ಸ್ತನ್ಯ ಒಂದು ಸಂಪೂರ್ಣ ಶಿಶು ಆಹಾರ; ಆಯುರ್ವೇದ ದೃಷ್ಟಿಕೋನದಲ್ಲಿ ಸ್ತನ್ಯಾಮೃತ

ವಿಶ್ವ ಸ್ತನ್ಯಪಾನ ಸಪ್ತಾಹ

Team Udayavani, Aug 1, 2023, 6:15 AM IST

ಸ್ತನ್ಯ ಒಂದು ಸಂಪೂರ್ಣ ಶಿಶು ಆಹಾರ; ಆಯುರ್ವೇದ ದೃಷ್ಟಿಕೋನದಲ್ಲಿ ಸ್ತನ್ಯಾಮೃತ

ಪ್ರತೀ ವರ್ಷ ಆಗಸ್ಟ್‌ ತಿಂಗಳಿನ ಮೊದಲ ವಾರವನ್ನು ಅಂತಾರಾಷ್ಟ್ರೀಯ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸುವುದು ವಾಡಿಕೆ. ಇಳೆಯ ಬೆಳಕು ಕಂಡ ನವಜಾತ ಶಿಶುವಿನ ಮೊದಲ ಆಹಾರ ತಾಯಿಯ ಎದೆಹಾಲು. ಹಸುಳೆಗೆ ಏನೆಲ್ಲ ಬೇಕೋ, ಯಾವೆಲ್ಲ ಪ್ರಮಾಣದಲ್ಲಿ ಬೇಕೋ ಅವೆಲ್ಲವನ್ನೂ ಹೊಂದಿರುವ ಈ ತಾಯಿ ಹಾಲು ಇದೇ ಕಾರಣಕ್ಕಾಗಿ ಅಮೃತಸಮಾನ, “ದ್ರವರೂಪಿ ಬಂಗಾರ’ ಎಂದೂ ಇದನ್ನು ಕರೆಯಲಾಗುತ್ತದೆ. ಸ್ತನ್ಯಪಾನ ಸಪ್ತಾಹದ ಹಿನ್ನೆಲೆಯಲ್ಲಿ ಎದೆಹಾಲಿನ ಮಹತ್ವವನ್ನು ಮನದಟ್ಟು ಮಾಡಿಸುವ ಲೇಖನ ಸರಣಿ ಇಂದಿನಿಂದ.

ಯಾವುದೇ ನವಜಾತ ಶಿಶುವಿನ ಮೂರು ಮುಖ್ಯ ಆವಶ್ಯಕತೆಗಳೆಂದರೆ ತಾಯಿಯ ಮಡಿಲಿನ ಬಿಸುಪು (ಶಾಖ), ತಾಯಿಯ ತೋಳಿನ ಮಮತೆಯ ಆಸರೆ/ರಕ್ಷಣೆ, ಸ್ತನದಿಂದ ಬರುವ ಅಮೃತ ಸದೃಶ ವಾದ ಸ್ತನ್ಯ/ಪೋಷಣೆ ಇವುಗಳಲ್ಲಿ ಮೊದಲಿನ ಎರಡನ್ನು ಯಾರೂ ನೀಡಬಹುದಾದರೂ ತನ್ನ ಸ್ತನ್ಯದಿಂದ ಪೋಷಣೆ ಮಾಡ ಬಲ್ಲವಳು ತಾಯಿ ಮಾತ್ರ.

ಸ್ತನ್ಯ ಮಗುವಿಗೆ ದೇವರಿಂದ ತಾಯಿಯ ಮೂಲಕ ಬರುವ ಉಡುಗೊರೆ. ಆಗಷ್ಟೇ ಹುಟ್ಟಿದ ಮಗುವಿಗೆ ಬೇಕಾದ ಉಷ್ಣತೆಯಲ್ಲಿ ಉಚಿತ ಪ್ರಮಾಣದಲ್ಲಿ ಬೇಕಾದ ಎಲ್ಲ ಪೌಷ್ಠಿಕಾಂಶ, ರೋಗನಿರೋಧಕ ತಣ್ತೀ, ನೀರು, ಕೊಬ್ಬು, ಪ್ರೊಟೀನ್‌, ಕಾಬೋಹೈಡ್ರೇಟ್‌ಗಳ ಹದವಾದ ಮಿಶ್ರಣವಾದ ಇದು ಯಾವುದೇ ಇನ್ನಿತರ ಪರಿಕರಗಳ ಸಹಾಯವಿಲ್ಲದೆ ನೇರವಾಗಿ ತಾಯಿಯಿಂದ ಮಗುವಿಗೆ ಹರಿಯಬಲ್ಲ ಜೀವನಾಧಾರ. ಹೀಗೆ ಪೊರೆಯಬಲ್ಲ ತಾಯಿ ದೇವರಾ ಗುವುದು ಬಹುಷಃ ಇದೇ ಕಾರಣಕ್ಕಾಗಿಯೋ ಏನೋ…

