ಹೊತ್ತು ತಿರುಗಿದ ಅಪ್ಪ-ಅವ್ವ ಹೊರೆಯಾದಾಗ…


Team Udayavani, Jan 25, 2019, 12:50 AM IST

appa-avva.jpg

ಅಂದು ಬರಬೇಕಿತ್ತು, ಬರಲಿಲ್ಲ ಅವರು. ಹೌದು, ಅದಕ್ಕಿಂತ ಒಂದು ವಾರದ ಹಿಂದೆ ಅÇÉೇ ನನ್ನೆದುರೇ ಕುಳಿತು ಚಿಂತಿತರಾಗಿದ್ದ ನೆನಪು…ಒಂದಿಷ್ಟು ಜನ ಹಾಗೇನೇ. ನಿಷ್ಕಾರಣವಾಗಿ ಮನದಲ್ಲಿ ಉಳಿದುಬಿಡುತ್ತಾರೆ. ಅವರೂ ಹಾಗೆಯೇ ನನ್ನ ಮನಸ್ಸಲ್ಲಿ ಉಳಿದುಕೊಂಡುಬಿಟ್ಟರು. ಅವರ ಮುಗ್ಧ ಚಹರೆಗಳು ಈಗಲೂ ನನ್ನ ಚಿತ್ತದಲ್ಲಿವೆ. ಆತ ಸುಮಾರು ಎಪ್ಪತ್ತರ ಪ್ರಾಯದವ. ತಲೆಗೆ ನೀಟಾಗಿ ಸುತ್ತಿದ ಬಿಳಿಯ ರುಮಾಲು. ಮೈಮೇಲೆ ಸಾದಾ ಬಿಳಿಯ, ಆದರೆ ಸ್ವತ್ಛ ಅಂಗಿ. ಮುಖದಲ್ಲಿ ಕಳೆ ತುಂಬಿಕೊಂಡಿದ್ದ, ಬಂದು ನನ್ನೆದುರು ಕುಳಿತಾಗ. ಅವನ ಬದಿಗೆ ಮುಗ್ಧತೆಯೇ ಮೂರ್ತಿಯಾದ ಅವನ  ಹೆಂಡತಿ. ಅದೇ ಇಳಕಲ್‌ ಸೀರೆ, ಕುಬಸ. ಅದು ನಮ್ಮ ಭಾಗದ ಹಳ್ಳಿಯ ಜನರ ಖಾಯಂ ಉಡುಗೆ. ಅವಳಿಗೆ ಹೊಟ್ಟೆ ನೋವು. ಅದನ್ನೂ ಕೂಡ ಅವನೇ ಹೇಳಿದ. ಅವಳು ಮೌನದ ಮು¨ªೆ. ಸುಮ್ಮನೆ ದಿಟ್ಟಿಸುವ, ಭಾವವಿಲ್ಲದ ಕಣ್ಣುಗಳು. 

ಆಕೆ ಇದ್ದದ್ದೇ ಹಾಗಿರಬೇಕು. ಪರೀಕ್ಷೆ ಮಾಡಿದೆ.ಯಕೃತ್ತಿನಲ್ಲಿ ಬಾವು ಇದ್ದಂತೆನಿಸಿತು.  ಸ್ಕ್ಯಾನಿಂಗ್‌ ಮಾಡಿ ನೋಡಿದರೆ ಯಕೃತ್ತಿನ ತುಂಬ ತುಂಬಿದ ಕ್ಯಾನ್ಸರ್‌ ಗಡ್ಡೆಗಳು. ನನಗೆ ಬೇಸರ. ಇವರಿಗೆ ಹೇಳುವುದು ಹೇಗೆ? ಬಂದವರು ಇಬ್ಬರೇ. ಅವಳು ಮುದುಕಿಯಾದರೆ ಇವನು ಅವಳಿಗಿಂತ ವಯಸ್ಸಾದವ. 

