ಯುವ ಜನರು ಸ್ಪರ್ಧಿಸಿ; ಗ್ರಾಮಾಭಿವೃದ್ಧಿಯಲ್ಲಿ ಕೈಜೋಡಿಸಿ


Team Udayavani, Dec 11, 2020, 5:54 AM IST

Grama-Swaraj

ನಮ್ಮದೀಗ ಯುವ ಭಾರತ. ಯುವಜನರೇ ದೇಶವನ್ನು ಮುನ್ನಡೆಸುವ ಹೊತ್ತೂ ಸಹ. ಈ ಹಿನ್ನೆಲೆಯಲ್ಲೇ ಉದಯವಾಣಿಯು ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಯುವ ಜನರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕರೆ ನೀಡಿದೆ. ಪತ್ರಿಕೆಯು ಈ ಆಶಯಕ್ಕೆ ಪೂರಕವಾಗಿ “ಯುವ ಗ್ರಾಮ ಸುರಾಜ್ಯ’ ಅಂಕಣ ಆರಂಭಿಸಿದೆ. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು, ಅಭಿಪ್ರಾಯರೂಪಕರು ಗ್ರಾಮೀಣ ಅಭಿವೃದ್ಧಿಗೆ ಯುವ ಜನರ ಅಗತ್ಯವನ್ನು ಪ್ರತಿಪಾದಿಸಲಿದ್ದಾರೆ.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.65ಕ್ಕಿಂತ ಅಧಿಕ ಜನರು 35ಕ್ಕಿಂತ ಕೆಳವಯಸ್ಸಿನವರಾಗಿದ್ದಾರೆ. ಜಗತ್ತಿನಲ್ಲಿಯೇ ಯುವ ದೇಶವೆಂದು ಕರೆಸಿಕೊಳ್ಳು ತ್ತಿರುವ ನಮ್ಮ ರಾಷ್ಟ್ರದ ಜನರ ಸರಾಸರಿ ವಯಸ್ಸು 29. ಇದನ್ನು ಕಂಡು ಜಗತ್ತು ನಿಬ್ಬೆರಗಾಗುತ್ತಿದೆ. ಅದರೆ ವಿಪರ್ಯಾಸವೆಂದರೆ ನಮ್ಮನ್ನಾಳುತ್ತಿರುವವರು ಮಾತ್ರ ವಯಸ್ಸಾದ ರಾಜಕಾರಣಿಗಳು. ನಮ್ಮ ದೇಶದಲ್ಲಿ 35ಕ್ಕಿಂತ ಕಡಿಮೆ ವಯಸ್ಸಿನ ರಾಜಕಾರಣಿಗಳು ಸಿಗುವುದು ಕೇವಲ ಶೇ. 6ರಷ್ಟು ಮಾತ್ರ. ಅವ ರಲ್ಲಿ ಶೇ.90ರಷ್ಟು ಯುವಜನರು ವಂಶ ಪರಂಪರೆ ಯಿಂದ ಬಂದವರೆಂಬುದು ನಮ್ಮ ಅವ್ಯವಸ್ಥೆಗೆ ಹಿಡಿದ ಕನ್ನಡಿ. 1952ರ ಮೊದಲ ಲೋಕಸಭೆಯ ಲ್ಲಿದ್ದ ಸದಸ್ಯರ ಸರಾಸರಿ ವಯಸ್ಸು 46 ಆಗಿದ್ದರೆ, ಇಂದು 17ನೇ ಲೋಕಸಭೆಯಲ್ಲಿ ಅದು 54 ವರ್ಷ. ಸಾಮಾನ್ಯ ಜನರು ನಿವೃತ್ತಿ ಹೊಂದುವ ವಯಸ್ಸಿನಲ್ಲಿ ರಾಜಕಾರಣಿ ಅಧಿಕಾರಕ್ಕೆ ಬರುತ್ತಾನೆ (ಅಪವಾದಗಳು ಬೇರೆ). ಅಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ! ಈ ವ್ಯವಸ್ಥೆ ಬದಲಾಗಬೇಕು, ಯುವಕರು ರಾಷ್ಟ್ರದ ಚುಕ್ಕಾಣಿ ಹಿಡಿಯಬೇಕು.

ಹಳ್ಳಿಗಳು ಭಾರತದ ಜೀವಾಳ! ಗ್ರಾಮೋದ್ಧಾರದ ಮೂಲಕ ದೇಶೋದ್ಧಾರ! ಎಂಬುದು ಅಕ್ಷರಶಃ ಸತ್ಯ. ಕೋಟ್ಯಂತರ ರೂಪಾಯಿ ಅನುದಾನ ಲಭಿಸಿದರೂ ಇಂದು ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಕಾರಣ ಗ್ರಾಮ ಪಂಚಾಯತ್‌ ವ್ಯವಸ್ಥೆಯಲ್ಲಿ ಯುವಕರ ಕೊರತೆಯಿದೆ.

