ಪಿಯುಸಿ ರಿಸಲ್ಟ್ ಏನಾಯ್ತು?

ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಪಡೆಯಲು ಮುಗಿಬಿದ್ದ ಜನ

Team Udayavani, Sep 14, 2019, 5:54 AM IST

es-37

ಕೇಂದ್ರದಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಸಾರಿಗೆ ನಿಯಮಗಳ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತಿದೆ. ಸೆ. 3ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇಡೀ ಪರಿಷ್ಕರಣೆಯಲ್ಲಿ ಅತಿ ಹೆಚ್ಚು ದಂಡ “ಪ್ರಯೋಗ’ ಆಗುತ್ತಿರುವುದು ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (Pollution Under Control: PUC) ಹೊಂದಿರದ ವಾಹನದಾರರ ವಿರುದ್ಧ. ಹೀಗಾಗಿ, ತಮ್ಮಲ್ಲಿ ಪ್ರಮಾಣಪತ್ರ ಇದೆಯೇ ಎಂದು ಎಲ್ಲರೂ ನೋಡಿಕೊಳ್ಳು ವಂತಾಗಿದೆ, ಇಲ್ಲದವರು ಮಾಲಿನ್ಯ ತಪಾಸಣೆ ಕೇಂದ್ರಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಈ ಪ್ರಮಾಣಪತ್ರಕ್ಕೆ ಕೇವಲ 50-120 ರೂ. ಶುಲ್ಕ ವಿದ್ದರೂ, ಅರಿವಿನ ಕೊರತೆಯಿಂದ ಬಹುತೇಕ ವಾಹನ ಮಾಲೀಕರು ಇದನ್ನು ಹೊಂದಿಲ್ಲ. ಈಗ ಏಕಾಏಕಿ ದಂಡ ಹೆಚ್ಚಳದ ಹಿನ್ನೆಲೆಯಲ್ಲಿ ಸವಾರರು ವಾಹನಗಳ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ.

ಕಳೆದ ಒಂದು ವಾರದಿಂದ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಕ್ಕೆ ಭಾರೀ ಬೇಡಿಕೆ ಬಂದಿದೆ. ಈ ಮೊದಲು ನಿತ್ಯ 15 ರಿಂದ 20 ವಾಹನಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದವು. ಈಗ 80 ರಿಂದ 100 ವಾಹನಗಳು ನಮ್ಮಲ್ಲಿಗೆ ಪ್ರಮಾಣಪತ್ರಕ್ಕಾಗಿ ಬರುತ್ತಿವೆ. ಒಂದು ವಾಹ ನದ ಪರೀಕ್ಷೆಗೆ 5 ರಿಂದ 10 ನಿಮಿಷ ಆಗುತ್ತದೆ. ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ ಎಂದು ಬಸವೇಶ್ವರ ನಗರದ ಕೃಪಾನಿಕೇತನ ಸರ್ವೀಸ್‌ ಸ್ಟೇಷನ್‌ ಮತ್ತು ವಾಯುಮಾಲಿನ್ಯ ತಪಾಸಣೆ ಕೇಂದ್ರದ ಗಣೇಶ್‌ ಹೇಳುತ್ತಾ ರೆ.

ಇಲಾಖೆಯಿಂದಲೇ ದರ ನಿಗದಿ
ಎಲ್ಲ 1,022 ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿಗೂ ಸಾರಿಗೆ ಇಲಾಖೆಯೇ ದರ ನಿಗದಿಪಡಿಸಿರುತ್ತದೆ. ಅದರಂತೆ ದ್ವಿಚಕ್ರ ವಾಹನಗಳಿಗೆ 50 ರೂ., ಮೂರು ಚಕ್ರದ ವಾಹನಗಳಿಗೆ 60 ರೂ., ನಾಲ್ಕು ಚಕ್ರದ ವಾಹನ ಗಳಿಗೆ 75 ರೂ. ಹಾಗೂ ಭಾರೀ ವಾಹನಗಳಿಗೆ 120 ರೂ. ನಿಗದಿಪಡಿಸಲಾಗಿದೆ. ಈ ಕೇಂದ್ರ ಗಳು ಬೇಡಿಕೆ ಹೆಚ್ಚಿದೆಯೆಂದು ಬೇಕಾಬಿಟ್ಟಿ ವಸೂಲಿ ಮಾಡುವಂತಿಲ್ಲ. ಹಾಗೊಂದು ವೇಳೆ ಈ ನಿಯಮ ಉಲ್ಲಂ ಸಿದ್ದು ಕಂಡುಬಂದರೆ, ಅಂತಹ ಕೇಂದ್ರಗಳ ಪರವಾನಗಿಯನ್ನು ಅಮಾನತಿನಲ್ಲಿ ಇಡಲಿಕ್ಕೂ ಸಾರಿಗೆ ಇಲಾಖೆಗೆ ಅಧಿಕಾರ ಇದೆ ಎಂದು ಅಪರ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಶಿವರಾಜ್‌ ಬಿ. ಪಾಟೀಲ ತಿಳಿಸಿದರು.

ಮಾಲಿನ್ಯ ತಪಾಸಣೆ ಕೇಂದ್ರಗಳು ಎಲ್ಲಿರುತ್ತವೆ?
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರಮಾಣೀಕೃತಗೊಂಡ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳು ಪೆಟ್ರೋಲ್‌ ಬಂಕ್‌ ಆವರಣ ಸೇರಿದಂತೆ ವಿವಿಧೆಡೆ ಸ್ಥಾಪನೆಗೊಂಡಿರುತ್ತವೆ. ಈ ಕೇಂದ್ರಗಳು ನೀಡುವ ಪ್ರಮಾಣ ಪತ್ರದ ಅವಧಿ ಆರು ತಿಂಗಳು.

