ತನ್ನಿಮಿತ್ತ : ಕಡಲ ತಡಿಯಲಿ ನಡೆದಾಡಿದ ವಿಶ್ವಕೋಶ


Team Udayavani, Oct 10, 2020, 6:15 AM IST

ತನ್ನಿಮಿತ್ತ : ಕಡಲ ತಡಿಯಲಿ ನಡೆದಾಡಿದ ವಿಶ್ವಕೋಶ

ಇಂದು (ಅ.10) ನಾಡಿನ ಹೆಸರಾಂತ ಸಾಹಿತಿ, ಕಡಲತಡಿಯ ಭಾರ್ಗವ ದಿವಂಗತ ಡಾ| ಕೆ. ಶಿವರಾಮ ಕಾರಂತರ ಜನ್ಮದಿನ. ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಅವರು ಪ್ರಗತಿಪರ ಚಿಂತಕರಾಗಿ ತಮ್ಮ ವಿಭಿನ್ನ ಆಸಕ್ತಿ ಮತ್ತು ವಿಚಾರಧಾರೆಗಳಿಂದಾಗಿ ಸದಾ ಗುರುತಿಸಿಕೊಂಡವರು. ಈ ಕಾರಣಗಳಿಂದಾಗಿಯೇ ಇಂದಿಗೂ ಅವರ ಚಿಂತನೆ, ಯೋಚನಾಲಹರಿ, ಹೋರಾಟದ ಮನೋಭಾವ ಎಲ್ಲರಿಗೂ ಪ್ರೇರಣಾದಾಯಿ.

ಜಯಂತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃ ಕಾಯೇ
ಜರಾಮರಣಜಂ ಭಯಮ್‌ ||

ಯಾವ ಕವೀಶ್ವರರ ಯಶಶ್ಯರೀರದಲ್ಲಿ ಮುಪ್ಪು ಸಾವುಗಳ ಭಯವಿಲ್ಲವೋ ಅಂತಹ ರಸಸಿದ್ಧರು ಪುಣ್ಯವಂತರು ಮತ್ತು ಜಯಶಾಲಿಗಳು.
ಭವ್ಯ, ಪುಣ್ಯ ಭಾರತ ದೇಶದಲ್ಲಿ ಅಗಣಿತ ಸಂಖ್ಯೆಯ ಕವಿಗಳು, ಲೇಖಕರು, ಜ್ಞಾನಿಗಳು, ಋಷಿ ಮುನಿಗಳು, ಸಾಧಕರು, ಸಂತರು ಮುಂತಾದ ಪುಣ್ಯವಂತರು ಜಯಶಾಲಿಗಳಾಗಿ ಪ್ರಸಿದ್ಧಿಯನ್ನು ಪಡೆದಿ¨ªಾರೆ. ಭಾರತಾಂಬೆಯ ತನುಜಾತೆಯಾಗಿರುವ ಭುವನೇಶ್ವರಿಯ ಸುಪುತ್ರರಲ್ಲಿ ಡಾ| ಕೆ. ಶಿವರಾಮ ಕಾರಂತರು ಶ್ರೇಷ್ಠರು. “ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಮಾತಿನಂತೆ ಕಾರಂತರು ಸಾಧಿಸದ ಕ್ಷೇತ್ರಗಳಿಲ್ಲ.

