ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಗಟ್ಟಿಗೊಳಿಸಬೇಕಾಗಿದೆ 


Team Udayavani, Aug 19, 2022, 6:30 AM IST

ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಗಟ್ಟಿಗೊಳಿಸಬೇಕಾಗಿದೆ 

ವಿಶ್ವ ಆರ್ಥಿಕ ವೇದಿಕೆಯು ಜುಲೈ 13ರಂದು ಬಿಡುಗಡೆ ಮಾಡಿರುವ ಜಾಗತಿಕ ಲಿಂಗ ಅಂತರ 2022ರ ವರದಿಯ ಪ್ರಕಾರ ಮತ್ತೂಂದು ತಲೆಮಾರಿನ ಮಹಿಳೆಯರು ಲಿಂಗ ಸಮಾನತೆಗಾಗಿ ಕಾಯಬೇಕಾಗುತ್ತದೆ. ಜಾಗತಿಕ ಲಿಂಗ ಅಂತರ ಸೂಚ್ಯಂಕವು ಆರೋಗ್ಯದ ತುರ್ತುಸ್ಥಿತಿ ಮತ್ತು ಸಂಬಂಧಿತ ಆರ್ಥಿಕ ಕುಸಿತವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಪ್ರಾಥಮಿಕ ಸಾಕ್ಷ್ಯಗಳು ಸೂಚಿಸುತ್ತವೆ.

2020ರ ವರದಿಯು ಮುಂದಿನ 99.5 ವರ್ಷಗಳಲ್ಲಿ ಜಾಗತಿಕವಾಗಿ ಲಿಂಗ ಅಂತರವನ್ನು ತೊಡೆದುಹಾಕಬಹುದಾಗಿದೆ ಎಂದು ಊಹಿಸಲಾಗಿತ್ತು. ಆದರೆ 2021ರ ವರದಿಯ ಪ್ರಕಾರ ಈ ಅಂತರವನ್ನು ಮುಚ್ಚಲು 136 ವರ್ಷಗಳು ಅಂದರೆ ಹೆಚ್ಚುವರಿಯಾಗಿ 36 ವರ್ಷಗಳೇ ಬೇಕು ಎಂದು ಅಂದಾಜಿಸಲಾಗಿತ್ತು. ಆದರೆ 2022ರ ವರದಿಯ ಪ್ರಕಾರ ಮುಂದಿನ 132 ವರ್ಷಗಳಲ್ಲಿ ಲಿಂಗ ಅಂತರವನ್ನು ತೊಡೆದು ಹಾಕಬಹುದು ಎಂದಿದೆ. ಅಂದರೆ ಕಳೆದ ಒಂದು ವರ್ಷಗಳ ಪ್ರಯತ್ನದಲ್ಲಿ ಕೇವಲ 4 ವರ್ಷಗಳ ಅಂತರವನ್ನು ಕಡಿಮೆ ಮಾಡಲಾಗಿದೆ. ಬಹಳ ಕಳಪೆಮಟ್ಟದ ಸಾಧನೆ!

ಜಾಗತಿಕ ಲಿಂಗ ಅಂತರ ಸೂಚ್ಯಂಕ (Global Gender Gap Index) :

ಜಾಗತಿಕ ಲಿಂಗ ಅಂತರ ಸೂಚ್ಯಂಕವು ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ, ಶೈಕ್ಷಣಿಕ ಸಾಧನೆ, ಆರೋಗ್ಯ ಮತ್ತು ಬದುಕುಳಿಯುವಿಕೆ ಮತ್ತು ರಾಜಕೀಯ ಸಬಲೀಕರಣ ಎಂಬ ನಾಲ್ಕು ಪ್ರಮುಖ ಆಯಾಮಗಳಲ್ಲಿ ಲಿಂಗ ಆಧಾರಿತ ಅಂತರಗಳ ವಿಕಾಸವನ್ನು ಮಾನದಂಡವಾಗಿ ಗುರುತಿಸುತ್ತದೆ ಮತ್ತು ಕಾಲಾನಂತರದಲ್ಲಿ ಈ ಅಂತರವನ್ನು ಮುಚ್ಚುವ ಪ್ರಗತಿಯನ್ನು ಪತ್ತೆ ಮಾಡುತ್ತದೆ.

