಸೂರ್ಯ ಕಿರಣ ಮತ್ತು ಗಾಳಿಯಿಂದಾಗಿ ನೀರು ಸಣ್ಣಸಣ್ಣ ಕಣಗಳಾಗಿ ವಿಭಾಗಗೊಳ್ಳುತ್ತದೆ ಎಂಬ ಜ್ಞಾನವು ವೇದಕಾಲದ ಭಾರತೀಯರಿಗೆ ತಿಳಿದಿತ್ತು. ಪುರಾಣಗಳಲ್ಲಿ ಅನೇಕ ಕಡೆ ನೀರನ್ನು ನಾಶಪಡಿಸಲು ಅಥವಾ ಸೃಷ್ಟಿಮಾಡಲು ಅಸಾಧ್ಯ, ಕೇವಲ ಜಲವಿ ಜ್ಞಾನದ ವಿವಿಧ ಹಂತಗಳಲ್ಲಿ ಅದರ ಸ್ಥಿತಿಯನ್ನು ಮಾತ್ರ ಬದಲಾಯಿಸಬಹುದು ಎಂಬ ಉಲ್ಲೇಖಗಳಿವೆ.

ಮಳೆಯ ಮುನ್ಸೂಚನೆಯ ಬಗೆ   :

ಮಳೆಯ ಮುನ್ಸೂಚನೆ (ಆಕಾಶದ ಬಣ್ಣ, ಮೋಡ, ಗಾಳಿಯ ದಿಕ್ಕು, ಮಿಂಚು, ಪ್ರಾಣಿಗಳ ಓಡಾಟ ಇತ್ಯಾದಿ) ಗಳನ್ನು  ಕ್ರಿ.ಪೂ. 10 ನೇ ಶತಮಾನ ಪೂರ್ವದಲ್ಲೇ ಭಾರತೀಯರು ತಿಳಿದಿದ್ದರು. ಮಳೆ ಅಳೆಯುವ ವಿಧಾನ ಮತ್ತು ಸಲಕರಣೆಗಳನ್ನು ಭಾರತೀಯರು ಅಭಿವೃದ್ಧಿಪಡಿಸಿದ್ದರು. (ಕ್ರಿ.ಪೂ. 4 ನೇ ಶತಮಾನ  ಕೌಟಿಲ್ಯನ ಕಾಲದಲ್ಲಿ) ಮಳೆಯ ಅಳತೆ ಮಾಪನವನ್ನು ವರ್ಷಮಾನ ಎಂದು ಕರೆಯಲಾಗುತ್ತಿತ್ತು. ಅದರ ರಚನೆ ಯನ್ನು ಕೌಟಿಲ್ಯ ವಿವರಿಸಿದ್ದರು. ವೃತಸಂಹಿತಾ ಮತ್ತು ವರಾಹಮಿಹಿರನ ಮಯೂರಚಿತ್ರಕ ಹವಾಮಾನ ಶಾಸ್ತ್ರ ಕುರಿತಾದ ಅನೇಕ ಮಾಹಿತಿಗಳಿಂದ ಕೂಡಿವೆ. ಜೈನ ಗ್ರಂಥಗಳಾದ ಪ್ರಜ್ಞಾಪನ ಮತ್ತು ಅವಸ್ಯಾಕ ಕರ್ನಿಸ್‌, ನೇಮಿಚಂದ್ರ ವಿರಚಿತ ತ್ರಿಲೋಕಾಸರ ಹವಾಮಾನ ಶಾಸ್ತ್ರದ ಅನೇಕ ಮಾಹಿತಿಗಳನ್ನು ನೀಡಿವೆ. ಭೌದ್ಧ ಗ್ರಂಥಗಳಲ್ಲೂ ಹವಾಮಾನ ಶಾಸ್ತ್ರ ಸಂಬಂಧೀ ಉಲ್ಲೇಖಗಳಿವೆ.

ನೀರು ಶುದ್ಧೀಕರಣ ವಿಧಾನ :

ವರಾಹಮಿಹಿರ ಕ್ರಿ.ಶ. 550ರಷ್ಟು ಹಿಂದೆಯೇ ಕಲುಷಿತ ನೀರನ್ನು ಶುದ್ಧೀಕರಿಸುವ ವಿಧಾನವನ್ನು ತಿಳಿಸಿ ದ್ದಾನೆ. ವಿವಿಧ ಸಸ್ಯಗಳು, ಸೌರ ಶಾಖ, ಗಾಳಿ ಬೀಸುವಿಕೆ, ಬೆಂಕಿ ಯಲ್ಲಿ ಬಿಸಿ ಮಾಡಿದ ಕಲ್ಲುಗಳು, ಚಿನ್ನ, ಬೆಳ್ಳಿ, ಕಬ್ಬಿಣ ಅಥವಾ ಮರಳನ್ನು ನೀರು ಶುದ್ಧೀಕರಣಕ್ಕೆ ಬಳಸ ಬೇಕು ಎಂದಿದ್ದಾನೆ.  ನೀರಿಗೆ ಸಂಸ್ಕೃತದಲ್ಲಿ ಸುಮಾರು 250 ಶಬ್ದಗಳಿವೆ.

