ಮಹಿಳಾ ದಿನಾಚರಣೆ ವಿಶೇಷ: ಸಾವಯವ ಕೃಷಿ ಸಾಧಕಿ ಲಕ್ಷ್ಮೀ ಶಿರಮಗೊಂಡ
Team Udayavani, Mar 8, 2022, 12:27 PM IST
ವಿಜಯಪುರ: ಕುಟುಂಬದ ಸಹಕಾರ ಇದ್ದಲ್ಲಿ ಮಹಿಳೆ ಕೃಷಿಯಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಬಬಲೇಶ್ವರ ಪಟ್ಟಣದ ಲಕ್ಷ್ಮಿ ಬಸಗೊಂಡ ಶಿರಮಗೊಂಡ ನಿದರ್ಶನವಾಗಿ ನಿಂತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಲಕ್ಷ್ಮೀ, ತಮ್ಮ ದ್ರಾಕ್ಷಿ ತೋಟಕ್ಕೆ ಭೇಟಿ ನೀಡುವ ರೈತರಿಗೆ ಪ್ರಾತ್ಯಕ್ಷಿಗೆ ನೀಡುತ್ತಾರೆ. ಇದಕ್ಕಾಗಿ ರಸಾಯನಿಕ ಗೊಬ್ಬರ ಹಾಗೂ ಸಾವಯವ ಗೊಬ್ಬರ ಹಾಕಿ ಬೆಳೆದ ದ್ರಾಕ್ಷಿ ಬೆಳೆದಿದ್ದಾರೆ.
ಸಾವಯವ ಕೃಷಿಗೆ ಅಗತ್ಯವಾಗಿರುವ ದೇಶಿ ಗೋ ತಳಿ ಸಂರಕ್ಷಣೆಗಾಗಿ 10 ಗೀರ್ ತಳಿ ಆಕಳು ಸಾಕಿದ್ದಾರೆ. ಇದರಿಂದ ಬರುವ ಹಾಲು, ಮೊಸರು, ಬೆಣ್ಣೆ, ತುಪ್ಪ, ಸಗಣಿ, ಕುರುಳು, ವಿಭೂತಿ, ಪ್ರಣತಿ, ಗೋಮೂತ್ರ, ಆರ್ಕ, ಪಂಚಗವ್ಯ ಹೀಗೆ ಗೋವುಗಳಿದ ದೊರೆಯುವ ಹಾಲು, ಮೂತ್ರ, ಸಗಣೆಯಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಇದಲ್ಲದೇ ಸಾವಯವ ಕೃಷಿಯಲ್ಲಿ ಕ್ರಿಮಿನಾಶಕ ಹಾಗೋ ರೋಗ ನಾಶಕ್ಕಾಗಿ ಸಸ್ಯಜನ್ಯ ಕ್ರಿಮಿನಾಶಕ, ಜೀವಾಮೃತ, ಗೋ ಉತ್ಪನ್ನಗಳು ಹೀಗೆ ತಾವು ತಯಾರಿಸುವ ಎಲ್ಲ ಉತ್ಪನ್ನಗಳಿಗೆ ಸ್ಥಾನಿಕ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಗ್ರಾಹಕರು ಅವರ ತೋಟಕ್ಕೆ ಬಂದು ಇವರ ಉತ್ಪನ್ನಗಳನ್ನು ಖರೀದಿಸುವ ಮಟ್ಟಿಗೆ ವಿಶ್ವಾಸಾರ್ಹತೆಯನ್ನು ವೃದ್ಧಿಸಿಕೊಂಡಿದ್ದಾರೆ.
ಇದಲ್ಲದೇ ನಿತ್ಯವೂ ತಮ್ಮ ತೋಟಕ್ಕೆ ಭೇಟಿ ನೀಡುವ ಸಾವಯವ ಕೃಷಿ ಆಸಕ್ತ ರೈತರಿಗೆ ಸಮಾಧಾನದಿಂದಲೇ ದೇಶಿ ಗೋತಳಿ ಆಧಾರಿತ ಸಾವಯವ ಕೃಷಿ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ಮಾಡುವ ಲಕ್ಷ್ಮೀ ಅವರಿಗೆ ತಮ್ಮ ಭಾಗದ ರೈತರು ವಿಷಮುಕ್ತ ಆಹಾರ ಉತ್ಪಾದಿಸಬೇಕು. ಸ್ವಾವಲಂಬಿ ಜೀವನಕ್ಕಾಗಿ ಸಾವಯವ ಕೃಷಿಯಲ್ಲಿ ತೊಡಗಬೇಕು ಎಂಬ ಕಾರಣಕ್ಕೆ ನಿರಂತರ ಜಾಗೃತಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಾವಕೃಷಿಯಲ್ಲಿ ತಾವು ಮಾಡುವ ಸಾಧನೆಯ ಹಿಂದೆ ಪತಿ ಹಾಗೂ ಅವರ ಕುಟುಂಬದ ಹಿರಿಯರ ಸಹಕಾರವೂ ಪ್ರಮುಖ ಎನ್ನುವ ಲಕ್ಷ್ಮೀ ಅವರಿಗೆ, ಕೃಷಿಯಲ್ಲಿ ತೊಡಗುವ ಯುವ ಪೀಳಿಗೆ ಸಾವಯವ ಕೃಷಿ ಮಾಡಿದಲ್ಲಿ ಉತ್ತಮ ಆರ್ಥಿಕ ಆದಾಯ ಗಳಿಸುವ ಜೊತೆಗೆ, ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಹೇಳುತ್ತಾರೆ.
-ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.