ರೋಗ ಮುಚ್ಚಿಡಬೇಡಿ ಎಂದಿದ್ದ ಗಾಂಧಿ


Team Udayavani, Oct 2, 2020, 6:25 AM IST

ರೋಗ ಮುಚ್ಚಿಡಬೇಡಿ ಎಂದಿದ್ದ ಗಾಂಧಿ

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಪ್ಲೇಗ್‌, ಕಾಲರಾ, ಸಿಡುಬು, ಸ್ಪಾನಿಶ್‌ ಫ್ಲ್ಯೂ ಇತ್ಯಾದಿ ಸಾಂಕ್ರಾಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿ ದ್ದವು. ಜೀವನದುದ್ದಕ್ಕೂ ಕಾಯಿಲೆಗಳು ಬಾರ ದಂತೆ ಎಷ್ಟು ಎಚ್ಚರಿಕೆ ವಹಿಸಬೇಕು, ರೋಗಿಗಳ ಸೇವೆಗಳನ್ನು ಹೇಗೆ ಮಾಡಬೇಕೆಂದು ಗಾಂಧೀಜಿ ಜನಜಾಗೃತಿ ಮೂಡಿಸುತ್ತಿದ್ದರು. ಈಗ ಕೊರೊನಾ ಸೋಂಕನ್ನು ಕೆಲವರು ಮುಚ್ಚಿಡುವ ಸಂದರ್ಭ ದಲ್ಲಿ ಗಾಂಧೀಜಿಯವರು ನೂರು ವರ್ಷಗಳ ಹಿಂದೆ ರೋಗವನ್ನು ಮುಚ್ಚಿಡಬೇಡಿ, ರೋಗಿ ಗಳನ್ನು ಪ್ರತ್ಯೇಕವಾಗಿರಿಸಿ ಶುಶ್ರೂಷೆ ಅಗತ್ಯ ಎಂದು ಹೇಳಿದ್ದು ಸಮಯೋಚಿತವಾಗುತ್ತಿದೆ.

ಪ್ಲೇಗ್‌, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ಪಾನಿಶ್‌ ಫ್ಲ್ಯೂ ಮಾತ್ರ 1918-19ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಇದು ಹರಡಿದ್ದು ಒಂದನೆಯ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರು ಮುಂಬಯಿ ಮೂಲಕ ಹಡಗಿನಲ್ಲಿ 1918ರ ಮೇ 29ರಂದು ಬಂದಾಗ. ಆಗ ಪೊಲೀಸರು, ಮಿಲ್‌ಗ‌ಳಲ್ಲಿ ಕೆಲಸ ಮಾಡುವವರು, ಸರಕಾರಿ ನೌಕರರು ತೀವ್ರ ಅಸ್ವಸ್ಥರಾದರು. ಎಲ್ಲರೂ ಒಂದೇ ದಿನ ಚಳಿ, ಜ್ವರ, ಮೈಕೈ ನೋವು ಇತ್ಯಾದಿಗಳಿಂದ ರಜೆ ಹಾಕಬೇಕಾಗಿ ಬಂತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್‌ ಮದ್ರಾಸ್‌ ಪ್ರಾಂತ್ಯ, ಮುಂಬಯಿ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್‌ ಪ್ರಾಂತ್ಯಗಳಿಗೆ (ಹೈದರಾಬಾದ್‌ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ ಧಾರವಾಡದ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್‌ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. 2ರಷ್ಟು ಮಂದಿ ಸಾವಿಗೀಡಾಗಿದ್ದರೆಂದು ಅಂದಾಜಿಸಲಾಗಿದೆ. ದೇಶದಲ್ಲಿ 1 ಕೋಟಿಗೂ, ಜಗತ್ತಿನಲ್ಲಿ 5 ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು.