“ಏನಾಗೈತ್ರಿ ಇಕಿಗೆ ..?’ ಅಂದಿದ್ದ. ನಾನು ಹೇಳಬಾರದಿತ್ತೇನೋ. ಆದರೆ ವೃತ್ತಿಗೊಂದು ಅನಿವಾರ್ಯತೆ ಇದೆಯಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳದಿದ್ದರೆ ವೃತ್ತಿಗೆ ಅನ್ಯಾಯ ಮಾಡಿದಂತೆ. ಹೇಳಿದರೆ ಅವರ ಮನಸ್ಸು ಘಾಸಿಗೊಳ್ಳುತ್ತದೆ. ಅದಕ್ಕೇ, “ಯಕೃತ್ತಿನ ತುಂಬ ಕ್ಯಾನ್ಸರ್‌ ಗಡ್ಡೆಗಳು’ ಅಪ್ರಯತ್ನ ಉತ್ತರ ನನ್ನದು. ಹೇಳಿದರೂ ಹೇಳಲಿ. ಅವಳನ್ನು ಹೊರಗೆ ಕುಳ್ಳಿರಿಸಿ ಆಮೇಲೆ ಇವನೊಬ್ಬನಿಗೇ ಹೇಳಬಹುದಿತ್ತೇನೋ. ಯಾವುದೋ ಗಲಿಬಿಲಿಯಲ್ಲಿ ನುಡಿದುಬಿಟ್ಟಿ¨ªೆ. ಕೆಲವೊಮ್ಮೆ ನಮ್ಮ ಗಮನಕ್ಕೆ ಬರದೆ ಇಂಥ ತಪ್ಪುಗಳಾಗುತ್ತವೆ, ಅದನ್ನು ತಪ್ಪು ಎಂದುಕೊಂಡರೆ. ಅದರೂ ಕೊನೆಗೊಮ್ಮೆ ಅವಳಿಗೆ ಈ ವಿಷಯವೇನೋ ಗೊತ್ತಾಗಲೇಬೇಕಲ್ಲ. ಸಂಭಾಳಿಸಿ ಹೇಳುವ ನನ್ನ ರೂಢಿಗಿಂತ ಸ್ವಲ್ಪ ವ್ಯತಿರಿಕ್ತವಾಗಿ ಹೇಳಿಬಿಟ್ಟಿ¨ªೆ. ಸಂತಳಂತೆ ಕುಳಿತ ಅವನ ಹೆಂಡತಿಯ ಮುಖದಲ್ಲಿ ಭಾವ ಹುಡುಕಿದೆ, ಕಾಣಲಿಲ್ಲ! ಅವಳು ನಿರ್ಭಾವುಕಳು. ಅವನು ಮಾತ್ರ ಮೇಲೆ ದಿಟ್ಟಿಸುತ್ತಿದ್ದ. ಕಣ್ಣ ಕೊನೆಗೆ ನೀರು ಜಿನುಗಿತೇ, ಕಾಣಲಿಲ್ಲ. ಕೆಲಹೊತ್ತು ಕೋಣೆಯಲ್ಲಿ ಫ್ಯಾನು ಮಾತ್ರ ಮಾತಾಡುತ್ತಿತ್ತು. ಬದಿಗೆ ಕುಳಿತವಳೊಡನೆ ನಲವತ್ತು ವರ್ಷ ಬದುಕೆಂಬುದನು ಕೂಡಿಸಿದುದನ್ನು, ಸುಖ ದುಃಖಗಳನು ಸಮನಾಗಿ ಹಂಚಿಕೊಂಡು ಸಮಯ  ಸವೆಸಿದ್ದನ್ನು ನೆನೆಸುವಂತಿತ್ತು. ನನ್ನ ಚೇಂಬರಿನ ಹೊರಗೆ ಗದ್ದಲವಿತ್ತು, ಒಳಗೆ ಮೌನ ಕಾಡುತ್ತಿತ್ತು.