ಫಿನ್ಲ್ಯಾಂಡ್ ಡ್‌, ನಾರ್ವೆ, ನ್ಯೂಜಿಲ್ಯಾಂಡ್‌, ರುವಾಂಡಾ, ಸ್ವೀಡನ್‌, ಐರ್ಲೆಂಡ್‌ ಮತ್ತು ಸ್ವಿಟ್ಜರ್ಲೆಂಡ್‌ ಮೊದಲ ಲಿಂಗ ಸಮಾನ ದೇಶಗಳಾಗಿದ್ದರೆ ಸಿರಿಯಾ, ಇರಾನ್‌, ಕೊಂಗೋ, ಪಾಕಿಸ್ಥಾನ  ಮತ್ತು ಅಪ್‌ಘಾನಿಸ್ಥಾನ ಪಟ್ಟಿಯಲ್ಲಿರುವ ಕೊನೆಯ ಐದು ದೇಶಗಳು.

ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಗತಿ ಕಾಣದ ಭಾರತ:

ವಿಶ್ವ  ಆರ್ಥಿಕ  ವೇದಿಕೆಯು 30 ಮಾರ್ಚ್‌ 2021ರಂದು ಬಿಡುಗಡೆ ಮಾಡಿದ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ 2010ಕ್ಕೆ ಹೋಲಿಸಿದರೆ ಭಾರತವು 28 ಸ್ಥಾನಗಳನ್ನು ಕಳೆದುಕೊಂಡು 156 ದೇಶಗಳಲ್ಲಿ 140ನೇ ಸ್ಥಾನದಲ್ಲಿತ್ತು. ಆದರೆ ಈ ವರ್ಷದ ವರದಿಯ ಪ್ರಕಾರ ಭಾರತವು 135ನೇ ಸ್ಥಾನದಲ್ಲಿದೆ. ಅಂದರೆ ಕೇವಲ 5 ಸ್ಥಾನಗಳ ಹೆಚ್ಚಳವನ್ನು ಸಾಧಿಸಿದೆ. 0-1ರ ಪ್ರಮಾಣದಲ್ಲಿ ಭಾರತವು 0.629 ಸ್ಕೋರ್‌ ಪಡೆದಿದೆ. ಇದು ಕಳೆದ 16 ವರ್ಷಗಳಲ್ಲಿ ಏಳನೇ ಅತೀ ಹೆಚ್ಚು ಸ್ಕೋರ್‌ಆಗಿದೆ. ಲಿಂಗ ಸಮಾನತೆಯಲ್ಲಿ ಭಾರತದ ಸ್ಕೋರ್‌ ಕೇವಲ 0.629 ಅಂದರೆ ನಮ್ಮ ಸಾಧನೆ ಕೇವಲ ಶೇ. 63 ಮಾತ್ರ. ಇನ್ನು ನಾವು ಶೇ. 37  ಸಾಧನೆ ಮಾಡಬೇಕಿದೆ.

ಲಿಂಗ ಸಮಾನತೆಯು ಮೂಲಭೂತ ಮಾನವ ಹಕ್ಕು ಮಾತ್ರವಲ್ಲ, ಶಾಂತಿಯುತ, ಸಮೃದ್ಧ  ಮತ್ತು ಸುಸ್ಥಿರ ಜಗತ್ತಿಗೆ ಅಗತ್ಯವಾದ ಅಡಿಪಾಯವಾಗಿದೆ. ಸ್ತ್ರೀ-ಪುರುಷ ಸಮಾನತೆಯ ವಿಚಾರದಲ್ಲಿ ಮುಖ್ಯವಾಗಿ ಆರ್ಥಿಕ ಅವಕಾಶಗಳು, ಆರೋಗ್ಯ, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಜಾಗತಿಕ ಸ್ಥಾನ ಮೇಲೇರುವ ಪ್ರಯತ್ನ ಅಂಬೆಗಾಲಿಡುತ್ತಾ ಸಾಗಿರುವುದು ಕಳವಳಕಾರಿ.

