ಇಂದು ವಿಶ್ವ ಕಲಾ ದಿನ: ಚಿತ್ರಕಲಾವಿದರಿಗಿರಲಿ ನಮ್ಮೆಲ್ಲರ ಪ್ರೋತ್ಸಾಹ

Team Udayavani, Apr 15, 2022, 6:10 AM IST

ಇಂದು ವಿಶ್ವ ಕಲಾ ದಿನ: ಚಿತ್ರಕಲಾವಿದರಿಗಿರಲಿ ನಮ್ಮೆಲ್ಲರ ಪ್ರೋತ್ಸಾಹ

ಭಾಷೆ, ಅಕ್ಷರಕ್ಕಿಂತಲೂ ಮೊದಲು ತನ್ನ ಅನಿಸಿಕೆಗಳನ್ನು ಹೊರಹಾಕಲು ಮಾನವ ಬಳಸಿ ಕೊಂಡದ್ದು ಚಿತ್ರಕಲೆಯನ್ನೇ. ಮಾನವನ ಉಗಮದೊಂದಿಗೇ ಬೆಳೆದು ಬಂದ ಈ ಚಿತ್ರ ಕಲೆಯ ಇತಿಹಾಸವನ್ನು ತಿಳಿಯಲು ನಾವು ಸಹಸ್ರ ಸಹಸ್ರ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಅದನ್ನು ಸ್ಮರಿಸಲೋಸುಗ ಪ್ರತೀ ವರ್ಷ ಎಪ್ರಿಲ್‌ 15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವವನ್ನು ತಿಳಿದು ಆಚರಿಸಿದಾಗ ವಿಶ್ವದ ಕಲಾಸಂಸ್ಕೃತಿ ಪುನಶ್ಚೇತನಗೊಂಡು ಕಲೆ-ಕಲಾವಿದರ ಬದುಕು ಸುಂದರಗೊಳ್ಳಬಹುದು.

ಕಲೆಯು ವಿಶ್ವವ್ಯಾಪಿಯಾದ ಒಂದು ಚಟುವಟಿಕೆಯಾಗಿದೆ. ವಿಶ್ವ ಕಲಾ ದಿನವನ್ನು ನಾವು ಐದು ವಿಧಗಳಲ್ಲಿ ಆಚರಿಸಬಹುದು. ಮೊದಲನೆ ಯದಾಗಿ ವಿಶ್ವದ ಪ್ರಸಿದ್ಧ ಕಲಾತಾಣಗಳನ್ನು ಸಂದರ್ಶಿಸುವುದು ಮತ್ತು ಅವುಗಳ ಸಂರಕ್ಷಣೆಯ ಪ್ರತಿಜ್ಞೆ ಕೈಗೊಳ್ಳುವುದು. ಎರಡನೆಯದಾಗಿ ವಿಶ್ವದ ಪ್ರಸಿದ್ಧ ಕಲಾವಿದರ ಜೀವನ ಮತ್ತು ಅವರ ಕಲಾಕೃತಿಗಳ ಬಗ್ಗೆ ಅಭ್ಯಸಿಸುವುದು. ಮೂರನೆ ಯದಾಗಿ ವಿವಿಧ ಕಲಾಶೈಲಿಗಳ ಬಗ್ಗೆ ತಿಳಿದು ಕೊಳ್ಳುವುದು. ನಾಲ್ಕನೆಯದಾಗಿ ಸಮಕಾಲೀನ ಕಲೆ ಮತ್ತು ಕಲಾವಿದರ ಬಗ್ಗೆ ತಿಳಿದು ಕೊಳ್ಳುವುದು. ಐದನೆ ಯದಾಗಿ ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಗೌರವಿಸುವುದು.

ಚಿತ್ರಕಲೆಯ ಇತಿಹಾಸ ತಿಳಿಯೋಣ : 

ವಿಶ್ವದ ಪ್ರಸಿದ್ಧ ಆದಿಮ ಕಲಾತಾಣಗಳಾದ ಸ್ಪೇನಿನ ಆಲ್ತಾಮಿರಾ, ಲಾಸ್ಕಾಕ್ಸ್‌, ಫ್ರಾನ್ಸಿನ ಲಾಗ್ರಿಜ್‌, ಇಟಲಿಯ ಲೆವಾಂಜೊ, ಆಫ್ರಿಕಾದ ಡ್ರೇಕನ್ಸ್‌ ಬರ್ಗ್‌ ಗುಹೆಯ ಚಿತ್ರಗಳು, ಭಾರತದ ಹರಪ್ಪಾ ಮೊಹೆಂಜೆದಾರೊ, ಮಿರ್ಜಾಪುರ, ರಾಯಗಢ ಬೆಟ್ಟ, ಕೈಮೂರ ಬೆಟ್ಟ, ಭೋಪಾಲ್‌, ಕರ್ನಾಟಕದ ಬಳ್ಳಾರಿಯಲ್ಲಿ ಕಂಡುಬರುವ ಪ್ರಾಚೀನ ಚಿತ್ರಗಳು ಅದೇ ರೀತಿ ಸುಮೇರಿಯನ್‌, ಬ್ಯಾಬಿಲೋನಿಯನ್‌, ಅಸ್ಸೀರಿಯನ್‌, ಗ್ರೀಕ್‌, ಪರ್ಷಿಯನ್‌, ಈಜಿಪ್ಟಿಯನ್‌, ರೋಮನ್‌ ಸಂಸ್ಕೃತಿಯಲ್ಲಿ ರಚನೆಯಾದ ಕಲಾಕೃತಿಗಳು, ಗಾಂಧಾರ ಕಲೆ, ಗುಪ್ತರ ಕಲೆ, ರಜಪೂತ ಕಲೆ, ಮೊಗಲ್‌ ಕಲೆ, ದಕ್ಖನಿ ಕಲೆ, ಅಜಂತಾ, ಎಲ್ಲೋರಾ, ಬದಾಮಿ, ಬಾಗ್‌, ಸಿತ್ತನಿವಾಸಲ್, ಲೇಪಾಕ್ಷಿ, ಹಂಪೆ ಮುಂತಾದ ಕಲಾಗಣಿಗಳ ಬಗ್ಗೆ ನಾವು ತಿಳಿದುಕೊಂಡಾಗ ನಮಗೆ ನಮ್ಮ ಪೂರ್ವಜರು ಆ ಕಾಲದಲ್ಲಿ ಈಗಿನಂತೆ ಯಾವುದೇ ಆಧುನಿಕ ಸೌಕರ್ಯಗಳಿಲ್ಲದೆಯೂ ಎಷ್ಟು ಕಷ್ಟಪಟ್ಟು ಕಲಾಕೃತಿಗಳನ್ನು ರಚಿಸಿದ್ದಾರೆ, ಎಂತಹ ಅಲೌಕಿಕ ಸೌಂದರ್ಯವನ್ನು ಅದರೊಳಗೆ ಹೆಣೆದಿದ್ದಾರೆ ಎಂಬ ಅರಿವು ಮೂಡುತ್ತದೆ. ರಾಜರುಗಳ ಕಾಲದ ಶಿಲ್ಪಕಲಾಕುಸುರಿಯ ಭವ್ಯ ವಿಗ್ರಹಗಳು, ದೇವಾಲಯಗಳು, ಅರಮನೆಗಳು, ಸ್ತೂಪಗಳು, ಸ್ತಂಭಗಳು ಶಾಸನಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅವುಗಳನ್ನು ಸದಾ ನೋಡುವ ತವಕ ನಮ್ಮಲ್ಲಿ ಹೆಚ್ಚುತ್ತದೆ. ಅಂತಹ ಕಲಾಕೃತಿ ಗಳನ್ನು-ಕಲಾತಾಣಗಳನ್ನು ಸಂರಕ್ಷಿಸಬೇಕೆಂಬ ಅರಿವು ಮೂಡುತ್ತದೆ.

ಕಲಾಕೃತಿಗಳ ವೈಶಿಷ್ಟ್ಯ : 

