ಇಂದು ವಿಶ್ವ ಸಸ್ಯಹಾರಿಗಳ ದಿನ: 1 ಕೆ.ಜಿ. ಮಾಂಸ ಉತ್ಪಾದನೆಗೆ ಬೇಕು 10 ಕೆ.ಜಿ. ಧಾನ್ಯ!


Team Udayavani, Oct 1, 2020, 4:39 PM IST

443

ಇಂದು ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿದೆ. ನಾವು ಸೋಂಕಿನ ಭಯದಿಂದ 2020ರ ಅರ್ಧ ವರ್ಷವನ್ನು ಕಳೆದಿದ್ದೇವೆ. ಈ ಸಾಂಕ್ರಾಮಿಕ ಸಮಯದಲ್ಲಿ ನಾವು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸುತ್ತಿದ್ದೇವೆ.

ಆರಂಭದಲ್ಲಿ ಕೋವಿಡ್‌ ಬಾವಲಿಗಳ ಮೂಲಕ ಹರಡಿತ್ತು ಎಂದು ಹೇಳಲಾಗಿತ್ತು. ಬಳಿಕ ಇತರ ಪ್ರಾಣಿಗಳೂ ಇದನ್ನು ಹರಡಬಹುದು ಎಂದು ಅಧ್ಯಯನಗಳು ತಿಳಿಸಿದ್ದವು. ಇಂತಹ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳೂ ಜಾಗೃತೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಮನಗಂಡ ಚೀನ ತನ್ನ ವೆಟ್‌ ಮಾರ್ಕೆಟ್‌ ಸೇರಿದಂತೆ ಎಲ್ಲ ಮಾಂಸ ಮಾರಾಟದ ಅಂಗಡಿಗಳನ್ನು ಅನ್ನು ಮುಚ್ಚಲಾಗಿತ್ತು.

ವೈರಸ್‌ ಸೋಂಕನ್ನು ತಪ್ಪಿಸಲು ಸಸ್ಯಾಹಾರಿ ಆಹಾರ ಮಾತ್ರ ಸುರಕ್ಷಿತ ಆಯ್ಕೆಯಾಗಿದೆ. ಹಂದಿ ಜ್ವರದಿಂದ ಕೋವಿಡ್‌ ಸೋಂಕಿನ ಹರಡುವಿಕೆಯ ವರೆಗೆ ಪ್ರಾಣಿಗಳು ಪ್ರಮುಖ ಕೊಂಡಿಯಾಗಿವೆ ಎನ್ನುತ್ತವೆ ವರದಿಗಳು. ಕಳೆದ 50 ವರ್ಷಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಜಾಗತಿಕ ರೋಗಗಳ ಶೇ. 70ರಷ್ಟು ಪ್ರಾಣಿಗಳ ಮೂಲಕ ಹರಡಿವೆ. ನೀವು ಹೃದ್ರೋಗ, ಕ್ಯಾನ್ಸರ್‌ ಮೊದಲಾದ ಕಾಯಿಲೆಗಳ ಸುಳಿಯಿಂದ ಪಾರಾಗಬೇಕಾದರೆ ಸಸ್ಯಾಹಾರಿ ಆಹಾರವನ್ನು ಸೇವಿಸಿ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂಬುದು ಅವರ ಮನವಿ.

