ನೊಬೆಲ್ ಪ್ರಶಸ್ತಿಗೂ ಗುಡ್ ಇನಫ್
Team Udayavani, Oct 20, 2019, 5:54 AM IST
ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ ಕುಳಿತುಕೊಳ್ಳಲೇ? ನಗುವಿನ ಅಲೆ ಇನ್ನೊಮ್ಮೆ ಫೋನ್ ಮುಖಾಂತರವೂ ಹರಡಿತು.
ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹ ವಿಜ್ಞಾನಿಯೊಬ್ಬರ ಅವಲೋಕನ ಅಲ್ಲಿಯೇ ನೆಟ್ಟಿತು. ನೊಬೆಲ್ ಪಾರಿತೋಷಕಗಳ ಚರಿತ್ರೆಯಲ್ಲಿಯೂ ಅದೊಂದು ಹೊಸ ದಾಖಲು. ಜಾನ್ ಬಿ ಗುಡ್‌ಎನೌಫ್ ಅವರಿಗೆ ಜುಲೈ 25, 2019ರಂದು ಭರ್ತಿ 97 ವರ್ಷ ಪ್ರಾಯ. ಕಳೆದ ವಾರ (ಅಕ್ಟೋಬರ್ 10, 2019) ನೊಬೆಲ್ ಸಮಿತಿ 119 ವರ್ಷಗಳಿಂದ ಸನ್ಮಾನಿಸುತ್ತಾ ಬಂದಿರುವ ನೊಬೆಲ್ ಸನ್ಮಾನವನ್ನು ಅತ್ಯಂತ ಹಿರಿಯರೊಬ್ಬರಿಗೆ ಪ್ರದಾನ ಮಾಡುತ್ತಿರುವುದು ಒಂದು ಇತಿಹಾಸ.
ಗುಡ್‌ಎನೌಫ್ ಅವರ ದಿನಚರಿಯಲ್ಲಿ ಒಂದು ಶಿಸ್ತು ಇದೆ. ಮುಂಜಾವಿನಲ್ಲೇ ಎದ್ದು ಹಲ್ಲುಜ್ಜುತ್ತಿ ರುವಾಗ ಅವರಿಗೆ ಒಂದು ಫೋನ್ ಕರೆ ಬರುತ್ತದೆ. ಟಿವಿ ವರದಿಗಾರ ಗುಡ್‌ಎನೌಫರಲ್ಲಿ ಕೇಳುತ್ತಾರೆ, ಸರ್ ನಿಮಗೆ ಇಂದು ನೊಬೆಲ್ ಪ್ರಶಸ್ತಿಯ ಘೋಷಣೆ ಆಗಿರುತ್ತದೆ, ಹೇಗೆ ಅನಿಸುತ್ತದೆ? ನನಗೆ ಖುಷಿ ಮತ್ತು ಆಶ್ಚರ್ಯವಾಗುತ್ತಿದ್ದರೂ, ನಾನು ಮಾತ್ರ ಇಂದಿನವರೆಗೆ ಏನು ವ್ಯಕ್ತಿಯಾಗಿ ಇದ್ದೆನೋ ಮುಂದೆಯೂ ಅವನೇ ಆಗಿರುತ್ತೇನೆ. ನನಗೆ ನೊಬೆಲ್ ಪ್ರಶಸ್ತಿ ಬರಲಿ, ಬಿಡಲಿ. ನನ್ನ ಜೀವನದಲ್ಲಿ ಒಂದಿನಿತೂ ವ್ಯತ್ಯಾಸವಾಗುವುದಿಲ್ಲ.