ಮರಣ ಆಗ-ಈಗ: ಹಿಂದೆ ಜನನ, ಮರಣಗಳನ್ನು ನಿಖರವಾಗಿ ದಾಖಲಿಸುವ ಕ್ರಮವಿರಲಿಲ್ಲ. ಸ್ಪ್ಯಾನಿಶ್‌ ಫ‌ೂÉéನಿಂದ ಸುಮಾರು ಕರಾವಳಿಯಲ್ಲಿ 4,000 ಜನರು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. 1905-06ರಲ್ಲಿ ಕಾಲರಾ ದಿಂದ ಸುಮಾರು 400 ಮಂದಿ ಸಾವಿಗೀಡಾಗಿದ್ದರು. ನೂರು ವರ್ಷಗಳ ಬಳಿಕ ಕೊರೊನಾ ಕಾಡುತ್ತಿದೆ. ವೈಜ್ಞಾನಿಕವಾಗಿ ಬಹಳಷ್ಟು ಮುಂದುವರಿದಿದ್ದರೂ ಕರ್ನಾಟಕದಲ್ಲಿ ಇದು ವರೆಗೆ ಸುಮಾರು 9,000, ಕರಾವಳಿಯಲ್ಲಿ ಸುಮಾರು 700 ಜನರು ಅಸುನೀಗಿದ್ದಾರೆ.

1904ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಪ್ಲೇಗ್‌ ಮಹಾಮಾರಿ ಬಂದಿರುವುದನ್ನು ಗುರುತಿಸಿ ಆರೋಗ್ಯ ಇಲಾಖೆಯ ಗಮನಕ್ಕೆ ಮೊದಲು ತಂದವರೇ ಗಾಂಧೀಜಿ. ಸೋಂಕಿತರನ್ನು ಪ್ರತ್ಯೇಕಿ ಸಿಟ್ಟು (ಕ್ವಾರಂಟೈನ್‌ ಎನ್ನುತ್ತಿದ್ದೇವೆ) ಆರೈಕೆಯಲ್ಲಿ ತೊಡಗಿದರು. 1912ರಲ್ಲಿ ಡರ್ಬಾನಿನಲ್ಲಿ ಪ್ಲೇಗ್‌ ಬಂದಾಗ ಪ್ಲೇಗ್‌ ಸಮಿತಿ ರಚಿಸಿದರು. ಸಿಡುಬು ರೋಗ ಸಾಂಕ್ರಾಮಿಕವಾದಾಗಲೂ ಅರಿವು ಮೂಡಿಸಿದರು. ಜನವರಿಯಲ್ಲಿ ತಮ್ಮ ಇಂಡಿಯನ್‌ ಒಪೀನಿಯನ್‌ ಪತ್ರಿಕೆ ಮೂಲಕ ಯಾವುದೇ ಕಾರಣಕ್ಕೂ ರೋಗವನ್ನು ಮುಚ್ಚಿಡದಂತೆ ಎಚ್ಚರಿಸಿದ್ದರು. ಆಗಸ್ಟ್‌ನಲ್ಲಿ ಸಿಡುಬಿನ ಎರಡನೇ ಅಲೆಯ ಬಗ್ಗೆಯೂ ಪತ್ರಿಕೆಯಲ್ಲಿ ಎಚ್ಚರಿಸಿದ್ದರು ಎನ್ನುತ್ತಾರೆ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್‌ ರಾವ್‌.

