ಎಲ್ಲಿ ಹೋದವು 2,000ರೂ. ನೋಟುಗಳು?
Team Udayavani, Nov 22, 2022, 6:20 AM IST
ಆರು ವರ್ಷಗಳ ಹಿಂದೆ ಇದೇ ತಿಂಗಳು ದೇಶದಲ್ಲಿ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಲಾಗಿತ್ತು. ಖೋಟಾ ನೋಟು ಹಾವಳಿ ಮತ್ತು ಕಪ್ಪುಹಣ ನಿಯಂತ್ರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಇತ್ತೀಚೆಗಷ್ಟೇ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ.
ಈ ನೋಟುಗಳ ಅಮಾನ್ಯದ ಬಳಿಕ ಸರಕಾರ 2,000 ರೂ. ನೋಟುಗಳನ್ನು ಚಲಾವಣೆಗೆ ತಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನೋಟುಗಳ ಚಲಾವಣೆ ತೀರಾ ಅನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದೆ.
ಸದ್ಯ ಚಲಾವಣೆಯಲ್ಲಿರುವ ನೋಟುಗಳು ಯಾವುವು?: 2, 5, 10, 20, 50, 100, 200, 500 ಮತ್ತು 2,000 ರೂ.
2 ಸಾವಿರ ರೂ. ನೋಟು ತಂದಿದ್ದು ಏಕೆ? : ನೋಟು ನಿಷೇಧ ಮಾಡುವವರೆಗೆ ದೇಶದಲ್ಲಿ 1,000 ರೂ. ಮುಖಬೆಲೆಯ ನೋಟೇ ಅತ್ಯಧಿಕ ಮೌಲ್ಯದ್ದಾಗಿತ್ತು. ಆದರೆ ಖೋಟಾನೋಟುಗಳ ಬಳಕೆ ಯಲ್ಲಿ 500 ಮತ್ತು 1,000 ರೂ. ಹೆಚ್ಚಿವೆ ಎಂಬ ಕಾರಣಕ್ಕಾಗಿ ಈ ಎರಡನ್ನು ನಿಷೇಧಿಸಲಾಗಿತ್ತು. ದೇಶದಲ್ಲಿ ಒಟ್ಟು ಶೇ.80ರಷ್ಟು ಇವೇ ನೋಟುಗಳು ಚಲಾ ವಣೆಯಲ್ಲಿದ್ದ ಕಾರಣ ನಿಷೇಧದಿಂದಾಗಿ ಜನ ಪರದಾ ಡುವಂತಾಗುತ್ತದೆ ಎಂಬ ಕಾರಣಕ್ಕಾಗಿ 2,000 ರೂ. ನೋಟು ತರಲಾಗಿತ್ತು.
ಈಗ ಎಷ್ಟು ನೋಟು ಚಲಾವಣೆಯಲ್ಲಿವೆ?: ಸದ್ಯ ಒಟ್ಟಾರೆ 21,420 ಲಕ್ಷ ಎರಡು ಸಾವಿರ ರೂ.ನೋಟುಗಳು ಚಲಾವಣೆಯ ಲ್ಲಿವೆ. ಇವುಗಳ ಒಟ್ಟಾರೆ ಮೌಲ್ಯ 4,28,394 ಕೋಟಿ ರೂ.ಆಗಿದೆ. 2020ರಿಂದ ಇಲ್ಲಿವರೆಗೆ ಒಂದು ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳನ್ನು ಚಲಾವಣೆ ಯಿಂದ ವಾಪಸ್ ಪಡೆಯಲಾಗಿದೆ.
ನಿಲ್ಲಿಸಿದ್ದು ಏಕೆ? : 500 ಮತ್ತು 1,000 ರೂ. ಮೌಲ್ಯದ ನೋಟುಗಳಿಗೆ ಹೋಲಿಕೆ ಮಾಡಿದರೆ ಕಪ್ಪು ಹಣ ಸಂಗ್ರಹ ಮತ್ತು ಖೋಟಾ ನೋಟು ಚಲಾವಣೆಗೆ 2 ಸಾವಿರ ರೂ. ನೋಟು ಉತ್ತಮ ದಾರಿ. ಮೊದಲು ಜನರ ಬೇಡಿಕೆಗೆ ತಕ್ಕಂತೆ ನೋಟುಗಳನ್ನು ಪೂರೈಸುವ ಸಲುವಾಗಿ 2,000 ರೂ. ನೋಟು ಜಾರಿಗೆ ತರಲಾಗಿತ್ತು. ಈಗ ಕಡಿಮೆ ಮಾಡಲಾಗುತ್ತಿದೆ.
ಈಗ ಕಡಿಮೆ ಆಗುತ್ತಿರುವುದೇಕೆ?: 2016ರ ನ.8ರಂದು ನೋಟುಗಳು ನಿಷೇಧವಾಗಿದ್ದವು. ಆಗಿನಿಂದ 2019ರ ವರೆಗೆ 2,000 ರೂ. ನೋಟುಗಳನ್ನು ಮುದ್ರಣ ಮಾಡಲಾಗುತ್ತಿತ್ತು. ಆದರೆ ಇವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬರಲಾಗಿತ್ತು. 2020ರಿಂದ ಈಚೆಗೆ ಒಂದೇ ಒಂದು 2,000 ರೂ. ನೋಟನ್ನು ಆರ್‌ಬಿಐ ಮುದ್ರಣ ಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.