ಆಗಸದಲ್ಲಿ ತೇಲುವ ಬೆಳಕಿನ ಮಾಲೆಯ ಕೌತುಕ


Team Udayavani, Dec 22, 2021, 5:50 AM IST

ಆಗಸದಲ್ಲಿ ತೇಲುವ ಬೆಳಕಿನ ಮಾಲೆಯ ಕೌತುಕ

ಸೋಮವಾರ ಸಂಜೆ ವೇಳೆ ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ. ಎಲ್ಲರಿಗೂ ಆಶ್ಚರ್ಯ! ಇದೇನಿದು.. ತೇಲುವ ತಟ್ಟೆಗಳೇ..ಅನ್ಯ ಲೋಕದಿಂದ ಯಾರಾದರೂ ಬಂದರೇ.. ಧೂಮ ಕೇತುವೇ ಅಥವಾ ಯುದ್ಧವೇನಾದರೂ ಪ್ರಾರಂಭ ವಾಯಿತೇ ಎಂಬ ಗೊಂದಲ.

ಈ ಬಗ್ಗೆ ಕರಾವಳಿಯಾದ್ಯಂತ ಎಲ್ಲರಲ್ಲೂ ಈ ರೀತಿಯ ಅನೇಕ ಪ್ರಶ್ನೆಗಳು ಉದ್ಭವಿಸ ತೊಡಗಿದವು. ಸೋಮವಾರ ಸಂಜೆ ಸುಮಾರು 7.23ಕ್ಕೆ ನೈಋತ್ಯ ಆಕಾಶದಿಂದ ಉತ್ತರಕ್ಕೆ ನಾಲ್ಕು ನಿಮಿಷ, ಹಾರಾಡುತ್ತಾ ಸಾಗಿದ ತೇಲುವ ಬೆಳಕಿನ ಮಾಲೆಯನ್ನು ಜನರು ನೋಡಿ ಬೆರಗಾದರು. ಇದು ತೇಲುವ ಬೆಳಕಿನ ಮಾಲೆಯಲ್ಲ. ಹಾಗೆಯೇ ಕಾಣುವ ಸುಮಾರು 60 ಕೃತಕ ಉಪಗ್ರಹಗಳ ಸಾಲು.

ಅಲನ್‌ ಮಸ್ಕ್ ಅವರ ಹೊಸ ಸಾಹಸ, ಸ್ಪೇಸ್‌ ಎಕ್ಸ್‌ ಕಂಪೆನಿ ಮೂಲಕ ಭೂಮಿಯ ಎಲ್ಲ ಭಾಗದವರಿಗೂ ನೆಟ್‌ವರ್ಕ್‌ ಸಂಪರ್ಕ ಕಲ್ಪಿಸಲು ರೂಪಿಸಿರುವ ಹೊಸ ತಂತ್ರಜ್ಞಾನ. ಇನ್ನು ನಾಲ್ಕು ವರ್ಷಗಳಲ್ಲಿ ಆಕಾಶದಲ್ಲಿ ಸುಮಾರು 60 ಸಾವಿರ ಕೃತಕ ಉಪಗ್ರಹಗಳನ್ನು ಹಾರಿ ಬಿಡುವ ಮೂಲಕ ಇಡೀ ಭೂಮಿಯ ಎಲ್ಲ ಸ್ಥಳಗಳಿಗೂ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈ ವ್ಯವಸ್ಥೆಯನ್ನು ಸ್ಟಾರ್‌ ಲಿಂಕ್‌ ಸ್ಯಾಟಲೈಟ್ಸ್‌ ಎನ್ನು ತ್ತಾರೆ. ಇವು ಕೆಳಸ್ತರದಲ್ಲಿ ಹಾರಾಡುವ ಕೃತಕ ಉಪಗ್ರಹಗಳಾಗಿವೆ. ಭೂಮಿಯಿಂದ ಸುಮಾರು 550 ಕಿ.ಮೀ. ಎತ್ತರದ ಆಕಾಶದಲ್ಲಿ 60 ಕೃತಕ ಉಪಗ್ರಹಗಳ ಮಾಲೆ ಅತೀ ವೇಗವಾಗಿ ತೇಲುತ್ತಿದೆ. ಪ್ರತೀ ಉಪಗ್ರಹ ಸುಮಾರು 260 ಕೆ.ಜಿ.ಗಳಿದ್ದು ಒಂದು ಮೀಟರ್‌ನಷ್ಟು ದೊಡ್ಡದಿದೆ.

