World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?

ದೇವರಬೆಳಕೆರೆ ಡ್ಯಾಂ ಸಹ ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ

Team Udayavani, Sep 27, 2024, 1:00 PM IST

World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?

ಕರುನಾಡು ಸಾಹಿತ್ಯ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ವೈವಿಧ್ಯತೆಯ ನೆಲೆ ಬೀಡು. ತನ್ನ ಸೌಂದರ್ಯ ಸೊಬಗಿನಿಂದ, ಆತಿಥ್ಯದಿಂದ ಕೈ ಬೀಸಿ ಕರೆಯುವ ಮಲೆನಾಡು. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ವಿವಿಧ ಜನಾಂಗ, ಕಲೆ, ಕ್ರೀಡೆ ಸಾಹಿತ್ಯ ವನ್ನೊಳಗೊಂಡ ಸುಂದರ ತಾಣ ನಮ್ಮ ಕರ್ನಾಟಕ. ವಿಶ್ವ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಗೆ ಅದರಲ್ಲೂ ನಮ್ಮ ಮಧ್ಯ ಕರ್ನಾಟಕದ ಕೆಲವು ಪ್ರವಾಸಿ ತಾಣಗಳ  ಪರಿಚಯ ಇಲ್ಲಿದೆ…

ದಾವಣಗೆರೆ:
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಆಗಿದೆ. ಈ ಕೆರೆಯು ಅತ್ಯಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಶಾಂತಿಸಾಗರಕ್ಕೆ ಬಂದು ಎತ್ತ ಕಣ್ಣಾಯಿಸಿದರೂ ನಿಮಗೆ ಕಾಣಸಿಗುವುದು ಹಚ್ಚ ಹಸಿರಿನ ವಾತಾವರಣ. ಭಾರಿ ಮಳೆಯಾಗಿರುವ ಕಾರಣ ಸೂಳೆಕೆರೆ ಸಂಪೂರ್ಣವಾಗಿ ತುಂಬಿದೆ. ಇದರ ಸುಂದರ ನೋಟವನ್ನು ಸವಿಯಲು ವಿವಿಧ ರಾಜ್ಯಗಳಿಂದ ಜನರು ಆಗಮಿಸುತ್ತಾರೆ.

ಹರಿಹರ ತಾಲೂಕಿನ ದೇವರಬೆಳಕೆರೆ ಡ್ಯಾಂ ಸಹ ಸೂಜಿಗಲ್ಲಿನಂತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ಬಾರಿ ಸುರಿದ ಭಾರೀ ಮಳೆಯಿಂದ ದೇವರ ಬೆಳೆಕೆರೆ ಡ್ಯಾಂನ ಕ್ರಸ್ಟ್ ಗೇಟ್‌ಗಳಿಂದ ನೀರು ಹೊರಬಿಡಲಾಗುತ್ತಿದ್ದು, ಈ ಸುಂದರ ವೈಭವವನ್ನು ಸವಿಯಲು ಪ್ರವಾಸಿಗರ ದಂಡೇ ಕಲೆಯುತ್ತದೆ. ಈ ಡ್ಯಾನಿಂದ ಹೊರಬರುತ್ತಿರುವ ನೀರಿನ ಸೊಬಗು ನೋಡುವುದೇ ಒಂದು ಚೆಂದ. ದಾವಣಗೆರೆಯಿಂದ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ದೇವರ ಬೆಳಕೆರೆ ಡ್ಯಾಂನಿಂದ ರಭಸವಾಗಿ ಹರಿಯುವ ನೀರು ನೋಡಲು ಜನರು, ಯುವಕರು, ವಿದ್ಯಾರ್ಥಿಗಳು ಕಿಕ್ಕಿರಿದು ಬರುತ್ತಾರೆ.

ಹಾವೇರಿ :
ಗಳಗನಾಥ ದೇವಸ್ಥಾನ ಎಂದು ಕರೆಯಲ್ಪಡುವ ಗಳಗೇಶ್ವರ ದೇವಸ್ಥಾನವು(Galageshwara) ಗಳಗನಾಥ ಎಂಬ ಸಣ್ಣ ಹಳ್ಳಿಯಲ್ಲಿದೆ. ಇದನ್ನು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ತುಂಬ ಶಿಲ್ಪಗಳು ಮತ್ತು ಸಂಕೀರ್ಣವಾದ ಕೆತ್ತನೆಗಳನ್ನು ಕಾಣಬಹುದಾಗಿದೆ. ಈ ದೇವಸ್ಥಾನದ ಗೋಪುರ ನೆಲದಿಂದಲೇ ಮೇಲಕ್ಕೆದ್ದಂತೆ ಕಾಣುವುದರಿಂದಾಗಿ ಇದು ಬೇರೆ ದೇಗುಲಗಳಿಗಿಂತ ವಿಭಿನ್ನವಾಗಿದೆ.