ಆಯುರ್ವೇದದ ಪ್ರಕಾರ ಗರ್ಭಿಣಿ ಸೇವಿಸುವ ಆಹಾರದ ಒಂದು ಭಾಗ ಗರ್ಭಿಣಿಯ ಸ್ವಶರೀರ ಪೋಷಣೆಗೂ ಕಾರಣವಾಗುತ್ತದೆ. ಗರ್ಭಸ್ಥ ಶಿಶು ಪೋಷಣೆಗೂ ವಿನಿಯೋಗವಾದರೆ ಇನ್ನೊಂದು ಭಾಗ ಮುಂಬರುವ ದಿನಗಳ ಸ್ತನ್ಯದ ತಯಾರಿಗಾಗಿ ಸ್ತನಗಳ ಪೋಷಣೆಗೆ ಬಳಕೆಯಾಗುತ್ತದೆ. ಸದ್ಯ ಪ್ರಸೂತಾ ಸ್ತ್ರೀಯ ಸ್ತನ್ಯಗಳನ್ನು ಪೀಯೂಷ ಎನ್ನಲಾಗಿದ್ದು, ಇದ ರಲ್ಲಿ ದೇಹಪುಷ್ಠಿ ಬಲವರ್ಧನೆಗೆ ಬೇಕಾಗುವ ಪೋಷ ಕಾಂಶಗಳು, ವ್ಯಾಧಿಕ್ಷಮತೆಗೆ-ಹೃದಯ ಪುಷ್ಠಿಗೆ ಬೇಕಾ ಗುವ ರೋಗ ನಿರೋಧಕ ತತ್ತಗಳೂ ಬೆಳವಣಿಗೆಗೆ ಹಾಗೂ ಪೋಷಣೆಗೆ ನೆರವಾಗುವ ಕಾರಕಗಳು ತುಂಬಿರುತ್ತವೆ. ಅನಂತರದ ದಿನಗಳ ಪಕ್ವ ಹಾಲು ಮಧುರ ರಸಾತ್ಮಕವಾಗಿದ್ದು, ಕಷಾಯ ಅನುರಸ, ಶೀತಗುಣ ಹಾಗೂ ಸಿಗ್ಧತೆಯನ್ನು ಹೊಂದಿರುತ್ತದೆ. ಇದನ್ನು ಮೂಗಿನ ರಕ್ತಸ್ರಾವ ಹಾಗೂ ಕಣ್ಣಿನ ಚಿಕ್ಕ ಪುಟ್ಟ ಆಘಾತಗಳಲ್ಲಿ ನಸ್ಯ ಹಾಗೂ ತರ್ಪಣ ರೂಪದಲ್ಲಿಯೂ ಬಳಸಲಾಗುತ್ತದೆ.