ಶೇಷ ಕಾರಂತ ಮತ್ತು ಲಕ್ಷ್ಮಮ್ಮರ ನಾಲ್ಕನೇ ಪುತ್ರರಾಗಿ 1902ರ ಅಕ್ಟೋಬರ್‌ 10 ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆಯ ಒತ್ತಾಸೆಯಂತೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿರುವಾಗ, 1920ರಲ್ಲಿ ಮಹಾತ್ಮಾ ಗಾಂಧೀಜಿ ಯವರು ಶಾಲಾ ಮಕ್ಕಳು ಶಾಲೆ ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಕರೆ ನೀಡಿದಾಗ ಕಾರಂತರು ಹತ್ತನೇ ತರಗತಿಯಲ್ಲಿದ್ದರು. ಅಂದು ಶಾಲೆಯನ್ನು ತ್ಯಜಿಸಿ ಹೋರಾಟದಲ್ಲಿ ಭಾಗ ವಹಿಸಿದರು. ಆದರೆ ಸ್ವಂತವಾಗಿ ಓದುವುದನ್ನು ಮರೆಯಲಿಲ್ಲ. ಕಾಲೇಜಿನ ಮುಖ ನೋಡದಿದ್ದರೂ ಜ್ಞಾನದ ಪರಾಕಾಷ್ಟೆಯನ್ನು ಸ್ವಕಲಿಕೆಯಿಂದ ಪಡೆದಿದ್ದರು. ಸ್ವಂತವಾಗಿ ಕಲಿತದ್ದನ್ನು ಸರಳವಾದ ಕನ್ನಡದಲ್ಲಿ ಮಾತನಾಡಿ, ಬರೆದರು. ತನ್ನ ಸುಜ್ಞಾನದಿಂದ 98 ವರ್ಷಗಳ ಸಾರ್ಥಕ ಜೀವನದಲ್ಲಿ 427 ಪುಸ್ತಕಗಳನ್ನು ಬರೆದರು. 47 ಕಾದಂಬರಿಗಳನ್ನು, ನೂರಾರು ಲೇಖನಗಳನ್ನು, ಕಥೆ, ಕವನಗಳನ್ನು ಬರೆದರು. “ಮೂಕಜ್ಜಿಯ ಕನಸು’ ಎಂಬ ಕಾದಂಬರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ನಾಡಿಗೆ ತಂದುಕೊಟ್ಟರು. ಕಾರಂತರು ಎಂದಿಗೂ ಪ್ರಶಸ್ತಿಯ ಹಿಂದೆ ಬೀಳಲಿಲ್ಲ, ಬದಲಾಗಿ ಪ್ರಶಸ್ತಿಗಳೇ ಅವರನ್ನು ಅರಸಿಕೊಂಡು ಬಂದವು. 8 ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್‌ ಪದವಿಯನ್ನು ಪಡೆದರು. ಅವರ ಕೀರ್ತಿ ಕಿರೀಟದಲ್ಲಿ ಪದ್ಮಭೂಷಣ, ಪಂಪ, ನಾಡೋಜ ಮುಂತಾದ ಪ್ರಶಸ್ತಿ ಗರಿಗಳು ಬಂದು ಪೋಣಿಸಲ್ಪಟ್ಟವು. ನಾಡು ಅವರನ್ನು ಹೆಮ್ಮೆಯಿಂದ ಗೌರವಿಸಿತು.

ನೇರ ನಡೆ, ನುಡಿಯ, ದಿಟ್ಟ ನಿಲುವಿನ, ನಿರಂತರ ಅಧ್ಯಯನಶೀಲರಾಗಿದ್ದ, ನ್ಯಾಯ ನಿಷ್ಠುರರಾಗಿದ್ದ ಕಾರಂತರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ರಾಗಿ ಭಾಗವಹಿಸಿದರು. ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದ ಕಾರಂತರು ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, ಓದುವ ಆಟ ಇತ್ಯಾದಿ ಕೃತಿಗಳ, ಲೇಖನಗಳ ಮೂಲಕ ಮಕ್ಕಳ ಜ್ಞಾನದಾಹವನ್ನು ತಣಿಸುತ್ತಿದ್ದರು. ಅಪಾರವಾದ ಪರಿಸರ ಕಾಳಜಿಯನ್ನು ಹೊಂದಿದ್ದ ಕಾರಂತರು ತಮ್ಮ ಕಾದಂಬರಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೆರೆದಿದ್ದಾರೆ. ಕೈಗಾ ಅಣು ವಿದ್ಯುತ್‌ ಸ್ಥಾವರದ ಹೋರಾಟಕ್ಕೆ ನಾಯಕತ್ವ ವಹಿಸಿದ್ದರು. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ನೂರಾರು ಗೋಷ್ಟಿಗಳಲ್ಲಿ, ಕವಿ ಸಮ್ಮೇಳನಗಳ ಅಧ್ಯಕ್ಷ ರಾಗಿ ವಿರಾಜಮಾನರಾಗಿದ್ದರು. ಚೋಮನದುಡಿ, ಮೂಕಜ್ಜಿಯ ಕನಸುಗಳು, ಬೆಟ್ಟದಜೀವ, ಚಿಗುರಿದ ಕನಸು, ಸ್ವದೇಶ ಮುಂತಾದ ಚಲನಚಿತ್ರಗಳ ನಿರ್ಮಾಣ ಮಾಡಿ ತನ್ನ ಪ್ರತಿಭೆಯನ್ನು ಮೆರೆದರು. ತಮ್ಮ ಗುರುಗಳಾದ ಮಳಲಿ ಸುಬ್ಬರಾಯರಿಂದ ಪ್ರಭಾವಿತರಾಗಿ ಯಕ್ಷಗಾನ ಕಲಿತು, ಕಲಿಸಿ ರಷ್ಯಾ ಮುಂತಾದ ದೇಶಗಳಲ್ಲಿ ಗಂಡುಕಲೆಯ ಕಂಪು ಪಸರಿಸುವಂತೆ ಮಾಡಿದರು. ಪುತ್ತೂರಿನ ಬಾಲವನದಲ್ಲಿ ಸ್ವತಃ ಯಕ್ಷಗಾನವನ್ನು ಹೇಳಿಕೊಟ್ಟು ಅಪಾರ ಸಂಖ್ಯೆಯ ಕಲಾವಿದರನ್ನು ಸೃಷ್ಟಿ ಮಾಡಿದರು.

