ಮಳೆಯು ಪ್ರವಾಹವಾಗಿ ನಗರಗಳು ತೋಯ್ದಾಗ
Team Udayavani, Jul 24, 2023, 6:10 AM IST
ನೀರಿನ ಧರ್ಮ ಹರಿವು. ಮಳೆಬಂದಾಗ ನೆಲ ಹೀರಿ ಮಿಕ್ಕುಳಿದ ನೀರು ಹರಿಯುವುದು ನೆಲದ ಮೇಲೆಯೇ. ಹೀಗೆ ಹರಿದ ನೀರು ಹಳ್ಳ, ಕೆರೆಗಳಲ್ಲಿ ಸೇರಿ ಕೊನೆಗೆ ತೋಡು-ನದಿಗಳಲ್ಲಿ ಪ್ರವಹಿಸಿ ಸಾಗರವನ್ನು ಸೇರುವುದು. ನೀರಿಂಗದೇ ಅಥವಾ ಮಳೆಯ ನೀರಿನ ಹರಿವಿಗೆ ಹುಯ್ದಾಡಲು ಜಾಗವೇ ಇಲ್ಲವಾದಲ್ಲಿ ಎಲ್ಲೆಡೆ ತುಂಬಿಕೊಳ್ಳುತ್ತದೆ. ಮಳೆಗಾಲದ ಹರುಷವೇರುವ ಮುನ್ನ ಪಟ್ಟಣಗಳು ಗಂಭೀರತೆಗೆ ತೆರೆದುಕೊಳ್ಳುವುದು ಪ್ರವಾಹ ವಾದಾಗ. ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಬಹಳ ಸಾಮಾನ್ಯವಾಗಿರುವುದು ಈ ಪ್ರವಾಹಗಳೇ. ಇವು ದೈನಂದಿನ ಜೀವನವನ್ನು ಅತಿಯಾಗಿ ಕಾಡುತ್ತವೆ. ಮಳೆ ಹೆಚ್ಚಾದರೆ ಪ್ರವಾಹ ಎಂಬುದು ಸ್ವಾಭಾವಿ ಕವಾದ ತಥ್ಯ. ಆದರೆ ಸಾಮಾನ್ಯ ಮಳೆಗೂ ಮಹಾ ನಗರಗಳು ತೊಳೆದು ತೊಪ್ಪೆಯಾದದ್ದನ್ನು ಈ ಮಳೆ ಗಾಲದಲ್ಲೇ ನೋಡಿದ್ದೇವೆ. ಪ್ರತೀ ಮಳೆಗೆ ಮಹಾ ನಗರಗಳು ಮುಳುಗೇಳುವುದೂ ಸಾಮಾನ್ಯ ವಾಗಿಬಿಟ್ಟಿವೆ. ಈ ನಗರ ಪ್ರವಾಹಗಳು ಸುವ್ಯವಸ್ಥಿತ ಅಂದುಕೊಂಡ ಸೌಲಭ್ಯಗಳನ್ನೆಲ್ಲ ಅಸ್ತವ್ಯಸ್ತ ಮಾಡಿಬಿಟ್ಟಿವೆ.
ಕಳೆದೊಂದು ದಶಕದಿಂದ ದೇಶದ ಮಹಾನಗರ ಗಳು ಅನುಭವಿಸುತ್ತಿರುವ ವಿಪತ್ತುಗಳ ಪಟ್ಟಿಯಲ್ಲಿ ಅರ್ಬನ್ ಫ್ಲಡ್ ಅರ್ಥಾತ್ ನಗರ ಪ್ರವಾಹ ಸೇರಿ ಬಿಟ್ಟಿದೆ. ಆರ್ಥಿಕ ಕೇಂದ್ರಗಳಾಗಿರುವ ನಗರ ಪ್ರದೇ ಶಗಳು ಮೂಲ ಸೌಕರ್ಯದ ಕಾರಣಕ್ಕಾಗಿ ಹೆಚ್ಚಿನ ಜನವಾಸ್ತವ್ಯವನ್ನು ಹೊಂದಿವೆ. ನಗರ ಪ್ರವಾಹಗಳು ಈ ಎಲ್ಲ ಸೌಲಭ್ಯಗಳ ಮೇಲೆ ಪ್ರತ್ಯಕ್ಷ ಪರಿಣಾಮವನ್ನು ಬೀರಿ ಮಳೆಗೆ ಕಾಲುವೆಗಳು ತುಂಬಿ, ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದು, ರಸ್ತೆ ಅಂಡರ್‌ಪಾಸ್ ಗಳಲ್ಲಿ ನೀರು ನಿಂತು ಪ್ರಾಣಹಾನಿಗೂ ಕಾರಣವಾಗಿ ಅರ್ಧಕ್ಕರ್ಧ ಪಟ್ಟಣವನ್ನೇ ದಿನದ ಮಟ್ಟಿಗೆ ಸ್ತಬ್ಧ ಗೊಳಿಸಿದ್ದನ್ನು ಬೆಂಗಳೂರು, ದಿಲ್ಲಿ, ಮುಂಬಯಿ ಮತ್ತು ಇತರ ಪ್ರದೇಶಗಳಲ್ಲಿ ನೋಡಿದ್ದೇವೆ. ಹಾಗಾ ದರೆ ಅವ್ಯವಸ್ಥೆಗಳ ಕುಹರಗಳಾಗಿರುವ ನಗರ ಪ್ರವಾ ಹಗಳಿಗೆ ಮಳೆಯೊಂದನ್ನೇ ದೂಷಿಸಬಹುದೇ?