ವಿಚಿತ್ರವೆಂದರೆ ನೊಬೆಲ್ ಸಮಿತಿಯವರು ಈ ಹಿರಿಯ ವಿಜ್ಞಾನಿಗೆ ಪ್ರಶಸ್ತಿ ನೀಡಲಿರುವ ವಿಚಾರ ತಿಳಿಸಿರಲೇ ಇಲ್ಲ. ತಿಳಿಸುವ ಪ್ರಯತ್ನ ಮಾಡಿದ್ದರಂತೆ. ಫೋನ್ ಆಫ್ ಮಾಡಿ ಬೇಗ ನಿದ್ದೆಗೆ ಹೋಗಿದ್ದರೆನೋ. ಅಮೆರಿಕದ ಬೆಂಜಮಿನ್ ಫ್ರಾಂಕ್ಲಿನ್ ಅವರ ಮಾತು, ಬೇಗ ಮಲಗಿ ಬೇಗನೇಳಲು ಯೋಗಕ್ಷೇಮ ಖಚಿತವು ಮನುಜಗೆ ಎಂಬುದನ್ನು ಪಾಲಿಸುತ್ತಾರೆ.
ಪ್ರೊ| ಗುಡ್‌ಎನೌಫ್, ನೀವು ಈಗ (ಈ ವಯಸ್ಸಿನಲ್ಲಿ) ಏನು ಮಾಡುತ್ತಿದ್ದೀರಿ? ವರದಿಗಾರ ಕೇಳಿದ. ಗುಡ್‌ಎನೌಫರ ನಗು ಇಡೀ ವಾತಾವರಣವನ್ನು ತುಂಬಿತು. ಅವರ ನಗು ಯಾವಾಗಲೂ ಅವರ ವ್ಯಕ್ತಿತ್ವದ ಒಂದು ಭಾಗ. ಆ ನಗು ಕೇಳಿದರೆ ಅಥವಾ ನೋಡಿದರೆ ಅದೊಂದು ಅದ್ಭುತ ಅನುಭವ. ಸುತ್ತಲಿನ ವಾತಾವರಣವಿಡೀ ಕಂಪಿಸಲು ಪ್ರಾರಂಭಿಸುತ್ತದೆ. ಅದು ಆನಂದವನ್ನು ಪಸರಿಸುತ್ತದೆ. ನಗುತ್ತಲೇ ಉತ್ತರಿಸಿದರು,
ಇನ್ನೇನು, ಗಂಟೆ ಎಂಟು ಹೊಡೆಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರು ತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ ಕುಳಿತು ಕೊಳ್ಳಲೇ? ನಗುವಿನ ಅಲೆ ಇನ್ನೊಮ್ಮೆ ಫೋನ್ ಮುಖಾಂತರವೂ ಹರಡಿತು. ನೊಬೆಲ್ ಬಹುಮಾನ ನನ್ನ ಮೇಲೆ ಇನ್ನು ಯಾವುದೇ ಪರಿಣಾಮ ಮಾಡಲಾರದು ಎನ್ನುತ್ತಾ ನಗುವಿನಲ್ಲಿ ಇನ್ನೊಮ್ಮೆ ಭೂಮಿಯನ್ನು ಕಂಪಿಸಿದರು.
ಜನನ ಮತ್ತು ಬಾಲ್ಯ…
ಜರ್ಮನಿಯ ಜೀನಾದಲ್ಲಿ ಜಾನ್ ಗುಡ್‌ಎನೌಫ್ ಜನಿಸಿದಾಗ ಅವರ ತಂದೆ ಈರ್ವಿನ್ ಗುಡ್‌ಎನೌಫ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ತಾಯಿ ಹೆಲೆನ್ ಗುಡ್‌ಎನೌಫ್ ಮತ್ತು ತಂದೆಯವರ ದಾಂಪತ್ಯ ಸಾಮರಸ್ಯದಿಂದ ಇರಲಿಲ್ಲ. ಚಿಕ್ಕಂದಿನಲ್ಲಿ ಜಾನ್ ಓದಲು-ಬರೆಯಲು ಬಾರದ ಹಿಂದುಳಿದ ಮತ್ತು ಡಿಸ್ಲೆಕ್ಸಿಯಾ ಎಂಬ ನ್ಯೂನತೆಯಿಂದ ಚಡಪಡಿಸುತ್ತಿದ್ದ. ಏನು ಕೌತುಕ, ಸುಮಾರು 90 ವರ್ಷಗಳು ಕಳೆದ ಮೇಲೆ, ಅದೇ ಮಂದ ಬುದ್ಧಿಗೆ ನೊಬೆಲ್ ಪಾರಿತೋಷಕದ ಸನ್ಮಾನ.