“ಮಕ್ಕಳಿÇÉೇನಪಾ ಅಜ್ಜ…?’ ಕೇಳಿ¨ªೆ ನಾನು. ಅರೇ, ನನ್ನ ದನಿಯೂ ಪೂರ್ತಿ ಹೊರಬರಲಿಲ್ಲವೇ? ಎಂಥ ವೈದ್ಯನಾದರೂ ಕೆಲವೊಮ್ಮೆ ರೋಗಿಗಳ ಕಷ್ಟ, ಅಸಹಾಯಕತೆ ಅಧೀರನನ್ನಾಗಿಸುತ್ತದೆ. ಬದುಕಿನ ಕ್ರೌರ್ಯ ಕಾಡತೊಡಗುತ್ತದೆ. ಆಗಲೂ ಹಾಗೆಯೇ ಆಯಿತು. ಅವರಿಬ್ಬರ ಮುಖಭಾವ ನೋಡಿ ನನಗೂ ಮಾತು ಬರದ ಸ್ಥಿತಿ. “ಅದಾನ್ರೀ ಒಬ್ಬ..!’ ಅಸ್ಪಷ್ಟ ದನಿ, ಅದೇನೋ ಕಹಿ ಸತ್ಯವನು ಅದು ಸಾರುವಂತಿತ್ತು. ಆ ದನಿಯಲ್ಲಿನ ಅಸ್ಪಷ್ಟತೆ, ಆತನ ಮುಖದಲ್ಲಿನ ಆ ವಿಷಾದ, ನೂರು ಮಾತುಗಳಿಗೂ ಮಿಗಿಲಾದ ಭಾವ ಸೂಸುತ್ತಿತ್ತು.

ನಾನು  ಸಾಮಾನ್ಯವಾಗಿ ರೋಗಿಗಳ ವೈಯಕ್ತಿಕ ವಿಷಯಗಳನ್ನು ಕೇಳುವುದು ಕಡಿಮೆ. ಯಾಕೆಂದರೆ ಅವರ ಕಷ್ಟಗಳನ್ನು ಪರಿಹರಿಸುವ ಸಾಧ್ಯತೆ ನಮಗಿರುವುದಿಲ್ಲವಲ್ಲ. ಬಹಳವೆಂದರೆ ಬಿಲ್‌ನಲ್ಲಿ ಒಂದಿಷ್ಟು ಕಡಿಮೆ ಮಾಡಬಹುದೇನೋ. ಅದೇಕೋ ವಯಸ್ಸಾದ  ಈ ಜೋಡಿ ನನ್ನ ಮನಸ್ಸನ್ನು ಆವರಿಸಿಬಿಟ್ಟಿತ್ತು. ಅವರ ವಿಷಯ ತಿಳಿಯಬೇಕೆನಿಸಿತು. ಅದಕ್ಕೇ ಕೇಳುತ್ತಾ ಹೋದೆ. ಅವನು ಬದುಕು ಪ್ರಾರಂಭಿಸಿದ್ದು ಒಬ್ಬ ಕೂಲಿಯವನಾಗಿ. ಅವಳೂ ಕೂಲಿ ಮಾಡುವವರ ಮಗಳೇ. ಆಸ್ತಿಯೇನೋ ಇರಲಿಲ್ಲ. ಆದರೆ ಒಬ್ಬರು ಇನ್ನೊಬ್ಬರಿಗೆ ಜೊತೆಯಾಗಿ ದುಡಿಯುವ ಮನಸ್ಸಿತ್ತು. ಹರೆಯದ ಹುಮ್ಮಸ್ಸಿನಲ್ಲಿ ಗಂಡ ಹೆಂಡತಿ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದರು. ದುಡಿವವಗೆ ಎಂದಿದ್ದರೂ ಸುಖವಿದೆ. ಇಬ್ಬರೂ ದುಡಿದು,  ಹೊಟ್ಟೆ ಬಟ್ಟೆ ಕಟ್ಟಿ ದುಡ್ಡು ಉಳಿಸುತ್ತ ಒಂದಿಷ್ಟು ಜಮೀನು ಕೊಂಡಿದ್ದರು. ಒಂದು ಎಕರೆ ಎರಡಾಗಿ, ಎರಡು ಐದಾಗಿತ್ತು. ಒಬ್ಬ ಮಗ ಹುಟ್ಟಿದ. ಮುಂದೆ ಮಕ್ಕಳಾಗಲಿಲ್ಲ. ಚಿಂತೆಯಿಲ್ಲ. ಒಬ್ಬರಿಗೆ ಇನ್ನೊಬ್ಬರು, ಜೊತೆಗೊಬ್ಬ ಮಗ. ಸಂತೋಷಕ್ಕೆ ಪಾರವೇ ಇಲ್ಲ. ಸುಖೀ ಸಂಸಾರ. ಮಗನಿಗೆ ಶಿಕ್ಷಣ ಕೊಡಿಸಿದ. ನೌಕರಿಯೂ ದೊರಕಿತು, ಜೊತೆಗೇ ಒಳ್ಳೆಯ ಮನೆತನದ ಕನ್ಯೆಯೂ. ಇವರ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಆ ಸಂತೋಷ ಇದ್ದದ್ದು  ಕೆಲವು ದಿನ ಮಾತ್ರ…

