ಪ್ರಾಣಿಜನ್ಯ ರೋಗಗಳೇಕೆ ಮನುಷ್ಯರನ್ನು ಕಾಡುತ್ತಿವೆ?
Team Udayavani, Feb 1, 2020, 6:44 AM IST
ಚೀನದಲ್ಲಿ ಮರಣ ಮೃದಂಗ ಮುಂದುವರಿಸಿರುವ ಕೊರೊನಾ ವೈರಸ್ ದಾಳಿಯಿಂದ ಜನರು ಬೆಚ್ಚಿದ್ದಿದ್ದಾರೆ. ಏಕೆ ಮಾನವರು ಪ್ರಾಣಿಜನ್ಯ ರೋಗಗಳ ಮೂಲಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಈ ಹಿಂದೆ ಯಾವೆಲ್ಲ ಪ್ರಾಣಿಜನ್ಯ ರೋಗಗಳು ಹರಡಿದ್ದವು ಎಂಬ ಮಾಹಿತಿ ಇಲ್ಲಿದೆ.
ಕಾಲಘಟ್ಟಕ್ಕೆ ತಕ್ಕಂತೆ ಆಗುತ್ತಿರುವ ಬದಲಾವಣೆಗಳು ಪರಿಸ ರದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತಿವೆ. ಹೆಚ್ಚಿದ ನಗರ ಜೀವನದ ಗೀಳು ಜನರನ್ನು ಅನಾರೋಗ್ಯಕ್ಕೀಡು ಮಾಡುತ್ತಿದ್ದು, ಜನಸಾಂದ್ರತೆ ಹೆಚ್ಚಾದಾಗ ಇಂತಹ ಸಾಂಕ್ರಾಮಿಕ ರೋಗಗಳು ವೇಗವಾಗಿ ಹರಡುತ್ತವೆ ಎಂದು ತಜ್ಞರು ಹೇಳಿದ್ದಾರೆ.
= ಹೆಚ್ಚಿನ ಪ್ರಾಣಿಗಳಲ್ಲಿ ರೋಗ ಕಾರಕವಾದ ಬ್ಯಾಕ್ಟೀರಿಯ ಮತ್ತು ವೈರಸ್‌ಗಳು ಇರುತ್ತವೆ. ಈ ವೈರಸ್‌ಗಳು ಬದುಕುಳಿಯುವ ಸಲುವಾಗಿ ಹೊಸ ದೇಹಗಳನ್ನು ಹುಡುಕುತ್ತಿರುತ್ತವೆ. ದೇಹದಲ್ಲಿರುವ ರೋಗ ನಿರೋಧಕ ವ್ಯವಸ್ಥೆ ಹೊಸದಾಗಿ ಬಂದ ವೈರಸ್‌ನ್ನು ವಿರೋಧಿಸುತ್ತದೆ. ಈ ಎರಡು ವ್ಯವಸ್ಥೆಗಳ ನಡುವೆ ಬದುಕುಳಿಯಲು ದೊಡ್ಡ ಹೋರಾಟವೇ ನಡೆಯುತ್ತದೆ. ಅಂತಿಮವಾಗಿ ವೈರಸ್ ಗೆದ್ದರೆ ಅಂಥ ದೇಹ ರೋಗಗ್ರಸ್ತವಾಗುತ್ತದೆ.
= ಇಂತಹ ರೋಗಗಳು ಕಾಣಿಸಿಕೊಂಡಾಗ ಮೊದಲು ಬಲಿಯಾಗುವವರು ಬಡ ನಗರವಾಸಿಗಳು, ಸ್ವತ್ಛತೆ ಮತ್ತು ನೈರ್ಮಲ್ಯ ಕೆಲಸದಲ್ಲಿ ನಿರತರಾದವರು.
= 1980ರ ದಶಕದಲ್ಲಿ ಕಾಣಿಸಿಕೊಂಡ ಏಡ್ಸ್ ಸೋಂಕು ಹರಡುವುದಕ್ಕೆ ಮುಖ್ಯ ಕಾರಣ ಚಿಂಪಾಂಜಿಗಳು.ಹಲವಾರು ವರ್ಷಗಳಿಂದ ಕರ್ನಾಟಕದ ಮಲೆನಾಡಿನಲ್ಲಿ ಹಾವಳಿಯಿಡುತ್ತಿರುವ ಮಂಗನ ಕಾಯಿಲೆಯ ಮೂಲ ಮಂಗಗಳು.