ಏನೆಲ್ಲಾ ತಿರುವುಗಳು. ಎರಡನೇ ಮಹಾಯುದ್ಧದ ವೇಳೆ ಗುಡ್‌ಎನೌಫ್ ಅಮೆರಿಕದ ಮಿಲಿಟರಿ ಪಡೆ ಯಲ್ಲಿ ಪವನಶಾಸ್ತ್ರಜ್ಞನಾಗಿ ಕೆಲಸ ಮಾಡಿದ್ದರು. ಈ ಯುದ್ಧವನ್ನು ಸ್ಟುಪಿಡ್ ವಾರ್ ಎಂದು ತಮ್ಮ ಅಸಂತೋಷವನ್ನು ಹೇಳಿಕೊಂಡಿದ್ದರು. ಮುಂದೆ ತಮ್ಮ ಸಂಶೋಧನೆಗಳಿಗೆ ಸನ್ಮಾನಗಳು ಬರುತ್ತಿರುವಾಗ… ಅದೃಷ್ಟ, ನನ್ನ ಸಂಶೋಧನೆ ಯುದ್ಧಕ್ಕಾಗಿ ಉಪಯೋಗವಾಗುತ್ತಿಲ್ಲವಲ್ಲ! ಎಂದು ಉದ್ಗರಿಸುತ್ತಿದ್ದರು.
ಸಂಶೋಧನೆ
ನಾವೆಲ್ಲಾ ಅವೆಷ್ಟೋ ಬಾರಿ ಸ್ಮಾರ್ಟ್ ಫೋನುಗಳನ್ನು ದಿನವಿಡೀ ಉಪಯೋಗಿಸುತ್ತಾ, ಬ್ಯಾಟರಿ ಕಡಿಮೆ ಯಾದರೆ, ಪುನಃ ಚಾರ್ಜ್ ಮಾಡುತ್ತಾ ಉಪಯೋಗಿಸುತ್ತಿಲ್ಲವೇ? ಅಂತೆಯೇ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ e-ಪುಸ್ತಕಗಳಲ್ಲಿ ವಿಶೇಷವಾದ ಬ್ಯಾಟರಿಗಳನ್ನು ಉಪಯೋಗಿಸುತ್ತೇವೆ. ಬ್ಯಾಟರಿ ಸರಿಯಿದ್ದರೆ 3 ರಿಂದ 4 ವರ್ಷಗಳ ಕಾಲ ಪುನಃ ಪುನಃ ಚಾರ್ಜ್ ಮಾಡುತ್ತಾ ಬಳಕೆಯಲ್ಲಿರುತ್ತವೆ. ಇಂತಹ ಬ್ಯಾಟರಿಗಳನ್ನು ಆವಿಷ್ಕಾರ ಮಾಡಿದವರಲ್ಲಿ ಒಬ್ಬರು, ಜಾನ್ ಗುಡ್‌ಎನೌಫ್. ಅದುವೇ Li+ ಅಯೋನ್ ಸೆಲ್ 1991ರಲ್ಲಿ ಮೊದಲು ವಿನ್ಯಾಸ ಮಾಡಿದ ಈ ಬ್ಯಾಟರಿಯ ಆವಿಷ್ಕಾರಕ್ಕಾಗಿ ಈಗ ನೊಬೆಲ್ ಬಹುಮಾನ ಬಂದಿದೆ. 28 ವರ್ಷಗಳ ವೀಕ್ಷಣೆಯನ್ನು ಇಂತಹ ಸೆಲ್‌ಗಳು ಸಹಿಸಿಕೊಂಡಿವೆ ಎಂದಾಯಿತಲ್ಲವೇ? ಅಂತಹ ಬ್ಯಾಟರಿಯ ಅಂದಾ ಜು ವೋಲ್ಟೆಜ್ 3.6V. ಗುಡ್‌ಎನೌಫ್ ಅವ ರೊಂದಿಗೆ ಇಂತಹ ಬ್ಯಾಟರಿಗಳ ಉಪಯೋಗದಲ್ಲಿ ಕೊಡುಗೆ ನೀಡಿದವರು ಬ್ರಿಟನ್ ಮೂಲದ ಅಮೆರಿಕದ 78ರ ಹರೆಯದ ವಿಜ್ಞಾನಿ ಸ್ಟಾನ್ಲಿ ವಿಟ್ಟಿಂಗಮ… ಮತ್ತು ಮಾರುಕಟ್ಟೆ ಬಳಕೆಯೋಗ್ಯವಾಗಿ ಮಾಡಿದ ಜಪಾನಿನ 71ರ ಪ್ರಾಯದ ಅಕಿರಾ ಯೋಷಿನೋ ಅವರು. ಮೂವರೂ ಸಾಕಷ್ಟು ಹಿರಿ ಯರು. ಆದರೂ ಅವರಿಗೆಲ್ಲಾ ಮುಪ್ಪು ಆವರಿಸಿಲ್ಲ.
