ಕ್ಷಯದ ಕರಾರುವಾಕ್ ಪತ್ತೆಗೆ CBNAAT
Team Udayavani, Mar 23, 2018, 12:30 AM IST
ಕ್ಷಯ ರೋಗದ ಕುರಿತು ಅರಿವು ಮೂಡಿಸುವ ಸಲುವಾಗಿ ವಿಶ್ವಸಂಸ್ಥೆ ಮಾರ್ಚ್ 24ನ್ನು ವಿಶ್ವ ಕ್ಷಯ ರೋಗ ದಿನ ಎಂದು ಘೋಷಿಸಿದೆ. ಮುಂದುವರಿದ ದೇಶಗಳು ಕೆಲ ವರ್ಷಗಳ ಹಿಂದೆಯೇ ಕ್ಷಯ ರೋಗ ಪತ್ತೆ ಹಚ್ಚುವ ಅತ್ಯಾಧುನಿಕ ವಿಧಾನಗಳನ್ನು ಕಂಡು ಕೊಂಡಿವೆ. ಆದರೆ ಈ ನಿಟ್ಟಿನಲ್ಲಿ ನಮ್ಮ ಸಾಧನೆ ತೃಪ್ತಿಕರ ವಾಗಿಲ್ಲ. ಆದರೂ ಕ್ಷಯ ರೋಗವನ್ನು ಕರಾರುವಕ್ಕಾಗಿ ಪತ್ತೆ ಹಚ್ಚುವ ಉಪಕರಣವೊಂದು ನಮ್ಮಲ್ಲೂ ಇದೆ. ಈ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಅದೇನು?
“ಹಿಂದೆ ಕ್ಷಯ ರೋಗ ಬಂದರೆ ನರಳಿ ನರಳಿ ಸಾಯುವುದೇ ಗತಿ ಎಂಬ ಭೀತಿಯಿತ್ತು. ಆದರೆ ಈಗ ಸರಿಯಾದ ರೀತಿಯಲ್ಲಿ ಔಷಧೋಪಚಾರ ಮಾಡಿದರೆ ಕನಿಷ್ಠ ಕ್ಷಯ ರೋಗವನ್ನು ನಿಯಂತ್ರಣದಲ್ಲಿಡಬಹುದು. ಆದರೆ ಈ ಚಿಕಿತ್ಸೆ ಸಾಧ್ಯವಾಗಬೇಕಾದರೆ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಬೇಕು. ವೈದ್ಯರ ಪಾಲಿಗೆ ಇಷ್ಟರ ತನಕ ಇದೇ ಸವಾಲಿನ ಕೆಲಸವಾಗಿತ್ತು. ಈಗ CBNAAT ಈ ಕೆಲಸವನ್ನು ಸುಲಭಗೊಳಿಸಿದೆ. ಏನಿದು CBNAAT?
ಏಕೆ ಬೇಕು ಇದು? ಕ್ಷಯ ರೋಗದ ಪತ್ತೆಗೆ ಇದುವರೆಗೆ ನಮ್ಮ ದೇಶದಲ್ಲಿ ಸೂಕ್ಷ್ಮ ದರ್ಶಕದ(Microscopy) ಮೂಲಕ ಕಫ ಪರೀಕ್ಷೆ ಹಾಗೂ ಎದೆ ಗೂಡಿನ ಕ್ಷ-ಕಿರಣ (X-ray)ವೇ ಮುಖ್ಯವಾದ ಸಾಧನಗಳಾಗಿ ದ್ದವು. ಸೂಕ್ಷ್ಮ ದರ್ಶಕದ ಮೂಲಕ ಮಾಡುವ ಕಫ ಪರೀಕ್ಷೆ ಫಲಿತಾಂಶ ಶೇಕಡ 50-60 ಮಾತ್ರ ನಿಖರ ಆಗಿರುವು ದರಿಂದ ಶೇ. 40ರಿಂದ 50 ರೋಗ ಪತ್ತೆಯಾಗದಿರುವ ಸಾಧ್ಯತೆ ಗಳಿವೆ. ಹೀಗೆ ರೋಗ ಇಲ್ಲ ಎಂಬ ಪ್ರಯೋಗಾಲಯದ ಫಲಿತಾಂಶ ಪಡೆದ ಕ್ಷಯ ರೋಗಿಗಳು ಮುಂದೆ ಔಷಧ ನಿರೋಧಕ ಕ್ಷಯ ರೋಗಿಗಳಾಗುವ (Drug-Resistant Tuberculosis) ಸಾಧ್ಯತೆಗಳು ಹೆಚ್ಚು. ಕೇವಲ ಎದೆಗೂಡಿನ ಕ್ಷ-ಕಿರಣ ದಿಂದ ಮಾತ್ರ ಕ್ಷಯ ರೋಗವನ್ನು ಪತ್ತೆ ಮಾಡುವುದು ಕಷ್ಟ ಸಾಧ್ಯ.
ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು (Cartridge Based Nucleic Acid Amplifi cationTest: CB NAAT) ಎಂಬ ಕ್ಷಯ ರೋಗವನ್ನು ಪತ್ತೆ ಮಾಡಬಲ್ಲ ಆಧುನಿಕ ಉಪಕರಣ ವನ್ನು ದೇಶದಾದ್ಯಂತ ಪ್ರತೀ ಜಿಲ್ಲೆಗಳಲ್ಲಿ ನಿಯೋಜಿಸಿದೆ. ಈ ಉಪಕರಣ ಈಗ ಪ್ರಪಂಚದಾದ್ಯಂತ ಸುಮಾರು 120 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಬಳಕೆಯಲ್ಲಿದೆ. ಈ ಉಪಕರಣದಿಂದ ಮುಖ್ಯವಾಗಿ ರೋಗಿಯ ಕಫದಲ್ಲಿರುವ ಅಥವಾ ಕ್ಷಯ ರೋಗಕ್ಕೆ ತುತ್ತಾದ ದೇಹದ ಭಾಗಗಳಿಂದ Tissue Samples Lymph nodes, Fluid samples CSF, Ascitic, Synodiac ಹಾಗೂ Gastric Aspirate ನಿಂದ ರೋಗವಿರುವುದನ್ನು ಕೇವಲ 3 ತಾಸುಗಳಲ್ಲಿ ಖಚಿತ ಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಸೂಕ್ಷ್ಮ ದರ್ಶಕ ವಿಧಾನದ ಕಫ ಪರೀಕ್ಷೆ ಯಲ್ಲಿ ರೋಗಾಣುಗಳು ಕಂಡು ಬರಬೇಕಾದರೆ 1 ml ಕಫದಲ್ಲಿ ಸುಮಾರು 10,000 ರೋಗಾಣುಗಳಿರುವುದು ಅಗತ್ಯ. ಆದರೆ CBNAAT ಉಪಕರಣದಲ್ಲಿ 1ml ಕಫದ ಮಾದರಿಯಲ್ಲಿ ಕೇವಲ 133 ರೋಗಾಣುಗಳಿದ್ದರೂ ರೋಗವಿರು ವುದನ್ನು ಪತ್ತೆ ಹಚ್ಚಬಲ್ಲದು. ಈ ಉಪಕರಣದ ಮತ್ತೂಂದು ವಿಶೇಷತೆಯೆಂದರೆ ಕಫ ಅಥವಾ ಇತರ ಮಾದರಿಗಳಲ್ಲಿ ರೋಗಾಣುಗಳಿರುವುದನ್ನು ಪತ್ತೆ ಮಾಡುವುದಲ್ಲದೆ ಕ್ಷಯ ರೋಗದ ಚಿಕಿತ್ಸೆಗೆ ಬೇಕಾದ ಮುಖ್ಯವಾದ ಔಷಧ Rifampicin ಈ ರೋಗಾಣುಗಳಿಗೆ ಪರಿಣಾಮಕಾರಿ (Sensitive) ಅಥವಾ ಈಗಾಗಲೇ ಒಗ್ಗಿಕೊಂಡಿರುವುದನ್ನು ((Resistance) ಸಹ ಸೂಚಿಸುತ್ತದೆ. ರೋಗಿಗೆ ಮುಂದಿನ ಚಿಕಿತ್ಸೆಯನ್ನು ಇದರ ಆಧಾರದ ಮೇಲೆ ಮಾಡಬೇಕಾಗುವುದು. Microscopy ವಿಧಾನದಿಂದ ಪತ್ತೆ ಯಾದ ಕ್ಷಯ ರೋಗಿಗಳಲ್ಲಿ ಶೇ.20ಕ್ಕಿಂತ ಅಧಿಕ ರೋಗಿಗಳು ಔಷಧ ನಿರೋಧಕ ಕ್ಷಯ ರೋಗಿಗಳಾಗುವ ಸಾಧ್ಯತೆಯಿರುವುದರಿಂದ ((Drug-Resistant Tuberculosis)ಕ್ಷಯ ರೋಗಿಗಳಿಗೆ ಇದುವರೆಗೆ ಕೂಡಲಾಗುತ್ತಿರುವ ಆರು ತಿಂಗಳಿನ CAT-IREGIMEN ಫಲಕಾರಿ ಯಾಗದೇ ಇರಬ ಹುದು. ಆದ್ದರಿಂದ ಈ ಚಿಕಿತ್ಸೆಯನ್ನು ಸದ್ಯಕ್ಕೆ ಪ್ರಾರಂಭಿಸಿ ನಂತರ ಕಫದ ಮಾದರಿಯನ್ನು ಆರೋಗ್ಯ ಇಲಾಖೆಯು UNIVERSAL DST ಆದೇಶದ ಪ್ರಕಾರ ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿರುವ CBNAATನಲ್ಲಿ RIFAMPICIN Drug
sensitivity test ಗೆ ಕಳಿಸಬೇಕು. ಇದು ಕ್ಷಯರೋಗ ಇರುವುದನ್ನು ಇನ್ನೊಮ್ಮೆ ಖಾತರಿ ಪಡಿಸಿಕೊಳ್ಳುತ್ತದೆ.
