![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 1, 2022, 5:55 AM IST
ದಶಕಗಳಷ್ಟು ಹಳೆಯದಾದ ಕಾಫಿ ಕಾಯ್ದೆಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಮುಂಗಾರು ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಈ ಕಾಫಿ ಕಾಯ್ದೆ ಅಂದರೇನು? ಇದನ್ನು ರದ್ದು ಮಾಡುವ ಉದ್ದೇಶದ ಹಿಂದಿನ ಕಾರಣಗಳೇನು? ಈ ಕುರಿತ ಒಂದು ಸಣ್ಣ ನೋಟ ಇಲ್ಲಿದೆ.
ಏನಿದು ಕಾಫಿ ಆ್ಯಕ್ಟ್?
1930ರ ಸುಮಾರಿನಲ್ಲಿ ಕರ್ನಾಟಕ ಚಿಕ್ಕಮಗಳೂರು, ಕೊಡಗು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ ಕಾಫಿ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದರು. ಒಂದು ಕಡೆ ಕಾಫಿ ಗಿಡಗಳಿಗೆ ಕೀಟ ಮತ್ತು ಹುಳಗಳ ಕಾಟ, ಇನ್ನೊಂದು ಕಡೆ ಇಲ್ಲದ ಮಾರುಕಟ್ಟೆ. ಹೀಗಾಗಿ, 1942ರಲ್ಲಿ ಆಗಿನ ಬ್ರಿಟಿಷ್ ಸರ್ಕಾರ, ಕಾಫಿ ಬೆಳೆಗಾರರ ಹಿತಾಸಕ್ತಿಗಾಗಿ ಕಾಫಿ ಆ್ಯಕ್ಟ್ ಅನ್ನು ಜಾರಿಗೆ ತಂದಿತು. ಇದರ ಪ್ರಮುಖ ಉದ್ದೇಶವೇ, ಆಂತರಿಕವಾಗಿ ಕಾಫಿ ಬಳಕೆಯನ್ನು ಹೆಚ್ಚಳ ಮಾಡುವುದು ಮತ್ತು ಹೊರ ದೇಶಕ್ಕೂ ರಫ್ತು ಮಾಡುವುದಾಗಿತ್ತು.
ಕಾಫಿ ಬೋರ್ಡ್
1942ರಲ್ಲಿ ಜಾರಿಗೆ ತಂದ ಕಾಫಿ ಆ್ಯಕ್ಟ್ ಪ್ರಕಾರವೇ, ಕಾಫಿ ಮಂಡಳಿ ಯನ್ನೂ ಜಾರಿಗೆ ತರಲಾಯಿತು. ಇದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿಯಲ್ಲಿ ಬರುತ್ತದೆ. ಈ ಕಾಫಿ ಮಂಡಳಿಯು ಬೆಳೆಗಾರರಿಂದ ಕಾಫಿಯನ್ನು ಪಡೆದುಕೊಂಡು, ಅದನ್ನು ಸಂಗ್ರಹಿಸಿ, ಸಂಸ್ಕರಿಸಿ, ತಯಾರು ಮಾಡಿ ಮಾರಾಟ ಮಾಡುತ್ತಿತ್ತು. ಅಲ್ಲದೆ, ಎಲ್ಲ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಮಂಡಳಿಗೇ ನೀಡಬೇಕಾಗಿತ್ತು. ತಮ್ಮ ಬಳಕೆಗೆ ಮತ್ತು ಬಿತ್ತನೆ ಬೀಜಕ್ಕಾಗಿ ಒಂದಷcನ್ನು ಉಳಿಸಿಕೊಳ್ಳಬೇಕಾಗಿತ್ತು.
1991ರಿಂದ ಬದಲಾವಣೆ
1991ರಲ್ಲಿ ಭಾರತದಲ್ಲಿ ಜಾಗತೀಕರಣ ಕಾಲಿಟ್ಟಿತು. ಇದಾದ ಮೇಲೆ, ಕಾಫಿ ಬೆಳೆಗಾರರು ತಾವು ಬೆಳೆದ ಬೆಳೆಯನ್ನು ಕಾಫಿ ಮಂಡಳಿಗೇ ನೀಡಬೇಕು ಎಂಬ ಷರತ್ತನ್ನು ತೆಗೆದುಹಾಕಲಾಯಿತು. ಜತೆಗೆ ಬೆಳೆಗಾರರೇ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿತ್ತು. ಹೀಗಾಗಿ, ಕಾಫಿ ಮಂಡಳಿಯ ಕೆಲಸ ಬಹಳಷ್ಟು ಕಡಿಮೆಯಾಯಿತು. ಇದನ್ನು ಮನಗಂಡೇ ಕೇಂದ್ರ ಸರ್ಕಾರ ಈಗ ಕಾಫಿ ಕಾಯ್ದೆಯನ್ನು ರದ್ದು ಮಾಡಲು ಮುಂದಾಗಿದೆ.
You seem to have an Ad Blocker on.
To continue reading, please turn it off or whitelist Udayavani.