ನಾವು ಕುಡೀತಿರೋದು ನೀರಲ್ಲ, ವಿಷ!
ಹಲವು ಮೂಲಗಳಿಂದ ಸಿಗುವ ನೀರಿನಲ್ಲಿ ಕಬ್ಬಿಣ, ನೈಟ್ರೇಟ್ ಇನ್ನಿತರ ಲೋಹ
Team Udayavani, Aug 3, 2022, 6:50 AM IST
ದೇಶದ ಬಹುಪಾಲು ಜನರು ವಿಷಯುಕ್ತ ನೀರನ್ನು ಕುಡಿಯುತ್ತಿದ್ದಾರೆಂಬ ಆತಂಕಕಾರಿ ವಿಚಾರವನ್ನು ಕೇಂದ್ರ ಜಲಶಕ್ತಿ ಸಚಿವಾಲಯ, ರಾಜ್ಯಸಭೆಗೆ ತಿಳಿಸಿದೆ. ನದಿಗಳು, ಕೆರೆಗಳು, ಕೊಳವೆ ಬಾವಿಗಳಿನ ನೀರಿನಲ್ಲಿ ಕಬ್ಬಿಣ, ನೈಟ್ರೇಟ್, ಕ್ರೋಮಿಯಂ, ಯುರೇನಿಯಂ ಮುಂತಾದ ಲೋಹಗಳು “ಸುರಕ್ಷಿತ ಪ್ರಮಾಣ’ಕ್ಕಿಂತ ಹೆಚ್ಚಿವೆ. ಇಂಥ ನೀರನ್ನು ದೇಶದ ಶೇ. 80ರಷ್ಟು ಜನರು ಇದನ್ನೇ ಕುಡಿಯುತ್ತಿದ್ದಾರೆ ಎಂದು ಸಚಿವಾಲಯ ವಿವರಿಸಿದೆ.
ದತ್ತಾಂಶ ಹೇಳುವ ಕಟು ಸತ್ಯ
– 25 ರಾಜ್ಯಗಳ 209 ಜಿಲ್ಲೆಗಳ ಪ್ರತಿ ಲೀಟರ್ ಅಂತರ್ಜಲದಲ್ಲಿ 0.01 ಮಿ.ಗ್ರಾಂ. ಅರ್ಸೆನಿಕ್ ಪತ್ತೆ.
– 29 ರಾಜ್ಯಗಳ 491 ಜಿಲ್ಲೆಗಳ ಪ್ರತಿ ಲೀಟರ್ ಅಂತರ್ಜಲದಲ್ಲಿ 1 ಮಿ.ಗ್ರಾಂ. ಕಬ್ಬಿಣ ಪತ್ತೆ.
– 11 ರಾಜ್ಯಗಳ 29 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಅಂತರ್ಜಲದಲ್ಲಿ 0.003 ಮಿ.ಗ್ರಾಂ. ಕ್ಯಾಡ್ಮಿಯಂ ಪತ್ತೆ.
– 16 ರಾಜ್ಯಗಳ 62 ಜಿಲ್ಲೆಗಳಲ್ಲಿ ಪ್ರತಿ ಲೀಟರ್ ಅಂತರ್ಜಲದಲ್ಲಿ 0.05 ಮಿ.ಗ್ರಾಂ. ಕ್ರೋಮಿಯಂ ಪತ್ತೆ.
– 18 ರಾಜ್ಯಗಳ 152 ಜಿಲ್ಲೆಗಳ ಪ್ರತಿ ಲೀಟರ್ ಅಂತರ್ಜಲದಲ್ಲಿ 0.03 ಮಿ.ಗ್ರಾಂ.ನಷ್ಟು ಯುರೇನಿಯಂ ಪತ್ತೆ.
ದೇಶದ ನೀರಿನ ಮೂಲಗಳು ನೀರಿನಲ್ಲಿ ಬೆರೆತಿರುವ ಲೋಹದ ಅಂಶ
14,079 ಕಬ್ಬಿಣ
671 ಫ್ಲೋರೈಡ್
814 ಆರ್ಸೆನಿಕ್
9,930 ಹಾನಿಕಾರಕ ಲವಣ
517 ನೈಟ್ರೇಟ್
111 ಭಾರವಾದ ಲೋಹಗಳ ಧಾತುಗಳು
ಆರೋಗ್ಯದ ಮೇಲೆ ದುಷ್ಪರಿಣಾಮವೇನು?
– ಕುಡಿಯುವ ನೀರಿನಲ್ಲಿ ಅರ್ಸೆನಿಕ್ ಹೆಚ್ಚಾದರೆ ಚರ್ಮದ ಕಾಯಿಲೆ, ಕ್ಯಾನ್ಸರ್.
– ಕಬ್ಬಿಣದ ಅಂಶ ಹೆಚ್ಚಾದರೆ ನರಗಳ ನಿಶ್ಯಕ್ತಿ, ಮರೆಗುಳಿತನ, ಪಾರ್ಕಿನ್ಸನ್ ಕಾಯಿಲೆ.
– ಹೆಚ್ಚಿನ ಪ್ರಮಾಣದ ಸೀಸದಿಂದ ನರವ್ಯೂಹಕ್ಕೆ ತೊಂದರೆ.
– ಹೆಚ್ಚಿನ ಪ್ರಮಾಣದ ಕ್ಯಾಡ್ಮಿಯಂನಿಂದ ಕಿಡ್ನಿ ತೊಂದರೆ.
– ಹೆಚ್ಚಿನ ಪ್ರಮಾಣದ ಕ್ರೋಮಿಯಂನಿಂದ ಸಣ್ಣ ಕರುಳಿನ ಹೈಪರ್‌ಪ್ಲಾಸಿಯಾಕ್ಕೆ ಉಂಟಾಗಿ, ಗೆಡ್ಡೆಗಳು ಸೃಷ್ಟಿಯಾಗಲು ಕಾರಣ.
– ಯುರೇನಿಯಂ ಹೆಚ್ಚಾದರೆ ಕಿಡ್ನಿ ಕಾಯಿಲೆಗಳು, ಕ್ಯಾನ್ಸರ್.
ಸರ್ಕಾರ ಕೈಗೊಂಡ ಕ್ರಮಗಳೇನು?
ರಾಜ್ಯಸಭೆಗೆ ಸರ್ಕಾರ ತಿಳಿಸಿರುವ ಪ್ರಕಾರ, ಅಮೃತ್ 2.0 ಯೋಜನೆಯನ್ನು 2021ರ ಅಕ್ಟೋಬರ್‌ನಿಂದ ಜಾರಿಗೊಳಿಸಲಾಗಿದ್ದು, 2026ರೊಳಗೆ ಎಲ್ಲಾ ಮನೆಗಳಿಗೆ ಸ್ವಚ್ಛ ಕುಡಿಯುವ ನೀರನ್ನು ಪೂರೈಸುವ ಗುರಿ ಹೊಂದಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.