ಕ್ಲಸ್ಟರ್‌ ಬಾಂಬ್‌ ಯುದ್ದೋನ್ಮಾದ; ಏನಿದು ಕ್ಲಸ್ಟರ್‌ ಬಾಂಬ್‌? ಇಲ್ಲಿದೆ ಮಾಹಿತಿ…


Team Udayavani, Jul 12, 2023, 7:45 AM IST

ಕ್ಲಸ್ಟರ್‌ ಬಾಂಬ್‌ ಯುದ್ದೋನ್ಮಾದ; ಏನಿದು ಕ್ಲಸ್ಟರ್‌ ಬಾಂಬ್‌? ಇಲ್ಲಿದೆ ಮಾಹಿತಿ…

ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಮರದಲ್ಲೀಗ ಕ್ಲಸ್ಟರ್‌ ಬಾಂಬ್‌ಗಳ ಆತಂಕ ಮೂಡಿದೆ. ಮಿತ್ರ ರಾಷ್ಟ್ರಗಳ ವಿರೋಧದ ಹೊರತಾಗಿಯೂ, ಅಮೆರಿಕವು ಉಕ್ರೇನ್‌ಗೆ ಈ ಬಾಂಬ್‌ಗಳನ್ನು ರವಾನೆ ಮಾಡಿದೆ. ಈ ಬಾಂಬ್‌ಗಳನ್ನು 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈಗಾಗಲೇ ನಿಷೇಧ ಮಾಡಲಾಗಿದೆ. ಸದ್ಯ ಅಮೆರಿಕದ ಈ ನಿರ್ಧಾರಕ್ಕೆ ಮಿತ್ರ ರಾಷ್ಟ್ರಗಳಾದ ಇಂಗ್ಲೆಂಡ್‌, ಕೆನಡಾ, ನ್ಯೂಜಿಲೆಂಡ್‌, ಸ್ಪೇನ್‌ ಸೇರಿದಂತೆ ನ್ಯಾಟೋ ದೇಶಗಳೂ ವಿರೋಧ ಮಾಡಿವೆ. ಮಾನವ ಹಕ್ಕುಗಳ ಸಂಘಟನೆಗಳೂ ಕೂಡ ಈ ನಡೆಯ ಬಗ್ಗೆ ಖಂಡಿಸಿವೆ. ಹಾಗಾದರೆ ಏನಿದು ಕ್ಲಸ್ಟರ್‌ ಬಾಂಬ್‌? ಏಕೆ ಇಷ್ಟೊಂದು ಹೆದರಿಕೆ? ಇಲ್ಲಿದೆ ಮಾಹಿತಿ…

ಕ್ಲಸ್ಟರ್‌ ಬಾಂಬ್‌ ಎಂದರೇನು?
ಪ್ರದೇಶವೊಂದನ್ನು ಗುರಿಯಾಗಿಸಿಕೊಂಡು ಸಣ್ಣ ಸಣ್ಣ ಬಾಂಬ್‌ಗಳನ್ನು ಒಂದೇ ಸಮನೆ ಸುರಿಸುವುದೇ ಕ್ಲಸ್ಟರ್‌ ಬಾಂಬ್‌. ಕ್ಲಸ್ಟರ್‌ ಬಾಂಬ್‌ಗಳು ಟೊಳ್ಳಾದ ಹೊರಹೊದಿಕೆಯನ್ನು ಹೊಂದಿದ್ದು, ಅದರೊಳಗೆ ಅಸಂಖ್ಯಾತ ಸಣ್ಣ ಸ್ಫೋಟಕ-ಬಾಂಬ್‌ಗಳು ಗಳಿರುತ್ತವೆ. ಒಂದು ಅಂದಾಜಿನ ಪ್ರಕಾರ ಒಂದು ಕ್ಲಸ್ಟರ್‌ ಬಾಂಬ್‌ ಅಥವಾ ಶಸ್ತ್ರಾಸ್ತ್ರದ ಒಳಗೆ 2ರಿಂದ 2000ದ ವರೆಗೆ ಸಣ್ಣ ಬಾಂಬ್‌ಗಳಿರುತ್ತವೆ. ಅಂದರೆ 2,000 ಸಣ್ಣ-ಸಣ್ಣ ಸ್ಫೋಟಕಗಳು ಅಥವಾ ಬಾಂಬ್‌ಲೆಟ್‌ಗಳು. ಯುದ್ಧ ವಿಮಾನದ ಮೂಲಕ ಒಮ್ಮೆ ಒಂದು ಕ್ಲಸ್ಟರ್‌ ಬಾಂಬ್‌ ಅನ್ನು ಬಿಡುಗಡೆಗೊಳಿಸಿದರೆ, ಕ್ಲಸ್ಟರ್‌ ಬಾಂಬ್‌ನ ಹೊರ ಹೊದಿಕೆ ಕಳಚಿಕೊಂಡು ಸಣ್ಣ, ಸಣ್ಣ ಬಾಂಬ್‌ಲೆಟ್‌ಗಳು ಅಥವಾ ಸ್ಫೋಟಕಗಳು ಗುರಿಯಾಗಿಸಿದ ಪೂರ್ಣ ಪ್ರದೇಶದಲ್ಲಿ ಸ್ಫೋಟಗಳು ಸ್ಥಳವನ್ನು ನಾಶಮಾಡುತ್ತದೆ. ಸೈನಿಕರು, ಯುದ್ಧವಾಹನ ಮತ್ತು ರನ್‌ ವೇಗಳು, ವಿದ್ಯುತ್‌ ಪ್ರಸರಣ ಮಾರ್ಗಗಳನ್ನು ನಾಶ ಮಾಡಲು ಈ ಬಾಂಬ್‌ಗಳನ್ನು ಬಳಲಾಗುತ್ತದೆ.