CBNAAT ಫಲಿತಾಂಶದಲ್ಲಿ ರೋಗಿಯ ರೋಗಾಣುಗಳು RIFAMPICIN SENSITIVE ಕಂಡುಬಂದರೆ ಅಂತಹ ರೋಗಿಗೆ CATAGORY I ಚಿಕಿತ್ಸೆ (2 HRE2 +4HRE) ದಿನ ನಿತ್ಯ ಆರು ತಿಂಗಳು ನೀಡಬೇಕಾಗುತ್ತದೆ. CBNAAT ಪರೀಕ್ಷೆಯಲ್ಲಿ ಫಲಿತಾಂಶ ಒಂದು ವೇಳೆ RIFAMPICIN RESISTANCE ಕಂಡು ಬಂದಲ್ಲಿ ಅಂತಹ ಕಫ ಅಥವಾ ಅಂಗಾಂಶ ಅಥವಾ ದ್ರವ ಮಾದರಿಯನ್ನು SECOND LINE LPA ಹಾಗೂ ಅಗತ್ಯಬಿದ್ದಲ್ಲಿ FIRST LINE LPA CULTURE & SENSITIVITY
LABORA-TORYಗೆ ಕಳುಹಿಸಬೇಕಾಗುತ್ತದೆ. ಇಂತಹ ಪ್ರಯಾಗಾಲಯ ನಮ್ಮ ರಾಜ್ಯದಲ್ಲಿ ಬೆಂಗಳೂರು, ರಾಯಚೂರು, ಹುಬ್ಬಳ್ಳಿಯಲ್ಲಿ ಮಾತ್ರ ಇದೆ. ಈ ಪ್ರಯೋ ಗಾಲಯ ನೀಡುವ Drug sensitivity ಆಧಾರದ ಮೇಲೆ ಜಿಲ್ಲಾ ಔಷಧ ನಿರೋಧಕ ಕ್ಷಯ ರೋಗ ಸಮಿತಿಯು ನಿರ್ಧರಿಸುವ ಚಿಕಿತ್ಸಾ ಪದ್ಧತಿ ಮೇಲೆ ಪ್ರತೀ ಜಿಲ್ಲೆಯಲ್ಲಿರುವ TB CENTREಗಳಲ್ಲಿ ಉಚಿತವಾಗಿ ನೀಡಲಾಗುವುದು. ಈ ಔಷಧಗಳನ್ನು ಔಷಧ ನಿರೋಧಕ ಕ್ಷಯ ರೋಗಕ್ಕೆ ಚಿಕಿತ್ಸೆ ನೀಡುವ ಖಾಸಗಿ ವೈದ್ಯರುಗಳು ಕೂಡ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಿಂದ ಅನುಮತಿ ಪಡೆದು ತಮ್ಮ ಆಸ್ಪತ್ರೆ ಗಳಲ್ಲಿ ಕಾಯಿಲೆ ಹರಡದಂತೆ ಸೂಕ್ತವಾದ ನಿರೋಧಕ ಕ್ರಮ ಗಳನ್ನು ಅನುಸರಿಸಿ ನೀಡಬಹುದಾಗಿದೆ. ಈ ಎಲ್ಲ ಪರೀಕ್ಷೆಗಳು, ಚಿಕಿತ್ಸೆಗಳು ಉಚಿತವಾಗಿದ್ದು ರೋಗಿಗೆ ತಿಂಗಳ ಮಾಸಾಶನ, ಪ್ರಯಾಣ ಭತ್ಯೆ ಸಹ ಸಿಗಲಿದೆ. ಅಲ್ಲದೆ ಚಿಕಿತ್ಸೆ ನೀಡುವ ಖಾಸಗಿ ವೈದ್ಯರುಗಳಿಗೆ ಸಹ ಪ್ರೋತ್ಸಾಹ ಧನ ನೀಡಲಾಗುವುದು.
– ಡಾ| ಅಶ್ವಿನಿ ಕುಮಾರ ಗೂಪಾಡಿ
ಕೆ.ಎಂ.ಸಿ. ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.