ಡಿಜಿಟಲ್‌ ಯುಗದಲ್ಲಿ ಇರಲಿ ಇಮ್ಮಡಿ ಗ್ರಾಹಕ ಜಾಗರೂಕತೆ


Team Udayavani, Mar 15, 2022, 6:10 AM IST

ಡಿಜಿಟಲ್‌ ಯುಗದಲ್ಲಿ ಇರಲಿ ಇಮ್ಮಡಿ ಗ್ರಾಹಕ ಜಾಗರೂಕತೆ

ಪ್ರತೀ ವರ್ಷ ಮಾರ್ಚ್‌ 15ರಂದು ವಿಶ್ವ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಯಾ ಕಾಲಮಾನದ ಸ್ಥಿತಿಗತಿಗನುಸಾರವಾಗಿ ಪ್ರತೀ ವರ್ಷ ಒಂದೊಂದು ಧ್ಯೇಯ ವಾಕ್ಯ(ಥೀಮ್‌) ದೊಂದಿಗೆ ಆ ವಿಷಯಕ್ಕೆ ಸಂಬಂಧಿಸಿ ಜಗತ್ತಿನಾದ್ಯಂತದ ಜನರಿಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. Fair Digital Finance (ನ್ಯಾಯಯುತ ತಂತ್ರಾಂಶ ಆರ್ಥಿಕತೆ) ಈ ಬಾರಿಯ ಥೀಮ್‌ ಆಗಿದೆ.

ಬದಲಾವಣೆ ಎಂಬುದು ಈ ಜಗದ ನಿಯಮ. ಹಿಂದೆ ಇದ್ದುದು ನಿನ್ನೆ ಇರಲಿಲ್ಲ. ನಿನ್ನೆ ಇದ್ದುದು ಇಂದು ನಡೆಯುವುದಿಲ್ಲ. ನಾಳೆ ಏನಾಗುತ್ತದೋ ಆ ದೇವರೇ ಬಲ್ಲ. ಕಲಿಯುಗದಲ್ಲೊಂದು ಶಿಲಾಯುಗ, ಶಿಲಾಯುಗವನ್ನೂ ಹಿಂದಿಕ್ಕಿ ಬಂದುದೇ ಲೋಹ ಯುಗ. ಕ್ರಮೇಣ ಲೋಹ ಯುಗವೂ ಮರೆಯಾಗಿ ಮೆರೆದದ್ದೇ ಪ್ಲಾಸ್ಟಿಕ್‌ ಯುಗ. ಪ್ಲಾಸ್ಟಿಕ್‌ ಯುಗದಲ್ಲಿ ಪರಿಸರಕ್ಕೆ ನಿರಂತರ ಹಾನಿಯಾಗುತ್ತಿರುವುದನ್ನು ಗಮನಿಸಿದ ಮಾನವ ಅದಕ್ಕೂ ತಿಲಾಂಜಲಿಯನ್ನಿತ್ತು ಬರಮಾಡಿಕೊಂಡುದೇ ಡಿಜಿಟಲ್‌ ಯುಗ.

ಈಗ ಡಿಜಿಟಲಿನ ಕಾರುಬಾರಿಗೆ ಜನ ಮಾರು ಹೋಗಿದ್ದಾರೆ. ಡಿಜಿಟಲ್‌ ಅಥವಾ ತಂತ್ರಾಂಶಕ್ಕೆ ನಾವು ಒಗ್ಗಿಕೊಂಡೂ ಆಗಿದೆ. ತಂತ್ರಾಂಶದ ಹತ್ತು ಹಲವು ಪ್ರಯೋಜನಗಳನ್ನು ನಾವು ಕಂಡುಕೊಂಡಿದ್ದೇವೆ. ಇದರ ಜತೆಜತೆಗೆ ಹೊಸ ಹೊಸ ತಂತ್ರಾಂಶದಲ್ಲಿ ಗ್ರಾಹಕರನ್ನು ಮೋಸ ಮಾಡುವುದು ಕೂಡ ಆಗಾಗ್ಗೆ ಸಂಭವಿಸುತ್ತಿರುತ್ತದೆ.