ಬರಿಗಣ್ಣಿಗೆ ಕಾಣಿಸದು: ಈ ಕೃತಕ ಉಪಗ್ರಹಗಳು ನಮಗೆ ಬರಿಗಣ್ಣಿಗೆ ಕಾಣಿಸಲಾರವು. ಆದರೆ ಅವುಗಳ ಚಲನವಲನಗಳನ್ನು ಸಂಜೆ ಮತ್ತು ಬೆಳಗಿನ ಜಾವ ಗಮನಿಸಬಹುದು. ಸಂಜೆ ನಮಗೆ ಕತ್ತಲಾದರೂ 550 ಕಿ.ಮೀ. ಎತ್ತರದಲ್ಲಿರುವ ಈ ಕೃತಕ ಉಪಗ್ರಹಗಳಿಗೆ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಇವುಗಳಲ್ಲಿರುವ ಸೌರ ಫ‌ಲಕ ಗಳಿಂದ ಪ್ರತಿಫ‌ಲಿಸಿದ ಈ ಬೆಳಕು ನಮ್ಮ ಕಣ್ಣಿಗೆ ಬಿದ್ದು ಈ ಕೃತಕ ಉಪಗ್ರಹಗಳ ದರ್ಶನವಾಗುತ್ತದೆ.
ಸಾಧಕ-ಬಾಧಕಗಳು: ಆಪ್ಟಿಕಲ್‌ ಫೈಬರ್‌ನಿಂದ ಹಳ್ಳಿ ಹಳ್ಳಿಗೂ ಇಂಟರ್‌ನೆಟ್‌ ಸಂಪರ್ಕ ಬಹುಕಷ್ಟ. ಆದರೆ ಈ ಕೃತಕ ಉಪಗ್ರಹಗಳಿಂದ ಸಂಪರ್ಕ ಅತೀ ಸುಲಭ ಎನ್ನಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಸಿಗ್ನಲ್‌ಗಾಗಿ ಟವರ್‌ಗಳ ಅವಲಂಬನೆ ಕ್ರಮೇಣ ತಪ್ಪಲಿದೆ. ಈ ಕೃತಕ ಉಪಗ್ರಹಗಳಿಂದ ಹಳ್ಳಿಗಳಿಗೂ ಹೈ ಸ್ಪೀಡ್‌ ಇಂಟರ್‌ನೆಟ್‌ ಸಂಪರ್ಕ ಒದಗಿಸಲು ಸಾಧ್ಯವಾಗಲಿದೆ. ಆದರೆ ಇವುಗಳಿಂದ ನಕ್ಷತ್ರಗಳ ವೀಕ್ಷಕರು, ಅಧ್ಯಯನಾಸಕ್ತರು, ಮತ್ತು ಖಗೋಳ ವಿಜ್ಞಾನಿಗಳಿಗೆ ತೊಂದರೆಯುಂಟಾಗಲಿದೆ. ಇನ್ನು ಕೆಲವು ವರ್ಷಗಳಲ್ಲಿ ಕಾಣುವ ಹತ್ತು ನಕ್ಷತ್ರಗಳಲ್ಲಿ ಒಂದು ಈ ಕೃತಕ ಉಪಗ್ರಹವಿರಬಹುದು. ಒಂದು ಆಕಾಶಕಾಯದ ಕುರಿತಂತೆ ಅಧ್ಯಯನ ಮಾಡುತ್ತಿರುವ ಖಗೋಳ ವಿಜ್ಞಾನಿಗೆ ಈ ಕೃತಕ ಉಪಗ್ರಹಗಳ ಬೆಳಕು ಬಲುದೊಡ್ಡ ಅಡಚಣೆಯಾಗಿ ಪರಿಣಮಿಸಬಹುದು.