ಶತಾಯುಷಿ ಆಗುವತ್ತ ಸಾಗುತ್ತಿರುವ ಗುಡ್‌ಎನೌಫರ ಹುಮ್ಮಸ್ಸು ಇಲ್ಲಿಗೆ ನಿಲ್ಲುವುದಿಲ್ಲ. ಔಜಿ+ ಅಯೋನಿಗೆ ಗಾಜಿನ ಲೇಪದ ಒಂದು ಎಲೊಕ್ಟ್ರೊಲೈಟ್ ಉಪಯೋಗಿಸಿ ಹೊಸತೊಂದು ಬ್ಯಾಟರಿಯ ಆವಿಷ್ಕಾರಕ್ಕೆ ತಮ್ಮ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಹೊರಟಿದ್ದಾರೆ. ಮಿನುಟುಗಳಲ್ಲಿ ಚಾರ್ಜ್ ಮಾಡಲು ಸಾಧ್ಯವಿರುವ ಇಂತಹ ಶಕ್ತಿಯ ಪೆಟ್ಟಿಗೆಗಳನ್ನು ವಾಹನಗಳಲ್ಲಿ ಉಪಯೋಗ ಮಾಡುವುದೇ ಅವರ ಮುಂದಿನ ಗುರಿ. ಆಹಾ! ಪೆಟ್ರೋಲ್ – ಡೀಸೆಲಿನಿಂದ ಮುಕ್ತ ಜಗತ್ತು. ಪರಿಸರ ಸ್ನೇಹಿ ಶಕ್ತಿಯ ಮೂಲ. ಅಂತಹ ಒಂದು ಆವಿಷ್ಕಾರ ಮಾಡಲೆಂದೇ ನಾನು ಈ ಪ್ರಾಯದಲ್ಲಿ ಇನ್ನೂ ಹೆಚ್ಚಿನ ಹುರುಪಿನಿಂದ ನನ್ನ ಸಂಶೋಧನಾಲಯಕ್ಕೆ ಬೆಳೆಗ್ಗೆ ಎಂಟು ಗಂಟೆ ಮೊದಲೇ ತಲಪುತ್ತೇನೆ.
ನೋಡುತ್ತಿರಿ, ಇನ್ನು 20 ವರ್ಷಗಳ ಒಳಗೆ ನಾವು ಭೂಮಿಯ ಒಡಲಿನಿಂದ ಪೆಟ್ರೋಲಿಯಂ ಎಣ್ಣೆ ಹೊರತೆಗೆಯುವುದನ್ನು ನಿಲ್ಲಿಸಬಹುದು ಮತ್ತು ಮಾಲಿನ್ಯ ರಹಿತ ಜಗತ್ತಿನತ್ತ ಸಾಗಬಹುದು, ಎನ್ನುತ್ತಾ ನಗುವಿನ ಅಲೆಯನ್ನು ಉಳಿದವರ ಮುಖದಲ್ಲೂ ಹರಡುತ್ತಾರೆ, ಈ ನೂರರ ಸಮೀಪದ ತರುಣ.
ಡಾ| ಶ್ರೀಧರ ಭಟ್ ಬಡೆಕ್ಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.