ಪ್ರಾರಂಭದಲ್ಲಿ ಈ ತಂತ್ರಾಂಶದ ಯಂತ್ರಗಳನ್ನು ಜನ ಬೆರಗುಗಣ್ಣಿನಲ್ಲಿ, ಸೋಜಿಗದ ದೃಷ್ಟಿಯಲ್ಲಿ ನೋಡುತ್ತಿದ್ದರೆ ಅನಂತರದ ದಿನಗಳಲ್ಲಿ ಇವು, ಮುಖ್ಯವಾಗಿ ಸ್ಮಾರ್ಟ್‌ ಫೋನುಗಳು ನಮ್ಮ ಪಾದರಕ್ಷೆಯಷ್ಟೇ ಸಲಿಸಾಗಿ ಉಪಯೋಗಿ ವಸ್ತುವಾಗಿ ಮೆರೆದಾಡುತ್ತಿವೆ.

ತಂತ್ರಾಂಶವೇ ಸಾರಥಿ: ಭವಿಷ್ಯತ್ತಿನಲ್ಲಿ ಜಗತ್ತೆಂಬ ರಥದ ಸಾರಥಿ ತಂತ್ರಾಂಶ. ಅಷ್ಟರಮಟ್ಟಿಗೆ ಡಿಜಿಟಲ್‌ ಬೆಳೆದಿದೆ. ಸುಖದ ಆಶೆಯೇ ಬೇಕುಗಳ ಮೂಲ. ಬೇಕುಗಳ ತೂಕವೇ ಹೊಸ ಹೊಸ ವಸ್ತುಗಳ ಉತ್ಪಾದನೆಗೆ ಪ್ರೇರಕ, ಸೇವೆಗಳ ವಿವಿಧತೆಯ ಮೂಲ ಕಾರಣ. ಆದಾಯದ ಹೆಚ್ಚಳ ಗಳಿಕೆಯಿಂದಾದರೆ, ಉಳಿಕೆ ಸಂಪತ್ತನ್ನು ಸೃಷ್ಟಿ ಮಾಡುತ್ತದೆ. ಮಾರುಕಟ್ಟೆ ವಿಸ್ತಾರವಾಗಿ, ದೇಶಗಳ ಸರಹದ್ದು ದಾಟಿ ವ್ಯವಹಾರ ದಾಪುಗಾಲಿಡುತ್ತಿದೆ. ಸಾಂಪ್ರದಾಯಿಕ “ಲೇನಾದೇನಾ’ ಕ್ರಮದಿಂದ ಅಗಾಧ ಪ್ರಮಾಣದ ವ್ಯವಹಾರ ಕಷ್ಟ ಸಾಧ್ಯ. ತಂತ್ರಾಂಶದ ಯಂತ್ರಗಳು ವೇಗ ಕೊಡುತ್ತವೆ. ಪಾರದರ್ಶಕತೆ, ವಿಷಯ ಸಂಗ್ರಹ, ವಿಷಯ ವಿಶ್ಲೇಷಣೆಗಳನ್ನು ಕ್ಷಣ ಮಾತ್ರದಲ್ಲಿ ಮಾಡಿಕೊಡುತ್ತದೆ.