ಶುಕ್ರವಾರ ಮತ್ತೆ ಗೋಚರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಂಗಳವಾರ ಸಂಜೆ 7:11ಕ್ಕೆ ಪಶ್ಚಿಮೋತ್ತರ ಆಕಾಶದಲ್ಲಿ ಸುಮಾರು 20 ಡಿಗ್ರಿ ಎತ್ತರದಲ್ಲಿ ಈ ಉಪಗ್ರಹಗಳ ಸಾಲು ಗೋಚರಿಸಿದೆ. ಸೋಮವಾರ ಕಂಡಷ್ಟು ಪ್ರಕಾಶ ಮಾನವಾಗಿ ಈ ಉಪಗ್ರಹಗಳ ಸಾಲು ಕಾಣಿಸಲಿಲ್ಲ. ಅಲ್ಲದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ಗೋಚರವಾಗಲಿಲ್ಲ. ಡಿ.24 ರ ಸಂಜೆ 7:23ಕ್ಕೆ ಉತ್ತರ ಆಕಾಶದಲ್ಲಿ ಕೆಲವು ನಿಮಿಷಗಳ ಕಾಲ ಈ ಕೃತಕ ಉಪಗ್ರಹಗಳ ಗುತ್ಛವನ್ನು ನಾವು ಕಾಣಬಹುದಾಗಿದೆ.

ಖಗೋಳಾಸಕ್ತರ ಚಿಂತೆ: ಈ ವರೆಗೆ ಸುಮಾರು 11,670 ಕೃತಕ ಉಪ ಗ್ರಹಗಳನ್ನು ಹಾರಿಸಿಯಾ ಗಿದೆ. ಇವೆಲ್ಲವೂ ನೆಲದಿಂದ ಸುಮಾರು 200 ಕಿ.ಮೀ.ಗಳಿಂದ 36 ಸಾವಿರ ಕಿ.ಮೀ. ಎತ್ತರದಲ್ಲಿ ಭೂಮಿಗೆ ತಿರುಗುತ್ತಿವೆ. ಇವುಗಳಲ್ಲಿ ಈಗ 4,300 ಕೃತಕ ಉಪಗ್ರಹಗಳು ಕ್ರಿಯಾಶೀಲವಾಗಿವೆ. ಆದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಇವುಗಳ ಜತೆ ಇನ್ನೂ ಇಂತಹ 60 ಸಾವಿರ ಕೃತಕ ಉಪಗ್ರಹಗಳನ್ನು ಆಕಾಶಕ್ಕೆ ಹಾರಿ ಬಿಡಲು ಸ್ಯಾಟಲೈಟ್‌ ಕಂಪೆನಿಗಳು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಈ ಕೃತಕ ಉಪಗ್ರಹಗಳೇ ಹೊಸ ಆಕಾಶವನ್ನು ಸೃಷ್ಟಿಸುವವೋ ಏನೋ ಎನ್ನುವುದು ಖಗೋಳಾಸಕ್ತರ ಚಿಂತೆ.

– ಡಾ| ಎ.ಪಿ. ಭಟ್‌, ಉಡುಪಿ

ಟಾಪ್ ನ್ಯೂಸ್

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

14-uv-fusion

Mother: ಅಮ್ಮನ ಜೀವನವೇ ಆದರ್ಶ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

13-uv-fusion

Childhood Days: ಮರಳಿ ಬಾರದ ಬಾಲ್ಯ ಜೀವನ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

12-uv-fusion

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.