ಕೌಶಲಾಭಿವೃದ್ಧಿ ದೇಶದ ಅಭಿವೃದ್ಧಿಯ ಚಾಲಕ ಶಕ್ತಿ : ಇಂದು ವಿಶ್ವ ಯುವ ಕೌಶಲ ದಿನ


Team Udayavani, Jul 15, 2022, 6:10 AM IST

ಕೌಶಲಾಭಿವೃದ್ಧಿ ದೇಶದ ಅಭಿವೃದ್ಧಿಯ ಚಾಲಕ ಶಕ್ತಿ : ಇಂದು ವಿಶ್ವ ಯುವ ಕೌಶಲ ದಿನ

ಭಾರತವೂ ಸೇರಿದಂತೆ ಇಡೀ ವಿಶ್ವ ಯುವ ಜನಾಂಗ ಕೌಶಲದ ಜ್ಞಾನದ ತಳಹದಿಯ ಮೇಲೆ ನಿಂತಿದ್ದು, ಜಗತ್ತಿನ ಭವಿಷ್ಯವನ್ನು ಇದೇ ಯುವಜನಾಂಗ ನಿರ್ಧರಿಸಲಿದೆ. ಭಾರತ ಯುವ ಶಕ್ತಿಯ ಭಂಡಾರವನ್ನೇ ಹೊಂದಿದ್ದು, ಆತ್ಮನಿರ್ಭರ ಭಾರತಕ್ಕೆ ಯುವ ಜನಾಂಗದ ಕೌಶಲವೇ ಪ್ರೇರಕ ಶಕ್ತಿಯಾಗಲಿದೆ. ಕೌಶಲ ಅಭಿವೃದ್ಧಿಯಿಂದ ಮಾತ್ರ ವ್ಯಕ್ತಿ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ.

ಆರ್ಥಿಕ ಬೆಳವಣಿಗೆ ಹಾಗೂ ವೈಯಕ್ತಿಕ ಯಶಸ್ಸನ್ನು ಸಾಧಿಸುವಲ್ಲಿ ಕೌಶಲಗಳು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಪ್ರಚುರಪಡಿಸಲು ಹಾಗೂ ಕೌಶಲಗಳ ಅಭಿವೃದ್ಧಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಚರ್ಚೆ ಮತ್ತು ಒಲವು ಮೂಡಿಸುವ ಉದ್ದೇಶದಿಂದ 2014ರಲ್ಲಿ ವಿಶ್ವಸಂಸ್ಥೆಯು ಜುಲೈ 15ನ್ನು ವಿಶ್ವ ಯುವ ಕೌಶಲ ದಿನ ಎಂದು ಘೋಷಿಸಿತು. ವಿಶ್ವ ಸಂಸ್ಥೆಯ ಪ್ರಕಾರ, ವಿಶ್ವ ಯುವ ಕೌಶಲ ದಿನದ ಉದ್ದೇಶವು ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮ ಶೀಲತೆಗಾಗಿ ಕೌಶಲ ಗಳೊಂದಿಗೆ ಯುವಜನರನ್ನು ಸಜ್ಜು ಗೊಳಿಸುವ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ತಿಳಿಯ ಪಡಿಸುವುದು. ಜಗತ್ತು ನಿಧಾನ ವಾಗಿ ಸುಸ್ಥಿರ ಅಭಿವೃದ್ಧಿಗೆ ಬದ ಲಾಗುತ್ತಿರುವ ಹಿನ್ನೆಲೆಯಲ್ಲಿ ಯುವಕರ ಕೌಶಲವು ಹೆಚ್ಚು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಕೌಶಲ ದಿನದ ಈ ವರ್ಷದ ಧ್ಯೇಯವಾಕ್ಯ ಭವಿಷ್ಯಕ್ಕಾಗಿ ಯುವ ಕೌಶಲಗಳನ್ನು ಪರಿವರ್ತಿಸುವುದು.

ಸವಾಲುಗಳು ಹಾಗೂ ಅವಕಾಶಗಳು
ರಾಷ್ಟ್ರದ ಆರ್ಥಿಕ ಅಭಿವೃದ್ಧಿಯನ್ನು ನಿರ್ಧರಿಸುವ ಸಮೀಕರಣಗಳು ಇತ್ತೀಚಿನ ದಶಕಗಳಲ್ಲಿ ಬದಲಾಗಿವೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚಿನ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಬದಲಾವಣೆಗಾಗಿ ಕಾಯುತ್ತಿವೆ.