ಭಾರತದಲ್ಲಿ ಇದೆಲ್ಲ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದೆ ಎಂದರೆ ಇದಕ್ಕೆ ಸರಕಾರದ ಪ್ರೋತ್ಸಾಹವೇ ಕಾರಣ. ವಿದೇಶೀ ಬಂಡವಾಳದ ಆಕರ್ಷಣೆಗೆ ನಮ್ಮ ತಂತ್ರಾಂಶದ ಗುಣಮಟ್ಟ ಕೂಡ ಕಾರಣ. ತರಂಗ ಜಾಲ, ವೈಫೈ, ನೆಟ್‌ವರ್ಕ್‌ ಇವೆಲ್ಲ ಸರಿಯಾಗಿ ನಿರಂತರ ನಡೆಯಬೇಕು. ಪ್ರಾರಂಭದಲ್ಲಿ ಡಿಜಿಟಲ್‌ ಮೂಲಕ ವ್ಯವಹರಿಸುವವರಿಗೆ, ಪ್ರೋತ್ಸಾಹ ರೂಪವಾಗಿ ರಿಯಾಯಿತಿ ದರದಲ್ಲಿ ಕೊಟ್ಟು, ಅನಂತರದ ದಿನಗಳಲ್ಲಿ ಸರಕಾರ ತನ್ನ ಎಲ್ಲ ಆಡಳಿತಾತ್ಮಕ ವ್ಯವಹಾರಗಳನ್ನು ಡಿಜಿಟಲಿನ ಮೂಲಕವೇ ಮಾಡತೊಡಗಿದೆ. ಪ್ರಾಥಮಿಕ ಆವಶ್ಯಕತೆಯಾಗಿ ಪ್ರತಿಯೊಬ್ಬರೂ ಬ್ಯಾಂಕ್‌ ಖಾತೆ ಹೊಂದಿರಬೇಕು. ಸರಕಾರ ಕೊಡಮಾಡುವ ಎಲ್ಲ ಸವಲತ್ತುಗಳು, ಅನುದಾನಗಳು, ಪಗಾರ ನೇರ ಬ್ಯಾಂಕ್‌ ಖಾತೆಗೆ ಹೋಗುವಂತೆ ನೋಡಿಕೊಂಡಿತು. ಇದರಿಂದ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಾಯಿತು. ಹೊಸ ಹೊಸ ಶಬ್ದಗಳು ಹುಟ್ಟಿಕೊಂಡವು. ಇ-ಬ್ಯಾಂಕಿಂಗ್‌, ಮೊಬೈಲ್‌ ಫೈನಾನ್ಸಿಯಲ್‌ ಸರ್ವಿಸ್‌, ಮೊಬೈಲ್‌ ಪೇಮೆಂಟ್‌, ಮೊಬೈಲ್‌ ಮನಿ, ಮೊಬೈಲ್‌ ಇನ್ಶೂರೆನ್ಸ್‌, ಮೊಬೈಲ್‌ ಕ್ರೆಡಿಟ್‌, ಮೊಬೈಲ್‌ ಸೇವಿಂಗ್ಸ್‌, ಎಲೆಕ್ಟ್ರಾನಿಕ್‌ ಮನಿ, ಎಟಿಎಂ, ಕ್ರೆಡಿಟ್‌ ಕಾರ್ಡ್‌- ಇನ್ನೂ ಹಲವಾರು ಡಿಜಿಟಲ್‌ ವ್ಯವಹಾರದಲ್ಲಿ ಸ್ಪರ್ಧೆ ಬೇಕು. ಸ್ಪರ್ಧೆ ಜೀವಾಳ, ಸ್ಪರ್ಧೆ ಬೆಳವಣಿಗೆಗೆ ಪ್ರೇರಕ.

ಸೇವೆಗಳಲ್ಲಿ ವೈವಿಧ್ಯ, ಗುಣಮಟ್ಟ, ಸುರಕ್ಷೆ, ವೇಗ, ವಿಂಗಡನೆ, ಸರಳ, ನಂಬಿಕೆಗೆ ಅರ್ಹ, ಸ್ವೀಕಾರಾರ್ಹವಾಗಿರಬೇಕು. ಆದರೆ ಇಲ್ಲಿಯೂ ವಂಚಕರು ನುಗ್ಗಲಾರಂಭಿಸಿದ್ದಾರೆ. ಇತ್ತೀಚೆಗಂತೂ ಪ್ರತಿನಿತ್ಯ ಎಂಬಂತೆ ಗ್ರಾಹಕರು ವಂಚನೆಗೊಳಗಾಗುತ್ತಿರುವುದು ಬಹಿರಂಗವಾಗುತ್ತಿದೆ. ನಮಗೆ ಗೊತ್ತಾಗದೆ, ನಾವು ಸಂಪಾದಿಸಿದ ಕಷ್ಟದ ಹಣ ಪರಭಾರೆ ಆಗುವುದೂ ಇದೆ. ನಮ್ಮ ಅಜಾಗ್ರತೆ, ಅತಿನಂಬಿಕೆ, ಅಹಂಕಾರಗಳಿಂದಲೂ ನಷ್ಟ ಬರಬಹುದು. ಜನರಲ್ಲಿ ಭಯ, ಅವಿಶ್ವಾಸ, ಅಪನಂಬಿಕೆ ಬರುವ ಮೊದಲೇ ಆಡಳಿತ ಸುರಕ್ಷೆಯತ್ತ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ತಪ್ಪಿತಸ್ಥರಿಗೆ ಕಠಿನ ಶಿಕ್ಷೆಯ ಭಯ ಬೇಕು. ಅಂತಾರಾಜ್ಯ ಕಳ್ಳತನವಲ್ಲದೆ ಅಂತಾರಾಷ್ಟ್ರೀಯವಾಗಿಯೂ ಕಳ್ಳತನವಾಗುವುದು ಇದೆ. ಈ ದಿಸೆಯಲ್ಲಿ ದೇಶ ದೇಶಗಳಲ್ಲಿ ಸುರಕ್ಷೆಯ ವಿಷಯ ಸಮನ್ವಯ, ಒಪ್ಪಂದ, ಸಹಕಾರ ಬೇಕಾಗುತ್ತದೆ.

