ವಾಟ್ಸ್ ಆ್ಯಪ್ ವೆಬ್ ಆವೃತ್ತಿಗೆ ಶೀಘ್ರದಲ್ಲಿ; ವಾಯ್ಸ , ವೀಡಿಯೋ ಕರೆ
Team Udayavani, Oct 24, 2020, 6:18 AM IST
ಸಾಂದರ್ಭಿ ಚಿತ್ರ
ಮಣಿಪಾಲ: ವಾಟ್ಸ್ ಆ್ಯಪ್ ತನ್ನ ವೆಬ್ ಆವೃತ್ತಿಯಲ್ಲಿ ಧ್ವನಿ ಮತ್ತು ವೀಡಿಯೋ ಕರೆಗಳನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆ್ಯಪ್ ಬಳಕೆ ಹೆಚ್ಚಾಗಿದ್ದು ಜನರ ಸ್ಪಂದನೆ ಗಮನಿಸಿ ಈ ನಡೆ ಅನುಸರಿಸಿರುವ ಸಾಧ್ಯತೆ ಇದೆ. ಹಾಗಾದರೆ ಈ ಹೊಸ ಫೀಚರ್ ಅಲ್ಲಿ ಏನಿದೆ? ಯಾವಾಗ ಬರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಯಾವ ಆವೃತ್ತಿಗೆ?
ಈ ಪ್ರಸ್ತಾವಿತ ವೈಶಿಷ್ಟ್ಯವು ಪ್ರಸ್ತುತ ಬೀಟಾ ಆವೃತ್ತಿಯಲ್ಲಿದೆ. ಬಿಡುಗಡೆ ಮಾಡುವ ಮೊದಲು ಕಂಪನಿಯು ಅದನ್ನು ಪರೀಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಳಲ್ಲಿ ವಾಟ್ಸ್ ಆ್ಯಪ್ ಧ್ವನಿ ಮತ್ತು ವಿಡಿಯೋ ಕರೆಗಳು ಈಗಾಗಲೇ ಲಭ್ಯವಿವೆ. ಹೀಗಾಗಿ ಡೆಸ್ಕ್ ಟಾಪ್ ಮಾದರಿಗಳಿಗೆ ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ.
ಹೇಗೆ ಕೆಲಸ ಮಾಡುತ್ತದೆ?
ಪ್ರಾಥಮಿಕ ಮಾಹಿತಿಗಳ ಪ್ರಕಾರ ಡೆಸ್ಕ್ಟಾಪ್‌ನಲ್ಲಿ ಕೆಲಸ ಮಾಡುತ್ತಿರುವಾಗ, ಕರೆಯನ್ನು ಸ್ವೀಕರಿಸಲು ಮತ್ತು ತಿರಸ್ಕರಿಸುವ ಆಯ್ಕೆಗಳು ಪಾಪ್-ಅಪ್ ವಿಂಡೋ ಮೂಲಕ ಕಾಣಿಸಿಕೊಳ್ಳುತ್ತದೆ. ಡಿಸ್‌ಪ್ಲೇನ ಕೆಳಭಾಗದಲ್ಲಿ ಈ ಆಯ್ಕೆಗಳು ಲಭ್ಯವಾಗಲಿವೆ. ಕರೆಯ ವಿವರಗಳು ಮತ್ತು ಸಂಪರ್ಕ ಮಾಹಿತಿಯನ್ನು ತೋರಿಸುವ ಪಾಪ್-ಅಪ್ ವಿಂಡೋದೊಂದಿಗೆ ನೀವು ಕರೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಗ್ರೂಪ್ ಕಾಲ್ ಸಾಧ್ಯವಾಗುತ್ತಾ?
ಈಗಿರುವ ಮಾಹಿತಿ ಪ್ರಕಾರ ಡೆಸ್ಕ್ ಟಾಪ್ ವಾಟ್ಸ್ ಆ್ಯಪ್ ಕರೆ ಮತ್ತು ವೀಡಿಯೋ ಕರೆಗಳ ಕುರಿತು ಹೆಚ್ಚು ಗಮನ ಹರಿಸುತ್ತಿದೆ. ಆದರೆ ಗ್ರೂಪ್ ಕಾಲ್ ಅಥವಾ ಗ್ರೂಪ್ ವೀಡಿಯೋ ಸೌಲಭ್ಯಗಳ ಜತೆಗೆ ಆರಂಭವಾಗುತ್ತದೆಯೇ ಎಂಬುದಕ್ಕೆ ಯಾವುದೇ ಉತ್ತರ ಲಭ್ಯವಿಲ್ಲ.