ಸದ್ಯ ಅನೇಕ ಕ್ಲಸ್ಟರ್‌ ಬಾಂಬ್‌ಗಳು ಇವೆ. ಸುಧಾರಿತ ಕ್ಲಸ್ಟರ್‌ ಬಾಂಬ್‌ಗಳು ಆ್ಯಂಟಿ- ಆರ್ಮರ್‌, ಆ್ಯಂಟಿ-ಪರ್ಸನಲ್‌, ಆ್ಯಂಟಿ ಮೆಟಿರಿಯಲ್‌ ಸಂಯೋಜಿತ ರೂಪವನ್ನು ಪಡೆದಿವೆ. ಬ್ರೆಜಿಲ್‌ನಲ್ಲಿ ಬಿಎಲ್‌ಜಿ-120, 204,252 ಎಂಬ ಕ್ಲಸ್ಟರ್‌ ಶಸ್ತ್ರಾಸ್ತ್ರವಿದೆ. ಫ್ರಾನ್ಸ್‌ನಲ್ಲಿ ಬಿಎಪಿ-100, ಬಿಎಲ್‌ಜಿ 66 ಎಂಬ ಕ್ಲಸ್ಟರ್‌ ಬಾಂಬ್‌ಇದೆ. ಎಬಿ-22, ಎಬಿ-250 ಮಾದರಿ ಬಾಂಬ್‌ಗಳನ್ನು ಜರ್ಮನಿ ಹೊಂದಿದೆ. ರಷ್ಯಾಕೂಡ ಆರ್‌ಆರ್‌ಎಬಿ 3, ಆರ್‌ಬಿಕೆ-250, 500,750 ಎಂಬ ಕ್ಲಸ್ಟರ್‌ ಬಾಂಬ್‌ ಹೊಂದಿದೆ ಎಲ್ಲ ರಾಷ್ಟ್ರಗಳಿಗಿಂತ ಹೆಚ್ಚು ಕ್ಲಸ್ಟರ್‌ ಶಸ್ತ್ರಾಸ್ತ್ರ, ಸುಧಾರಿತ ಬಾಂಬ್‌ಗಳನ್ನು ಅಮೆರಿಕ ಉತ್ಪಾದಿಸಿದೆ. ಕಡಿಮೆ ತೀವ್ರತೆಯ ಬಾಂಬ್‌ಗಳನ್ನು ಉಕ್ರೇನ್‌ ಯುದ್ಧದಲ್ಲಿ ಬಳಸಿದೆ.

