“ಮಾದೇವಿ’ಯದ್ದು ಪುರುಷರಿಗಿಂತ ಒಂದು ಕೈ ಮೇಲು
Team Udayavani, Mar 8, 2021, 5:11 PM IST
ತೆಲಸಂಗ: ಎಂತಹದ್ದೇ ಪ್ರಸಂಗ ಧೈರ್ಯವಾಗಿ ಎದುರಿಸಿ ಜೀವನ ಗೆಲ್ಲುವ ಶಕ್ತಿ ಮಹಿಳೆಯರಿಗಿದೆ ಎಂದು ಎನ್ನುವುದಕ್ಕೆ ಜೀವಂತ ಉದಾಹರಣೆಗಳು ದೇಶದಲ್ಲಿ ಸಾಕಷ್ಟಿವೆ. ಅಂತಹ ದಿಟ್ಟ ಮಹಿಳೆಯರ ಸಾಲಿನಲ್ಲಿ ಗ್ರಾಮದ ಮಾದೇವಿ ಬಾಳು ಮುಗದುಮ್ ಕೂಡ ಒಬ್ಬರು.
ಮಾದೇವಿ ಕೃಷಿ ಕೆಲಸದಲ್ಲಿ ಪುರುಷರಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲ. ಟ್ರ್ಯಾಕ್ಟರ್ ಮೂಲಕ ತೋಟದಲ್ಲಿ ದ್ರಾಕ್ಷಿಗೆ ಔಷಧಿ ಸಿಂಪಡಿಸುವುದು ಸೇರಿದಂತೆ ಎಲ್ಲ ಕೆಲಸ ಮಾಡುತ್ತಾಳೆ. ಅಚ್ಚರಿ ಎಂದರೆ ಇಷ್ಟೆಲ್ಲ ಕೆಲಸ ಸ್ವಂತ ಹೊಲದಲ್ಲಿ ಮಾಡಲ್ಲ. ಬದಲಾಗಿ ಬೇರೆಯವರ ಹೊಲದಲ್ಲಿ ಕೂಲಿ ಪಡೆದು ಈ ಎಲ್ಲ ಕೆಲಸ ಮಾಡಿ ಉಪಜೀವನ ನಡೆಸುತ್ತಿದ್ದಾಳೆ. 8 ವರ್ಷಗಳ ಹಿಂದೆ ನನಗೆ ಮದುವೆಯಾಯಿತು. ಮನೆಯಲ್ಲಿ ಕಿರುಕುಳ ತಾಳದೆ ನನ್ನ ಮಗುವನ್ನು ಕಟ್ಟಿಕೊಂಡು ತವರಿಗೆ ಬಂದು ಸ್ವಂತ ಮನೆ ಮಾಡಿಕೊಂಡು ಹೊಸ ಜೀವನ ನಡೆಸುತ್ತಿದ್ದೇನೆ. 8 ವರ್ಷದಿಂದ ರೈತರ ಜಮೀನುಗಳಲ್ಲಿ ಕೆಲಸ ಮಾಡಿಜೀವನದ ಬಂಡಿ ದೂಡುತ್ತಿದ್ದೇನೆ ಎನ್ನುತ್ತಾರೆ ಮಾದೇವಿ.
ಕಷ್ಟದ ಸಮಯದಲ್ಲಿ ಧೃತಿಗೆಡದೆ ಸಂಕಷ್ಟ ಮೆಟ್ಟಿ ನಿಂತು ಮಾದರಿ ಜೀವನ ನಡೆಸುತ್ತಿರುವ ಮಾದೇವಿಸೋತೆನೆಂದು ಕಣ್ಣೀರು ಹಾಕಿಲ್ಲ, ತಲೆ ಮೇಲೆ ಕೈ ಹೊತ್ತು ಕೂತಿಲ್ಲ. ಅಕ್ಷರ ಕಲಿಯದಿದ್ರೂ ಸಂಸ್ಕಾರ ಇದೆ. ಇದ್ದು ಜಯಿಸುವೆ ಎನ್ನುವ ಛಲವಿದೆ. ಮಾನ, ಅಪಮಾನ ಸಹಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ಬದುಕಿ ತೋರಿಸಿದ ಮಾದೇವಿ ಕೃಷಿ ಕೆಲಸದಲ್ಲಿ ಯಾವೊಬ್ಬ ಪುರುಷನಿಗೂ ಕಡಿಮೆ ಇಲ್ಲ. ಇಂತಹ ದಿಟ್ಟ ಮಹಿಳೆಯರು ಇನ್ನೊಬ್ಬರಿಗೆ ಸ್ಫೂರ್ತಿಯೇ ಹೌದು.
ತೊಂದರೆ, ತಾಪತ್ರಯ ಯಾರೊಬ್ಬರ ಬೆನ್ನು ಬಿಟ್ಟಿಲ್ಲ. ಹೆಣ್ಣು ಒಂಟಿಯಾಗಿ ಬದುಕಿ ತೋರಿಸುವುದು ತುಂಬಾ ಕಷ್ಟ. ಹಾಗಂತ ಎಲ್ಲವೂ ಮುಗಿಯಿತು ಅಂದುಕೊಳ್ಳುವುದು ತಪ್ಪು. ಕೆಟ್ಟ ಘಟನೆ ಮರೆತು ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದೇನೆ. -ಮಾದೇವಿ ಬಾಳು ಮುಗದುಮ್
-ಜಗದೀಶ ಎಮ್ ಖೊಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.