ಆಫ್ರಿಕಾದಲ್ಲಿ(Africa )ಹೆಚ್ಚಾಗಿ ಕಾಣಿಸಿಕೊಳ್ಳುವುದು ಬಾವೊಬಾಬ್‌(Baobab) ಮರಗಳು. ವಿಶೇಷವೆಂದರೆ ಈ ಬಾವೊಬಾಬ್‌ ಮರಗಳು ಹಾವೇರಿಯ ಸವಣೂರಿನಲ್ಲೂ ಇವೆ. ಮೂರು ಬಾವೊಬಾಬ್‌ ಮರಗಳನ್ನು ಹತ್ತಿರ ಹತ್ತಿರದಲ್ಲೇ ತ್ರಿಕೋನಾಕಾರದಲ್ಲಿ ನೆಡಲಾಗಿದೆ. ಈ ರೀತಿ ಹತ್ತಿರದಲ್ಲಿ ಮೂರು ಬಾವೊಬಾಬ್‌ ಮರಗಳನ್ನು ಹೊಂದಿರುವ ದೇಶದ ಏಕೈಕ ಸ್ಥಳ ಎನ್ನುವ ಖ್ಯಾತಿ ಸವಣೂರಿಗೆ ಸಿಕ್ಕಿದೆ. ಈ ಮರಗಳು ಸರಿಸುಮಾರು 2 ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗುತ್ತದೆ.

ಗದಗ:
ಲಕ್ಕುಂಡಿ ದೇವಾಲಯಗಳು:


ಗದಗದಿಂದ 11 ಕಿ.ಮೀ ದೂರದಲ್ಲಿರುವ ಲಕ್ಕುಂಡಿಯು “ದೇವಾಲಯಗಳ ಸ್ವರ್ಗ” ವೆಂದು ಪ್ರಸಿದ್ಧವಾಗಿದೆ. ಇದು ಶಾಸನಗಳಲ್ಲಿ “ಲೋಕಿ ಗುಂಡಿ” ಎಂಬ ಹೆಸರಿನಿಂದ ಕರೆಯಲ್ಪಟ್ಟಿದೆ. 50 ಕ್ಕೂ ಹೆಚ್ಚು ದೇವಾಲಯಗಳು, 101 ಮೆಟ್ಟಿಲುಗಳ ಬಾವಿ ಮತ್ತು ಚಾಲುಕ್ಯರು, ಕಲಚೂರಿಗಳು, ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಶಾಸನಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯ, ನನ್ನೆಶ್ವರ ದೇವಾಲಯ ಲಕ್ಕುಂಡಿಯ ಪ್ರಸಿದ್ಧ ದೇವಾಲಯಗಳು. ಮಹಾವೀರ ಜೈನ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಲಕ್ಕುಂಡಿಯಲ್ಲಿರುವ ಕಲಾಶಿಲ್ಪ ಗ್ಯಾಲರಿಯು ಭಾರತದ ಪುರಾತತ್ತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.

ಕಪ್ಪತ ಗುಡ್ಡ, ಮುಂಡರಗಿ:

ಉತ್ತರ ಕರ್ನಾಟಕದ ಸಹ್ಯಾದ್ರಿ” ವೆಂದು ಪ್ರಸಿದ್ಧವಾದ ಕಪ್ಪತಗುಡ್ಡವು ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ. ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಈ ಗುಡ್ಡವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಯೋಗ್ಯವಾದ ಸ್ಥಳ. ಈ ಗುಡ್ಡವು ಔಷಧೀಯ ಸಸ್ಯಗಳಿಗೆ ಹೆಸರು ಮಾಡಿದ್ದು, ಬೆಟ್ಟದ ಸಾಲುಗಳಲ್ಲಿ 340 ಕ್ಕೂ ಹೆಚ್ಚು ಅಪರೂಪದ ಔಷಧೀಯ ಸಸ್ಯಗಳಿವೆ ಎಂದು ತಿಳಿದು ಬಂದಿದೆ. ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಆರು ಪ್ರಮುಖ ಮಠ ಮತ್ತು ದೇವಸ್ಥಾನಗಳು ಇವೆ.