ಬಳಕೆ ಸ್ನೇಹಿ
ಮೊಬೈಲ್ ಕರೆಗಳಿಗೆ ಹೋಲಿಕೆ ಮಾಡುವುದಾದರೆ ವಾಟ್ಸ್ ಆ್ಯಪ್ ವೆಬ್‌ನ ಈ ಫೀಚರ್ ತುಂಬಾ ಬಳಕೆದಾರರಿಗೆ ಪೂರಕವಾಗಿರಲಿದೆ. ಮೊಬೈಲ್ ಮೂಲಕ ಕರೆಗಳನ್ನು ಮಾಡುವಾಗ ಕೈಯಲ್ಲಿಯೇ ಫೋನ್ ಅನ್ನು ಹಿಡಿದುಕೊಳ್ಳಬೇಕಾಗುತ್ತದೆ. ಇದು ಒಂದು ವಿಧದಲ್ಲಿ ಹಿಂಸೆಯೂ ಹೌದು. ಹೀಗಾಗಿ ಡೆಸ್ಕ್ಟಾಪ್ ಅಥವಾ ವಾಟ್ಸ್ ಆ್ಯಪ್ ವೆಬ್‌ಗ ವೀಡಿಯೋ ಕರೆಗಳು ಲಭ್ಯವಾದರೆ ಅದು ತುಂಬಾ ಪ್ರಯೋಜನವಾಗಲಿದೆ. ಇದು ಸುಲಭ ಮತ್ತು ಹೆಚ್ಚು ಬಳಕೆಯಾಗಲಿದೆ.
ಯಾವಾಗ ಬರಲಿದೆ?
ಈ ಹೊಸ ಫೀಚರ್‌ನ ಕುರಿತು ವಾಟ್ಸ್ ಆ್ಯಪ್ ಅಥವಾ ಮಾತೃಸಂಸ್ಥೆ ಫೇಸ್‌ಬುಕ್ ಈ ಹೊಸ ವೈಶಿಷ್ಟ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಈ ಹಿಂದಿನ ಬಹುತೇಕ ಹೊಸ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುವ ಮೊದಲು ವಾಟ್ಸ್ ಆ್ಯಪ್ ಯಾವುದೇ ಘೋಷಣೆಯನ್ನು ಮಾಡಿರಲಿಲ್ಲ. ಸದ್ಯ ಈ ಸೌಲಭ್ಯ ಬೀಟಾದಲ್ಲಿ ಸೇರಿಸಲಾಗಿರುವ ಕಾರಣ ಶೀಘ್ರದÇÉೇ ಈ ಪೀಚರ್ ಬರುವ ನಿರೀಕ್ಷೆ ಇದೆ.
ಏನು ಕಾರಣ?
ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆ್ಯಪ್ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ವೀಡಿಯೋ ಕರೆಗಳಿಗಾಗಿ ವಾಟ್ಸ್ ಆ್ಯಪ್ ಅನ್ನು ಹೆಚ್ಚು ಬಳಸಲಾಗುತ್ತಿದೆ. ಸ್ಮಾರ್ಟ್ ಫೋನ್‌ಗಳಿಗೆ ಗ್ರೂಪ್ ಕರೆಗಳನ್ನು ಪರಿಚಯಿಸಿದ ಬಳಿಕ ಇದರ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಾಟ್ಸ್ ಆ್ಯಪ್‌ವೆಬ್‌ನಲ್ಲಿ ಸಹ ಗುಂಪು ಧ್ವನಿ ಮತ್ತು ವೀಡಿಯೋ ಕರೆಗಳು ಸಾಧ್ಯ. ಇದು ಜೂಮ್ ಮತ್ತು ಗೂಗಲ್ ಮೀಟ್‌ಗೆ ಪರ್ಯಾಯವಾಗಬಹುದು.
ಇತರ ಆಯ್ಕೆಗಳೇನು?
ನಾವು ಕರೆ ಮಾಡುವ ಸಂದರ್ಭ ವೀಡಿಯೋ, ಮ್ಯೂಟ್, ಡಿಕ್ಲೈನ್ ಮತ್ತು ಇತರ ಸೆಟ್ಟಿಂಗ್‌ಗಳ ಆಯ್ಕೆಗಳೊಂದಿಗೆ ಸಣ್ಣ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.