ರಾಜಕೀಯ ಸಬಲೀಕರಣದಲ್ಲಿ ನಮ್ಮ ಸ್ಥಾನ 51 ರಿಂದ 48ಕ್ಕೆ ಏರಿದೆ. ಅಂದರೆ ಹೆಚ್ಚಿನ ಪ್ರಗತಿ ದಾಖಲಾಗಿಲ್ಲ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ ಮಾನದಂಡದಲ್ಲಿಯೂ ನಮ್ಮ ಸ್ಥಾನ 151ರಿಂದ ಕೇವಲ 143ಕ್ಕೆ ಏರಿದೆ. ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಸ್ಥಾನ 155ರಿಂದ 146ಕ್ಕೆ ಏರಿದೆ. ಆರೋಗ್ಯ ಮತ್ತು ಬದುಕುಳಿಯುವಿಕೆ ಉಪ-ಸೂಚ್ಯಂಕದಲ್ಲಿ ದೇಶವು ವಿಶ್ವದಲ್ಲಿಯೇ ಅತ್ಯಂತ ಕಳಪೆ ಪ್ರದರ್ಶನವನ್ನು ಹೊಂದಿದೆ ಹಾಗೂ ಇದರಲ್ಲಿ 146ನೇ ಅಂದರೆ ಕೊನೆಯ ಸ್ಥಾನದಲ್ಲಿರುವುದು ಅತ್ಯಂತ ಕಳವಳಕಾರಿ.

ಕಾರ್ಮಿಕ ಬಲದ ಭಾಗವಹಿಸುವಿಕೆಯು ಪುರುಷರು (-9.5%) ಮತ್ತು ಮಹಿಳೆಯರಿಗೆ (-3%) ಕುಗ್ಗಿದೆ ಎಂದು ವರದಿ ಮಾಡಿದೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶದ ಮೇಲಿನ ತನ್ನ ಕಾರ್ಯಕ್ಷಮತೆಗೆ ಭಾರತವು ಅತ್ಯಂತ ಮಹತ್ವದ ಮತ್ತು ಧನಾತ್ಮಕ ಬದಲಾವಣೆಯನ್ನು ದಾಖಲಿಸಿದೆ ಎಂದು ವಿಶ್ವ ಆರ್ಥಿಕ ವರದಿಯು ಬೊಟ್ಟು ಮಾಡಿದೆ. ಲಿಂಗ ಸಮಾನತೆಯ ಇತರ ಅಂಶಗಳಲ್ಲಿ ಹಾಗೂ ಒಟ್ಟಾರೆಯಾಗಿ ನಾವು ಸಾಧನೆ ಮಾಡುತ್ತಿದ್ದರೂ ಪ್ರಗತಿಯ ವೇಗ ತೃಪ್ತಿಕರವಾಗಿಲ್ಲ.

ನಮ್ಮ ಪ್ರಯತ್ನಗಳು:

ಮಹಿಳೆಯರು ಸಮಾಜದ ಪ್ರಮುಖ ಭಾಗ. ಹಾಗಾಗಿ ಅವರನ್ನು ಸಶಕ್ತೀಕರಣಗೊಳಿಸದೆ ಈ ಸಮಾಜವು ಪರಿಪೂರ್ಣವಾಗುವುದಿಲ್ಲ. ಹಲವಾರು ವರ್ಷಗಳಿಂದ ಲಿಂಗ ಸಮಾನತೆಯ ವಿಷಯವನ್ನು ವಾಸ್ತವಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನದಲ್ಲಿ ಸ್ವಸಹಾಯ ಗುಂಪುಗಳ ಉತ್ಪಾದನಾ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸಿ ಸ್ಪರ್ಧಾತ್ಮಕತೆಯನ್ನು ಅಭಿವೃದ್ಧಿಪಡಿಸುವ ವಿವಿಧ ಯೋಜನೆಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕಾರ್ಯೋನ್ಮುಖವಾಗಿದೆ.

ಖಾಸಗಿ ಅಥವಾ ಸಾರ್ವಜನಿಕ ಪ್ರದೇಶ, ಮನೆ, ಸಮುದಾಯ ಅಥವಾ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ನಿಂದನೆಗೆ ಒಳಗಾದರೆ ಅವರ ಸಹಾಯಕ್ಕೆ ಧಾವಿಸಲು ಒನ್‌-ಸ್ಟಾಪ್‌ ಸೆಂಟರ್‌ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಉದ್ಯೋಗ ನಿರತ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರ ಸೌಲಭ್ಯದ ಒದಗಣೆ, ಮಹಿಳೆಯರಿಗೆ ಇರುವ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಯೋಜನೆಗಳಿವೆ. ನೊಂದ ಮಹಿಳೆಯರಿಗೆ ಸ್ವಾಂತನ ಹಾಗೂ ನೈತಿಕ ಬೆಂಬಲ ನೀಡುವ ಜತೆಗೆ ಅವರು ಘನತೆ ಮತ್ತು ದೃಢ‌ವಾದ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಸ್ವಾರ್ಧಾ ಗ್ರೆಹ್‌ ಯೋಜನೆ ಮಹಿಳೆಯರಿಗೆ ಭಾವನಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಆಪ್ತ ಸಮಾಲೋಚನೆ, ಕಾನೂನು ನೆರವು, ವೃತ್ತಿಪರ ಸೇವೆ ನೀಡಲಿಕ್ಕಾಗಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಮುಂದಿನ ಹೆಜ್ಜೆ ?:

