Startup; ಎಜುಟೆಕ್‌ ಕಂಪೆನಿಗಳು ಫೇಲ್‌ ಆಗುತ್ತಿರುವುದೇಕೆ?

ಕೋವಿಡ್‌ ಬಳಿಕ ಆನ್‌ಲೈನ್‌ ಬೋಧನೆಯ ಸ್ಟಾರ್ಟ್‌ಅಪ್‌ಗಳಿಗೆ ಕುಸಿದ ಬೇಡಿಕೆ

Team Udayavani, Jul 29, 2024, 6:15 AM IST

ಎಜುಟೆಕ್‌ ಕಂಪೆನಿಗಳು ಫೇಲ್‌ ಆಗುತ್ತಿರುವುದೇಕೆ?

ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ 158 ಕೋಟಿ ಬಾಕಿ ಉಳಿಸಿಕೊಂಡಿರುವ ಎಜುಟೆಕ್‌ ಬೈಜೂಸ್‌ ವಿರುದ್ಧ ಕಾರ್ಪೋರೆಟ್‌ ದಿವಾಳಿ ಪ್ರಕ್ರಿಯೆ ಆರಂಭಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮುಂದಾಗಿದೆ. ಹಿಂದೊಮ್ಮೆ ಸ್ಟಾರ್ಟ್‌ಅಪ್‌ಗಳ “ಸೂಪರ್‌ ಸ್ಟಾರ್‌’ ಎನಿಸಿದ್ದ ಬೈಜೂಸ್‌ ಪತನವು ಭಾರತದ ಎಜುಟೆಕ್‌ ಸ್ಟಾರ್ಟ್‌ಅಪ್‌ಗಳ ವೈಫ‌ಲ್ಯದ ಪ್ರತಿಬಿಂಬವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಜುಟೆಕ್‌ ಕಂಪೆನಿಗಳ ಬೆಳವಣಿಗೆ, ಕುಸಿತ ಸೇರಿ ವಿವಿಧ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಎಜುಟೆಕ್‌ ಉದ್ಯಮ
ಭಾರತದಲ್ಲಿ 2004ರಲ್ಲೇ ಎಜುಟೆಕ್‌ ಉದ್ಯಮ ಚಿಗುರೊಡೆಯಿತು. ಎಕ್ಸ್‌ಟ್ರಾ ಮಾರ್ಕ್‌, ಖಾನ್‌ ಅಕಾಡೆಮಿಗಳು ಆನ್‌ಲೈನ್‌ ಮೂಲಕ ಪಾಠ  ಬೋಧನೆ ಆರಂಭಿಸಿದವು. ನಿಧಾನಗತಿಯಲ್ಲಿದ್ದ ಎಜುಟೆಕ್‌ ಉದ್ಯಮಕ್ಕೆ ಕೋವಿಡ್‌ ಸಾಂಕ್ರಾಮಿಕದ ಕಾಲಘಟ್ಟವು ಹೊಸ ಆಯಾಮವನ್ನು ತಂದುಕೊಟ್ಟಿತು. 2011ರಲ್ಲಿ ಆರಂಭವಾದ ಬೈಜೂಸ್‌ ಸ್ಟಾರ್ಟ್‌ಅಪ್‌, ಕೋವಿಡ್‌ ಅವಕಾಶವನ್ನು ಬಾಚಿಕೊಂಡು ದಿಢೀರನೆ ಬೆಳವಣಿಗೆ ಕಂಡಿತು! ಜತೆಗೆ, ವೇದಾಂತು, ಅಪ್‌ಗೆಡ್‌, ಆಕಾಶ್‌ನಂಥ ಸ್ಟಾರ್ಟ್‌ಅಪ್‌ಗಳು ಮುಂಚೂಣಿಗೆ ಬಂದವು. ಹೂಡಿಕೆದಾರರೂ ಎಜುಟೆಕ್‌ ಉದ್ಯಮದ ಮೇಲೆ ಹೆಚ್ಚಿನ ಆತ್ಮವಿಶ್ವಾಸ ಇರಿಸಿಕೊಂಡರು. ಇದರೊಂದಿಗೆ ಭಾರತದಲ್ಲಿ ಎಜುಟೆಕ್‌ ಬೃಹತ್‌ ಲಾಭದಾಯಕ ಉದ್ಯಮವಾಗಿ ಬದಲಾಯಿತು!