ಇಂದು ಜಾಗತಿಕ ಜನಸಂಖ್ಯೆಯ ಶೇ. 16ರಷ್ಟು ಜನ 15ರಿಂದ 24 ವಯಸ್ಸಿನ ಯುವಕ-ಯುವತಿಯರಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಒಂದು ಅಂದಾಜಿನ ಪ್ರಕಾರ 3.3 ಶತಕೋಟಿ ಉದ್ಯೋಗಿಗಳ ಅಗತ್ಯವಿರುತ್ತದೆ. ಅತೀ ಹೆಚ್ಚು ಉದ್ಯೋಗವನ್ನು ಒದಗಿಸುವ ವಲಯ ಗಳಾಗಿ ಸೇವೆ ಹಾಗೂ ಹೆಚ್ಚು ಬಂಡವಾಳ ಅಗತ್ಯ ವಿರುವ ಉತ್ಪಾದನ ಕ್ಷೇತ್ರಗಳು ಮೂಡಿಬರುತ್ತವೆ. ಇಲ್ಲಿ ಕೌಶಲಕ್ಕೆ ಹೆಚ್ಚಿನ ಆದ್ಯತೆ ಲಭಿಸಲಿದೆ.

ಬದಲಾಗುತ್ತಿರುವ ಉದ್ಯೋಗಗಳು
ಪ್ರಪಂಚದಾದ್ಯಂತದ ಯುವಕರು ಇಂದು ಅವರ ಪೋಷಕರು ಎದುರಿಸಿದ ಸವಾಲುಗಳಿಗಿಂತ ಭಿನ್ನವಾದ ಕೌಶಲ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯ. ಆದರೆ ಅದು ಇಂದಿನ ಅಗತ್ಯವೂ ಆಗಿದೆ.

ಜಾಗತಿಕ ಆರ್ಥಿಕ ಸಂಘಟನೆಯ 2019ರ ವರದಿಯ ಪ್ರಕಾರ, ಇಂದು ಪ್ರಾಥಮಿಕ ಶಾಲೆಗೆ ಪ್ರವೇಶಿಸುವ ಶೇ. 65ರಷ್ಟು ಮಕ್ಕಳು ಅಂತಿಮವಾಗಿ ಇನ್ನೂ ಅಸ್ತಿತ್ವದಲ್ಲಿರದ ಹೊಸ ಉದ್ಯೋಗ ಪ್ರಕಾರಗಳಲ್ಲಿ ತೊಡಗುವಂತಾಗುತ್ತದೆ. ಹಳೆಯ ಉದ್ಯೋಗಗಳೂ ಸಹ ತಂತ್ರಜ್ಞಾನ, ಜಾಗತೀಕರಣ ಹಾಗೂ ರೂಪಾಂತ ರಗೊಳ್ಳುತ್ತಿರುವ ಜನಸಂಖ್ಯೆ ಯಿಂದಾಗಿ ಆಮೂಲಾಗ್ರವಾಗಿ ವಿಭಿನ್ನವಾಗಲಿದೆ.

ಜಗತ್ತಿನÇÉೇ ಯುವ ದೇಶ ಭಾರತ
ಭಾರತದ ಜನಸಂಖ್ಯೆಯಲ್ಲಿ ಕಿರಿಯರ ಸಂಖ್ಯೆ ಜನಗತ್ತಿನಲ್ಲಿಯೇ ಹೆಚ್ಚಿನದ್ದಾಗಿದೆ. ನಮ್ಮ ಜನಸಂಖ್ಯೆಯ ಶೇ. 65ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಮ್ಮ ಜನಸಂಖ್ಯೆಯ ಶೇ. 62ರಷ್ಟು ಮಂದಿ 15-59 ವರ್ಷಗಳ ದುಡಿಯುವ ವಯಸ್ಸಿನ ಗುಂಪಿನಲ್ಲಿದ್ದಾರೆ.

ನಮ್ಮ ಶಿಕ್ಷಣದ ವ್ಯವಸ್ಥೆಯು ವ್ಯಾಪಕ ಗುಣಮಟ್ಟದ ಸವಾಲು ಗಳನ್ನು ಎದುರಿಸುತ್ತಿದೆ. ವಿವಿಧ ಕ್ಷೇತ್ರಗಳ ಬಹುಪಾಲು ಪದವೀಧರರು ಉದ್ಯೋಗಕ್ಕೆ ಅನರ್ಹರು ಎಂದು ವಿವಿಧ ಅಧ್ಯಯನಗಳು ವಿಷದಪಡಿಸುತ್ತಿರುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲಿನತ್ತ ಬೊಟ್ಟು ಮಾಡುತ್ತಿದೆ. ಭಾರತದ ಉನ್ನತ ಶಿಕ್ಷಣದಿಂದ ಬಹುಪಾಲು ಪದವೀಧರರು ವೇಗವಾಗಿ ಬದಲಾಗುತ್ತಿರುವ ಆರ್ಥಿಕತೆಯ ಬೇಡಿಕೆ ಹಾಗೂ ಅವಕಾಶಗಳಿಗೆ ಅಗತ್ಯವಾದ ಶಿಕ್ಷಣವನ್ನು ಪಡೆಯುತ್ತಿಲ್ಲ ಎಂಬ ಕೊರಗು ಹಾಗೂ ದೂರು ಇನ್ನೊಂದೆಡೆಯಿಂದ ಕೇಳಿಬರುತ್ತಿದೆ.