ಶೇ. 50 ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ
ನೀವು ಮಧುಮೇಹವನ್ನು ನಿಯಂತ್ರಿಸಲು ಬಯಸುವವರಾಗಿದ್ದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಾದರೆ ಒಂದು ದಿನದ ಆಹಾರದಲ್ಲಿ ಶೇ. 50ಕ್ಕಿಂತ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು ಎಂದು ವಿಯೆಟ್ನಾಂನ ವೈದ್ಯಕೀಯ ಪೌಷ್ಟಿಕ ತಜ್ಞ ಡಾ. ಬಿಸ್ವರಪ್‌ ಚೌಧರಿ ಹೇಳುತ್ತಾರೆ. ವಿಶ್ವ ಸಸ್ಯಾಹಾರಿ ದಿನವು ಸಸ್ಯಾಹಾರಿ ಆಹಾರವನ್ನು ತಿನ್ನಲು ಮತ್ತು ಅದರ ಪ್ರಯೋಜನಗಳನ್ನು ವಿವರಿಸುವ ಸಲುವಾಗಿ ಪ್ರಾರಂಭಗೊಂಡಿತು. 1977ರ ಅಕ್ಟೋಬರ್‌ 1ರಂದು ನಾರ್ತ್‌ ಅಮೆರಿಕನ್‌ ವೆಜಿಟೇರಿಯನ್‌ ಸೊಸೈಟಿ ಈ ಉಪಕ್ರಮವನ್ನು ಪ್ರಾರಂಭಿಸಿತು.
ಮಾಂಸಾಹಾರಿ ಆಹಾರಕ್ಕಿಂತ ಸಸ್ಯಾಹಾರಿ ಆಹಾರವು ಆರೋಗ್ಯಕರವಾಗಿದೆ ಎಂದು ಜನರಿಗೆ ಮನವರಿಕೆ ಮಾಡುವುದು ಈ ದಿನದ ಗುರಿಯಾಗಿದೆ. ಸಸ್ಯಾಹಾರಿ ಆಹಾರವು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಹೆಚ್ಚಿಸುವುದಿಲ್ಲ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನಾರುಗಳು ಮತ್ತು ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್‌ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.

4 ಹೊಸ ಸೋಂಕುಗಳಲ್ಲಿ 3 ಪ್ರಾಣಿಗಳಿಂದ
ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್‌ಶನ್‌‌ (ಸಿಡಿಸಿ) ಪ್ರಕಾರ, ನಾವು ಪ್ರತಿದಿನ ಪ್ರಾಣಿಗಳ ಸಂಪರ್ಕಕ್ಕೆ ಬರುತ್ತೇವೆ. ಆದರೆ ಪ್ರಾಣಿಗಳಲ್ಲಿ ವಾಸಿಸುವ ಕೆಲವು ಸೂಕ್ಷ್ಮಜೀವಿಗಳು ನಮ್ಮನ್ನು ರೋಗಿಗಳನ್ನಾಗಿ ಮಾಡಬಹುದು. ಮನುಷ್ಯರಿಗೆ ಪ್ರಾಣಿಗಳ ಮೂಲಕ ಹರಡುವ ಸೂಕ್ಷ್ಮಜೀವಿಗಳಿಂದ ಉಂಟಾಗುವ ರೋಗಗಳನ್ನು ಜೂನೋಟಿಕ್‌ ಎಂದು ಕರೆಯಲಾಗುತ್ತದೆ. ಈ ರೋಗಾಣುಗಳು ಕೆಲವು ಸಂದರ್ಭ ಸಾವಿಗೆ ಕಾರಣವಾಗುತ್ತವೆ. ಸಿಡಿಸಿ ಪ್ರಕಾರ, ಜೂನೋಟಿಕ್‌ ಕಾಯಿಲೆಗಳು ಸಾಮಾನ್ಯವಾಗಿದೆ. ವಿಜ್ಞಾನಿಗಳು ಹೇಳುವಂತೆ 10ರಲ್ಲಿ 6ಕ್ಕೂ ಹೆಚ್ಚು ಸೋಂಕುಗಳು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಪ್ರತಿ 4 ಹೊಸ ಕಾಯಿಲೆಗಳಲ್ಲಿ 3 ಪ್ರಾಣಿಗಳಿಂದ ಬರುತ್ತವೆ.

ಮಾಂಸಾಹಾರಕ್ಕಾಗಿ ಸಸ್ಯಾಹಾರ ನಷ್ಟ
ಪೆಟಾ ನೀಡುವ ಅಂಕಿಅಂಶಗಳ ಪ್ರಕಾರ, ಪ್ರಾಣಿಗಳು ಹೆಚ್ಚು ಧಾನ್ಯಗಳನ್ನು ಆಹಾರವಾಗಿ ಸೇವಿಸುತ್ತವೆ. ಮಾತ್ರವಲ್ಲದೇ ಕಡಿಮೆ ಮಾಂಸ, ಡೈರಿ ಉತ್ಪನ್ನಗಳು ಅಥವಾ ಮೊಟ್ಟೆಗಳನ್ನು ಒದಗಿಸುತ್ತವೆ. ಒಂದು ಕಿಲೋ ಮಾಂಸಕ್ಕಾಗಿ ಪ್ರಾಣಿಗಳು 10 ಕೆ.ಜಿ. ವರೆಗೆ ಧಾನ್ಯವನ್ನು ನೀಡಬೇಕಾಗುತ್ತದೆ.