ಕೊಪ್ಪಳ :

ಬೆಂಗಳೂರಿನಿಂದ(Bangalore )ಸುಮಾರು 300 ಕಿ.ಮೀ ದೂರದಲ್ಲಿರುವ ಕೊಪ್ಪಳದಲ್ಲಿ(Koppal) ಅನೇಕ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ.
ಪಂಪಾ ಸರೋವರ: 


ಐದು ಪವಿತ್ರ ಸರೋವರಗಳಲ್ಲಿ ಒಂದಾಗಿದೆ. ಹಿಂದೂ ಪುರಾಣದಲ್ಲಿ ಪಂಪಾ ಸರೋವರವನ್ನು ಶಿವನ(Shiva )ಪತ್ನಿ ಪಾರ್ವತಿಯ(Parvati )ಒಂದು ರೂಪವಾದ ಪಂಪಾ ಶಿವನಿಗೆ ಭಕ್ತಿ ತೋರಿಸುವುದಕ್ಕೆ ತಪಸ್ಸು ಮಾಡಿದ ಸ್ಥಳವಾಗಿದೆ.

ಕೊಪ್ಪಳ ಕೋಟೆ:

ಕೊಪ್ಪಳದಲ್ಲಿ ಐತಿಹಾಸಿಕ ಕೊಪ್ಪಳ ಕೋಟೆ ಇದೆ. ಇದು ದೇಶದಲ್ಲಿರುವ ಪ್ರಬಲವಾದ ಕೋಟೆಗಳಲ್ಲಿ ಒಂದು ಎಂದು ಪರಿಗಣಿಸ್ಪಟ್ಟಿದೆ. ಈ ಭದ್ರವಾದ ಕೋಟೆ ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಇನ್ನು ಗೊಂದಲವಿದೆ. ಆದಾಗ್ಯೂ, 1786 ರ ಸಮಯದಲ್ಲಿ ಟಿಪ್ಪು ಸುಲ್ತಾನ್‌(Tippu Sultan) ಸ್ವಾಧೀನಪಡಿಸಿಕೊಂಡರು. ಅಷ್ಟೇ ಅಲ್ಲ, ಫ್ರೆಂಚ್‌ (French)ಇಂಜಿನಿಯರ್‌ಗಳ ಸಹಾಯದಿಂದ ಕೋಟೆಯನ್ನು ಪುನರ್ ನಿರ್ಮಿಸಿದರು ಎನ್ನಲಾಗಿದೆ.

ಯಾದಗಿರಿ:

ಯಾದಗಿರಿ ಕೋಟೆ ಕರ್ನಾಟಕದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಯಾದಗಿರಿ ಕೋಟೆಯನ್ನು 850 ಮೀಟರ್ ಉದ್ದ, 500 ಮೀಟರ್ ಅಗಲ ಮತ್ತು 100 ಮೀಟರ್ ಎತ್ತರ ಇರುವ ದೊಡ್ಡದಾದ ಏಕಶಿಲಾ ಬಂಡೆಯ ಮೇಲೆ ನಿರ್ಮಿಸಲಾಗಿದೆ. ಕಾಲಾಂತರದಲ್ಲಿ ಯಾದಗಿರಿ ಕೋಟೆ ಬಹಮನಿ ಸುಲ್ತಾನರು, ಆದಿಲ್ ಶಾಹಿ, ಯಾದವ ರಾಜರು, ಕಲ್ಯಾಣ ಚಾಲುಕ್ಯರು, ಹೈದರಾಬಾದ್ ನಿಜಾಮರು (Hyderbadh Nijam)ಮತ್ತು ಚೋಳ ರಾಜವಂಶದ ಆಳ್ವಿಕೆಯಲ್ಲಿತ್ತು. ಯಾದಗಿರಿ ಕೋಟೆ ದೊಡ್ಡ ವಿಸ್ತಾರವನ್ನು ಹೊಂದಿದ್ದು ತುಪಾಕಿ, ನೀರಿನ ಮೂಲಗಳೊಂದಿಗೆ ಸ್ವಾವಲಂಬಿಯಾಗಿದೆ ಮತ್ತು ದೀರ್ಘ ಕಾಲ ಶತ್ರುಗಳನ್ನು ತಡೆಹಿಡಿಯಲು ಬೇಕಾದಷ್ಟು ಶಸ್ತ್ರಾಸ್ತ್ರ, ಆಹಾರ ಶೇಖರಣಾ ಸೌಲಭ್ಯಗಳನ್ನು ಹೊಂದಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಯಾದಗಿರಿ ಕೋಟೆ ಶತ್ರುಗಳಿಗೆ ಅಭೇದ್ಯವಾಗಿತ್ತು.