ಸುಸ್ಥಿರ ಅಭಿವೃದ್ಧಿಯ ಬಹುಮುಖ್ಯವಾದ ಸಾಧನ ಲಿಂಗ ಸಮಾನತೆ. ಅಸುರಕ್ಷಿತ ವಾತಾವರಣವು ಖಂಡಿತವಾಗಿಯೂ ಅವರ ಬೆಳವಣಿಗೆಗೆ ಮತ್ತು ಮುಖ್ಯವಾಗಿ ದೇಶದ ಬೆಳವಣಿಗೆಗೆ ಅವರು ನೀಡಬಹುದಾದ ಕೊಡುಗೆಗೆ ಬಹುದೊಡ್ಡ ಅಡ್ಡಿಯೇ ಹೌದು. ಲಿಂಗ ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸುವ ವಿಚಾರದಲ್ಲಿ ಸರಕಾರಗಳ ಮೇಲೆ ಎಷ್ಟು ಜವಾಬ್ದಾರಿ ಇದೆಯೋ, ಅಷ್ಟೇ ಜವಾಬ್ದಾರಿ ಸಮಾಜದ ಮೇಲೆಯೂ ಇದೆ ಎನ್ನುವುದನ್ನು ಮನಗಾಣಬೇಕಾಗಿದೆ.

ಈ ನಿಟ್ಟಿನಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳನ್ನು ಒದಗಿಸಿ ಅಭಿವೃದ್ಧಿಯ ಮುಖ್ಯ ವಾಹಿನಿಯಲ್ಲಿ ಒಳಗೊಳ್ಳುವಂತೆ ಮಾಡುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಬೆಳವಣಿಗೆಯ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಮರುಉದ್ಯೋಗಕ್ಕೆ ಸಿದ್ಧಗೊಳಿಸಲು ಮರುಹೊಂದಿಸುವುದು ಅಗತ್ಯ.

ಪ್ರಸ್ತುತ ಕಡಿಮೆ ಸಂಬಳದ ಅಗತ್ಯ ಕೆಲಸಗಳಲ್ಲಿ ಕೆಲಸದ ಗುಣಮಟ್ಟ ಮತ್ತು ವೇತನದ ಮಾನದಂಡಗಳನ್ನು ಹೆಚ್ಚಿಸುವುದು, ಕಾರ್ಮಿಕ ಬಲದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಸಕ್ರಿಯಗೊಳಿಸಿ ಸಾಮಾಜಿಕ ಸುರಕ್ಷತಾ ಬೆಂಬಲವನ್ನು ಕ್ರಮಬದ್ಧಗೊಳಿಸುವುದು ಮತ್ತು ಹೆಚ್ಚಿಸುವುದು, ನಿರ್ವಹಣೆ ಮತ್ತು ನಾಯಕತ್ವದ ಸ್ಥಾನಗಳಿಗೆ ಮಹಿಳೆಯರ ಆಯ್ಕೆಯ ಗುರಿ ಹೆಚ್ಚಿಸುವುದು ಮೊದಲಾದ ಹೆಜ್ಜೆಗಳು ಮಹತ್ವವನ್ನು ಪಡೆಯುತ್ತವೆ.

ಒಂದು ಸಲ ಮಹಿಳೆ ಪ್ರಗತಿಪಥದಲ್ಲಿ ಚಲಿಸಲು ಆರಂಭಿಸಿದರೆ ಇಡೀ ಕುಟುಂಬ, ಹಳ್ಳಿ ಮತ್ತು ಸಂಪೂರ್ಣ ದೇಶ ಪ್ರಗತಿಯಾಗುತ್ತದೆ ಎಂಬುದನ್ನು ತ್ರಿಕರಣಪೂರ್ವಕವಾಗಿ ಒಪ್ಪಿಕೊಂಡು ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಬಲಗೊಳಿಸಬೇಕಾಗಿದೆ.

 

-ಡಾ| ಎ. ಜಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.