 ಮಗ ನೌಕರಿಗಾಗಿ ಪಟ್ಟಣ ಸೇರಿದ. ಇವರಿಗೆ ತಮ್ಮ ಮನೆ ಹೊಲ ಬಿಟ್ಟು ಕದಲಲಾರದ ಮನಸ್ಥಿತಿ. ತಾವೇ ಸ್ವತಃ ಕಟ್ಟಿ ನಿಲ್ಲಿಸಿದ ಮನೆ, ದುಡಿದ, ಬದುಕು ಸವೆಸಿದ ಹೊಲ ಬಿಟ್ಟು  ಹೊರಡಲಿಲ್ಲ. ಭಾವನಾತ್ಮಕ ಬಂಧವೇ ಹಾಗೆ. ಆದರೆ  ಅವನು ಪೇಟೆಯಿಂದ ಬರಲಾರ. ಅದು ಆತನಿಗೆ ಅನಿವಾರ್ಯ ಕೂಡ. ಇವರು ಮಾತ್ರ ಹಳ್ಳಿಯಿಂದ ಹೊರಡಲಾರರು. ಹೀಗಾಗಿ ಅವನದು ಅವನಿಗೆ, ಇವರದು ಇವರಿಗೆ ಸರಿ ಎನಿಸತೊಡಗಿತು. ಮೊದಲಿಗೆ ದುಡಿಯುವ ಶಕ್ತಿ ಇದ್ದ ಇವರಿಗೆ ಅದೇನೂ ಅನಿಸಲೇ ಇಲ್ಲ. ಮಗನೂ ತನ್ನ ಸಂಸಾರದಲ್ಲಿ ತಾನು ತೊಡಗಿಕೊಂಡ. ಮೊದಲು ವಾರಕ್ಕೊಮ್ಮೆಯಾದರೂ ಬರುವ ಮಗ, ಬರ ಬರುತ್ತ ತಿಂಗಳಿಗೊಮ್ಮೆ ಮುಂದೆ ಯಾವಾಗಲಾದರೊಮ್ಮೆ ಬರತೊಡಗಿದ. ಕಾಲನ ತುಳಿತದಲಿ  ಕೊಂಡಿ ಕಳಚತೊಡಗಿದ್ದು ಗೊತ್ತಾಗಲೇ ಇಲ್ಲ. ಈಗ ಬರುತ್ತಲೇ ಇಲ್ಲ. ಅನೇಕ ಬಾರಿ ಅವ್ವನಿಗೆ ಅನಾರೋಗ್ಯ ಎಂದು ತಿಳಿಸಿದಾಗಲೂ ಬಂದಿಲ್ಲ. ಹೀಗಾಗಿ ಈಗ ಬರುತ್ತಾನೆನ್ನುವ ಭರವಸೆ ಇಲ್ಲ.