ಕಲೆಯ ಪಂಥಗಳಾದ ಎಕ್ಸ್‌ಪ್ರೆಶನಿಸಂ, ರಿಯಲಿಸಂ, ಇಂಪ್ರಶನಿಸಂ, ಕ್ಯೂಬಿಸಂ, ಫಾವಿಸಂ, ಫ್ಯೂಚರಿಸಂ, ಅಬ್‌ ಸ್ಟ್ರಾಕ್ಟ್, ಬೈಜಾಂಟಿನ್‌, ಗೋಥಿಕ್‌ ಮುಂತಾದ ಶೈಲೀಕೃತ ಕಲಾಕೃತಿಗಳ ವೈಶಿಷ್ಟ್ಯಗಳನ್ನು ನಾವು ತಿಳಿದುಕೊಂಡಾಗ ವಿಶ್ವ ಕಲಾ ದಿನದ ಆಚರಣೆ ಪ್ರಾಮುಖ್ಯ ಪಡೆಯುತ್ತದೆ. ಅದೇರೀತಿ ಭಾರತೀಯ ಕಲೆಯ ಸೂಕ್ಷ್ಮ ಕಲಾ ಶೈಲಿಗಳಾದ ಕಾಂಗ್ರಾ ಶೈಲಿ, ತಂಜಾವೂರು ಶೈಲಿ, ಮೈಸೂರು ಶೈಲಿಯ ಉತ್ಕೃಷ್ಠ ಚಿತ್ರಗಳು, ಗ್ರಾಮೀಣ ಜನಪದರ ಶೈಲಿಗಳಾದ ಮಧುಬನಿ, ಪಟ್ಟಾ, ವಾರ್ಲಿ, ಕಾವಿ ಕಲೆ ಮುಂತಾದ ಚಿತ್ರಗಳ ಸೊಗಸನ್ನು ಕಾಣುವ ಮೂಲಕ ನಾವು ವಿಶ್ವ ಕಲಾ ದಿನವನ್ನು ಸಂಭ್ರಮಿಸಬಹುದು.

ಭಾರತ ಸಹಿತ ವಿಶ್ವದ ಪ್ರಸಿದ್ಧ ಕಲಾವಿದರ ಬಗ್ಗೆ ಮತ್ತು ಅವರ ಕಲಾಕೃತಿಗಳ ಬಗ್ಗೆ ನಾವು ಅಧ್ಯಯನ ಮಾಡಿಕೊಂಡಾಗ, ಅದಕ್ಕಾಗಿ ಗ್ಯಾಲರಿಗಳನ್ನು ತೆರೆದಾಗ ವಿಶ್ವದ ಕಲೆಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ. ಹಲವಾರು ಸಮಕಾಲೀನ ಕಲಾವಿದರ ಜತೆಯಲ್ಲಿ  ಅನೇಕ ಸೃಜನಶೀಲ ಕಲಾವಿದರು ಕಲಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇವರೆಲ್ಲರ ಕಲಾ ಸೇವೆ ಮತ್ತು ಪ್ರತಿಭೆಗೆ ಒಂದಿಷ್ಟು ಪ್ರೋತ್ಸಾಹ, ಉತ್ತೇಜನ ನೀಡಿದಲ್ಲಿ ವಿಶ್ವ ಕಲಾ ದಿನಕ್ಕೆ ವಿಶೇಷ ಮೆರುಗು ಬರುತ್ತದೆ.

ಎಲೆ ಮರೆಯ ಕಾಯಿಯಂತೆ ಪ್ರಚಾರ ಬಯಸದೆ ತೆರೆಮರೆಯಲ್ಲಿ ದುಡಿಯುತ್ತಿರುವ ಅನೇಕ ಸೃಜನಶೀಲ ಕಲಾವಿದರು ನಮ್ಮ ನಡುವೆ ಇದ್ದಾರೆ. ಅವರನ್ನು ಗುರುತಿಸಿ ಗೌರವಿಸಿದಾಗ, ಅವರ ಕಲಾಕೃತಿಗಳ ಪ್ರದರ್ಶನ ನಡೆಸಿದಾಗ ಅವರ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಕಲಾಶಿಬಿರ, ಕಲಾಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಿ ಅಭಿನಂದಿಸುವ ಮೂಲಕ ಸ್ಥಳೀಯವಾಗಿ ನಾವು ವಿಶ್ವ ಕಲಾ ದಿನವನ್ನು ಆಚರಿಸಬಹುದಾಗಿದೆ. ಕಲಾಕೃತಿಗಳನ್ನು ಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ನಾವು ಸಾಗೋಣ.

ಡಾ| ಉಪಾಧ್ಯಾಯ ಮೂಡುಬೆಳ್ಳೆ

(ಲೇಖಕರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು )

ಟಾಪ್ ನ್ಯೂಸ್

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-kambala

Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.