ನಿತ್ಯಾನಂದ ಕೈಲಾಸ! ಯಾರಿಗೆಲ್ಲ ಪ್ರವೇಶ ?
Team Udayavani, Mar 4, 2023, 7:15 AM IST
ಭಾರತದಿಂದ ಪರಾರಿಯಾಗಿ, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎನ್ನುವ ದೇಶವನ್ನೇ ಸ್ಥಾಪಿಸಿದ್ದಾರೆ ಎನ್ನಲಾಗುವ ವಿವಾದಿತ, ಸ್ವಘೋಷಿತ ದೇವಮಾನವ ನಿತ್ಯಾನಂದ ಕಳೆದ ಕೆಲದಿನಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗಿಯಾಗಿದ್ದ ವಿಚಾರ ಜಾಲತಾಣದಲ್ಲಿ ವೈರಲ್‌ಆಗಿದೆ. ನಿಜಕ್ಕೂ ಇದರ ಸತ್ಯಾಸತ್ಯತೆಗಳೇನು? ಕೈಲಾಸ ಎಲ್ಲಿದೆ? ಇದು ಅಧಿಕೃತ ದೇಶವೇ ಎಂಬುದರ ವಿವರ ಇಲ್ಲಿದೆ.
ಎಲ್ಲಿದೆ ಕೈಲಾಸ ?
ದಕ್ಷಿಣ ಅಮೆರಿಕದ ಈಕ್ವೆಡರ್ ಬಳಿ ಇರುವ ದ್ವೀಪ ಪ್ರದೇಶವೊಂದನ್ನು ನಿತ್ಯಾನಂದ ಕೈಲಾಸ ಎಂದು ಹೆಸರಿಸಿ, ದ್ವೀಪವನ್ನೇ ದೇಶವನ್ನಾಗಿ ಮಾರ್ಪಾಡು ಮಾಡಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
ಅಧಿಕೃತ ದೇಶವೇ?
ಯಾವುದೇ ಒಂದು ಪ್ರದೇಶವನ್ನು ಅಂತಾರಾಷ್ಟ್ರೀಯ ಮಾನ್ಯತೆಯೊಂದಿಗೆ ದೇಶವೆಂದು ಪರಿಗಣಿಸಬೇಕಾದರೆ, ವಿಶ್ವಸಂಸ್ಥೆಯ ಮಾನ್ಯತೆ ಅಗತ್ಯ. ಅದರ ಮಾನದಂಡಗಳ ಪ್ರಕಾರ, ಪ್ರದೇಶವೊಂದು ಶಾಶ್ವತ ಜನಸಂಖ್ಯೆ, ಸರ್ಕಾರ ಹಾಗೂ ವಿದೇಶಗಳೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಹೊಂದಿರಬೇಕು. ಇದೇ ಪ್ರಸ್ತಾಪಕ್ಕಾಗಿ ಕೈಲಾಸದ ಪ್ರತಿನಿಧಿಗಳು ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ, ಕೈಲಾಸ ಇದರಲ್ಲಿ ವಿಫಲವಾಗಿರುವ ಕಾರಣ, ಅದನ್ನು ಮಾನ್ಯತೆ ಪಡೆದ ದೇಶವೆಂದು ಗುರುತಿಸಲಾಗಿಲ್ಲ.
ಯಾರಿಗೆಲ್ಲ ಪ್ರವೇಶ ?
ಕೈಲಾಸ ವೆಬ್‌ಸೈಟ್‌ನಲ್ಲಿಯೇ ಹೇಳಿರುವಂತೆ ವಿಶ್ವರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾಗಿರುವ ಹಿಂದೂಗಳು ಕೈಲಾಸದಲ್ಲಿ ಮುಕ್ತವಾಗಿ ಹಿಂದೂ ಧರ್ಮ ಅನುಸರಿಸಬಹುದಾಗಿದೆ. ಅಲ್ಲದೇ, ಆ ದೇಶದ ಪೌರತ್ವ ಪಡೆಯಬಹುದು. ಈ ಸಂಬಂಧಿಸಿದಂತೆ ಶೀಘ್ರವೇ ಇ-ವೀಸಾ, ಇ-ಸಿಟಿಜನ್‌ಶಿಪ್ ಆರಂಭಿಸುವುದಾಗಿಯೂ ತಿಳಿಸಲಾಗಿದೆ.
ಹೇಳಿಕೆ ಅಪ್ರಸ್ತುತ
ಕೈಲಾಸ ಪ್ರತಿನಿಧಿ ವಿಶ್ವಸಂಸ್ಥೆಯಲ್ಲಿ ಮಾಡಿದ್ದ ಭಾಷಣದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದರ ಬಗ್ಗೆಯೂ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಸ್ಪಷ್ಟನೆ ನೀಡಿದೆ. ಫೆ.24ರಂದು ನಡೆದ ಸಭೆ ಸಾರ್ವಜನಿಕರಿಗೆ ಮಕ್ತವಾಗಿತ್ತು. ಆಸಕ್ತ ಎನ್‌ಜಿಒಗಳು ಭಾಗವಹಿಸಲು ಅವಕಾಶವಿತ್ತು. ಅದರಂತೆ ಕೈಲಾಸ ಎನ್‌ಜಿಒ ಪ್ರತಿನಿಧಿ ಭಾಗವಹಿಸಿದ್ದರು. ಆದರೆ, ಅವರು ಮಂಡಿಸಿದ ವಿಚಾರಗಳು ಅಪ್ರಸ್ತುತವಾಗಿದ್ದು, ಅವುಗಳನ್ನು ಅಂತಿಮ ಕರಡು ರಚನೆಯಲ್ಲಿ ಪರಿಗಣಿಸುವುದಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.