ಬಂದರೂ ಸಹಾಯ ಮಾಡುತ್ತಾನೆ ಎನ್ನುವ ನಂಬಿಕೆಯಿಲ್ಲ. ನಡುವಿನ ಅಂತರ ಹೆಚ್ಚಿದೆಯಲ್ಲ. ಇದನ್ನೆಲ್ಲ ಹೇಳಿ ಸುಮ್ಮನಾದ, ಮತ್ತೆ  ಹೆಂಡತಿಯೆಡೆಗೆ ನೋಡಿದ, ಅವಳು ಶೂನ್ಯ ದಿಟ್ಟಿಸುತ್ತಿದ್ದಳು. ನಿರ್ಲಕ್ಷಿಸಿದ ಮಗನ ನೆನೆಯುತ್ತಿದ್ದಳೇನೋ. 

ಅವನದೊಂದು ದೀರ್ಘ‌ ನಿಟ್ಟುಸಿರು, “ಮುಂದಿನ ವಾರ ಬರ್ತೀನ್ರಿ’ ಎಂದವನೇ  ಎದ್ದು ಹೊರಟ. ಅವಳು ತಲೆತಗ್ಗಿಸಿ ಹಿಂಬಾಲಿಸಿದಳು. ತುರ್ತಿಗೆ ಏನಾದರೂ ಔಷಧಿ ಬರೆದುಕೊಡಬೇಕೆನ್ನುವುದರೊಳಗೆ ಅವರು ನಡೆದೇಬಿಟ್ಟಿದ್ದರು. ಅದೇಕೋ ಮನದಲ್ಲಿ ನಿಂತೇಬಿಟ್ಟ ಅವರಿಗಾಗಿ ಒಂದು ವಾರವಲ್ಲದೆ, ವಾರದ ನಂತರವೂ ಕಾಯ್ದೆ. ಆದರೆ ನಾನು ಕಾಯ್ದ ದಾರಿ ವ್ಯರ್ಥ. ಯಾಕೆ ಬರಲಿಲ್ಲವೋ ಉತ್ತರ ಸಿಗಲಿಲ್ಲ. ಮಗ ಒಪ್ಪಲಿಲ್ಲವೇ, ಸೊಸೆ ಖರ್ಚು ಬೇಡವೆಂದಳೇ. “ಹೇಗೂ ಮುಪ್ಪು ಸಾಯಲು ಬಿಡಿ, ನನ್ನಿಂದೇಕೆ ಕಷ್ಟ’ ಎಂದಿರಬಹುದೇ ಮುದುಕಿ?!  ನಾನು ನೂರು ರೋಗಿಗಳ ನಡುವೆ ಆ ಸಂತಳಂಥವಳ ಮುಖಕ್ಕಾಗಿ ಹುಡುಕುತ್ತಿ¨ªೆ. ಸ್ವಾರ್ಥಿ ಸಂಸಾರಸ್ಥರ ಧಾವಂತದ ಬದುಕು ಅವಳ ಶೇಷ ವರ್ಷಗಳನು ನುಂಗಿಬಿಟ್ಟಿತೆ, ಎಂಬ ಕಳವಳ ಕಾಡತೊಡಗಿತು. ಆದರೆ ಕೆಲವೊಮ್ಮೆ ರೋಗಿಗಳು ಬೇರೆ ಬೇರೆ ಆಸ್ಪತ್ರೆಗೆ ಹೋಗಿಬಿಡುತ್ತಾರೆ. ಕಾರಣಗಳು ಹಲವಾರು. ನಾವು ವಿವರಿಸುವ ರೀತಿ ಇಷ್ಟವಾಗಿರಲಿಕ್ಕಿಲ್ಲ. ಅಥವಾ ತಮ್ಮ ಸಮೀಪದ ವೈದ್ಯರೆಡೆಗೆ ಹೋಗುತ್ತಾರೆ. ಇಲ್ಲವೇ ದುಡ್ಡು ಹೊಂದಿಸುವುದರಲ್ಲಿ ಸಮಯವಾಗುತ್ತದೆ.

