ವಿಶ್ವ ಸ್ತನ್ಯಪಾನ ಸಪ್ತಾಹ- ಸ್ತನ್ಯಪಾನ: ಸುರಕ್ಷತ ಕ್ರಮಗಳ ಪಾಲನೆ ಅವಶ್ಯ
Team Udayavani, Aug 3, 2023, 5:59 AM IST
ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನೂ ಒಳಗೊಂಡಿರುತ್ತದೆ. ಹೀಗಾಗಿ ಮೊದಲ ಆರು ತಿಂಗಳುಗಳವರೆಗೆ ಮಗುವಿಗೆ ಸ್ತನ್ಯಪಾನ ಮಾಡಿಸುವುದು ಅತ್ಯಗತ್ಯ. ಇದೊಂದು ನೈಸರ್ಗಿಕ ಕ್ರಿಯೆಯಾದರೂ ತಾಯಿಯಾದವಳು ಮಗುವಿಗೆ ಎದೆಹಾಲುಣಿಸುವಾಗ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿದೆ. ಇದರಿಂದ ಮಗು ಮತ್ತು ತಾಯಿ ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯ.
ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಸ್ತನ್ಯಪಾನ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿ ಕಾಂಶಗಳು ತಾಯಿಯ ಹಾಲಿನಲ್ಲಿವೆ.
ಪ್ರಸವದ ಅನಂತರದದ ಒಂದು ಗಂಟೆಯೊಳಗೆ ಎದೆ ಹಾಲುಣಿಸಬೇಕು, ಮಗುವಿಗೆ ಆರು ತಿಂಗಳ ಕಾಲ ತಾಯಿಯ ಎದೆಹಾಲು ಮಾತ್ರವೇ ಸಾಕು. ನೀರನ್ನೂ ಕೊಡುವ ಆವಶ್ಯಕತೆ ಇರುವುದಿಲ್ಲ. ಸ್ತನ್ಯಪಾನ ಮಾಡಿದ ಮಕ್ಕಳ ಬುದ್ಧಿಶಕ್ತಿ ಉತ್ತಮವಾಗಿರುತ್ತದೆ. ಬೊಜ್ಜಿನ ಸಮಸ್ಯೆ ಕಡಿಮೆ ಹಾಗೂ ಮುಂದಿನ ದಿನಗಳಲ್ಲಿ ಡಯಾ ಬಿಟಿಸ್‌ನಂತಹ ಕಾಯಿಲೆ ಬರುವ ಸಾಧ್ಯತೆಯೂ ಅಲ್ಪವಾಗಿರುತ್ತದೆ.
ಮಗುವಿಗೆ ಮಾತ್ರವಲ್ಲದೆ ತಾಯಿಗೂ ಕೂಡ ಮಗುವಿಗೆ ಹಾಲುಣಿಸುವುದರಿಂದ ಹಲವು ಪ್ರಯೋಜನಗಳಿವೆ. ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್, ಬೊಜ್ಜಿನ ಸಮಸ್ಯೆಗಳು ಕಡಿಮೆಯಾಗುತ್ತದೆ.
ಸ್ತನ್ಯಪಾನ ನೈಸರ್ಗಿಕ ಕ್ರಿಯೆಯಾದರೂ, ಮೊದಲ ಬಾ ರಿಗೆ ತಾಯಿಯಾದವರು ಎದೆಹಾಲು ಉಣಿಸಲು ಕೆಲವು ಸವಾಲುಗಳನ್ನು ಎದುರಿಸುತ್ತಾರೆ. ಕೆಲವು ಸುರಕ್ಷತೆಯ ಕ್ರಮಗಳನ್ನು ಪಾಲಿಸುವ ಮೂಲಕ ಪರಿಣಾಮಕಾರಿಯಾಗಿ ಸ್ತನ್ಯಪಾನ ಮಾಡಿ ಮಗುವಿಗೂ ಹಾಗೂ ತಾಯಿಗೂ ಅದರ ಪ್ರಯೋಜನಗಳನ್ನು ಪಡೆ ಯುವುದು ಸಾಧ್ಯವಾಗುತ್ತದೆ. ಅಂತಹ ಸುರಕ್ಷತೆಯ ಕ್ರಮಗಳು ಈ ಕೆಳಗಿನಂತಿವೆ.
ತಾಯಿ ಸ್ತನ್ಯಪಾನವನ್ನು ಪ್ರಾರಂಭಿಸುವ ಮೊದಲು ತನ್ನ ಕೈಯನ್ನು ಸೋಪು ಹಾಗೂ ನೀರಿನಿಂದ ಸ್ವತ್ಛ ಗೊಳಿಸಬೇಕು. ಇದರಿಂದ ಮಗುವನ್ನು ಸೋಂಕಿನಿಂದ ರಕ್ಷಿಸಬಹುದು.
ಹಾಲುಣಿಸುವಾಗ ಮೊಲೆಯ ಮೇಲೆ ಮಗುವಿನ ಸರಿ ಯಾದ ಹಿಡಿತ ತುಂಬಾ ಅಗತ್ಯ. ಮೊಲೆ ಚೀಪುವಾಗ ಮೊಲೆ ತೊಟ್ಟಿನ ಸುತ್ತಲಿನ ಕಪ್ಪು ಭಾಗದ ಹೆಚ್ಚಿನ ಅಂಶ ಮಗುವಿನ ಬಾಯಿಯಲ್ಲಿರಬೇಕು. ಇದರಿಂದ ತಾಯಿಗೂ ನೋವಾಗುವುದಿಲ್ಲ ಮತ್ತು ಉತ್ತಮ ರೀತಿ ಯಲ್ಲಿ ಹಾಲು ಮಗುವಿಗೆ ಸಿಗುತ್ತದೆ. ಮಗುವನ್ನು ಅನು ಕೂಲಕರವಾದ ರೀತಿಯಲ್ಲಿ ಹಿಡಿದು ಹಾಲುಣಿಸಬೇಕು. ಇದರಿಂದ ತಾಯಿಗೂ ಸ್ತನ್ಯಪಾನ ಸುಲಭವಾಗುತ್ತದೆ. ಬೆನ್ನು ನೋವು ಮುಂತಾದ ಸಮಸ್ಯೆಗಳು ಉಂಟಾ ಗುವುದಿಲ್ಲ.
ಮಗುವಿನ ದೇಹ ಹಾಗೂ ತಲೆಯನ್ನು ನೇರವಾಗಿ ನಿಮ್ಮ ದೇಹಕ್ಕೆ ತಾಗಿ ಹಿಡಿಯಿರಿ. ಮಗುವಿನ ಮುಖವು ನಿಮ್ಮ ಮೊಲೆಯ ಸಂಪರ್ಕದಲ್ಲಿರಲಿ. ಮಗು ವಿನ ಬಾಯಿಯು ಅಗಲ ವಾಗಿ ತೆರೆದಿರಲಿ. ಮೊಲೆಯ ತೊಟ್ಟು ಹಾಗೂ ಸುತ್ತಲಿನ ಕಪ್ಪು ಭಾಗ ಮಗುವಿನ ಬಾಯಿಯಲ್ಲಿರಲಿ. ಮಗುವಿನ ಗದ್ದವು ಮೊಲೆಗೆ ತಗಲಿರಲಿ. ಇಂತಹ ಹಿಡಿತದಿಂದ ಸ್ತನ್ಯಪಾನವು ಸಮರ್ಪಕವಾಗುತ್ತದೆ.
ಸ್ತನ್ಯಪಾನ ನಿಮಗೂ ನಿಮ್ಮ ನವಜಾತ ಶಿಶುವಿಗೂ ಹೊ ಸತು. ಕೆಲವೊಂದು ತಾಯಂದಿರು ಹಾಗೂ ಶಿಶುಗಳಿಗೆ ಇದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿ ಯಬಹುದು. ಅಂತಹ ಸಮಯದಲ್ಲಿ ತಾಳ್ಮೆಯಿಂದ ಇರುವುದು ಮುಖ್ಯ. ತಾಯಂದಿರು ಒತ್ತಡ ಅನು ಭವಿಸಿದರೆ ಎದೆಹಾಲುಣಿಸುವುದು ಕಷ್ಟಕರ ವಾಗಬಹುದು. ಸಮಾಧಾನದಿಂದ ಪುನಃ ಪ್ರಯತ್ನಿ ಸುವುದರಿಂದ ಎದೆಹಾಲುಣಿಸುವ ಕ್ರಿಯೆ ಸಮರ್ಪ ಕವಾಗಬಲ್ಲದು.
ತಾಯಿಗೆ ಶೀತ ಕೆಮ್ಮು, ಜ್ವರ ಮುಂತಾದ ಆರೋಗ್ಯ ಸಮಸ್ಯೆಗಳಿದ್ದರೆ ಎದೆ ಹಾಲು ಣಿಸುವುದನ್ನು ನಿಲ್ಲಿಸಬೇಡಿ. ತಾಯಿ ಯು ಮಾಸ್ಕ್ ಧರಿಸುವುದು, ಕೈಯ ನ್ನು ಸ್ವತ್ಛವಾಗಿ ತೊಳೆ ಯುವುದು ಮುಂತಾದ ಮುಂ ಜಾಗ್ರತ ಕ್ರಮಗಳನ್ನು ಪಾಲಿಸಿ ಕೊಂಡು ಸ್ತನ್ಯ ಪಾನ ಮಾಡಿ ಸಬಹುದು.