= 2004 – 2007ರವರೆಗೆ ಕಾಣಿಸಿಕೊಂಡ ಏವಿ ಯನ್ ಫೂÉ (ಪಕ್ಷಿ ಜ್ವರ) ಸೋಂಕು ಹರಡಿದ್ದು ಪಕ್ಷಿಗಳಿಂದ.
= 2009ರಲ್ಲಿ ಸಾರ್ಸ್ ರೋಗ ಬಂದದ್ದು ಪುನುಗು ಬೆಕ್ಕು ಮತ್ತು ಬಾವಲಿಗಳಿಂದ. ಇಡೀ ವಿಶ್ವವನ್ನೇ ಕಾಡಿದ ಎಬೋಲ ಮತ್ತು ಕೇರಳದಲ್ಲಿ 2018ರಲ್ಲಿ ಹಾವಳಿಯಿಟ್ಟ ನಿಫಾ ವೈರಸ್ ಬಾವಲಿಯಿಂದ ಮಾನವರಿಗೆ ಹರಡಿತ್ತು.
ಹರಡುವುದು ಹೇಗೆ?
= ಪೌಷ್ಟಿಕಾಂಶಗಳ ಕೊರತೆ, ಅಶುದ್ಧ ಗಾಳಿ ಸೇವನೆ , ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವುದು.
= ವೈದ್ಯಕೀಯ ಸೌಲಭ್ಯದ ಅಲಭ್ಯತೆ.
= ನಗರಗಳಲ್ಲಿನ ಅತಿಯಾದ ಜನಸಾಂದ್ರತೆ.
= ಮನುಷ್ಯನ ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವುದು.
= ಬದಲಾದ ಆಹಾರ ಪದ್ಧತಿ. ಕಾಡುಪ್ರಾಣಿಗಳ ಮಾಂಸ ಸೇವನೆ.
ನಾವು ಏನು ಮಾಡಬೇಕು?
= ಸಮಾಜಗಳು ಮತ್ತು ಸರಕಾರಗಳು ಪ್ರತಿ ಹೊಸ ಸಾಂಕ್ರಾಮಿಕ ರೋಗವನ್ನು ಪ್ರತ್ಯೇಕ ಬಿಕ್ಕಟ್ಟು ಎಂದು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜಗತ್ತು ಬದಲಾಗುತ್ತಿದೆ, ಹವಾಮಾನ ಬದಲಾಗುತ್ತಿದೆ.. ಹೀಗಾಗಿ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತವೆ ಎಂಬ ಸಾರ್ವತ್ರೀಕರಣ ಸಲ್ಲ.
= ಪರಿಸರಕ್ಕೆ ಹೆಚ್ಚು ಹಾನಿಯಾದಂತೆ ಜೈವಿಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಾ ಹೋಗುತ್ತದೆ. ಇದು ಹೊಸ ರೋಗಗಳ ಹುಟ್ಟಿಗೆ ಅವಕಾಶ ಕೊಡುತ್ತದೆ.
= ಇಷ್ಟರ ತನಕ ಶೇ. 10ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ ವೈರಸ್‌ಗಳನ್ನು ಹಾಗೂ ಅವುಗಳ ಮೂಲವನ್ನು ಗುರುತಿಸಿ ದಾಖಲಿಸುವ ಕೆಲಸಕ್ಕೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವತ್ತ ಗಮನ ಹರಿಸಬೇಕಾಗಿದೆ.
= ನಗರವಾಸಿಗಳಲ್ಲಿ ಪ್ರಾಣಿಗಳನ್ನು ಸಾಕುವ ಖಯಾಲಿ ಇರುತ್ತದೆ. ಕೆಲವು ಪ್ರಾಣಿಗಳು ರೋಗಗಳ ಮೂಲವಾಗಿರಬಹುದು. ಈ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದಿರಬೇಕು.
= ನಗರಕ್ಕೆ ಹೊಸದಾಗಿ ತರುವ ಪ್ರಾಣಿಗಳ ಮೇಲೆ ನಿಗಾ ಇರಿಸುವುದು ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಕತ್ತು ಬಿಗಿದು ಇಬ್ಬರು ಮಕ್ಕಳನ್ನು ಕೊಂದ ಅಮ್ಮ!
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.