ಗ್ರಾಮಗಳ ಅಭಿವೃದ್ಧಿಯಲ್ಲಿ ಯುವ
ಜನತೆ ಪಾಲ್ಗೊಳ್ಳಬೇಕು. ಯುವಜನತೆಗೆ ಹೊಸ ಯೋಚನೆ-ಯೋಜನೆ, ತಂತ್ರಜ್ಞಾನಗಳನ್ನು ತಿಳಿದು ಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಾಮರ್ಥ್ಯವಿರುತ್ತದೆ. ಇದೀಗ ಊರಿನ ಹಿರಿಯರು ಯುವಕರನ್ನು ಮಾರ್ಗ ದರ್ಶಿಸಿ, ಹುರಿದುಂಬಿಸಿ ಗ್ರಾಮ ಪಂಚಾಯತ್‌ ವ್ಯವಸ್ಥೆಯಲ್ಲಿ ತೊಡಗಿಸಬೇಕಿದೆ. ಹಾಗಾಗದಿದ್ದಲ್ಲಿ ಯುವಕರೇ ಮುಂದೆ ಬಂದು ಚುನಾವಣೆಗಳಲ್ಲಿ ಸ್ಪರ್ಧಿಸಬೇಕು. ಹಿರಿತನಕ್ಕೆ, ಅನುಭವಕ್ಕೆ ತಲೆ ಬಾಗೋಣ, ಮಾರ್ಗದರ್ಶನ ಪಡೆಯೋಣ! ಆದರೆ ದೇಶದ ಉನ್ನತಿಯಲ್ಲಿ ಯುವನೆತ್ತರಿನ ನೇತಾರರು ಬೇಕೇಬೇಕು. ಯುವಜನರು ಗ್ರಾಮ ಪಂಚಾಯತ್‌ ಸದಸ್ಯರಾಗುವ ಮೂಲಕ ಊರಿನ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು. ತದನಂತರ ತಾಲೂಕು, ಜಿಲ್ಲಾ ಪಂಚಾಯತ್‌ ಸದಸ್ಯರಾಗಿ, ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗುವುದಕ್ಕೆ ಈ ಗ್ರಾ. ಪಂ.ವೇದಿಕೆಯಾಗಬಲ್ಲದು. ಹೀಗೆ ತಳಮಟ್ಟ ದಿಂದ ಆಯ್ಕೆಯಾದ ಜನಪ್ರತಿನಿಧಿ ಉತ್ತಮ ನಾಯಕ ನಾಗಿ ರಾಷ್ಟ್ರವನ್ನು ಕಟ್ಟುವ ಸಾಮರ್ಥ್ಯ ವನ್ನು ಹೊಂದುತ್ತಾನೆ. ಆದುದರಿಂದ ಗ್ರಾಮೀಣ ಯುವಕರು ಸಾರ್ವಜನಿಕ ಕ್ಷೇತ್ರಕ್ಕೆ ಧುಮುಕಲು ಈ ಗ್ರಾ.ಪಂ. ಚುನಾವಣೆ ಒಂದು ಸುವರ್ಣಾವಕಾಶ.