ಮೊದಲು ಬಳಸಿದ್ದು ಎಲ್ಲಿ?
2ನೇ ವಿಶ್ವಯುದ್ಧದ (1939-45) ಸಮಯದಲ್ಲಿ ಜರ್ಮನ್‌ ತಯಾರಿಸಿದ ಕ್ಲಸ್ಟರ್‌ ಬಾಂಬ್‌ ಜರ್ಮನ್‌ ಎಸಿx-2 ಎಂಬ ಕ್ಲಸ್ಟರ್‌ ಬಾಂಬ್‌ ಅನ್ನು ನಾಗರಿಕ ಮತ್ತು ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು. ಆಗ ಅದನ್ನು ಮೊದಲು ಬಟರ್‌ ಫ್ಲೆ„ ಬಾಂಬ್‌ ಎಂದು ಬಣ್ಣಿಸಲಾಗಿತ್ತು. 1970ರಿಂದ 1990ರ ಅವಧಿಯಲ್ಲಿ ಜರ್ಮನಿ, ರಷ್ಯಾ, ಅಮೆರಿಕ ಮತ್ತು ಇಟಲಿಗಳು ಈ ಶಸ್ತ್ರಾಸ್ತ್ರಗಳನ್ನು ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಿದವು. 90ರ ದಶಕದ ಬಳಿಕ ಈ ಶಸ್ತ್ರಾಸ್ತ್ರಗಳ ವಿನ್ಯಾಸ ಮತ್ತು ಬಳಕೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಪ್ರಸ್ತುತ 34 ದೇಶಗಳಲ್ಲಿ ಕ್ಲಸ್ಟರ್‌ ಶಸ್ತ್ರಾಸ್ತ್ರಗಳಿದ್ದು, ಈಗಾಗಲೇ 20ಕ್ಕೂ ಹೆಚ್ಚು ದೇಶಗಳು ಈ ಶಸ್ತ್ರಗಳ ಅಪಾಯವನ್ನು ಅರಿತಿವೆ.

ಕ್ಲಸ್ಟರ್‌ ಬಾಂಬ್‌ ಬಳಕೆಯ ಪರಿಣಾಮ
-ಕ್ಲಸ್ಟರ್‌ ಬಾಂಬ್‌ಗಳ ಮೊದಲ ಬಲಿಪಶುಗಳು ನಾಗರಿಕರು. ಸ್ಫೋಟದ ವೇಳೆ ಸುತ್ತಮುತ್ತಲಿನ ಯಾರಿಗಾದರೂ ಬಾಂಬ್‌ಲೆಟ್‌ಗಳು ತಗುಲಿ ತೀವ್ರವಾದ ಗಾಯಗಳು ಅಥವಾ ಸಾವಿಗೆ ಕಾರಣವಾಗಬಹುದು. ವರದಿಗಳ ಪ್ರಕಾರ ಗಮನಾರ್ಹ ಸಂಖ್ಯೆಯಲ್ಲಿ ಮಕ್ಕಳೂ ಸೇರಿದಂತೆ ಕ್ಲಸ್ಟರ್‌ ಯುದ್ಧ ಸಾಮಗ್ರಿಗಳಿಂದ ಸಾರ್ವಜನಿಕ ಸಾವುನೋವಾಗುತ್ತದೆ.

-ಕ್ಲಸ್ಟರ್‌ ಶಸ್ತ್ರಾಸ್ತ್ರಗಳ ಬಾಂಬ್‌ಲೆಟ್‌ಗಳನ್ನು ವಿಶಾಲ ಪ್ರದೇಶದ ಮೇಲೆ ಹಾಕುವ ಪರಿಣಾಮ ವಿವೇಚನೆಯಿಲ್ಲದೆ ಅಪಾರ ನಾಗರಿಕರ ಸಾವುನೋವಿನ ಜತೆಗೆ ಆಯಾ ಪ್ರದೇಶದ ಸಂಪನ್ಮೂಲಗಳು, ಸಾರ್ವಜನಿಕರ ಮೂಲಸೌಲಭ್ಯಕ್ಕೆ ತೊಡಕುಂಟಾಗುತ್ತದೆ.

-ಕ್ಲಸ್ಟರ್‌ ಬಾಂಬ್‌ಗಳ ದೋಷವೆಂದರೆ ಪ್ರಯೋಗಿಸಿದ ಅನೇಕ ಬಾಂಬ್‌ಗಳು ಕೆಲವೊಮ್ಮೆ ತನ್ನ ಹೊರಕವಚವನ್ನು ತೆರೆದುಕೊಳ್ಳದೆ ಯುದ್ಧಭೂಮಿಯಲ್ಲಿ ಹಾಗೆಯೇ ಉಳಿಯುತ್ತದೆ. ಅದು ಕಾಲಾಂತರದಲ್ಲಿ  ಸ್ಫೋಟಿಸಿ ಸಾರ್ವಜನಿಕ ಹಾನಿಯನ್ನುಂಟು ಮಾಡುತ್ತದೆ. ವಿಯೆಟ್ನಾಂ ಯುದ್ಧವಾಗಿ ಹಲವು ದಶಕಗಳ ಬಳಿಕ 2009ರಲ್ಲಿ ವಿಯೆಟ್ನಾಂನ ಕ್ವಾಂಗ್‌ ಟ್ರೊ ಪ್ರದೇಶದಲ್ಲಿ ಕ್ಲಸ್ಟರ್‌ ಬಾಂಬ್‌ಗಳು ಸಿಡಿದು ಸುಮಾರು 7,000 ಜನರು ತೊಂದರೆ ಅನುಭವಿಸುವಂತಾಯಿತು.