ಆರ್ಥಿಕತೆ, ಔದ್ಯೋಗೀಕರಣ ಮತ್ತು ಕೈಗಾರಿ ಕೀಕರಣಗಳ ಅಬ್ಬರದಲ್ಲಿ ನಗರೀಕರಣವೂ ವೇಗ ವರ್ಧಿತವಾಗಿ ನಡೆಯುತ್ತಿರುವ ಪ್ರಕ್ರಿಯೆ. ಕಾಂಕ್ರೀಟ್ ಅಥವಾ ಇತರ ಅಭೇದ್ಯ ಹಾಸಿನ ನೆಲದಲ್ಲಿ ಬಿದ್ದ ಮಳೆ ಯು ನೇರವಾಗಿ ಮತ್ತು ಅಷ್ಟೇ ಕ್ಷಿಪ್ರವಾಗಿ ಬಸಿ ಕಾಲುವೆಗಳನ್ನು ಸೇರುತ್ತವೆ. ಈ ಹಾದಿಯಲ್ಲಿ ಕೆರೆಯೋ, ಸಸ್ಯಕ್ಷೇತ್ರಗಳ್ಳೋ ಇದ್ದಲ್ಲಿ ಹರಿವು ಪ್ರವಾ ಹವಾಗುವ ವೇಗ ವಿಳಂಬ ವಾಗುತ್ತದೆ. ನಗರಗಳನ್ನು ಬಸಿಯುವ ವಿಶಾಲ ನಾಲೆಗಳಿಗೆ, ಸ್ವಾಭಾವಿಕ ಹಳ್ಳಗಳ ಬದಲಾಗಿ ಕಿರು ಬಸಿಚರಂಡಿಗಳು ನಿರ್ಮಾ ಣವಾದವು. ಕ್ರಮೇಣ ಹೂಳು ಕಟ್ಟಿಕೊಂಡೋ, ಊನ ಗೊಂಡೋ ಸಾಮರ್ಥ್ಯವನ್ನು ಕ್ಷಯಿಸಿಕೊಂಡವು. ಮಳೆ ಬಂದ ಕ್ಷಣಮಾತ್ರದಲ್ಲೇ ನಗರಗಳು ಮಂಡಿ ಮುಳುಗುವಷ್ಟು ನೀರಿನಿಂದ ಆವೃತ್ತವಾಗುತ್ತವೆ. ಕಳೆದ ದಶಕಗಳಲ್ಲಿ ದಾಖಲಾದ ನಗರ ಪ್ರವಾ ಹಗಳು ಅವ್ಯಾಹತ ಮಳೆಯ ಭಾಗವಾಗಿದ್ದರೆ, ಇತ್ತೀಚೆಗಿನ ಬಹುತೇಕ ಘಟನೆಗಳು ಅಲ್ಪಾ ವಧಿಯ ಮಳೆಯ ಪರಿಣಾಮವೇ ಆಗಿವೆ. ಹೀಗಿದ್ದಾಗ ಆಲೋ ಚಿಸಬೇಕಾದದ್ದು ನಮ್ಮ ನಗರಗಳ, ಬಸಿಕಾಲುವೆಗಳ ಹಾಗೂ ನಿರ್ವ ಹಣೆಯ ಬಗೆಗೇ ಅಲ್ಲವೇ? ಸರಿ ಯಾದ ಬಸಿ ಕಾಲುವೆಗಳಿರದಿರುವುದು, ಕಟ್ಟಿ ಕೊಂಡಿರುವ ಬಸಿಕಾಲುವೆಗಳು ಮತ್ತು ಅಸಮ ರ್ಪಕವಾಗಿ ವಿನ್ಯಾಸಗೊಳಿಸಿದ ನೀರ್ಗಾಲುವೆಗಳು ಭಾ ರತದ ಬಹುತೇಕ ನಗರಗಳು ಎದುರಿಸುತ್ತಿರುವ ಸವಾಲುಗಳು. ದಾರಿಯ ಇಕ್ಕೆಲಗಳಲ್ಲಿ ನೀರ್ಗಾ ಲುವೆಗಳ ಅಲಭ್ಯತೆಯು ರಹದಾರಿಯನ್ನೇ ಹೊಳೆಯ ನ್ನಾಗಿಸುತ್ತವೆ. ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ, ಆಹಾರ ಪ್ಯಾಕೇಜಿಂಗ್ ಫಾಯಿಲ್, ಪ್ಲಾಸ್ಟಿಕ್ ಬಾಟಲುಗಳು ಚರಂಡಿಗಳಲ್ಲಿ ವಿಲೇವಾರಿಯಾಗುತ್ತಿರುವುದು ಖೇದಕರ. ವಿವಿಧ ರೀತಿಯ-ರೂಪಗಳಲ್ಲಿ ಪ್ಲಾಸ್ಟಿಕ್ ನೀರಿನ ನಾಲೆಗಳನ್ನು ಸೇರಿ, ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ನಗರ ಪ್ರವಾಹಗಳು ಜನ- ಜೀವನ ಮೇಲೆ ಅತೀವವಾಗಿ ಪರಿಣಾಮ ಬೀರುತ್ತದೆ. ಗಂಟೆಯಿಂದ ದಿನದ ಮಟ್ಟಿಗಾದರೂ ವಾಸ್ತವ್ಯಕ್ಕೆ, ಆಸ್ತಿಪಾಸ್ತಿಗಳ ನಷ್ಟ ಮತ್ತು ನೀರು, ವಿದ್ಯುತ್ ಸಾರಿಗೆ ಯಂತಹ ಅಗತ್ಯ ಸೇವೆಗಳಿಗೆ, ಮೂಲ ಸೌಕರ್ಯಗಳಿಗೆ ಗಮನಾರ್ಹ ಹಾನಿಯನ್ನು ಉಂಟು ಮಾಡುತ್ತಿದೆ. ಇಷ್ಟಾದ ಮೇಲೆ ನಗರ ಪ್ರವಾಹಗಳು ಉಂಟು ಮಾಡುವ ಆರ್ಥಿಕ ಹಾನಿಯೂ ತುಸು ಹೆಚ್ಚೇ.
ನಗರ ಪ್ರವಾಹಗಳ ವಿಪತ್ತಿನ ಸನ್ನಿವೇಶಗಳನ್ನು ನಿರ್ವಹಣ ವಿಧಾನಗಳಿಂದ ನಿಭಾಯಿಸಲು ಮಾತ್ರ ಸಾಧ್ಯವೆಂಬಂತಿದೆ ಸದ್ಯದ ಪರಿಸ್ಥಿತಿಗಳು. ಇದಕ್ಕೋಸ್ಕರ ಅರ್ಬನ್ ರೆಸಿಲಿಯೆನ್ಸ್ -ನಗರ ಸ್ಥಿತಿ ಸ್ಥಾಪಕತ್ವ ಎಂಬ ಅಂಶವನ್ನು ಗುರುತಿಸಲಾಗಿದೆ. ಜುಲೈ 2005ರ ಮುಂಬಯಿ ಪ್ರವಾಹದ ಅನಂತರ ಭಾರತ ಸರಕಾರವು ನಗರ ಪ್ರವಾಹಗಳ ಬಗೆಗೆ ನೀತಿ ಮತ್ತು ಯೋಜನಾ ಉಪಕ್ರಮಗಳನ್ನು ಆಲೋ ಚಿಸಿದೆ. ತನ್ಮೂಲಕ ನಗರ ಪ್ರವಾಹ ವಿಪತ್ತು ನಿರ್ವ ಹಣೆಯ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಭಾರ ತದ ರಾಷ್ಟ್ರೀಯ ಪತ್ತು ನಿರ್ವಹಣ ಪ್ರಾಧಿಕಾರ (ಎನ್.ಡಿ.ಎಂ.ಎ.)ವು ಪ್ರಚುರಪಡಿಸಿದೆ. ನಗರ ಒಳಚರಂಡಿ ಅಥವಾ ತೆರೆದ ನೀರ್ಗಾಲುವೆಗಳ ವ್ಯವಸ್ಥೆಯ ವಿನ್ಯಾಸ, ಹೆಚ್ಚುವರಿ ಸಾಮರ್ಥ್ಯ ಮತ್ತು ನಿರ್ವಹಣೆ, ಹೂಳೆತ್ತುವ ವಿಚಾರ, ಅತಿಕ್ರಮಣವನ್ನು ತಡೆಯುವುದು, ಎಲ್ ಐ.ಡಿ., ಹರಿಯುತ್ತಿರುವ ನೀರಿನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಗೆ ತ್ರಾÂಷ್ ಬೂಮ್ ಬಳಕೆ ಇನ್ನೂ ಮೊದಲಾದವು ಎನ್‌ಡಿಎಂಎ ಮಾರ್ಗಸೂಚಿಯಲ್ಲಿ ಮಿಳಿತವಾಗಿವೆ. ಇದಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯಕ್ಷಮತೆಯ ಮಾನದಂಡಗಳು(ಎಸ್.ಒ.ಪಿ.), ಆ್ಯಕ್ಷನ್ ಪ್ಲಾನ್‌ಗಳು, ಸ್ಥಳೀಯ ಸಂಸ್ಥೆ ಗಳ ನಿರ್ವಹಣ ಕೈಪಿಡಿಗಳು ಸ್ಥಳದಲ್ಲೇ ಕಾರ್ಯೋನ್ಮು ಖವಾಗಲು ಲಭ್ಯವಿದೆ. ಇಚ್ಛಾಶಕ್ತಿಯನ್ನು ಹೊರತು ಪಡಿಸಿ ಮತ್ತೆಲ್ಲವೂ ಬೆರಳತುದಿಗೇ ದೊರಕುತ್ತಿವೆ.