ಹೈಡ್ರೋ ಥೆರಪಿ  :

ಹೈಡ್ರೋ ಥೆರಪಿ ಅಂದರೆ ನೀರನ್ನು ಔಷಧವಾಗಿ ಬಳಸಿ ನೀಡುವ ಚಿಕಿತ್ಸೆ. ನದಿಗಳು, ಸಮುದ್ರ ತಟಗಳು, ಕೊಳ, ಪುಷ್ಕರಣಿಗಳು, ಜಲಪಾತಗಳು ಹಿಂದೂ ಯಾತ್ರಾಸ್ಥಳಗಳಾಗಿ ಪರಿಗಣಿಸಲ್ಪಟ್ಟಿವೆ. ತ್ರಿವೇಣಿ ಸಂಗಮ, ಅಲಹಾಬಾದ್‌ ಅಥವಾ ಪ್ರಯಾಗದಲ್ಲಿ ಕುಂಭ ಮೇಳ ಗಂಗಾನದಿ ತಟದಲ್ಲಿ ನಡೆಯುತ್ತದೆ. ಪವಿತ್ರ ಗಂಗಾ, ಯಮುನಾ ಮತ್ತು ಸರಸ್ವತಿ ನದಿ ಸಂಗಮ ತಾಣವದು. ಇಲ್ಲಿನ ನದಿಯ ನೀರು ಅನೇಕ ಪಾಪಗಳನ್ನು ಪರಿಹರಿಸುತ್ತದೆ ಮತ್ತು ಅನೇಕ ಕಾಯಿಲೆಗಳನ್ನು ವಾಸಿಮಾಡುತ್ತದೆ ಎಂಬ ನಂಬಿಕೆ ಕೋಟ್ಯಂತರ ಹಿಂದೂಗಳದ್ದು. “ಹಿಂದೂ ಸಂಸ್ಕೃತಿಯೇ ಜಲ ಸಂಸ್ಕೃತಿ’ ಎನ್ನುವಷ್ಟರ ಮಟ್ಟಿಗೆ ಹಿಂದೂಗಳು ನೀರನ್ನು ಬಳಸುತ್ತಾರೆ. ಪ್ರತಿಯೊಂದು ಕ್ರಿಯೆಗೂ ನೀರು ಬೇಕು. ಲೌಕಿಕ ಮತ್ತು ಆಧ್ಯಾತ್ಮಿಕ ಎರಡಕ್ಕೂ. ತಾಮ್ರ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಎಂಬ ಜ್ಞಾನದಿಂದಲೇ ಪ್ರಾಚೀನರು ತಾಮ್ರದ ಕೌಳಿಗೆಯಲ್ಲಿ ತೀರ್ಥ ಕೊಡುವ ಪದ್ಧತಿಯನ್ನು ಆರಂಭಿಸಿದರು.

ಉದಕಶಾಂತಿ ಮತ್ತು ಉಷಃಕಾಲ ಚಿಕಿತ್ಸೆ! :

ವಾಟರ್‌ ಥೆರಪಿಗೆ ಸಂಸ್ಕೃತದಲ್ಲಿ ಉಷಃಕಾಲ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಪ್ರತೀ ದಿನ ಬೆಳಗ್ಗೆ 1.5 ಲೀಟರ್‌ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು. ಮತ್ತು ದಿನವೊಂದಕ್ಕೆ ಅಷ್ಟೇ ಪ್ರಮಾಣದ ನೀರನ್ನು ಕುಡಿಯಬೇಕು. ಇದೊಂದು ಪ್ರಾಚೀನ ಚಿಕಿತ್ಸೆ. ಇದು ಆಂತರಿಕ ಸ್ನಾನ! ಜ್ವರವನ್ನು ಉಪಶಮನಗೊಳಿಸಲು ಪವಿತ್ರ ನೀರನ್ನು ರೋಗಿಯ ಮೇಲೆ ಸಿಂಪಡಿಸುವ ಒಂದು ಧಾರ್ಮಿಕ ವಿಧಿಯೇ ಉದಕಶಾಂತಿ. ಅನುಗ್ರಹ ಪೂರ್ವಕ ಉದಕ ಚಿಮುಕಿಸಲ್ಪಟ್ಟಾಗ ಆ ವ್ಯಕ್ತಿಯಲ್ಲಿ ಶರೀರ ವಿಕಾರ, ಸ್ವಭಾವಪಲ್ಲಟ ಅಥವಾ ಪರಿವರ್ತನೆಯುಂಟಾಗುತ್ತದೆ ಎಂಬ ಧೃಡ ನಂಬಿ ಕೆಯಿಂದ ಉದಕಶಾಂತಿಯನ್ನು ಕೈಗೊಳ್ಳುತ್ತಾರೆ.

 

– ಜಲಂಚಾರು ರಘುಪತಿ ತಂತ್ರಿ

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.