ಆಯುರ್ವೇದ, ಹೋಮಿಯೋಪಥಿ ಇತ್ಯಾದಿ ಬೇರೆ ವೈದ್ಯಕೀಯದ ಮೊರೆಹೋಗುತ್ತಾರೆ. ಹೀಗೇನಾದರೂ ಆಗಿರಬಹುದೆಂದು ಸಮಾಧಾನಿಸಿಕೊಂಡೆ. ಅದಾವ ಕಾರಣವಿದ್ದರೂ ಒಮ್ಮೊಮ್ಮೆ ಕೆಲ ರೋಗಿಗಳು ಮರೆಯಲಾಗದೆ ಮನದಲ್ಲಿ ಉಳಿದುಬಿಡುತ್ತಾರೆ. ಈ ಜೋಡಿಯ ಹಾಗೆ. 

ರೋಗಿಗಳಲ್ಲಿ, ಮತ್ತೆ ಅವರ ಜೊತೆ ಬಂದವರಲ್ಲಿ ಹಲವು ವಿಧ. ಅದರಲ್ಲೂ ಅಲ್ಲಿ ಖರ್ಚು ಹೆಚ್ಚಿದ್ದರಂತೂ ಮುಗಿದೇ ಹೋಯ್ತು. ಎಲ್ಲದಕ್ಕೂ ಧಾರಾಳವಾಗಿ ಖರ್ಚು ಮಾಡುವ ಜನ ಆಸ್ಪತ್ರೆಗೆ ಬಂದೊಡನೆ ಬಡವರಾಗಿಬಿಡುತ್ತಾರೆ. ವಯಸ್ಸಾದವರಿಗೆ  ರೋಗ ಬಂದರೆ ಇನ್ನೂ ಅಸಡ್ಡೆ.  ಹಳೆಯ ವಾಹನವನ್ನು ಗುಜರಿಗೆ ಹಾಕಿದಂತಿರುತ್ತದೆ.ಆಸ್ಪತ್ರೆಯಲ್ಲಿ ಹಲವು ಬಾರಿ ದುಡ್ಡಿಗಾಗಿ ಜರುಗುವ ಮನ ಹಿಂಡುವ ಘಟನೆಗಳನ್ನು ನೋಡಿದಾಗಲೆಲ್ಲ ಮನಸ್ಸು ಭಾರವಾಗುತ್ತದೆ. ಮನುಷ್ಯ ಸಂಬಂಧಗಳು ಇಷ್ಟೇನಾ.? ಎನಿಸುತ್ತದೆ. ಹೊತ್ತು ತಿರುಗಿದ ಅಪ್ಪ, ಅವ್ವ ಹೊರೆಯಾದದ್ದನ್ನು ಕಂಡಿದ್ದೇನೆ. ಬಹುತೇಕ ಸಂದರ್ಭಗಳಲ್ಲಿ ಮುಪ್ಪಿನ ಗಂಡ-ಹೆಂಡತಿ ಜೊತೆಯಾಗಿ ಬರುತ್ತಾರೆ. ಜೊತೆಗೆ ಮಕ್ಕಳು ಬರುವುದೇ ಇಲ್ಲ. ಅವರು ತಮ್ಮ ಕೆಲಸಗಳಲ್ಲಿ, ಅಥವಾ ತಮ್ಮ ಹೆಂಡತಿ ಮಕ್ಕಳ ಜೊತೆ ಬಿಜಿಯಾಗಿಬಿಡುತ್ತಾರೆ. 