ಆಗಬೇಕಾದ್ದು ಏನು?
-ಯೋಗ್ಯ, ನ್ಯಾಯಬದ್ಧ ತಂತ್ರಾಂಶ ಆರ್ಥಿಕತೆ ಸ್ಥಿರಗೊಳ್ಳಬೇಕಾದರೆ ಇನ್ನಷ್ಟು ಕೆಲಸಗಳನ್ನು ಕೂಡಲೇ ಮಾಡಬೇಕಾಗಿದೆ.
-ಪ್ರತೀ ಬ್ಯಾಂಕ್‌ ಮತ್ತು ಇತರ ಹಣಕಾಸಿನ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಡಿಜಿಟಲ್‌ ಉಪಯೋಗದ ಬಗ್ಗೆ ಕಾರ್ಯಾಗಾರಗಳನ್ನು ನಡೆಸಿ, ಅವರನ್ನು ಶಕ್ತಿವಂತರನ್ನಾಗಿ ಮಾಡಬೇಕು. ಪರಿಜ್ಞಾನವಂತರನ್ನಾಗಿ ಮಾಡಬೇಕು.
-ಬ್ಯಾಂಕ್‌ಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಮೋಸದ ವಿಶ್ಲೇಷಣೆ ಮತ್ತು ಪರಿಶೀಲನೆಯ ಕೆಲಸ ಬ್ಯಾಂಕಿನ ಜವಾಬ್ದಾರಿ. ಗ್ರಾಹರಿಗೆ “ಎಟಿಎಂ ಪಿನ್‌/ ಪಾಸ್‌ವರ್ಡ್‌ ಇತರರಿಗೆ ಕೊಟ್ಟಿದ್ದೀರಿ’, “ಒಟಿಪಿ ಕನ್ಫರ್ಮ್ ಮಾಡಿದ್ದೀರಿ’ ಎಂಬ ಉತ್ತರ ನೀಡಿ ಅಸಹಾಯಕತೆ ತೋರಿಸಬಾರದು, ಜಾರಿಕೊಳ್ಳಬಾರದು.
-ಹಣದ ವಲಸೆ ನಿಚ್ಚಳವಾಗಿ ಬ್ಯಾಂಕ್‌ಗೆ ಗೊತ್ತಾಗುತ್ತದೆ. ಯಾವ/ಯಾರ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿ ಕೂಡ ಲಭ್ಯ. ಇಂದು ಗ್ರಾಹಕ ಕೆವೈಸಿ ಮಾತ್ರವಲ್ಲದೆ ಫೋಟೋ ಕೂಡ ಕೊಡಬೇಕಾಗುತ್ತದೆ. ಹುಡುಕಾಟ ಕಷ್ಟವಲ್ಲ.
-ಡಿಜಿಟಲ್‌ ಕ್ರೆಡಿಟ್‌ಗೆ 24 ತಾಸುಗಳ ಕಾಲ. ವಿಶ್ರಾಂತಿ ಸಮಯ ಎಂದು ಹಣ ತೆಗೆಯಲು ಬಿಡಬಾರದು. ಮೋಸಗೊಂಡ ಗ್ರಾಹಕ ಕೂಡ ಜಾಗರೂಕವಾಗಿದ್ದು, ಮೋಸವನ್ನು ಕೂಡಲೇ ಬ್ಯಾಂಕ್‌ಗೆ ತಿಳಿಸಬೇಕು. 24 ತಾಸುಗಳ ಒಳಗೆ ವಾಪಸ್‌ ಪಡೆಯುವ ಪ್ರಯತ್ನ ಮಾಡಬಹುದು, ಇದು ಸಾಧ್ಯವೆಂದು ಅನುಭವ ತಿಳಿಸಿದೆ.
-ವಿದೇಶೀ ಕಂಪೆನಿಗಳು ತಮ್ಮ ವಶಕ್ಕೆ ಬಂದ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಯಾವ ಕಾರಣಕ್ಕೂ ಬಹಿರಂಗಪಡಿಸಬಾರದು. ಮಾಹಿತಿ ಸಂಗ್ರಹ, ಸುರಕ್ಷೆ ದೊಡ್ಡ ಜವಾಬ್ದಾರಿ.
-ಖಾತೆದಾರ ತನ್ನ ಎಟಿಎಂ ಕಾರ್ಡು/ಕ್ರೆಡಿಟ್‌ ಕಾರ್ಡ್‌/ಡೆಬಿಟ್‌ ಕಾರ್ಡ್‌/ಆಧಾರ್‌/ಪಾನ್‌ಕಾರ್ಡ್‌/ಬ್ಯಾಂಕ್‌ ಖಾತೆ ಸಂಖ್ಯೆ ಇತ್ಯಾದಿಗಳನ್ನು ಗೌಪ್ಯವಾಗಿಡಬೇಕು.
-ಪೂರ್ತಿ ತಂತ್ರಾಂಶ ವ್ಯವಸ್ಥೆಗೆ ರಕ್ಷಣ ಕವಚ ಬೇಕು. ಅಪಾಯ ಕಡಿಮೆ ಮಾಡಬೇಕು. ಎಟಿಎಂ ಆಪರೇಶನ್‌ನಲ್ಲಿ ಜಾಗರೂಕತೆ ಇರಲಿ, ಅತಿನಂಬಿಕೆ ಬೇಡ. ಪಾಸ್‌ವರ್ಡ್‌/ಪಿನ್‌ ಆಗಾಗ ಬದಲಾಯಿಸುವುದು ಉತ್ತಮ.
-ಎಟಿಎಂ ಸಹಿತ ಮುಖ್ಯವಾಗಿ ಎಲ್ಲ ಆರ್ಥಿಕ ವ್ಯವಹಾರಗಳಲ್ಲಿ ಒಟಿಪಿ ಇಲ್ಲದೆ ಮುಂದುವರಿಯುವುದಕ್ಕೆ ಅವಕಾಶ ಇಲ್ಲದಂತೆ ವ್ಯವಸ್ಥೆ ರೂಪಿಸುವುದು ಉತ್ತಮ. ಇದರಿಂದ ಎಷ್ಟೋ ಲಪಟಾವಣೆಯನ್ನು ತಡೆಯಲು ಸಾಧ್ಯವಿದೆ.
ಕರ್ನಾಟಕದ ಸ್ಥಿತಿಗತಿ: “ಕರ್ನಾಟಕದಲ್ಲಿ ಡಿಜಿಟಲ್‌ ಚರಿತ್ರೆ ಹೇಗಿದೆ’ ಎಂದರೆ ಉತ್ತರ ಆಶಾದಾಯಕವಲ್ಲ. ಅನ್ಯರಾಜ್ಯಗಳವರು ಕರ್ನಾಟಕದ ಸಭ್ಯ, ವಿದ್ಯಾವಂತ, ಸುಸಂಸ್ಕೃತ ಜನರನ್ನು ಮೋಸ ಮಾಡುವುದನ್ನೂ ಕಂಡಿದ್ದೇವೆ. ಈಗಲೂ ವರ್ಷಕ್ಕೆ ಸುಮಾರು 150 ಕೋಟಿ ರೂ. ಕಳ್ಳರ ಪಾಲು ಆಗುತ್ತಿದೆ. ರಾಜ್ಯದಲ್ಲಿ 46 ಸಿಇಎನ್‌ ಘಟಕಗಳಿವೆ. ದೂರುಗಳ ಮೌಲ್ಯ 435 ಕೋ.ರೂ. 3 ವರ್ಷಗಳಲ್ಲಿ ವಸೂಲಿ ಆದದ್ದು 55 ಕೋ.ರೂ. ಮೋಸ ಮಾಡುವ ಅನೇಕರು ಪದವೀಧರರು, ವಿದ್ಯಾವಂತರು; ತಪ್ಪಿಸಿಕೊಳ್ಳುತ್ತಾರೆ. ಆಫ್ರಿಕಾ, ದ. ಅಮೆರಿಕ ಗಳಿಂದಲೂ ಮೋಸದ ಜಾಲವಿದೆ. ಜಾಗರೂಕತೆ ಇರಲಿ.