ಸ್ಕಿಲ್‌ ಇಂಡಿಯಾ
ಯೋಗ್ಯವಾದ ಉದ್ಯೋಗವನ್ನು ಪಡೆಯಲು ಹಾಗೂ ಉದ್ಯಮಶೀಲತೆಯನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಯುವಕರಿಗೆ ಅಗತ್ಯ ಶಿಕ್ಷಣ, ತರಬೇತಿ ಹಾಗೂ ಕೌಶಲಗಳನ್ನು ಒದಗಿಸುವ ಚೌಕಟ್ಟು ಅತೀ ಅಗತ್ಯ. ಕೌಶಲದ ಕೊರತೆಯು ಭಾರತೀಯ ಕೈಗಾರಿಕೆಗಳ ಉತ್ಪಾದಕತೆ ಹಾಗೂ ಆವಿಷ್ಕಾರಗಳ ಸಾಮರ್ಥ್ಯದ ಮೇಲೆ ಗಂಭೀರ ಒತ್ತಡ ಉಂಟು ಮಾಡುವುದರೊಂದಿಗೆ ಜಾಗತಿಕ ಆರ್ಥಿಕತೆಯಲ್ಲಿ ಅವುಗಳ ಸ್ಪರ್ಧಾತ್ಮಕ ಮಟ್ಟವನ್ನೂ ನಿಸ್ಸಂದೇಹವಾಗಿ ಕುಗ್ಗಿಸುತ್ತದೆ. ಕನಿಷ್ಠ ವಿದ್ಯಾರ್ಹತೆಯ ಕಾರ್ಮಿಕರೇ ಹೆಚ್ಚಾಗಿರುವ ಅನೌಪಚಾರಿಕ ವಲಯದ ಘಟಕಗಳು ಜಾಗತಿಕ ಗುಣಮಟ್ಟವನ್ನು ತಲುಪಲು ಸಹಜವಾಗಿ ಅಸಮರ್ಥವಾಗುತ್ತದೆ. ಆದುದರಿಂದ ಇಂದಿನ ಯುವ ಜನತೆಗೆ ಕೌಶಲಯುಕ್ತ ಶಿಕ್ಷಣ ಲಭಿಸುವುದು ಅಗತ್ಯವಾಗಿದೆ. ಇದನ್ನು ತಿಳಿದಿರುವ ಕೇಂದ್ರ ಸರಕಾರ ಈಗಾಗಲೇ ಸ್ಕಿಲ್‌ ಇಂಡಿಯಾ ಎಂಬ ಯೋಜನೆ ಜಾರಿಗೊಳಿಸಿ ಆ ಮೂಲಕ ತರಬೇತಿ ನೀಡುತ್ತಿದೆ.

ಕಲಿಕೆ ಚಾಲಿತ ಶಿಕ್ಷಣ
ಭಾರತದ ನೂತನ ಶಿಕ್ಷಣ ನೀತಿಯಲ್ಲಿ ಕೂಡ ವಿದ್ಯಾರ್ಥಿಗಳ ಕೌಶಲಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಅಂಕಪಟ್ಟಿ ಚಾಲಿತ ಶಿಕ್ಷಣದಿಂದ ಕಲಿಕೆ ಚಾಲಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿ¤ದೆ. ಬಾಯಿಪಾಠಕ್ಕಿಂತ ಸೃಜನಶೀಲತೆಗೆ ಒತ್ತು ನೀಡಿದಾಗ ಆಧುನಿಕತೆಗೆ ಅನುಗುಣವಾದ ಪ್ರಗತಿಪರ ಬದಲಾವಣೆಗಳು ಸಹಜವಾಗಿ ಮೈಗೂಡುತ್ತವೆ. ರಾಷ್ಟ್ರೀಯ ಶಿಕ್ಷಣ ನೀತಿ ಅಂಕಪಟ್ಟಿಯ ಬದಲಾಗಿ ಸಮಗ್ರ ಶೈಕ್ಷಣಿಕ ಕಾರ್ಡ್‌ ನೀಡಲಿದೆ. ಇದು ವಿದ್ಯಾರ್ಥಿಯ ಅನನ್ಯ ಸಾಮರ್ಥ್ಯ, ನಡವಳಿಕೆ, ಪ್ರತಿಭೆ, ಕೌಶಲ, ದಕ್ಷತೆ, ಸಾಧ್ಯತೆ ಮೊದಲಾದ ವಿವರಗಳನ್ನು ಒಳಗೊಂಡಿರುತ್ತದೆ. ಇದು ಕೌಶಲ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ.