ಶೋರಾಪುರ ಕೋಟೆ: ಶೋರಾಪುರದ ಕೊನೆಯ ಆಡಳಿತಗಾರ ರಾಜ ವೆಂಕಟಪ್ಪ ನಾಯಕನು(Venkatappa Fort)ತನ್ನ ಪ್ರದೇಶದ ಆಂತರಿಕ ವ್ಯವಹಾರಗಳಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ತಪ್ಪಿಸಲು ಬ್ರಿಟಿಷರ ವಿರುದ್ಧ ಹೋರಾಡಿದ ಸಮಯದಲ್ಲಿ ಕಟ್ಟಿಸಿದನು. ನಾಯಕರು ಶೋರಪುರ ನಗರದಲ್ಲಿ ಎರಡು ಅರಮನೆಗಳು ಮತ್ತು ವಾಗಿನಗರದಲ್ಲಿ ಒಂದು ಕೋಟೆಯನ್ನು ನಿರ್ಮಿಸಿದ್ದರು.

ವನದುರ್ಗ ಕೋಟೆ: 

ಬೃಹತ್ ಪ್ರವೇಶ ದ್ವಾರಗಳು, ಅರ್ಧ ಚಂದ್ರನ ಆಕಾರದ ಗೋಡೆಗಳು, ದೇವನಾಗರಿ ಲಿಪಿಯಲ್ಲಿ(Devrnagari Lipi)ಸಂಸ್ಕೃತ ಶಾಸನಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ವನದುರ್ಗ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಶೋರಾಪುರದಿಂದ 24 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಕೋಟೆಯಾಗಿದೆ. ವನದುರ್ಗ ಕೋಟೆಯನ್ನು ಪಿಡ್ಡ ನಾಯಕನು ತನ್ನ ರಾಣಿ ವೆಂಕಮ್ಮಾ೦ಬಳಿಗಾಗಿ ನಿರ್ಮಿಸಿದ್ದನು.

ಮಧುಗಿರಿ :

ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದ್ದು, ತನ್ನ ಅಪ್ರತಿಮ ಮಧುಗಿರಿಗೆ ಹೆಸರುವಾಸಿಯಾಗಿದೆ. ಮಧುಗಿರಿ ಬೆಟ್ಟದ ಕೋಟೆ ಎಂದೂ ಕರೆಯಲ್ಪಡುವ ಈ ಕೋಟೆಯು 3,930 ಅಡಿ ಎತ್ತರದಲ್ಲಿದೆ ಮತ್ತು ಏಷ್ಯಾದ ಅತಿದೊಡ್ಡ ಏಕಶಿಲೆಯ ಶಿಲಾ ರಚನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಮೇಲಿನ ಎಲ್ಲಾ ವಿಶೇಷ ಪ್ರವಾಸಿ ತಾಣಗಳಿಗೆ ಅಭಿವೃದ್ಧಿಗೆ ಒತ್ತು ನೀಡಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ಇನ್ನು ಹೆಚ್ಚು ಪ್ರವಾಸಿಗರು ಬರಲು ಅನುಕೂಲವಾಗುತ್ತದೆ. ರಾಜ್ಯದ ಬೊ್ಕ್ಕಸಕ್ಕೆ ಆದಾಯ ಹೆಚ್ಚಾಗಿ ಸ್ಥಳೀಯರಿಗೆ ಉದ್ಯೋಗ ಭದ್ರತೆ ದೊರಕಿದಂತಾಗುತ್ತದೆ.

 

ಘನಶ್ಯಾಮ್ ವೈ, ಇಂಜಿನಿಯರ್
ಹೂವಿನಹಡಗಲಿ

ಟಾಪ್ ನ್ಯೂಸ್

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.