ನಗರ ಪ್ರವಾಹ ನಿರ್ವಹಣ ಕ್ರಮಗಳನ್ನು ಜಾರಿಗೆ ತರುವಲ್ಲಿ ಕೆಲವು ತೊಡರುಗಳು ಇರುವುದಂತೂ ಸತ್ಯ. ಇವುಗಳಲ್ಲಿ ಸರಕಾರ ರೂಪಿಸಿದ ನೀತಿಗಳನ್ನು ಮಹಾನಗರ ಪಾಲಿಕೆಗಳು ಅನುಷ್ಠಾನಗೊಳಿಸುವುದರ ನಡುವೆ ಆಗುವ ವಿಳಂಬ, ನಗರಗಳು ವಿಸ್ತಾರ ವಾದಂತೆ ಸಾಂಸ್ಥಿಕ ವ್ಯವಸ್ಥೆಯಲ್ಲಿನ ಬದಲಾವಣೆಗಳು ಮೂಲ ಸೌಕರ್ಯಗಳಿಗೆ ಅನ್ವಯವಾಗಲು ಇರುವ ವಿಳಂಬ ಮುಖ್ಯವಾದವು. ಹೀಗಿರುವ ವಿಳಂಬ ನೀತಿ ಗಳು ಬೆಳೆಯುತ್ತಿರುವ ನಗರೀಕರಣದ ಬೇಡಿಕೆಗಳನ್ನು ಹೇಗೆ ತಾನೇ ತಗ್ಗಿಸಲು ಸಾಧ್ಯ?ಭಾರತ ಸರಕಾರದ ಅಮೃತ್ – ಅಟಲ್ ಮಿಷನ್ ಫಾರ್ ರಿಜುವೆನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್ ಎಂಬ ಕಾರ್ಯಕ್ರಮದಡಿಯಲ್ಲಿ 500 ನಗರಗಳಿಗೆ ಅತ್ಯಗತ್ಯವಾದ ನೀರು ಸರಬ ರಾಜು, ಒಳಚರಂಡಿ, ಮಳೆ ನೀರ್ಗಾಲುವೆ, ಹಸುರು ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಒದಗಿ ಸುವತ್ತ ಆಲೋಚಿಸುತ್ತಿದೆ. ಸ್ಮಾರ್ಟ್ ಸಿಟಿಯೋಜನೆಗಳು ಮುಖ್ಯವಾಗಿ ಗಮನಹರಿಸ ಬೇಕಾದದ್ದೂ ಈ ದಿಸೆಯಲ್ಲೇ.ನಗರೀಕರಣದ ಎಲ್ಲ ವಿಲಕ್ಷಣ ಗಳಿಗೂ ಸ್ಮಾರ್ಟ್ ಪರಿ ಹಾರಗಳು ಮಾದರಿ ಸ್ಮಾರ್ಟ್ ನಗರಗಳಲ್ಲಿರುವಂತೆ, ನಗರ ಪ್ರವಾಹಗಳ ಸಮಸ್ಯೆಗಳಿಗೂ ಜೀವ ನ್ಮುಖೀಯಾಗಿ ಎಟಕುವ ಮತ್ತು ಸಾಕಾರವಾಗುವ ಆಲೋಚನೆಗಳು ಬೇಕು. ಎಂದಾದರೂ ನೀರು ಹರಿಯುವುದು ತಗ್ಗಿನ ಕಡೆಗೇ.
-ವಿಶ್ವನಾಥ ಭಟ್, ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.