ತಪ್ಪಾಯಿತಾ ಉದ್ಯಮ ಲೆಕ್ಕಾಚಾರ?
ಭಾರೀ ವೇಗದಲ್ಲಿ ಬೆಳವಣಿಗೆಗಳನ್ನು ಕಂಡ ಎಜುಟೆಕ್‌ ಉದ್ಯಮವು ಅಷ್ಟೇ ವೇಗದಲ್ಲಿ ಕುಸಿತವೂ ಕಂಡಿದ್ದು ಕೂಡ ವಿಪರ್ಯಾಸ. ಇತರ ಉದ್ಯಮಗಳಂತೆ, ಆನ್‌ಲೈನ್‌ ಬೋಧನೆಯ ವೇದಿಕೆಗಳು ಕೋವಿಡ್‌ ಬಳಿಕ ಬಿಸಿನೆಸ್‌ ಮಾಡೆಲ್‌ ಗುರುತಿಸಿಕೊಳ್ಳಲು ವಿಫ‌ಲವಾದವು. ಕೋವಿಡ್‌ ಕಾಲದಲ್ಲಿ ಉಂಟಾದ ಶೈಕ್ಷಣಿಕ ಪರಿಸ್ಥಿತಿಯು ಸ್ಟಾರ್ಟ್‌ಅಪ್‌ಗಳಲ್ಲಿ ವಿಪರೀತ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಪರಿಣಾಮ ಎಲ್ಲೆ ಮೀರಿ ಬಂಡವಾಳ ಹೂಡಿಕೆ ಮತ್ತು ವೆಚ್ಚ ಮಾಡಿದವು. ಕೋವಿಡ್‌ ಸಾಂಕ್ರಾಮಿಕ ಮುಗಿದ ಅನಂತರವೂ ಶೈಕ್ಷಣಿಕ ವಲಯವು ಹಿಂದಿನ ಸ್ಥಿತಿಗೆ ಮರಳಲಾರವು ಎಂಬ ಅವುಗಳ ಎಣಿಕೆ ಸುಳ್ಳಾಯಿತು. ಅದರ ಪರಿಣಾಮವನ್ನು ಇಡೀ ಎಜುಟೆಕ್‌ ಉದ್ಯಮ ಎದುರಿಸುತ್ತಿದೆ.

ಅಗತ್ಯಕ್ಕಿಂತಲೂ ಹೆಚ್ಚು ನೇಮಕಾತಿ
ಕೋವಿಡ್‌ ಕಾಲ ಘಟ್ಟದಲ್ಲಿ ಸೃಷ್ಟಿಯಾದ ಬೇಡಿಕೆಯಿಂದಾಗಿ ಬಹುತೇಕ ಎಜುಟೆಕ್‌ ಕಂಪೆನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡವು. ಆದರೆ ಕೋವಿಡ್‌ ಬಳಿಕ ಹಾಗೂ ಆರ್ಥಿಕ ಹಿಂಜರಿತ ಪರಿಣಾಮ ಎಜುಟೆಕ್‌ ವಲಯದ ಉದ್ಯಮಗಳು ಭಾರೀ ನಷ್ಟ ಅನುಭವಿಸಿದವು. ಪರಿಣಾಮ ಉದ್ಯೋಗಗಳನ್ನು ಕಡಿತ ಮಾಡು ವುದು ಅನಿವಾರ್ಯವಾಯಿತು. ಇದು ಕೂಡ ಪ್ರತಿಕೂಲ ಪರಿಣಾಮ ಬೀರಿತು.

ಪ್ರಚಾರ, ಪ್ರಾಯೋಜಕತ್ವಕ್ಕೆ ವೆಚ್ಚ
ತಮ್ಮ ಉದ್ಯಮವನ್ನು ವಿಸ್ತರಿಸುವುದಕ್ಕಾಗಿ ಎಜುಟೆಕ್‌ ಕಂಪೆನಿಗಳು ವಿಪರೀತ ಪ್ರಚಾರದ ಮೊರೆ ಹೋದವು. ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಿದವು. ಅಲ್ಲದೇ, ಬೃಹತ್‌ ಕ್ರೀಡಾ ಕಾರ್ಯಕ್ರಮಗಳ ಪ್ರಾಯೋಜಕತ್ವಕ್ಕೆ ಪೈಪೋಟಿಗೆ ಬಿದ್ದವು. ಉದಾಹರಣೆಗೆ, ಕತಾರ್‌ನಲ್ಲಿ ನಡೆದ ಫಿಫಾ ಪುಟ್ಬಾಲ್‌ ವಿಶ್ವಕಪ್‌, ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವವನ್ನು ಬೈಜೂಸ್‌ ಪಡೆದುಕೊಂಡರೆ, ಅನ್‌ಅಕಾಡೆಮಿ ಮತ್ತು ವೇದಾಂತು ಐಪಿಎಲ್‌ನ ಪ್ರಮುಖ ಸ್ಪಾನ್ಸರ್‌ ಕಂಪೆನಿ ಗಳಾಗಿದ್ದವು. ಈ ಎಲ್ಲ ವೆಚ್ಚವನ್ನೂ ಭರಿಸಿಕೊಳ್ಳುವ ಶಕ್ತಿಗಳು ಸ್ಟಾರ್ಟ್‌ಅಪ್‌ಗಳಿಗೆ ಇರಲಿಲ್ಲ. ಉದ್ಯಮದ ಮೇಲಿನ ಅತಿಯಾದ ವಿಶ್ವಾಸವು ಅಪಾಯಕ್ಕೆ ನೂಕಿತು.

