ಸದ್ದಿಲ್ಲದೆ ಕಲಾಸೇವೆಯಲ್ಲಿ ತೊಡಗಿರುವ ಕೊಡಗಿನ ಕುವರಿ
Team Udayavani, Mar 8, 2021, 1:26 PM IST
ದೇವನಹಳ್ಳಿ: ಸಾಂಸಾರಿಕ ಜೀವನದ ಜೊತೆ ಸರ್ಕಾರಿ ಉದ್ಯೋಗದ ಹೊಣೆಗಾರಿಕೆ ಎರಡನ್ನೂ ನಿಭಾಯಿಸಿಕೊಂಡು ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಂಡು ಕಲಾ, ಸಾಹಿತ್ಯ ಕ್ಷೇತ್ರಗಳೊಂದಿಗೆ ಬೆರತು ತಾಲೂಕಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಮೂಲತಃ ಮಡಿಕೇರಿ ಭಾಗಮಂಡಲದವರಾಗಿದ್ದು, ಕಚೇರಿ ಕೆಲಸದ ಜೊತೆ ಕಲೆ, ಸಾಹಿತ್ಯ, ನೃತ್ಯ ಮಾಡಿಕೊಂಡು ಕಳೆದ ಒಂದೂವರೆ ದಶಕದಿಂದ ನೃತ್ಯ ಕಲೆಯಿಂದ ವಂಚಿತರಾಗಿದ್ದ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದು, ಸದ್ದಿಲ್ಲದೆ ಕೊಡಗಿನ ಕುವರಿ ಕಲಾಸೇವೆಯಲ್ಲಿದ್ದಾರೆ.
ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಮಾಡಿ ಕೊಂಡು ನಾಟ್ಯಮಿಲನ ನೃತ್ಯ ಶಾಲೆ ಮೂಲಕ ಯುವಜನರಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಸರ್ಕಾರದ ಯಾವುದೇ ಸಹಾಯಧನ ಪಡೆಯದೆ ತಮ್ಮ ತಿಂಗಳ ಸಂಬಳದ ಶೇ.30ರಷ್ಟು ಟ್ರಸ್ಟ್‌ನ ಖಾತೆಗೆ ಸೇರಿಸಿ ಸ್ವಾವಲಂಬಿ ತರಬೇತಿ ಕೇಂದ್ರವನ್ನಾಗಿಸಿದ್ದಾರೆ.
ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್‌ನೊಂದಿಗೆ ಮೈಗಂಟಿಕೊಂಡು ಬಂದಿರುವ ಮಿಲನಾ, ಯಕ್ಷಗಾನ, ಭರತನಾಟ್ಯ, ನೃತ್ಯ ಪರಿಣಿತಿ ಪಡೆದು ಇತರರಿಗೆ ಆ ಗೀಳು ಅಂಟಿಸುವ ಹಂಬಲದವರಾಗಿದ್ದಾರೆ. 2017ರಲ್ಲಿ ದೆಹಲಿ ಕನ್ನಡ ಸಂಘದಲ್ಲಿ ಗೌಡ ಕೊಡವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಈ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ವೇಷಭೂಷಣ, ಕಾರ್ಯಕ್ರಮ ನೀಡುವಪ್ರಯಾಣ ವೆಚ್ಚವನ್ನು ಟ್ರಸ್ಟ್ ಭರಿಸುತ್ತದೆ. ಪ್ರತಿ ದಿನವೂ ಒತ್ತಡದ ಬದುಕಿನಲ್ಲಿಅಧಿಕಾರಿಯಾಗಿ ಇರುತ್ತೇವೆ. ಕಲೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಎಷ್ಟೇ ಒತ್ತಡವಿದ್ದರೂ ಮರೆತು ಮನೋಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ. – ಮಿಲನಾ, ದೇವನಹಳ್ಳಿ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕಿ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.