ಸ್ತನ್ಯದ ಉತ್ಪತ್ತಿ ಹಾಗೂ ಪೋಷಣೆಯಲ್ಲಿ ತಾಯಿಯ ಆಹಾರ ರಸದ ಪಾಲು ಮಹತ್ವದ್ದಾಗಿರುವುದರಿಂದಲೇ ಬಾಣಂತಿ ಆಹಾರದ ನಿಯಂತ್ರಣ ಹಾಗೂ ಪೋಷಣೆ ಬಾಣಂತನದ ಮುಖ್ಯ ಉದ್ದೇಶವಾಗಿರುತ್ತಿತ್ತು. ಬಾಣಂತಿಗೆ ನೀಡುವ ವಿವಿಧ ಲೇಹ್ಯಗಳು, ಗಂಜಿಗಳು ಹಸಿವೆಯನ್ನು ಉದೀªಪನಗೊಳಿಸುವ ಜತೆಗೆ ಹಾಲಿನ ಗುಣಮಟ್ಟವನ್ನೂ, ಮಗುವಿಗೆ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನೂ ನೀಡುತ್ತಿದ್ದವು. ಆಧುನಿಕ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಕರುಳಿನ ಒಳ್ಳೆಯ ಬ್ಯಾಕೀrರಿಯಾ ಸಮೂಹದ  ಬೆಳವಣಿಗೆಯಲ್ಲಿ ಇದರ ಪಾತ್ರ ಮಹತ್ವದ್ದಾಗಿರುತ್ತದೆ. ತನ್ಮೂಲಕ ಮಕ್ಕಳಿಗೆ ಬರುವ ಅಲರ್ಜಿ, ಅಸ್ತಮಾ, ಮಧುಮೇಹ, ಚಯಾಪಚಯ ಸಂಬಂಧಿ  ವ್ಯಾಧಿಗಳ ಪ್ರತಿರೋಧದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ಸ್ತನ್ಯಪಾನದ ಮೇಲಿರುವ ಮಕ್ಕಳ ವ್ಯಾಧಿಗಳಲ್ಲಿ ಬಾಣಂತಿಗೇ ಔಷಧ ನೀಡಿ ಸರಿ ಪಡಿಸುವ ವಿಧಾನ ಅಯುರ್ವೇದ ದಲ್ಲಿದೆ. ಉತ್ತಮ ಸ್ತನ್ಯದ ಪರೀಕ್ಷಾ ವಿಧಿ, ಸ್ತನ್ಯ ಪರೀಕ್ಷಾ ಆಧಾರದ ಮೇಲೆ ಅಷ್ಟ ಸ್ತನ್ಯ ದೋಷಗಳನ್ನು ಗುರುತಿಸಿ ಅವುಗಳಿಂದ ಮಕ್ಕಳಲ್ಲಿ ಉಂಟಾ ಗುವ ಪರಿಣಾಮಗಳು ಹಾಗೂ ಅದಕ್ಕೆ ಚಿಕಿತ್ಸೆ ನೀಡುವ ವಿಧಾನವೂ ವರ್ಣಿತವಾಗಿದೆ.

ಆಯುರ್ವೇದದಲ್ಲಿ ಧಾತ್ರೀ ಎಂಬ ವಿಶಿಷ್ಠ ಪರಿಕಲ್ಪನೆಯಿದ್ದು, ಇದು ಇತ್ತೀಚೆಗಿನ ದಿನಗಳ ಸ್ತನ್ಯ ಬ್ಯಾಂಕ್‌ನ ಹಳೆಯ ರೂಪ ಎನ್ನುವಂತಿದೆ. ತಾಯಿಯ ಸ್ತನ್ಯದ ಅಭಾವದ ಸಂದರ್ಭದಲ್ಲಿ ಯೋಗ್ಯ ಗುಣಗಳಿರುವ ಸ್ತ್ರೀಯನ್ನು ಪರೀಕ್ಷಿಸಿ ಆಯ್ಕೆಮಾಡಿ ಧಾತ್ರಿ ಎಂದು ಪರಿಗಣಿಸಿ ಸೂಕ್ತ ಆರೈಕೆ ನೀಡಿ ಅವಳಿಂದ ಮಗುವಿಗೆ ಸ್ತನ್ಯಪಾನ ಮಾಡಿಸಲಾಗುತ್ತಿತ್ತು. ಏಕೆಂದರೆ ಸ್ತನ್ಯಕ್ಕೆ ಸ್ತನ್ಯವೇ ಪೂರಕ; ಮತ್ತೂಂದಿಲ್ಲ. ಯಾವುದೇ ಕೃತಕ ಆಹಾರವೂ ಇದಕ್ಕೆ ಸಾಟಿಯಲ್ಲ. ಸ್ತನ್ಯಕ್ಷಯದಂತಹ ಸಂದರ್ಭದಲ್ಲಿಯೂ ಸ್ತನ್ಯ ಜನಕ ಆಹಾರ ಔಷಧಗಳ ವಿಸ್ತೃತ ಉಲ್ಲೇಖ-ಬಳಕೆಯೂ ಆಯುರ್ವೇದದಲ್ಲಿದೆ. ಅದಕ್ಕೆಂದೇ ಕವಿ ಲಕ್ಷ್ಮೀನಾರಾಯಣ ಭಟ್ಟರು ಹೇಳಿದ್ದಾರೆ: ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ… ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ.. ಹಾಲು ಕುಡಿಸಿ ಹೃದಯ ಮಿಡಿಸಿ ಪ್ರೀತಿ ಉಣಿಸಿ ಮನಸಿಗೆ ಬಾಳತೇದು ಮಕ್ಕಳಿಗೆ ಬೆರವಳೆಲ್ಲ ಕನಸಿಗೆ..