ವರ್ಲ್ಡ್ ವಾಚ್‌ ಇನ್‌ಸ್ಟಿಟ್ಯೂಟ್‌ ಪ್ರಕಾರ, ಜಗತ್ತಿನಲ್ಲಿ 6ರಲ್ಲಿ 1 ಜನರು ಪ್ರತಿದಿನ ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾಂಸವನ್ನು ಉತ್ಪಾದಿಸುವುದು ಧಾನ್ಯಗಳನ್ನು ದುರ್ಬಳಕೆ ಮಾಡಿದಂತಾಗುತ್ತದೆ. ಅದೇ ಧಾನ್ಯಗಳನ್ನು ಮನುಷ್ಯರು ನೇರವಾಗಿ ಬಳಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಸ್ಯ ಆಧಾರಿತ ಆಹಾರವು ಜಗತ್ತಿನಲ್ಲಿ ಹಸಿವನ್ನು ನೀಗಿಸುತ್ತದೆ ಎಂದು ಪೆಟಾದ ವೆಬ್‌ಸೈಟ್‌ ಹೇಳುತ್ತದೆ. 2050ರ ಹೊತ್ತಿಗೆ ಅಂದಾಜು 900 ಮಿಲಿಯನ್‌ ಜನರಿಗೆ ಭೂಮಿಯಲ್ಲಿ ಸಾಕಷ್ಟು ಆಹಾರ ಲಭ್ಯವಾಗಲಿದೆ. ಧಾನ್ಯ ಉತ್ಪಾದನೆಯ ಶೇ. 40ಕ್ಕಿಂತ ಹೆಚ್ಚು ಆಹಾರವನ್ನು ಪ್ರಾಣಿಗಳಿಗಿಂತ ಹೆಚ್ಚಾಗಿ ಮನುಷ್ಯರೇ ಬಳಸಲ್ಪಟ್ಟಾಗ ಮಾತ್ರ ಇದು ಸಾಧ್ಯವಾಗಲಿದೆ.

ಸಸ್ಯಗಳಿಗೆ ಕಡಿಮೆ ನೀರು ಸಾಕು, ಪ್ರಾಣಿಗಳಿಗೆ ಹೆಚ್ಚು ಬೇಕು
ಪೆಟಾ ಇಂಡಿಯಾದ ಪ್ರಕಾರ, ಶುದ್ಧ ಸಸ್ಯಾಹಾರಿ ಆಹಾರಕ್ಕೆ ಪ್ರತಿದಿನ 1,137 ಲೀಟರ್‌ ನೀರು ಬೇಕಾಗುತ್ತದೆ. ಆದರೆ ಮಾಂಸ ಆಧಾರಿತ ಆಹಾರಗಳನ್ನು ತಯಾರಿಸಲು ಪ್ರತಿದಿನ 15,000 ಲೀಟರ್‌ಗಿಂತ ಹೆಚ್ಚು ನೀರು ಬೇಕಾಗುತ್ತದೆ.

ಅನೇಕ ರೋಗಗಳಿಗೆ ಮಾಂಸಾಹಾರ ಕಾರಣ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ 100 ಮಿಲಿಯನ್‌ ಜನರು ಜುನೋಸಿಸ್‌ನಿಂದ ರೋಗಗಳಿಂದ ಬಳಲುತ್ತಿದ್ದಾರೆ. ಮಾತ್ರವಲ್ಲದೇ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಪೆಟಾ ಪ್ರಕಾರ ಮಾಂಸ, ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ಹೃದ್ರೋಗ, ಬೊಜ್ಜು, ಕ್ಯಾನ್ಸರ್‌, ಮಧುಮೇಹ ಮತ್ತು ದುರ್ಬಲರಾಗಬಹುದು. ಸಸ್ಯಾಹಾರಿ ಆಹಾರವನ್ನು ತೆಗೆದುಕೊಳ್ಳುವ ಜನರಲ್ಲಿ ಕೆಲವು ರೀತಿಯ ಕ್ಯಾನ್ಸರ್‌ ಬರುವ ಸಾಧ್ಯತೆಗಳಿವೆ. ಆದರೆ ಸಸ್ಯಹಾರಗಳನ್ನು ಸೇರಿಸುವುದರಿಂದ ಶೇ. 50ರಷ್ಟು ಕಡಿಮೆಯಾಗುತ್ತವೆ ಎಂದು ಸಂಶೋಧನೆ ಕಂಡುಹಿಡಿದಿದೆ.

