ಮಹಿಳಾ ದಿನಾಚರಣೆ ವಿಶೇಷ: ಮಕ್ಕಳ ಕಲಾ ಪ್ರೇರಕಿ ಕಲ್ಪನಾ
Team Udayavani, Mar 8, 2022, 2:03 PM IST
ವಿಜಯಪುರ: ಮಕ್ಕಳಿಗಾಗಿ ತಾಯಿ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ರೇಖಾಚಿತ್ರ ಕಲಾವಿದೆ ಕಲ್ಪನಾ ಬಾಬಕರ ಜೀವಂತ ಸಾಕ್ಷಿ. ಬಾಲ್ಯದಲ್ಲಿ ತಮ್ಮ ಮಕ್ಕಳಲ್ಲಿದ್ದ ಚಿತ್ರಕಲೆ ಆಸಕ್ತಿಗೆ ಮಾರ್ಗದರ್ಶನ ಮಾಡಲು ಈ ತಾಯಿ ಚಿತ್ರಕಲೆಯಲ್ಲಿ ಪದವಿಯನ್ನೇ ಪಡೆದು, ಇದೀಗ ಚಿತ್ರಕಲಾವಿದೆಯಾಗಿ ಹೊರ ಹೊಮ್ಮಿದ್ದಾರೆ.
ಸದ್ಯ ಬಿಎಸ್‍ಸಿ ನರ್ಸಿಂಗ್ ಓದುತ್ತಿರುವ ಮಗ ಶ್ರವಣ ಹಾಗೂ ಬಿಇ ಓದುತ್ತಿರುವ ಮಗಳು ಅಮೃತಾ ಇವರು ಶಾಲೆ ದಿನಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದನ್ನು ಕಲ್ಪನಾ ಗಮನಿಸಿದ್ದರು. ಇದಕ್ಕಾಗಿ ಚಿತ್ರಕಲೆಯ ಶಿಕ್ಷಕರ ಹುಡುಕಾಟದಲ್ಲಿದ್ದ ಅವರಿಗೆ ವಿಜಯಪುರದಲ್ಲಿ ಚಿತ್ರಕಲಾ ಕಾಲೇಜು ಇರುವಿಗೆ ಬಂತು.
ಹೊಲಿಗೆ, ಹೆಣಿಕೆಯಲ್ಲಿ ವಿಶೇಷ ಜ್ಞಾನ ಹೊಂದಿದ್ದ ಕಲ್ಪನಾ ಅವರು ತಮ್ಮ ಮಕ್ಕಳಿಗೆ ಚಿತ್ರಕಲೆ ಶಿಕ್ಷಣ ನೀಡಲು ಸ್ವಯಂ ತಾವೇ ಚಿತ್ರಕಲಾ ಡಿಪ್ಲೋಮಾ ಶಿಕ್ಷಣ ಪಡೆದರು. ಇದೀಗ ಸಂಗನಬಸವ ಶಿಸುನಿಕೇತನ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲಿಸುತ್ತಿದ್ದಾರೆ.ಕಳೆದ ಒಂದು ದಶಕದಿಂದ ಸುಮಾರು ನೂರಾರು ಮಕ್ಕಳಿಗೆ ಚಿತ್ರಕಲೆಯ ಪಾಠ ಮಾಡುತ್ತಿದ್ದು, ಪ್ರತಿ ವರ್ಷ ಚಿತ್ರಕಲಾ ಶಿಬಿರಗಳನ್ನೂ ಏರ್ಪಡಿಸುತ್ತಾರೆ.
ಮನಸ್ಸಿನ ಭಾವನಬೆಗಳನ್ನು ಹೊರ ಹೊಮ್ಮಿಸುವಲ್ಲಿ ಚಿತ್ರಕಲೆ ಅದ್ಭುತ ಸಾಧನವೂ ಹೌದು, ವೇದಿಕೆಯೂ ಹೌದು ಎನ್ನುವ ಕಲ್ಪನಾ ಅವರು ಈಗಾಗಲೇ 8 ಕ್ಕೂ ಹೆಚ್ಚು ಕಡೆಗಳಲ್ಲಿ ತಮ್ಮ ಚಿತ್ರಕಲಾ ಕೃತಿಗಳ ಪ್ರದರ್ಶನ ಮಾಡಿದ್ದಾರೆ.
ರಚನಾತ್ಮಕ ಹಾಗೂ ರೇಖಾಚಿತ್ರಗಳನ್ನು ಬಿಡಿಸುವಲ್ಲಿ ಕಲ್ಪನಾ ಅವರು ಸಿದ್ಧಹಸ್ತರೆಂದೇ ಕರೆಸಿಕೊಂಡಿದ್ದು, ಚಿತ್ರಕಲೆಯಲ್ಲಿ ಜಿಲ್ಲೆಯ ಕೀರ್ತಿ ಬೆಳಗುವ ಭರವಸೆ ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.