ಇವರಿಗೋ ಕಣ್ಣು ಕಾಣದು, ಕಿವಿ ಕೇಳದು. ಅವಳಿಗೆ ಇವನು, ಇವಳಿಗೆ ಅವನು ಆಸರೆ, ಅಷ್ಟೇ. ಸೃಷ್ಟಿಯ ನಿಯಮವೇ ಹಾಗೇನೋ ಎಂದು ಕೆಲವೊಮ್ಮೆ ಅನಿಸುತ್ತದೆ.  ಯಾಕೆಂದರೆ ಸೃಷ್ಟಿ ಮುಖ ಮಾಡುವುದು ಭವಿಷ್ಯದ ಕಡೆಗೇನೆ. ಆದರೆ ಭೂತದ ಬೇರುಗಳಿಲ್ಲದ ಭವಿಷ್ಯ ಭದ್ರವಾಗಿರದು ಎಂಬುದನ್ನು, ಮುಂದೊಂದು ದಿನ ತಾನೂ ಭೂತಕ್ಕೆ ದಬ್ಬಲ್ಪಡುತ್ತೇನೆ ಎನ್ನುವ ನಿತ್ಯಸತ್ಯವನು ಮನುಷ್ಯ ಮರೆತುಬಿಡುತ್ತಾನೆ. ಅದು ಕೆಲವೊಮ್ಮೆ ಜಾಣಮರೆವೂ ಕೂಡ. ಆದರೂ ಕೆಲವೊಮ್ಮೆ ಎಂಥ ಕಷ್ಟವಾದರೂ ರೋಗಿಗಳನ್ನು ಜತನ ಮಾಡಿ, ಆರೈಕೆ, ಉಪಚಾರ ಮಾಡುವ ಜನರನ್ನು ಕಂಡಿದ್ದೇನೆ. ಆಗ ಮನಸ್ಸು ಪ್ರಫ‌ುಲ್ಲವಾಗುತ್ತದೆ. ಮಾನವೀಯತೆಯಲ್ಲಿ ಮತ್ತೆ ಭರವಸೆ ಮೂಡುತ್ತದೆ. ಹಿಮ್ಮಡಿ ಸವೆದ ಹವಾಯಿ ಚಪ್ಪಲಿ ಮೆಟ್ಟಿಕೊಂಡು, ಹರಕಲು ಅಂಗಿ ಹಾಕಿಕೊಂಡು ಬರುವ ಅವಿದ್ಯಾವಂತ ಬಡವ ತನ್ನ ಮುಪ್ಪಿನ ತಾಯಿಯನ್ನು,  ಹೆಗಲ ಮೇಲೆ ಹೊತ್ತು ತಂದು ದೀನನಾಗಿ ನಮ್ಮೆದುರು ಕೈಜೋಡಿಸಿ ನಿಂತು, “ಏನೇ ಖರ್ಚಾಗಲಿ ನಮ್ಮವ್ವನನ್ನು ಉಳಿಸಿರಿ. ಇದ್ದ ಜಮೀನೆಲ್ಲವನ್ನು ಮಾರಿ, ಸಾಲದಿದ್ದರೆ ನಿಮ್ಮಲ್ಲಿ ಜೀವನ ಪರ್ಯಂತ ದುಡಿದು ಮುಟ್ಟಿಸುವೆ’ ಎಂದು ಅಂಗಲಾಚುವುದನ್ನೂ ನೋಡಿದ್ದೇನೆ. ಹಣ್ಣು ಹಣ್ಣು ಮುದುಕನನ್ನು ಕರೆತಂದು “ನಮ್ಮಪ್ಪ ಮೊದಲ ನಾಕ ರೊಟ್ಟಿ ತಿಂತಿದ್ದ. ಈಗ ಎರಡ ತಿಂತಾನ. ಟಾನಿಕ್‌ ಬರದ ಕೊಡ್ರೀ. ನಮ್ಮಪ್ಪ ಕುದರಿ ಹಾಂಗ ಆಗಬೇಕ್ರೀ ಸಾಹೇಬರ’ ಎಂದು ಅಂಗಲಾಚುವ ಅರವತ್ತು ವರ್ಷದ ಮಗನನ್ನು ನೋಡಿದ್ದೇನೆ. 