ಬೇಕಾಬಿಟ್ಟಿ ಸುಲಿಗೆ ಸಾಧ್ಯತೆ?
ತಪಾಸಣೆ ಕೇಂದ್ರಗಳಿಗೆ ಬೇಡಿಕೆ ಬೆನ್ನಲ್ಲೇ ತಪಾಸಣೆ ಕೇಂದ್ರಗಳು ಬೇಕಾಬಿಟ್ಟಿ ಸುಲಿಗೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಸಾರಿಗೆ ಇಲಾಖೆ ಕಡಿವಾಣ ಹಾಕಬೇಕು. ಇಲ್ಲವಾದರೆ ಪರಿಸ್ಥಿತಿಯ ದುರುಪಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ,
ನಕಲಿ ಪ್ರಮಾಣ ಪತ್ರಗಳ ಬಗ್ಗೆಯೂ ನಿಗಾ ವಹಿಸಬೇಕು ಎಂದು ವಾಹನ ಮಾಲೀಕರು ಒತ್ತಾಯಿಸುತ್ತಾರೆ.

ಮೊಬೈಲ್‌ ವಾಹನಗಳಲ್ಲಿ ಉಚಿತ
ಸಾರಿಗೆ ಇಲಾಖೆ ಅನುಮತಿ ನೀಡಿದ ಕೇಂದ್ರಗಳು ಮಾತ್ರವಲ್ಲ; ಮಾಲಿನ್ಯ ನಿಯಂತ್ರಣ ಮಂಡಳಿಯೂ ಮೊಬೈಲ್‌ ತಪಾಸಣ ಕೇಂದ್ರಗಳನ್ನು ರಾಜ್ಯದ ವಿವಿಧೆಡೆ ಸ್ಥಾಪಿಸಿದೆ. ಅವುಗಳ ಹೆಸರು “ಹಸುರು ವಾಹನ’. ವಿವಿಧೆಡೆ ಸುಮಾರು ಹತ್ತು “ಹಸುರು ವಾಹನ’ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ವಾಯುಮಾಲಿನ್ಯ ತಪಾಸಣೆ ಉಚಿತ. ಇವುಗಳು ನೀಡುವ ಪ್ರಮಾಣಪತ್ರದ ಅವಧಿ ಕೂಡ ಆರು ತಿಂಗಳು ಆಗಿರುತ್ತದೆ.

ಪರೀಕ್ಷೆ ಪಾಸಾದ್ರಷ್ಟೇ ಪತ್ರ!
ವಾಯುಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ತಪಾಸಣೆಗೊಳಪಡಿಸುವ ವಾಹನಗಳಿಗೆಲ್ಲಾ ಪ್ರಮಾಣಪತ್ರ ಸಿಗುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗಬೇಕು. ಆಗ ಮಾತ್ರ ಪ್ರಮಾಣಪತ್ರ ದೊರೆಯಲಿದೆ. ಹೌದು, ಪ್ರತಿ ವಾಹನವು ಇಂತಿಷ್ಟೇ ಹೊಗೆ ಉಗುಳಬೇಕು ಹಾಗೂ ಅದರಲ್ಲಿನ ಧೂಳಿನ ಕಣಗಳ ಸಾಂದ್ರತೆ, ಕಾರ್ಬನ್‌ ಮೊನಾಕ್ಸೆ„ಡ್‌ ಮತ್ತಿತರ ಅಂಶಗಳು ಎಷ್ಟಿರಬೇಕು ಎಂಬ ಕುರಿತು ಮಾನ ದಂಡ ವಿದೆ. ಉದಾಹರಣೆಗೆ, ದ್ವಿಚಕ್ರ ವಾಹನವೊಂದರ ಪರೀಕ್ಷೆ ವೇಳೆ ಬಲೂನಿನಲ್ಲಿ ಹೊಗೆಯನ್ನು ಹಿಡಿದಿಟ್ಟಾಗ, ಅದರಲ್ಲಿನ ಧೂಳಿನ ಕಣಗಳ ಸಾಂದ್ರತೆ 200ರ ಗಡಿ ದಾಟಿರಬಾರದು. ಅದೇ ರೀತಿ, ಕಾರ್ಬನ್‌ ಮೊನಾಕ್ಸೆ„ಡ್‌ ಪ್ರಮಾಣ 0.5 ಎಂಎಂಜಿ ದಾಟುವಂತಿಲ್ಲ. ಹಾಗೊಂದು ವೇಳೆ ನಿಗದಿತ ಮಿತಿಯನ್ನು ದಾಟುವ ವಾಹನಗಳಿಗೆ ಪ್ರಮಾಣಪತ್ರ ನೀಡುವುದಿಲ್ಲ. ಬದಲಿಗೆ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗುತ್ತದೆ. ಸರಿಪಡಿಸಿಕೊಂಡು ವಾಪಸ್‌ ಬಂದ ನಂತರ ಪ್ರಮಾಣಪತ್ರ ನೀಡಲಾಗುತ್ತದೆ.

1,022 ರಾಜ್ಯದಲ್ಲಿನ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳು
385 ಬೆಂಗಳೂರಿನಲ್ಲಿರುವ ಕೇಂದ್ರಗಳು
8am - 6 pm ಕೇಂದ್ರಗಳ ಕೆಲಸದ ಅವಧಿ
8am  - 2 pm ರವಿವಾರ ಕೆಲಸದ ಅವಧಿ

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.