-ಕ್ಲಸ್ಟರ್‌ ಬಾಂಬ್‌ಗಳ ದೊಡ್ಡ-ಪ್ರಮಾಣದಲ್ಲಿ ಬಳಕೆಯಾದ ಪ್ರದೇಶವನ್ನು ಹಾನಿಗೊಳಿಸುತ್ತದೆ. ಯುದ್ಧದ ಅನಂತರ ಯುದ್ಧ ಸ್ಥಳದ ಚೇತರಿಕೆ, ಪುನರ್ನಿರ್ಮಾಣ ಮತ್ತು ಸ್ಥಳಾಂತರಗೊಂಡ ಜನಸಂಖ್ಯೆಯ ಸುರಕ್ಷಿತ ವಾಪಸಾತಿಗೆ ದೀರ್ಘಾವಧಿ ಸವಾಲುಗಳನ್ನು ಸೃಷ್ಟಿಸುತ್ತದೆ.

ಮಾನವ ಹಕ್ಕುಗಳ ಸಂಘಟನೆಗಳ‌ ವಿರೋಧ
ಸಂಘರ್ಷದಲ್ಲಿ ಕ್ಲಸ್ಟರ್‌ ಶಸ್ತ್ರಾಸ್ತ್ರಗಳು ನಾಗರಿಕರ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅಪಾರ ಸಾವು-ನೋವು ಸಂಪನ್ಮೂಲಗಳ ಹಾನಿಯಿಂದ ದೇಶದ ಸಂಪತ್ತು ನಶಿಸುತ್ತದೆ ಎಂದು ಆಮ್ನೆಸ್ಟಿ ಇಂಟರ್‌ ನ್ಯಾಶನಲ್‌ ಸೇರಿದಂತೆ ಅನೇಕ ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿವೆ. ಸ್ಫೋಟಗೊಳ್ಳದ ಬಾಂಬ್‌ಲೆಟ್‌ಗಳು ಮುಂದೆಯೂ ಆ ಪ್ರದೇಶವನ್ನು ಹಾನಿಗೊಳಿಸಲು ಕಾದಿರುತ್ತವೆ. ಜಾಗತಿಕ ನಿರ್ಬಂಧದ ನಡುವೆಯೂ ಈ ಮಾದರಿಯ ಶಸ್ತ್ರಾಸ್ತ್ರಗಳ ಬಳಕೆ ಸಲ್ಲದು ಎಂದು ಅಂತಾರಾಷ್ಟ್ರೀಯ ಸಂಘಟನೆಗಳು ಟೀಕಿಸಿವೆ.

ಅಮೆರಿಕದ ಸಮರ್ಥನೆ
ಉಕ್ರೇನ್‌ಗೆ ಸರಬರಾಜು ಮಾಡಲಾಗುತ್ತಿರುವ ಅಮೆರಿಕನ್‌ ಕ್ಲಸ್ಟರ್‌ ಬಾಂಬ್‌ಗಳು ಈಗಾಗಲೇ ರಷ್ಯಾ ಬಳಸಿರುವ ಶಸ್ತ್ರಾಸ್ತ್ರಗಳಿಗಿಂತ ಕಡಿಮೆ ತೀವ್ರತೆ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎಸ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲೀವಾನ್‌ ತಿಳಿಸಿದ್ದಾರೆ.

