ಯೋಗ, ಯೋಗಿ ಮತ್ತು ಧ್ಯಾನ ಯೋಗ
Team Udayavani, Jun 21, 2019, 10:24 AM IST
ಮಾನವರು ಜ್ಞಾನವನ್ನು ಗಳಿಸಿ, ಅದನ್ನು ಮುಂದಿನ ಪೀಳಿಗೆಗೆ ಕೊಡುವ ಭಾಗ್ಯಶಾಲಿಗಳು. ಭಗವಾನ್ ಕೃಷ್ಣನು ಅರ್ಜುನನಿಗೆ, ‘ಯೋಗದ ಪರಂಪರೆಯು ಅನಾದಿಕಾಲದಿಂದಲೂ ಹರಿದು ಬಂದಿದೆ. ನಾನು ವಿವಸ್ವನಿಗೆ ಬೋಧಿಸಿದೆ. ವಿವಸ್ವಸು ಮನುವಿಗೆ ಬೋಧಿಸಿದನು. ಮನು ಇಕ್ಷ್ವಾಕುವಿಗೆ ಬೋಧಿಸಿದ. ನಂತರ ಈ ಜ್ಞಾನವು ಇತರ ರಾಜರ್ಷಿಗಳ ಬಳಿ ತಲುಪಿತು. ಯೋಗದ ಈ ಜ್ಞಾನವನ್ನು ಈಗ ನಾನು ನಿನಗೆ ನೀಡುತ್ತಿರುವೆ’ ಎಂದ. ಯೋಗಿಯ ಲಕ್ಷಣವನ್ನು ಕೃಷ್ಣನು ಬಲು ಸುಂದರವಾಗಿ ವಿವರಿಸಿದ್ದಾನೆ. ಎಲ್ಲಾ ಸಂಕಲ್ಪಗಳನ್ನು ತ್ಯಜಿಸಿ ಧ್ಯಾನದಲ್ಲಿ ಕುಳಿತುಕೊಳ್ಳಬಲ್ಲವರೇ ಯೋಗಿ, ಮಗುವಿನಂಥ ಮುಗ್ಧತೆ ಪಡೆದು, ವರ್ತಮಾನದಲ್ಲಿ ಇರಬಲ್ಲವರೇ ಯೋಗಿ. ಯೋಗ ಎಂದರೆ ನಿಜವಾಗಿಯೂ ಏನನ್ನೂ ಮಾಡದಿರುವುದು, ಕೇಂದ್ರದಲ್ಲಿರುವುದು.
ಆದರೆ, ಯೋಗದ ಮಾರ್ಗದಲ್ಲಿ ಹೊಕ್ಕಬೇಕೆಂದರೆ ಕರ್ಮ ಮಾಡಬೇಕು. ಕೃಷ್ಣನ ಮಾತು ಈ ರೀತಿಯ ಗೊಂದಲದಿಂದ ತುಂಬಿರುತ್ತದೆ. ಸೋಂಬೇರಿಗಳ ಮನಸ್ಸು ಧ್ಯಾನದಲ್ಲಿ ಹೊಕ್ಕುವು ದಿಲ್ಲ. ದೇಹ ಚಡಪಡಿಸಿದರೂ, ಸ್ತಬ್ಧವಾಗಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೂ ಯೋಗ ಸ್ಥಿತಿಗೆ ಹೊಕ್ಕಲು ಸಾಧ್ಯವಿಲ್ಲ.
ಯೋಗವು ವಿಪರೀತ ಕೆಲಸ ಮಾಡುವವರಿಗೆ, ವಿಶ್ರಮಿಸಲಾಗದವರಿಗೆ, ಸೋಂಬೇರಿಗಳಿಗೆ, ವಿಪರೀತ ತಿನ್ನುವವರಿಗೆ, ಬಹಳ ಉಪವಾಸ ಮಾಡುವವರಿಗೆ ಆಗುವುದಿಲ್ಲ. ಯುಕ್ತಾಹಾರ ವಿಹಾರಸ್ಯ-ಯೋಗಿಯು ಚಟುವಟಿಕೆ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಹೊಂದಿರುತ್ತಾನೆ ಎಂದ ಕೃಷ್ಣ. ‘ಸನೈಃ ಸನೈರ್ ಉಪರಮೇದ್’ – ನಿಧಾನವಾಗಿ, ಕ್ರಮೇಣವಾಗಿ ಈ ಪಥದಲ್ಲಿ ನಡೆಯಿರಿ ಎಂದ. ‘ಅಭ್ಯಾಸೇನ ತುಕೌಂತೇಯ, ವೈರಾಗ್ಯೇಣ ಚ ಗೃಹ್ಯತೆ’ – ಅಭ್ಯಾಸದಿಂದ, ವೈರಾಗ್ಯದಿಂದ ಇದು ಸಿದ್ಧಿಸುತ್ತದೆ ಎಂದ ಕೃಷ್ಣ. ‘ಸಮಾಜದಲ್ಲಿ ಅನೇಕ ಕರ್ಮ ಯೋಗಿಗಳಿದ್ದಾರೆ, ಆದರೆ ಅಲ್ಲಿ ಇಲ್ಲಿ ಹೊರಡುವ ಮನಸ್ಸನ್ನು ತಂದು ನನ್ನ ಮೇಲಿರಿಸಿ, ನನ್ನನ್ನು ಪಡೆ, ನನ್ನನ್ನು ನಿನ್ನ ಹೃದಯದಲ್ಲಿ ಸದಾ ಇಟ್ಟುಕೊ’ ಎಂದು ಧ್ಯಾನ ಯೋಗವನ್ನು ಕೃಷ್ಣ, ಅರ್ಜುನನಿಗೆ ಬೋಧಿಸಿದ.
● ಶ್ರೀ ಶ್ರೀ ರವಿಶಂಕರ ಗುರೂಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.