ಇಂದಿನಿಂದ ಏನೇನು ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ
Team Udayavani, Nov 1, 2022, 7:45 AM IST
1. ಕೆವೈಸಿ ಅಗತ್ಯತೆ:
ಎಲ್ಲ ರೀತಿಯ ವಿಮೆಗಳನ್ನು ಹೊಂದಿರುವವರೂ ನ.1ರಿಂದ ತಮ್ಮ ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ) ವಿವರಗಳನ್ನು ಒದಗಿಸುವುದನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) ಕಡ್ಡಾಯಗೊಳಿಸಿದೆ. ಈವರೆಗೆ ಜೀವ ವಿಮೆಯೇತರ ಪಾಲಿಸಿ ಖರೀದಿ ವೇಳೆ ಕೆವೈಸಿ ವಿವರ ನೀಡುವುದು ಕಡ್ಡಾಯವಾಗಿರಲಿಲ್ಲ. ಆದರೆ, ಇನ್ನು ಹೊಸ ಮತ್ತು ಹಳೇ ಗ್ರಾಹಕರೂ ಕಡ್ಡಾಯವಾಗಿ ವಿವರ ನೀಡಬೇಕಾಗುತ್ತದೆ.
2. ರೈಲಿನ ಸಮಯ ಬದಲು:
ಭಾರತೀಯ ರೈಲ್ವೆಯ ಪ್ರಕಾರ, ಮಂಗಳವಾರದಿಂದ ಸಾವಿರಾರು ರೈಲುಗಳ ಸಂಚಾರದ ಸಮಯ ಬದಲಾಗಲಿದೆ. ಹೀಗಾಗಿ, ಪ್ರಯಾಣ ಆರಂಭಿಸುವ ಮುನ್ನ ರೈಲಿನ ಸಮಯದ ಬಗ್ಗೆ ಅರಿತುಕೊಳ್ಳುವುದು ಸೂಕ್ತ. ಒಂದು ಮಾಹಿತಿ ಪ್ರಕಾರ, 13 ಸಾವಿರ ಪ್ರಯಾಣಿಕ ರೈಲುಗಳು, 7 ಸಾವಿರ ಸರಕು ರೈಲುಗಳು ಹಾಗೂ 30 ರಾಜಧಾನಿ ರೈಲುಗಳ ಸಂಚಾರದ ಸಮಯ ಪರಿಷ್ಕರಣೆಯಾಗಲಿದೆ.
3. ಎಲ್‌ಪಿಜಿ ದರ ಪರಿಷ್ಕರಣೆ:
ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಹೀಗಾಗಿ, ಮಂಗಳವಾರ ಅಡುಗೆ ಅನಿಲ ಸಿಲಿಂಡರ್ ರೇಟ್ ಹೆಚ್ಚಾಗಲೂಬಹುದು, ಕಡಿಮೆಯಾಗಲೂಬಹುದು.
4. ಸಿಲಿಂಡರ್ ಡೆಲಿವರಿ ಪ್ರಕ್ರಿಯೆ:
ಒಟಿಪಿ ಮೂಲಕ ಸಿಲಿಂಡರ್ ಡೆಲಿವರಿ ಮಾಡುವ ಪ್ರಕ್ರಿಯೆ ನ.1ರಿಂದ ಜಾರಿಯಾಗಲಿದೆ. ಗ್ಯಾಸ್‌ಗೆ ಬುಕಿಂಗ್ ಮಾಡಿದ ಬಳಿಕ, ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದು ಬರಲಿದೆ. ಸಿಲಿಂಡರ್ ಅನ್ನು ಮನೆಗೆ ತರುವ ಡೆಲಿವರಿ ಸಿಬ್ಬಂದಿಗೆ ನೀವು ಆ ಒಟಿಪಿಯನ್ನು ಹೇಳಬೇಕು. ಸಿಸ್ಟಂ ಜತೆ ಆ ಕೋಡ್ ಹೊಂದಾಣಿಕೆಯಾದರಷ್ಟೇ ಆತ ನಿಮಗೆ ಸಿಲಿಂಡರ್ ಕೊಡುತ್ತಾನೆ.
5. ಜಿಎಸ್‌ಟಿ ರಿಟರ್ನ್ಸ್:
ನಿಮ್ಮ ವಹಿವಾಟು 5 ಕೋಟಿ ರೂ.ಗಳಿಗಿಂತ ಕಡಿಮೆಯಿದ್ದರೆ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ನೀವು 4 ಅಂಕಿಗಳ ಎಸ್‌ಎಚ್‌ಎನ್ ಕೋಡ್ ಅನ್ನು ಕೂಡ ಒದಗಿಸುವುದನ್ನು ಮಂಗಳವಾರದಿಂದ ಕಡ್ಡಾಯಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.