ಎಲ್ಲರೂ ಸಸ್ಯಾಹಾರಿಗಳಾಗಿದ್ದರೆ?
2016ರಲ್ಲಿ, ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಯನದ ಪ್ರಕಾರ ಪ್ರಪಂಚದ ಇಡೀ ಜನಸಂಖ್ಯೆಯು ಮಾಂಸವನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಮಾತ್ರ ತಿನ್ನಲು ಪ್ರಾರಂಭಿಸಿದರೆ, 2050ರ ವೇಳೆಗೆ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ಶೇ. 70ರಷ್ಟು ಕಡಿಮೆ ಮಾಡಬಹುದು ಎಂದು ಅದು ಹೇಳಿದೆ.

ವಿಶ್ವದ ಅಂದಾಜು 12 ಬಿಲಿಯನ್‌ ಎಕ್ರೆ ಭೂಮಿಯನ್ನು ಕೃಷಿ ಮತ್ತು ಸಂಬಂಧಿತ ಕೆಲಸಗಳಿಗೆ ಬಳಸಲಾಗುತ್ತದೆ. ಈ ಭೂಮಿಯಲ್ಲಿ ಶೇ. 68 ಅನ್ನು ಪ್ರಾಣಿಗಳಿಗಾಗಿ ಮೀಸಲಿಡಲಾಗಿದೆ. ಹೀಗಾಗಿ ಜಗತ್ತಿನಲ್ಲಿರುವವರು ಎಲ್ಲರೂ ಸಸ್ಯಾಹಾರಿಗಳಾಗಿದ್ದರೆ ಶೇ. 80ರಷ್ಟು ಭೂಮಿ ಕಾಡುಗಳಾಗಿ ಬದಲಾಗುತ್ತಿದ್ದವು ಎಂಬ ವಾದವೂ ಇದೆ. ಇದು ಕಾರ್ಬನ್‌ ಡೈಆಕ್ಸೆ„ಡ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಉಳಿದ ಶೇ. 20ರಷ್ಟು ಭೂಮಿಯನ್ನು ಕೃಷಿಗೆ ಬಳಸಲಾಗುತ್ತದೆ. ಆದರೆ ಈಗ ಸಾಗುವಳಿ ಮಾಡುವ ಭೂಮಿಯ ಮೂರನೇ ಒಂದು ಭಾಗದಷ್ಟು ಪ್ರಾಣಿಗಳಿಗೆ ಮೇವು ಬೆಳೆಯಲಾಗುತ್ತದೆ.

vegetarian and vegan ನಡುವಿನ ವ್ಯತ್ಯಾಸ ಗೊತ್ತೆ?
ಈ ಎರಡು ಪದಗಳನ್ನು ನಾವು ಯಾವತ್ತೂ ಕೇಳಿರುತ್ತೇವೆ. ಆದರೆ ಇವುಗಳ ಅರ್ಥದ ಕುರಿತು ನಮಗೆ ಯಾವತ್ತೂ ಗೊಂದಲ ಇದೆ. ಪೆಟಾ ಪ್ರಕಾರ, vegetarian ಗಳು ಆಹಾರವನ್ನು ತೆಗೆದುಕೊಳ್ಳುವ ಅದರಲ್ಲಿ ಪ್ರಾಣಿಗಳ ಯಾವುದೇ ಅಂಶ ಆಹಾರದಲ್ಲಿ ಸೇರಿಸಿಕೊಳ್ಳುವುದಿಲ್ಲ. ಆದರೆ veganಗಳು ಎಂದರೆ ಮೊಟ್ಟೆ, ಹಾಲು, ಚೀಸ್‌ ಮೊದಲಾದವುಗಳನ್ನು ಆಹಾರದಲ್ಲಿ ಬಳಸುವವರು ವೇಗನ್ಸ್‌ ಆಗಿರುತ್ತಾರೆ.

  ಕಾರ್ತಿಕ್‌ ಅಮೈ 

 

 

 

 

ಟಾಪ್ ನ್ಯೂಸ್

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.