ಮಗುವಿನ ಹಾಲುಣಿಸಿದ ಅನಂತರ ತೇಗು ತರಿಸುವುದು ತುಂಬಾ ಅಗತ್ಯ. ಹಾಲುಣಿಸುವಾಗ ಮಗುವಿನ ಹೊಟ್ಟೆಗೆ ಗಾಳಿಯೂ ಹೋಗುತ್ತದೆ. ತೇಗು ತರಿಸದಿದ್ದರೆ ವಾಂತಿ, ಹೊಟ್ಟೆನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.
ಮಲಗಿ ಎದೆ ಹಾಲುಣಿಸಿದರೆ ಕೆಲವೊಮ್ಮೆ ಶ್ವಾಸಕೋಶಕ್ಕೆ ಹೋಗಿ ಮಗುವಿನ ಅಪಾಯ ಉಂಟಾಗುತ್ತದೆ. ಆದ್ದರಿಂದ ಮಲಗಿ ಹಾಲುಣಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
ಒಂದು ಮೊಲೆ ಹಾಲನ್ನು ಮಗು ಸಂಪೂರ್ಣವಾಗಿ ಕುಡಿದ ಅನಂತರ ಇನ್ನೊಂದು ಮೊಲೆಯನ್ನು ನೀಡಬೇಕು. ಕೊನೆಯಲ್ಲಿ ಬರುವ ಹಾಲು ಹೈಂಡ್ ಮಿಲ್ಕ್ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಮಗುವಿಗೆ ಹಸಿವಾಗಿರುವುದನ್ನು ಗುರುತಿಸಿ ಸ್ತನ್ಯಪಾನ ಮಾಡಬೇಕು. ಇದನ್ನು ಡಿಮಾಂಡ್ ಫೀಡ್ ಎನ್ನುತ್ತಾರೆ.
ಪಾಸಿಫೈಯರ್ ಹಾಗೂ ಫೀಡಿಂಗ್ ಬಾಟಲ್‌ಗಳನ್ನು ಉಪಯೋಗಿಸಬಾರದು. ಇದರಿಂದ ಮೊಲೆತೊಟ್ಟಿನ ಬಗ್ಗೆ ಗೊಂದಲ (ನಿಪ್ಪಲ್ ಕನ್‌ಫ್ಯೂಷನ್)ಉಂಟಾಗುತ್ತದೆ.
ತಾಯಿ ಕಾಟನ್ ಉಡುಪುಗಳನ್ನು ಧರಿಸಬೇಕು. ಮೊಲೆ ತೊಟ್ಟನ್ನು ಬಿಸಿನೀರಿನಿಂದ ತೊಳೆದು ಸ್ವತ್ಛ ಮಾಡಬೇಕು. ಪ್ರತೀ ಬಾರಿ ಹಾಲುಣಿಸುವಾಗ ಹೀಗೆ ಮಾಡುವ ಅಗತ್ಯವಿಲ್ಲ. ಲೋಶನ್ ಮತ್ತು ಕ್ರೀಮ್‌ಗಳನ್ನು ಹಚ್ಚುವ ಅಗತ್ಯವಿಲ್ಲ. ತಾಯಿ ಆರೋಗ್ಯಕರ, ಪೋಷಕಾಂಶ ಭರಿತ ಆಹಾರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು. ತಾಯಿ ಅಪಸ್ಮಾರ, ಮಾನಸಿಕ ಕಾಯಿಲೆಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಸ್ತನ್ಯಪಾನದ ಕುರಿತು ವೈದ್ಯರ ಸಲಹೆ ಪಡೆಯಬೇಕು.
ಈ ಸಲಹೆಗಳನ್ನು ಗಮನದಲ್ಲಿರಿಸಿದರೆ ತಾಯಿ ಮತ್ತು ಮಗುವಿಗೆ ಸ್ತನ್ಯಪಾನವು ಒಳ್ಳೆಯ ಅನುಭವವಾಗಿ ತಾಯಿಗೂ ಹಾಗೂ ಮಗುವಿಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ಸಹಾಯ ಮಾಡುತ್ತದೆ.
ಎದೆಹಾಲು ಉಣಿಸುವಾಗ ತೊಂದರೆಗಳು ಕಂಡು ಬಂದರೆ ವೈದ್ಯರು ಅಥವಾ ಆರೋಗ್ಯ ಸಿಬಂದಿಯ ಸಲಹೆ ಪಡೆಯಿರಿ.
ಡಾ| ಸುಚೇತಾ ಎಸ್.ರಾವ್, ಪ್ರೊಫೆಸರ್ ಆ್ಯಂಡ್ ಹೆಡ್ ಆಫ್ ಪೀಡಿಯಾಟ್ರಿಕ್ಸ್ ಡಿಪಾರ್ಟ್‌ಮೆಂಟ್, ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.