ಗಾಂಧಿ ಸೊಸೆ, ಮೊಮ್ಮಗ ಸೋಂಕಿಗೆ ಬಲಿ: 1915ರಲ್ಲಿ ಭಾರತಕ್ಕೆ ಮರಳಿದ ಬಳಿಕ ಸ್ವತ್ಛತೆ, ಸ್ವಾಸ್ಥ್ಯದ ಬಗ್ಗೆ ಎಚ್ಚರಿಸ‌ುತ್ತಿದ್ದರು. ಸ್ಪ್ಯಾನಿಶ್‌ ಫ್ಲ್ಯೂ ಕಾಡಿದಾಗ ಗಾಂಧೀಜಿ ಡೀಸೆಂಟ್ರಿ(ಆಮಶಂಕೆ)ಗೆ ತುತ್ತಾಗಿ ದೀರ್ಘ‌ ಅನಾರೋಗ್ಯದಿಂದ ಹಾಸಿಗೆ ಹಿಡಿದು ಕೆಲಸ ಮಾಡಲು ಆಗಲಿಲ್ಲ. ಅನು ಯಾಯಿಗಳು ಕೆಲವು ಹಳ್ಳಿಗಳಲ್ಲಿ ನೆರವಾಗಿದ್ದರು. ಸ್ಪ್ಯಾನಿಶ್‌ ಫ್ಲ್ಯೂಗೆ ಅವರ ಸೊಸೆ, ಮೊಮ್ಮಗ ಬಲಿಯಾಗಿದ್ದರು. ಈಗಲೂ ಗಣ್ಯಾತಿಗಣ್ಯರನ್ನು ಕೊರೊನಾ ಆಹುತಿ ತೆಗೆದುಕೊಳ್ಳುತ್ತಿದೆ.

“ಮೂಢನಂಬಿಕೆ’ ಅರ್ಥವ್ಯಾಪ್ತಿ: 1929ರಲ್ಲಿ ತಮ್ಮ ಯಂಗ್‌ ಇಂಡಿಯಾ ಪತ್ರಿಕೆಯಲ್ಲಿ ಓದುಗ ರೊಬ್ಬರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸಾಂಕ್ರಾಮಿಕ ಗಳು ಅಶುಚಿತ್ವದಿಂದಾಗಿ, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬರುತ್ತವೆ. ಸಿಡುಬಿನಂತಹ ಮಹಾಮಾರಿಗಳಿಗೆ ಮದ್ದು ಇಲ್ಲವೆಂದು ಜನರು ಮೂಢನಂಬಿಕೆಗಳನ್ನು ಪೋಷಿಸಿ ಹಣ ಪೋಲು ಮಾಡಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಿ¨ªಾರೆ ಎಂದಿದ್ದರು. ಈಗಲೂ ಜ್ವರ, ಶೀತವೇ ಮೊದಲಾದ ಲಕ್ಷಣಗಳು ಕಂಡರೂ ಮನೆ ಯಲ್ಲಿಯೇ ಮಾತ್ರೆಗಳನ್ನು ನುಂಗಿ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈಗ ಗಾಂಧೀಜಿ ಹೇಳಿದ ಮೂಢನಂಬಿಕೆ ವೈದ್ಯಕೀಯ ವಿಜ್ಞಾನದ ಪ್ರಧಾನ ಭಾಗವಾದ ಮಾತ್ರೆಗಳ ನುಂಗುವಿಕೆಯೂ ಆಗಿರುವುದು ವಿಪರ್ಯಾಸ. ಸೋಂಕು ತಗಲಿದೆ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುವ ಮನಃಸ್ಥಿತಿ ಇದೆ. ಇದರಿಂದಾಗಿ ಗುಣಪಡಿಸಬಹುದಾದ ವ್ಯಕ್ತಿಗಳೂ ನಿರ್ಲಕ್ಷ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ವೆಂಟಿಲೇಟರ್‌, ಐಸಿಯು ಬೆಡ್‌ನ‌ಲ್ಲಿದ್ದು ಗುಣಮುಖರಾಗಿ ಬಂದವರ ಅನುಭವ ಕೇಳಿದರೆ ಯಾರೂ ಸೋಂಕನ್ನು ಮುಚ್ಚಿಡಲಾರರು.