ಆದ್ದರಿಂದ ತಂತ್ರಾಂಶ ಸುರಕ್ಷಿತವಾಗಿರಬೇಕು, ಸುಲಭವಾಗಿರ ಬೇಕು. ಯೋಗ್ಯ ಆರ್ಥಿಕತೆಗೆ ಡಿಜಿಟಲ್‌ ತಂತ್ರಾಂಶ ಅತೀ ಅಗತ್ಯ. ಬೇಡ ಎನ್ನುವಂತಿಲ್ಲ. ಆದ್ದರಿಂದಲೇ ಈ ವರ್ಷ ಕನ್ಸೂಮರ್‌ ಇಂಟರ್‌ನ್ಯಾಶನಲ್‌ನವರು ವಿಶೇಷ ಘೋಷಣೆಯನ್ನು ಹೊರಡಿಸಿದ್ದಾರೆ- Fair Digital Finance (ನ್ಯಾಯಯುತ ತಂತ್ರಾಂಶ ಆರ್ಥಿಕತೆ). ಈ ಘೋಷಣೆಯ ಅರ್ಥ ತಿಳಿದುಕೊಂಡು,ನಮ್ಮ ವ್ಯವಹಾರಗಳಲ್ಲಿ ಜಾಗರೂಕತೆ ವಹಿಸಬೇಕಾಗುತ್ತದೆ. ಇದುವೇ ಗ್ರಾಹಕ ಜಾಗೃತಿ.

