ಜೀವಸಂಕುಲದ ಉಳಿವಿಗೆ ಓಝೋನ್ ಪದರ ರಕ್ಷಿಸೋಣ
Team Udayavani, Sep 16, 2021, 6:20 AM IST
ವಾಯುಮಂಡಲದಲ್ಲಿರುವ “ಓಝೋನ್ ಪದರ’ ಭೂಮಿಯಲ್ಲಿನ ಸಕಲ ಜೀವರಾಶಿಗಳ ಸಂರಕ್ಷಕ ಎಂದೇ ಕರೆಯಲ್ಪಡುತ್ತದೆ.
ವಾಯುಮಂಡಲದಲ್ಲಿ ಈ ರಕ್ಷಣಕವಚ ಇಲ್ಲದೇ ಹೋಗಿದ್ದಲ್ಲಿ ಸೂರ್ಯನಿಂದ ಹೊರಸೂಸಲ್ಪಡುವ ಅತಿನೇರಳೆ ಕಿರಣಗಳಿಗೆ ಎಲ್ಲ ಜೀವಸಂಕುಲ ಬಲಿಯಾಗಬೇಕಿತ್ತು. ಆದರೆ ಪ್ರಕೃತಿದತ್ತವಾಗಿ ಈ ಪದರ ಮಹಾಕಂಟಕದಿಂದ ಜೀವರಾಶಿಯನ್ನು ಪಾರುಮಾಡಿದೆ. ಆದರೆ ಜಾಗತೀಕರಣ, ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ಪ್ರಕೃತಿಯ ಮೇಲೆ ನಿರಂತರವಾಗಿ ಎಸಗುತ್ತಿರುವ ದೌರ್ಜನ್ಯದಿಂದ ಈ ಪದರ ಕೂಡ ಹಾನಿಗೀಡಾಗುತ್ತಿದೆ. ಈಗಾಗಲೇ ಪದರದಲ್ಲಿ ರಂಧ್ರ ಕಾಣಿಸಿಕೊಂಡಿದ್ದು ವರ್ಷಗಳುರುಳಿದಂತೆ ಇದು ದೊಡ್ಡದಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಅತಿಯಾದ ಕೈಗಾರಿಕೀಕರಣದ ಪರಿಣಾಮ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದ್ದು ಇದರಿಂದಾಗಿ ಓಝೋನ್ ಪದರ ಸವೆಯತೊಡಗಿದೆ. ಓಝೋನ್ ಪದರ ಸವೆತವನ್ನು ತಡೆಗಟ್ಟುವ ಮತ್ತು ಅದನ್ನು ಸಂರಕ್ಷಿಸುವ ಸಲುವಾಗಿ ಪ್ರತೀ ವರ್ಷ ಸೆ. 16ರಂದು ವಿಶ್ವಾದ್ಯಂತ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
ಓಝೋನ್ ಪದರ ಎಂದರೇನು? :
ಓಝೋನ್ ಎನ್ನುವುದು ಆಮ್ಲಜನಕದ ಒಂದು ರೂಪ, ವಾತಾವರಣದ ಒಂದು ಭಾಗವಾಗಿದೆ. ಭೂಮಿಯ ಮೇಲೈಯಿಂದ ವಾಯುಮಂಡಲ ದಲ್ಲಿ ಸುಮಾರು 15 ರಿಂದ 35 ಕಿ.ಮೀ. ಮೇಲ್ಪಟ್ಟ ಪ್ರದೇಶದಲ್ಲಿ ಓಝೋನ್ ಪದರವಿದೆ. 1839ರಲ್ಲಿ ಭೂಮಿಯ ರಕ್ಷಾಕವಚವಾಗಿ ವಾತಾವರಣದ ನೈಸರ್ಗಿಕ ಅನಿಲವೆಂದು ಇದನ್ನು ಪರಿಗಣಿಸ ಲಾಗಿದೆ. ಓಝೋನ್ ಪದರದ ರಕ್ಷಣೆಗಾಗಿ ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ಸಾಗುತ್ತಿವೆಯಾ ದರೂ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.