ಗಾಂಧಿ ಕರೆ ಈಗ ಏಕೆ ಪ್ರಸ್ತುತ?: ವೆಂಟಿಲೇಟರ್‌, ಐಸಿಯು ಬೆಡ್‌ಗಳ ಕೊರತೆ ಎದುರಾಗುತ್ತಿರುವ ಹೊತ್ತಿನಲ್ಲಿಯೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿ ಇದೇ ಸ್ಥಿತಿ ಮುಂದುವರಿದು ಜನವರಿಯೊಳಗೆ ಲಸಿಕೆ ಲಭ್ಯವಾಗದಿದ್ದರೆ ಎಪ್ರಿಲ್‌ನಲ್ಲಿ ರಾಜ್ಯದಲ್ಲಿ 25 ಲಕ್ಷ ಜನರಿಗೆ ಸೋಂಕು ತಗಲಬಹುದು, 25,000 ಜನರು ಸಾವಿಗೀಡಾಗ ಬಹುದು ಎಂದು ಎಚ್ಚರಿಸಿದೆ. ಲಸಿಕೆ ಸಿಗುವ ವೇಳೆಗೆ ಜಗತ್ತಿನಲ್ಲಿ 20 ಲಕ್ಷ ಜನರು ಅಸುನೀಗ ಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹಿಂದೆ ಈಗಿನಂತಹ ಶಿಕ್ಷಣದ ಅರಿವು ಇದ್ದಿರಲಿಲ್ಲ. ಈಗ ಶೈಕ್ಷಣಿಕವಾಗಿ ಮುಂದುವರಿದೂ ಅದೇ ಸ್ಥಿತಿಯನ್ನು ಎದುರಿಸುತ್ತಿರುವಾಗ ಗಾಂಧೀಜಿ ಮಾತು ಸಕಾಲಿಕವೆನಿಸುತ್ತದೆ.

ಸಾಂಕ್ರಾಮಿಕಗಳ ಸಂದರ್ಭದಲ್ಲಿ ಗಾಂಧೀಜಿ ಹೇಳಿಕೆ
ಸಾಂಕ್ರಾಮಿಕ ರೋಗಗಳ ಸಂದರ್ಭ ರೋಗವನ್ನು ಮುಚ್ಚಿಡುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಇದರಿಂದ ಹಾನಿ ಹೆಚ್ಚು. ಮುಚ್ಚಿಟ್ಟ ವ್ಯಕ್ತಿ ನರಳುವುದಲ್ಲದೆ ದಂಡನೆಗೂ ಒಳಗಾಗಿ ಕಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಇಡೀ ಸಮುದಾಯ ಕಷ್ಟ ಅನುಭವಿಸಬೇಕು.

ರಸ್ತೆ ಬದಿ ಮಲಮೂತ್ರ ವಿಸರ್ಜಿಸುವುದು, ಮೂಗನ್ನು ಸುರಿಯುವುದು, ಉಗುಳುವುದು ದೇವರ ಹಾಗೂ ಮಾನವತೆ ವಿರುದ್ಧ ಎಸಗುವ ಪಾಪಗಳು.

ಎಲ್ಲೆಂದರಲ್ಲಿ ಉಗುಳುವುದು ದಂಡನಾರ್ಹವಾದದ್ದು ಎಂದರೂ ತಪ್ಪಾಗದು. (ಈಗ ಕೇಂದ್ರ ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತಿದೆ)

ರೋಗಗಳನ್ನು ನಿವಾರಿಸಲು ರೋಗಿಗಳನ್ನು ಪ್ರೀತಿಸಿ. ಆರೈಕೆಯನ್ನು ದಯಾಪರತೆ, ಪ್ರೀತಿ, ಮಾನವೀಯ ಪ್ರಜ್ಞೆಯಿಂದ ಮಾಡಬೇಕು, ಆತ್ಮವಿಶ್ವಾಸ ತುಂಬಬೇಕು. ನಮ್ಮ ಹೋರಾಟ ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧವಲ್ಲ. (ಕೊನೆಯ ವಾಕ್ಯವನ್ನು ಈಗ ಮೊಬೈಲ್‌ ದೂರವಾಣಿಯ ಸಂದೇಶದಲ್ಲಿ ಬಳಕೆ ಮಾಡಲಾಗಿದೆ.)

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.