ಅಗತ್ಯಕ್ಕಿಂತ ಹೆಚ್ಚು ಕಂಪೆನಿಗಳ ಸ್ವಾಧೀನ
ಜಾಹೀರಾತುಗಳು ಮತ್ತು ಬಾಲಿವುಡ್‌ನ‌ ದುಬಾರಿ ರಾಯಭಾರಿಗಳ ಮೇಲೆ ವಿಪರೀತ ವೆಚ್ಚ ಮಾಡಿದ್ದ ಎಜುಟೆಕ್‌ನ ದೈತ್ಯಗಳಾದ ಬೈಜೂಸ್‌ ಮತ್ತು ಅನ್‌ಅಕಾಡೆಮಿ 2020 ಜನವರಿಯಿಂದ 2 ಡಜನ್‌ ಆನ್‌ಲೈನ್‌ ಬೋಧನೆಯ ಸ್ಟಾರ್ಟ್‌ ಅಪ್‌ ವೇದಿಕೆಗಳನ್ನು ಸ್ವಾಧೀನಪಡಿಸಿಕೊಂಡಿದ್ದವು. ಆದರೆ ಈ ಯಾವ ಕಂಪೆನಿಗಳೂ ವರವಾಗಿ ಪರಿಣಮಿಸಲಿಲ್ಲ. ಇವೆರಡಲ್ಲದೇ, ಉಳಿದ ಹಲವು ಕಂಪೆನಿಗಳು ಇದೇ ಮಾರ್ಗವನ್ನು ತುಳಿದಿದ್ದವು. ಆದರೆ ಇದಾವುದೂ ಭವಿಷ್ಯದ ದೃಷ್ಟಿಯಿಂದ ಲಾಭದಾಯಕ ವ್ಯವಹಾರವಾಗಿ ಉಳಿಯಲಿಲ್ಲ.

428 ಎಜುಟೆಕ್‌ ಕಂಪೆನಿಗಳು ಬಂದ್‌!
ಕೋವಿಡ್‌ ಸಾಂಕ್ರಾಮಿಕ ಮುಗಿದ ಮೇಲೆ ಉಂಟಾದ ಆರ್ಥಿಕ ಹಿಂಜರಿತವು ಭಾರತದ ಎಜುಟೆಕ್‌ ಉದ್ಯಮ ಮೇಲೆ ಗಂಭೀರ ಪರಿಣಾಮ ಬೀರಿತು. ಹೂಡಿಕೆಯ ಕೊರತೆಯಿಂದ ನಲುಗತ್ತಿದ್ದ 428ಕ್ಕೂ ಅಧಿಕ ಎಜುಟೆಕ್‌ ಸ್ಟಾರ್ಟ್‌ ಅಪ್‌ಗಳು 2023ರಲ್ಲಿ ಅಂದಾಜು ಬಾಗಿಲೆಳೆದವು! ಹೀಗೆ, ಬಂದ್‌ ಆದ ಸ್ಟಾರ್ಟ್‌ ಅಪ್‌ಗಳ ಪೈಕಿ ವೇದುಅಕಾಡೆಮಿ, ಕ್ವಿಜ್‌ಮೈಂಡ್‌, ಟ್ರೈಬಕ್‌ ಬ್ಲ್ಯೂ, ಆರ್‌ಕೆಎಸ್‌ ಲಾ ಕ್ಲಾಸಿಸ್‌, ಕೀ17ಟೆಕ್‌ ಪ್ರಮುಖವಾದವು. ಕೋವಿಡ್‌ ಕಾಲಘಟ್ಟದಲ್ಲಿ ಈ ಎಲ್ಲ ಸ್ಟಾರ್ಟ್‌ಅಪ್‌ಗ್ಳು ಚೆನ್ನಾಗಿಯೇ ಪ್ರದರ್ಶನ ತೋರಿದ್ದವು ಎಂಬುದು ಗಮನಾರ್ಹ.

ಪತನದ ಹಾದಿ..
-ಕೋವಿಡ್‌ ಬಳಿಕ ಅಂದರೆ 2022ರ ಬಳಿಕ ಎಜುಟೆಕ್‌ ಕಂಪೆ‌ನಿಗಳ ಪತನ ಶುರುವಾಯಿತು.
-ಕೋವಿಡ್‌ ಬಳಿಕ ಶಾಲಾ, ಕಾಲೇಜುಗಳು ಮತ್ತು ಇಡೀ ಶೈಕ್ಷಣಿಕ ವ್ಯವಸ್ಥೆಯು ಆನ್‌ಲೈನ್‌ ಬೋಧನಾ ವೇದಿಕೆಗಳಿಗೆ ಬೇಡಿಕೆ ಕುಸಿಯಿತು.
-2022ರಲ್ಲಿ 2.6 ಶತಕೋಟಿ (21,580 ಕೋಟಿ ರೂ.) ಡಾಲರ್‌ನಷ್ಟು ಹರಿದು ಬಂದಿದ್ದ ಬಂಡವಾಳವು ಒಂದೇ ವರ್ಷದಲ್ಲಿ ಅಂದರೆ 2023ರಲ್ಲಿ ವರ್ಷದಲ್ಲಿ 29.73 ಕೋಟಿ ಡಾಲರ್‌ಗೆ (2400 ಕೋಟಿ) ಇಳಿಕೆಯಾಯಿತು.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.