ಐಷಾರಾಮಿ ಕಾರಿನಲ್ಲಿ ತಮ್ಮಪ್ಪನನ್ನು ಕರೆತಂದು, ದೂರದಿಂದಲೇ ಗಾಲಿ ಕುರ್ಚಿ ತರಲು ಆರ್ಡರ್‌ ಮಾಡಿ, ಅವನನ್ನು ಮುಟ್ಟಿದರೆ ಎಲ್ಲಿ ತನ್ನ “ಬ್ರಾಂಡೆಡ್‌’ ಡ್ರೆಸ್‌ಗಳು ಹೊಲಸಾಗುತ್ತವೆಯೋ ಎಂದು ದೂರದಲ್ಲಿಯೇ ನಿಂತು, ವೈದ್ಯರೆದುರು, “”ವಯಸ್ಸು ಬಹಳವಾಗಿದೆ. ಆರಾಮ ಆಗುತ್ತಾನೋ ಇಲ್ಲವೋ ನೋಡಿ. ಅದಕ್ಕೆ ಎಷ್ಟು ಖರ್ಚಾಗಬಹುದು. ಇಷ್ಟು ಖರ್ಚು ಮಾಡಿದರೆ ಎಷ್ಟು ದಿನ ಬದುಕಿರಬಹುದು. ಅಕಸ್ಮಾತ್‌ ಬದುಕಿದರೆ ಮುಂದೆ ದಿನನಿತ್ಯ ಎಷ್ಟು ಖರ್ಚಾಗಬಹುದು. ಮನೆಗೆ ಕರೆದೊಯ್ದ ಮೇಲೆ ಅವರ “ತೊಳೆ-ಬಳೆ’ ಕೆಲಸಕ್ಕೆ ನರ್ಸ್‌ಗಳನ್ನು ಮನೆಗೆ ಕಳಿಸಲು ಸಾಧ್ಯವೇ? ಅಥವಾ ಬದುಕುವ ಸಾಧ್ಯತೆಗಳಿಲ್ಲದಿದ್ದರೆ ಬೇಡ ಬಿಡಿ, ಹಾಗೇ ಮನೆಗೆ ಕರೆದೊಯ್ಯುವೆ”ಎಂದು ವಾರ್ಷಿಕ ಬಜೆಟ್ಟಿನ ವ್ಯವಹಾರ ಮಾತಾಡುವ, ಬದುಕೆಂದರೆ ಲೆಕ್ಕಾಚಾರ ಮಾತ್ರ ಎಂಬಂತಹ ವಿದ್ಯಾವಂತ ಶ್ರೀಮಂತರನ್ನೂ ಕಂಡಿದ್ದೇವೆ. ಮಾನವ ಸಂಬಂಧಗಳೇ ಬಲು ಸಂಕೀರ್ಣ, ಅಲ್ಲವೇ?
* * *
ತಿಂಗಳುಗಳು ಉರುಳಿದವು. ನಾನೂ ನನ್ನ ದಿನನಿತ್ಯದ ಜಂಜಾಟದಲ್ಲಿ, ರೋಗಿಗಳ ಗಡಿಬಿಡಿಯಲ್ಲಿ ಆ ಜೋಡಿಯನ್ನು ಮರೆತೇಬಿಟ್ಟೆ. ಮುಂದೆ ಒಂದು ದಿನ ಆತ ಒಬ್ಬನೇ ಬಂದ. ತನಗೆ ಸ್ವಲ್ಪ ಅಜಾರಿಯೆಂದು ಹೇಳಿದ. ಈಗ ತುಂಬ ಸೊರಗಿಬಿಟ್ಟಿದ್ದ.  ಕಳೆಗುಂದಿದ ಮುಖ, ನೆಟ್ಟಗಿಲ್ಲದ ರುಮಾಲು, ಬಿಳುಪನ್ನು ಕಳೆದುಕೊಂಡ ಅಂಗಿ, ಎಲ್ಲವೂ ಕಹಿ ಸತ್ಯವನ್ನು ಹೇಳುತ್ತಿದ್ದವು. ಅವನ ಹೆಂಡತಿಗೆ ಏನಾಯಿತೆಂದು ಕೇಳುವ ಮನಸ್ಸಾಗಲಿಲ್ಲ…! 

– ಡಾ. ಶಿವಾನಂದ ಕುಬಸದ

ಟಾಪ್ ನ್ಯೂಸ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.