ಯುವಕರಿಗೊಂದಿಷ್ಟು ಕಿವಿಮಾತುಗಳು
ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ ಎಂಬುದನ್ನು ನೆನಪಿಡಿ. ಸೋಲು-ಗೆಲುವುಗಳ ಲೆಕ್ಕಾಚಾರ ಬದಿಗಿಡಿ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸ್ಪರ್ಧಿಸುತ್ತಿರುವುದಾಗಿ ನಿಮ್ಮ ಮನಸ್ಸಿನಲ್ಲಿ ದೃಢಪಡಿಸಿಕೊಳ್ಳಿ. ಚುನಾವಣೆಯಲ್ಲಿ ಸೋತರೆ? ಎನ್ನುವ ಭಯ ಬೇಡವೇ ಬೇಡ. ಸ್ಪರ್ಧಿಸಿ ಗೆಲ್ಲುತ್ತೇನೆ! ಎನ್ನುವ ಆತ್ಮವಿಶ್ವಾಸ ಇಟ್ಟುಕೊಳ್ಳಿ. ಚುನಾವಣೆಗೆ ಸ್ಪರ್ಧಿಸುವ ವಿಷಯದಲ್ಲಿ ಸ್ಪಷ್ಟತೆ ಯಿರಲಿ. ನಿಮ್ಮನ್ನು ಒಪ್ಪಿಕೊಳ್ಳುವ ಹಿರಿಯರನ್ನು ಕಂಡು, ಅವರಿಗೆ ನಿಮ್ಮ ಅಭಿಲಾಷೆಯನ್ನು ತಿಳಿಸಿ, ಅವರ ಆಶೀರ್ವಾದ ಪಡೆಯಿರಿ. ಚುನಾವಣೆಗೆ ಸ್ಪರ್ಧಿಸಲು ಬೇಕಾದ ದಾಖಲೆಗಳನ್ನು ತಯಾರು ಮಾಡಿಕೊಳ್ಳಿ. ಅದಕ್ಕಾಗಿ ಬಲ್ಲವರ ಸಹಾಯ ಪಡೆದುಕೊಳ್ಳಿ. ಚುನಾವಣೆಗೆ ಸ್ಪರ್ಧಿಸಿದ ಬಳಿಕ ಎದು ರಾಳಿಯ ಬಗ್ಗೆ ಚಿಂತಿಸಬೇಡಿ, ಬದಲಿಗೆ ನಿಮ್ಮ ಯೋಚನೆ-ಯೋಜನೆಗಳ ಬಗ್ಗೆ ಚಿಂತನೆ ಮಾಡಿ. ಮತದಾರನ ಮನೆ ಬಾಗಿಲಿಗೆ ಹೋಗುವ ಮುನ್ನ ಕನಿಷ್ಠ ಹತ್ತು ಅಂಶಗಳುಳ್ಳ ಪ್ರಣಾಳಿಕೆ ಸಿದ್ಧ ಪಡಿಸಿಕೊಳ್ಳಿ. ಉದಾಹರಣೆಗೆ -ನೀವು ಸ್ಪರ್ಧಿಸುವ ವಾರ್ಡಿನಲ್ಲಿ ಸ್ವತ್ಛತೆಗೆ ಆದ್ಯತೆ, ಕುಡಿಯುವ ನೀರಿನ

ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ಹಿರಿಯರ
ಮನೆಬಾಗಿಲಿಗೆ ಸೇವೆ, ಶಾಲೆಗಳ ನಿರ್ಮಾಣ- ನಿರ್ವಹಣೆ ಇತ್ಯಾದಿ. ಹೀಗೆ ನಿಮ್ಮ ವಾರ್ಡಿನಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಅಭಿವೃದ್ಧಿ ಯೋಜನೆಗಳೊಂದಿಗೆ ಮತದಾರನ ಮನೆಗೆ ತೆರಳಿ, ಅವರಿಗೆ ಮನವರಿಕೆ ಮಾಡಿ.  ಗ್ರಾಮಗಳಲ್ಲಿ ಪಕ್ಷ ರಾಜಕೀಯ ಇರಬಾರ ದೆಂದು ರಾಜಕೀಯ ಪಕ್ಷಗಳ ಚಿಹ್ನೆಯಡಿ ಚುನಾ ವಣೆಯನ್ನು ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ವಿಲ್ಲ. ಆದ್ದರಿಂದ ರಾಜಕೀಯ ಮೇಲಾಟಗಳನ್ನು ಸಂಪೂರ್ಣವಾಗಿ ವರ್ಜಿಸಿ. ನಿಮ್ಮ ಕುರಿತ ಅಪ ಪ್ರಚಾರಕ್ಕೆ ಕಿವಿಗೊಡದೆ ಮತದಾರನ ಮನಗೆಲ್ಲುವತ್ತ ನೀವು ಗಮನಹರಿಸಿ. ನಿಮ್ಮ ಸುತ್ತಮುತ್ತಲಿನವರ ನಕಾರಾತ್ಮಕ ಮಾತುಗಳನ್ನು ನಿರ್ಲಕ್ಷಿಸಿ.

ನಮ್ಮ ಭಾರತ ಹಾಗಾಗಲಿ! ಹೀಗಾಗಲಿ! ವಿಶ್ವಗುರುವಾಗಲಿ! ಎನ್ನುತ್ತ ಮಾತನಾಡುತ್ತಲೇ ಇದ್ದರೆ ಪ್ರಯೋಜನವಿಲ್ಲ. ಯುವಜನತೆ ಸಾಮಾಜಿಕ-ರಾಜಕೀಯ ಕ್ಷೇತ್ರಕ್ಕೆ ಧುಮುಕಿದರೆ ಬದಲಾವಣೆ ಸಾಧ್ಯ. ಏಳಿ! ಎದ್ದೇಳಿ! ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ವಾಣಿಯಂತೆ ನಾವೆಲ್ಲರೂ ಕಾರ್ಯಕ್ಷೇತ್ರಕ್ಕಿಳಿದು ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸೋಣ, ತನ್ಮೂಲಕ ಶ್ರೇಷ್ಠ ಭರತ ರಾಷ್ಟ್ರವನ್ನು ನಿರ್ಮಿಸೋಣ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.