ಬಾಣಂತಿ ಆರೈಕೆಯಲ್ಲಿ
ಮೊದಲನೇ ಹತ್ತು ದಿನ
ಬಾಣಂತಿ ಆರೈಕೆಯಲ್ಲಿ ಮೊದಲೇನೇ ಹತ್ತು ದಿನ ಹಸಿವನ್ನು ಉದ್ದೀಪನಗೊಳಿಸಿ ಜೀರ್ಣಕ್ರಿಯೆ ಸರಾಗವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವ ಔಷಧಗಳನ್ನು ಆಯೋಜಿಸಲಾಗಿರುತ್ತದೆ. ಉದಾಹರಣೆಗೆ ಕಾಳಜೀರಿಗೆ ಕಷಾಯ, ಓಮಕಾಳಿನ ಲೇಹ್ಯ, ಶುಂಠಿ ಲೇಹ, ಬೆಳ್ಳುಳ್ಳಿ-ನೀರುಳ್ಳಿ ಲೇಹ ಇತ್ಯಾದಿಗಳು. ಅನಂತರದ 10 ರಿಂದ 15 ದಿನಗಳಲ್ಲಿ ಪ್ರಾಮುಖ್ಯವಾಗಿ ಹಾಲನ್ನು ಹೆಚ್ಚಿಸುವಂತೆ ಹಾಗೂ ಗರ್ಭಿಣಿಗೆ ಪೋಷಣೆ ನೀಡುವಂತೆ ವಿವಿಧ ರೀತಿಯ ಗಂಜಿಗಳನ್ನು ನೀಡಲಾಗುತ್ತದೆ. ಉದಾಹರಣೆಗೆ: ಮೆಂತೆ ಗಂಜಿ, ಶತಪುಷ್ಪ (ಸಾಸಪ್ಪೆ) ಗಂಜಿ, ಸಾಸಿವೆ ಗಂಜಿ ಇತ್ಯಾದಿಗಳು.

ಕೊನೆಯದಾಗಿ ಬಾಣಂತಿಗೆ ಪುಷ್ಠಿ, ಸ್ತನ್ಯಕ್ಕೆ ಅಧಿಕ ಪೋಷಕಾಂಶಗಳನ್ನು ನೀಡುವಂತಹಾ ಒಣಹಣ್ಣು  ಅವುಗಳೆಂದರೆ ಬಾದಾಮಿ, ಗೋಡಂಬಿ, ಖರ್ಜೂರ, ಅಂಜೂರ ಇತ್ಯಾದಿಗಳನ್ನು ತುಪ್ಪ, ಬೆಲ್ಲ, ಕಲ್ಲು ಸಕ್ಕರೆ ಇತ್ಯಾದಿಗಳ ಪಾಕದೊಂದಿಗೆ ಲೇಹ ತಯಾರಿಸಲಾಗುತ್ತದೆ. ಇವೆಲ್ಲವೂ ಬಾಣಂತಿ ಆಹಾರದ ಜತೆಗೆ ಸ್ತನ್ಯದ ಗುಣಮಟ್ಟವನ್ನು ಹಾಗೂ ಪೋಷಕಾಂಶವನ್ನು ವರ್ಧಿಸುವಂತಹವು. ತನ್ಮೂಲಕ ಮಗುವಿನ ಶಾರೀರಿಕ ಆರೋಗ್ಯ ಹಾಗೂ ಬುದ್ಧಿಮತ್ತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಸರಿಯಾಗಿ ವಿಶ್ಲೇಷಿಸಿದರೆ ಇದು ನಮ್ಮ ಪೂರ್ವಜರ ವೈಜ್ಞಾನಿಕವಾದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಸ್ತನ್ಯಪಾನ ಮಗುವಿಗಷ್ಟೆ ಅಲ್ಲ ತಾಯಿಯಲ್ಲೂ ಸ್ತನ ಹಾಗೂ ಗರ್ಭಕೋಶದ ನಿಯಂತ್ರಣ, ಕ್ಯಾನ್ಸರ್‌ ನಿಯಂತ್ರಣಕಾರಕವಾಗಿದ್ದು, ಶರೀರದ ಬೊಜ್ಜು ನಿಯಂತ್ರಣ, ಮಗುವಿನೊಂದಿಗೆ ಉತ್ತಮ ಭಾಂದವ್ಯ ತನ್ಮೂಲಕ ತಾಯಿಯ ಮಾನಸಿಕ ಆರೋಗ್ಯ ಮೇಲೂ ಕೂಡ ಪರಿಣಾಮ ಬೀರಬಲ್ಲುದಾಗಿದೆ.

-ಡಾ| ಮಮತಾ ಕೆ.
ಪ್ರಾಂಶುಪಾಲರು, ಎಸ್‌ಡಿಎಂ ಆಯುರ್ವೇದ ಕಾಲೇಜು, ಉಡುಪಿ

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.