ಸಮಕಾಲೀನ ಜ್ಞಾನ, ಕೌಶಲ ಅಗತ್ಯ
ಬೆಳವಣಿಗೆಗೆ ಬದಲಾವಣೆ ಅಗತ್ಯ ಹಾಗೂ ಬದಲಾವಣೆ ಪ್ರಗತಿಪರ ಆಗಿರಬೇಕು. ಪ್ರಗತಿಪರ ನಡವಳಿಕೆಗಳನ್ನು ಅಳವಡಿಸಲು ಆಧುನಿಕ ಜ್ಞಾನ, ಮನೋಧರ್ಮ ಹಾಗೂ ಕೌಶಲ ಅಗತ್ಯ. ಪ್ರತಿಭಾವಂತರಿಗೆ ಇದನ್ನು ಸೃಷ್ಟಿಸುವ ಕೌಶಲವಿರುತ್ತದೆ. ಕೊಟ್ಟ ನೋಟ್ಸ್‌ ಅನ್ನು ಸ್ವಲ್ಪವೂ ವ್ಯತ್ಯಾಸವಿಲ್ಲದೆ ಬರೆಯುವವರು ಬುದ್ಧಿವಂತರು ಹಾಗೆ ಪೂರ್ತಿಯಾಗಿ ಬರೆಯದೆ ಸ್ವಸಾಮರ್ಥ್ಯದಿಂದ ಉತ್ತರವನ್ನು ಸೃಜಿಸುವ ಸಾಮರ್ಥ್ಯ ಇರುವುದು ಪ್ರತಿಭಾವಂತರಿಗೆ ಮಾತ್ರ. ಬುದ್ಧಿವಂತ ಸೋಲಬಹುದು. ಆದರೆ ಪ್ರತಿಭಾವಂತನು ಸೋಲಿನಿಂದ ತಪ್ಪಿಸಿಕೊಳ್ಳಲು ಅನ್ಯಮಾರ್ಗವನ್ನು ಕಂಡುಕೊಳ್ಳುತ್ತಾನೆ.

ಕೌಶಲ ಎಂಬುದು ಪ್ರತೀ ಹೆಜ್ಜೆಯಲ್ಲೂ ಹೊಸತನ ಸಾಧಿಸುವುದು, ಕೌಶಲ ಚಲನಶೀಲವಾಗಿದೆ. ನಿರಂತರ ಪರಿಷ್ಕರಣೆ ಮಾಡಿಕೊಳ್ಳಬೇಕು. ಇಂದಿನ ಕೆಲಸಗಳನ್ನು ನಿನ್ನೆಯ ವಿಧಾನಗಳ ಮೂಲಕ ಮಾಡಿ ನಾಳೆ ವ್ಯವಹಾರ ಮಾಡಲಾಗದು ಎಂಬುದು ಉದ್ಯಮ ಜಗತ್ತಿನ ಮಾರ್ಗದರ್ಶಿ ಸೂತ್ರ. ನಿರಂತರ ಕಲಿಕೆ, ಅನ್ವೇಷಣೆ ಹಾಗೂ ಅಳವಡಿಕೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಕೀಲಿಕೈ.

ಜನಸಂಖ್ಯೆ ಸಂಪನ್ಮೂಲವಾಗಲಿ
ಯುವ ಜನರಲ್ಲಿ ಕೌಶಲವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತು ಆಗಿ ಪರಿವರ್ತಿಸಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯ. ಜ್ಞಾನಕ್ಷೇತ್ರದಲ್ಲಿ ಪ್ರಪಂಚ ಇಂದು ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕಲ್ಪನೆಗೂ ಎಟುಕದ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಮುನ್ನಡೆಗಳ ಕಾಲದಲ್ಲಿ ಸಮಕಾಲೀನ ಕೌಶಲವರ್ಧನೆ ಒಟ್ಟು ಬೆಳವಣಿಗೆಯ ಅಡಿಪಾಯವಾಗಿದೆ.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹು ಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಪುಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.

– ಡಾ| ಎ. ಜಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.