ಲಾಕ್‌ಡೌನ್‌ ಕಲಿಸಿದ ಪಾಠ
ಸರಕಾರದ ಕ್ರಮವಾಗಿ ಕೇಂದ್ರ ಬಜೆಟ್‌ನಲ್ಲಿ ಈ ವರ್ಷ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವನೆ ಬಂದಿದೆ. ಇದು ಅಗತ್ಯ. ಶಿಕ್ಷಣ/ಪರಿಜ್ಞಾನದ ಶಕ್ತಿ ಜನರ ಕೈಯಲ್ಲಿರಬೇಕು. ಕೋವಿಡ್‌ -19 ಕಾಲದಲ್ಲಿ ನಮ್ಮ ನೆರವಿಗೆ ಬಂದುದೇ ತಂತ್ರಾಂಶ. ಸಿಬಂದಿ, ಮನೆಯಿಂದಲೇ ಕೆಲಸ ಮಾಡಿತೊಡಗಿದರು. ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ ಮೂಲಕ ಶಿಕ್ಷಣ ಮುಂದುವರಿಸಿದರು. ಲಾಕ್‌ ಡೌನ್‌ ಸಂದರ್ಭದಲ್ಲಿ ಎಲ್ಲವೂ ಆನ್‌ಲೈನ್‌ ಮೂಲಕ ಸಾಧ್ಯ ಎಂದು ನಾವು ಹೆಮ್ಮೆಯಿಂದ ಹೇಳಿಕೊಂಡೆವು. ಇದರಿಂದಾಗಿಯೇ ಭಾರತದಲ್ಲಿ ಡಿಜಿಟಲ್‌ ಸಾಕ್ಷರತೆ 2014ರಲ್ಲಿ ಶೇ. 57 ಇದ್ದುದು 2017ರಲ್ಲಿ ಶೇ. 70ಕ್ಕೆ ಬೆಳೆಯಿತು. ಹುಬ್ಬಳ್ಳಿಯಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ ತೆರೆದು ಇದರಲ್ಲಿ ಡಿಜಿಟಲ್‌ ಫೈನಾನ್ಸ್‌ ವಿಭಾಗ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮೋಸ ತಡೆಯಲು ಡಾಟಾ ಸೆಕ್ಯೂರಿಟಿ ಕೌನ್ಸಿಲ್‌ ಪ್ರಾರಂಭವಾಯಿತು. ಇವೆಲ್ಲವುಗಳ ಉದ್ದೇಶ ಗ್ರಾಹಕರ ಹಿತ ಕಾಯುವುದೇ ಆಗಿದೆ.

-ಎ. ಪಿ. ಕೊಡಂಚ

ಟಾಪ್ ನ್ಯೂಸ್

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amber-1

ಬೆಲೆ ಬಾಳುವ ಅಪರೂಪದ ಅಂಬರ್‌ ಗ್ರೀಸ್‌ನ ಚಿದಂಬರ ರಹಸ್ಯವೇನು ಗೊತ್ತಾ?

China

ಚೀನ ಸರಕಾರದ ವಿರುದ್ಧ ಸೊಲ್ಲೆತ್ತಿದರೆ ಮಾಯಾ

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Elon-Musk

America: ಎಚ್‌-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.