ಕ್ಲಸ್ಟರ್‌ ಶಸ್ತ್ರಾಸ್ತ್ರಗಳ ನಿಷೇಧ ಏಕೆ?
ಅಪಾರ ಸಾವುನೋವು,  ಪ್ರದೇಶದ ಪೂರ್ಣನಾಶ ಮತ್ತು ದೊಡ್ಡ ಪ್ರಮಾಣದ ವೆಚ್ಚದ ದೃಷ್ಟಿಯಿಂದ 2008ರ ಮೇನಲ್ಲಿ ಐರ್ಲೆಂಡಿನ ಡಬ್ಲಿನ್‌ನಲ್ಲಿ ಕ್ಲಸ್ಟರ್‌ ಯುದ್ಧಸಾಮಗ್ರಿಗಳ ಸಮಾವೇಶವನ್ನು ನಡೆಸಲಾ ಯಿತು. ಕ್ಲಸ್ಟರ್‌ ಶಸ್ತ್ರಾಸ್ತ್ರಗಳ ಬಳಕೆ, ಉತ್ಪಾದನೆ, ಸಂಗ್ರ ಹಣೆ ಮತ್ತು ವರ್ಗಾವಣೆಯನ್ನು ನಿಷೇಧಿಸುವ ಕುರಿತು ಸಮಾವೇಶದಲ್ಲಿ ಪ್ರಸ್ತಾವಿಸಲಾಗತ್ತು. ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಹಲವು ರಾಷ್ಟ್ರಗಳು ನಿಷೇಧಕ್ಕೆ ಸಹಿ ಹಾಕಲು ಅವಕಾಶ ಕಲ್ಪಿಸಲಾಯಿತು. 2010ರ ವೇಳೆಗೆ 107ರಾಷ್ಟ್ರಗಳು ಈ ನಿಷೇಧವನ್ನು ಒಪ್ಪಿ ಕೊಂಡವು. ಎ.10, 2023ರ ವೇಳೆಗೆ 120ಕ್ಕೂ ಹೆಚ್ಚು ರಾಷ್ಟ್ರಗಳು ನಿಶಸ್ತ್ರೀಕರಣಕ್ಕೆ ಅನುಮೋದಿಸಿವೆ.

ಯಾವ ಯಾವ ಯುದ್ಧದಲ್ಲಿ ಬಳಕೆ?

1965ರಲ್ಲಿ ನಡೆದ ವಿಯೆಟ್ನಾಂ ಯುದ್ಧದಲ್ಲಿ ವಿಯೆಟ್ನಾಂ, ಲಾವೋಸ್‌, ಕಾಂಬೋಡಿಯಾ ಮೇಲೆ ಯುಎಸ್‌ ಕ್ಲಸ್ಟರ್‌ ಬಾಂಬ್‌ ಪ್ರಹಾರ

1978ರಲ್ಲಿ ದಕ್ಷಿಣ ಲೆಬೆನಾನ್‌ ಯುದ್ಧದಲ್ಲಿ ಕ್ಲಸ್ಟರ್‌ ಬಾಂಬ್‌ ಒದಗಿಸಿದ ಇಂಗ್ಲೆಂಡ್‌

1975-1991ರ ದಕ್ಷಿಣ ಸಹಾರಾ ಯುದ್ಧದಲ್ಲಿ ರಾಯಲ್‌ ಮೊರಾಕಸ್‌ ಆರ್ಮಿಯಿಂದ ಕ್ಲಸ್ಟರ್‌ ಬಾಂಬ್‌ ಬಳಕೆ

1979ರ ಸೋವಿಯತ್‌ – ಅಫ^ನ್‌ ಯುದ್ಧದಲ್ಲಿ ಕ್ಲಸ್ಟರ್‌ ಬಾಂಬ್‌ಗಳನ್ನು ಬಳಸಲಾಯಿತು.

1982ರ ಫಾಕ್‌ಲ್ಯಾಂvÕ… ಯುದ್ಧದಲ್ಲಿ ಬಳಕೆ

1983ರ ಯುನೈಟೆಡ್‌ ಸ್ಟೇಟ್ಸ್‌ನ ಗ್ರೆನಡಾ ಯುದ್ಧದಲ್ಲಿ ಬಳಕೆ

1992 ಅನಂತರ ನಾಗೋನೊì ಯುದ್ಧದಲ್ಲಿ ಹಲವು ಬಾರಿ ಬಳಕೆ

1995ರ ಚೆಚೆನ್ಯಾ ಯುದ್ಧದಲ್ಲಿ ಬಳಕೆ

1999ರಲ್ಲಿ ಯುಗೋಸ್ಲಾವಿಯಾ ನಾಟೋ ದಾಳಿಯಲ್ಲಿ ಬಳಕೆ

2001-02ರ ಅಫ್ಘಾನಿಸ್ಥಾನದ ಕಾರ್ಯಾಚರಣೆಯಲ್ಲಿ ನ್ಯಾಟೋ ದೇಶಗಳು ಕ್ಲಸ್ಟರ್‌ ಯುದ್ಧ ಸಾಮಗ್ರಿ ಬಳಸಿವೆ

2003 ಇರಾಕ್‌ ಆಕ್ರಮಣದಲ್ಲಿ ಸುಧಾರಿತ ಕ್ಲಸ್ಟರ್‌ ಯುದ್ಧ ಸಾಮಗ್ರಿಗಳನ್ನು ಪ್ರಯೋಗಿಸಲಾಗಿದೆ.

 

-ಎನ್‌. ಅನಂತನಾಗ್‌

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.