ವಿಶ್ವಮಟ್ಟದ ಪ್ರಯತ್ನ :
ದಿನದಿಂದ ದಿನಕ್ಕೆ ಓಝೋನ್ ಪದರ ಹಾನಿಗೀಡಾಗುತ್ತಿದ್ದು ಇದನ್ನು ಸಂರಕ್ಷಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಓಝೋನ್ ಪದರಕ್ಕೆ ಹಾನಿ ಉಂಟು ಮಾಡುವ ವಸ್ತುಗಳ ಬಳಕೆಗೆ ಕಡಿವಾಣ ಮತ್ತು ಮುನ್ನೆ ಚ್ಚ ರಿಕೆ ಕ್ರಮ ವನ್ನು ಅನು ಸರಿಸುವ ನಿಟ್ಟಿ ನಲ್ಲಿ 1987ರ ಸೆ. 16ರಂದು ವಿಯೆನ್ನಾ ದಲ್ಲಿ ಓಝೋನ್ ಪದರ ರಕ್ಷಣೆಯ ಕುರಿತಾಗಿ ನಡೆದ ಮೊದಲ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ವಿಶ್ವಸಂಸ್ಥೆಯ 45 ದೇಶಗಳು “ಮಾಂಟ್ರಿಯಲ್ ಪ್ರೊಟೋಕಾಲ್’ಗೆ ಸಹಿ ಹಾಕಿದವು. ಆ ಬಳಿಕ 1994ರ ಡಿಸೆಂಬರ್ 19ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ಸೆ. 16ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಪ್ರಸ್ತುತ 197 ರಾಷ್ಟ್ರಗಳು “ಮಾಂಟ್ರಿಯಲ್ ಪ್ರೊಟೋಕಾಲ್’ ಅನ್ನು ಸಾರ್ವತ್ರಿಕ ವಾಗಿ ಅಂಗೀಕರಿಸಿವೆ. ಓಝೋನ್ ಪದರಕ್ಕೆ ಹಾನಿಕಾರಕ ವಾದ ವಸ್ತುಗಳು ಮತ್ತು ಅನಿಲಗಳ ಉತ್ಪಾದನೆ ಮತ್ತು ಬಳಕೆಗೆ ಕಡಿವಾಣ ಹಾಕುವುದು ಈ ಪ್ರೊಟೋಕಾಲ್‌ನ ಮುಖ್ಯ ಉದ್ದೇಶವಾಗಿದೆ. ಕ್ಲೋರೋಫ್ಯೂರೋ, ಇಂಗಾಲದಂತಹ ರಾಸಾಯನಿಕಗಳಿಂದಾಗಿ ಓಜೋನ್ ಪದರ ತೆಳುವಾಗುತ್ತಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದು ಇನ್ನೂ ಹೆಚ್ಚು ಹಾನಿಯಾಗದಂತೆ ಪೂರ್ವ ನಿರ್ಧರಿತ ಕ್ರಮ ಅನುಸರಿಸುವಂತೆ ವಿಶ್ವದೆಲ್ಲೆಡೆಯಿಂದ ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ.
ಓಝೋನ್ ಪದರ ಹಾನಿಯಾಗಲು ಮುಖ್ಯ ಕಾರಣಗಳು :
- ವಾಹನಗಳು ಹೊರಸೂಸುವ ಹೊಗೆ
- ಕೈಗಾರಿಕ ಬೆಳವಣಿಗೆ
- ಕಾರ್ಖಾನೆಯಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳು
- ಬ್ರೋಮಿನ್, ಹೈಡ್ರೋ ಫ್ಲೋರೋ ಕಾರ್ಬನ್, ಕ್ಲೋರೋಫೂÉರೋ ಕಾರ್ಬನ್, ಮಿಥೇನ್ ಮುಂತಾದ ಅನಿಲಗಳು.
- ಹವಾಮಾನ ವೈಪರೀತ್ಯ
- ಪರಿಸರ ನಾಶ
ಸಂಕಲ್ಪ :
ಓಝೋನ್ ಪದರದ ಸಂರಕ್ಷಣೆ ಸಂಪೂರ್ಣ ಮನು ಕುಲದ ಹೊಣೆಗಾರಿಕೆ ಯಾಗಿದೆ. ಮಾತ್ರ ವ ಲ್ಲ ದೆ ಮುಂದಿನ ಪೀಳಿಗೆಗೆ ಈ ಭೂಮಂಡಲವನ್ನು ಜತನ ದಿಂದ ರಕ್ಷಿಸಿ ಬಳುವಳಿ ಯಾಗಿ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಕೂಡ.
ಹಾನಿ ತಡೆಗಟ್ಟುವುದು ಹೇಗೆ? :
- ಪರಿಸರಸಹ್ಯ ವಸ್ತುಗಳ ಬಳಕೆಗೆ ಹೆಚ್ಚಿನ ಉತ್ತೇಜನ.
- ಸಾಧ್ಯವಾದಷ್ಟು ವಸ್ತುಗಳ ಪುನರ್ ಬಳಕೆಗೆ ಒತ್ತು.
- ಪ್ರಾಕೃತಿಕ ಸಂಪನ್ಮೂಲವನ್ನು ಉಳಿಸುವುದು.
- ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು
- ಕನಿಷ್ಠ ಮಟ್ಟಕ್ಕೆ ಇಳಿಸುವುದು.
ಇಂಗಾಲ ಹೊರಸೂಸುವಿಕೆ: ಮುಂಚೂಣಿಯಲ್ಲಿ ಚೀನ :
ಸದ್ಯ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಚೀನವು ಓಝೋನ್ ಪದರಕ್ಕೆ ಮಾರಕವಾಗುವ ಇಂಗಾಲದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಅಮೆರಿಕ ಎರಡನೇ ಮತ್ತು ಭಾರತವು ಮೂರನೇ ಸ್ಥಾನದಲ್ಲಿದೆ. ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ರಷ್ಯಾ, ಜಪಾನ್, ಜರ್ಮನಿ, ಸೌದಿ ಅರೇಬಿಯಾ ಸಹಿತ ಇತರ ರಾಷ್ಟ್ರಗಳು ಸೇರಿವೆ.
ವಿಶ್ವದಲ್ಲಿ ಅತೀ ಹೆಚ್ಚು ಇಂಗಾಲದ ಡೈಆಕ್ಸೆ„ಡ್‌ನ್ನು ಹೊರಸೂಸುವ
ಟಾಪ್ 10 ದೇಶಗಳು :
ದೇಶ ಪ್ರಮಾಣ (ಗಿಗಾ ಟನ್)
ಚೀನ 9.3
ಅಮೆರಿಕ 4.8
ಭಾರತ 2.2
ರಷ್ಯಾ 1.5
ಜಪಾನ್ 1.1
ಜರ್ಮನಿ 0.7
ದಕ್ಷಿಣ ಕೊರಿಯಾ 0.6
ಇರಾನ್ 0.6
ಕೆನಡಾ 0.5
ಸೌದಿ ಅರೇಬಿಯಾ 0.5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.