ಶಿವರಾಮ ಕಾರಂತರು ನಾಸ್ತಿಕರಾಗಿದ್ದರೂ ಆಸ್ತಿಕರನ್ನು ಗೌರವಿಸುತ್ತಿದ್ದರು. ಆಸ್ತಿಕರ ನಂಬಿಕೆಗಳನ್ನು ನಿಂದಿಸುತ್ತಿರಲಿಲ್ಲ. ತನ್ನ ನಾಸ್ತಿಕವಾದವನ್ನು ಹೇರು ತ್ತಿರಲಿಲ್ಲ. ಇದು ಇಂದಿನ ಎಲ್ಲ ಸ್ವಘೋಷಿತ ಬುದ್ಧಿ ಜೀವಿಗಳಿಗೆ ಆದರ್ಶ ವಿಷಯವಾಗಿದೆ. ಸಮಯ ಪಾಲನೆಯಲ್ಲಿ ಶಿಸ್ತಿನ ಸಿಪಾಯಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳಿಗೆ ಬರು ತ್ತಿದ್ದರು. ಈ ಮೂಲಕ ಎಲ್ಲರಲ್ಲೂ ಸಮಯ ಪಾಲನೆಯ ಪ್ರಜ್ಞೆ ಮೂಡಿಸುತ್ತಿದ್ದರು. ಸಮನ್ವಯ ದೃಷ್ಟಿಯನ್ನು ಹೊಂದಿ, ಹರಿತವಾದ ಮಾತು ಮತ್ತು ವಿಚಾರಧಾರೆಗಳಿಂದ, ಭಿನ್ನ ವ್ಯಕ್ತಿತ್ವವನ್ನು ಹೊಂದಿ, ಒಂಟಿ ಸಲಗವಾಗಿ ಕನ್ನಡ ನಾಡಿನಲ್ಲಿ ಜನಮನ ಗೆದ್ದರು. ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾ ನಿಕ ಬರಹಗಾರರಾಗಿ ಸಾಹಿತ್ಯಾಕಾಶದ ಧ್ರುವತಾರೆ ಯಾಗಿ ಮಿನುಗಿದರು. ಕಾರಂತರು ಸಾಹಿತ್ಯ, ರಂಗ ಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ, ಶಿಲ್ಪಕಲೆ.. ಹೀಗೆ ಸರ್ವ ಕ್ಷೇತ್ರಗಳಲ್ಲೂ ಪ್ರಬುದ್ಧವಾದ ಸಾಧನೆಗಳನ್ನು ಮಾಡಿ 98ನೇ ವಯಸ್ಸಿನಲ್ಲಿ 1997ರಲ್ಲಿ ಇಹಲೋಕ ತ್ಯಜಿಸಿದರು. 96ನೇ ವಯೋಮಾನದಲ್ಲಿ ಹಕ್ಕಿಗಳ ಕುರಿತಾಗಿ ಪುಸ್ತಕ ಬರೆದು ವಿಶ್ವದಾಖಲೆಯನ್ನು ಬರೆದರು. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಾಧನೆಗಳು, ಚಿಂತನೆಗಳು, ಕೃತಿಗಳು ಇಂದಿಗೂ ಉತ್ತೇಜನ ಕಾರಿಯಾಗಿವೆ. ಅವರ ಜೀವನವೇ ನಮಗೆ ಆದರ್ಶ ವಾಗಿದೆ. ಅವರ ಬಾಳುವೆಯೇ ಬೆಳಕಾಗಿದೆ.

ಅಕ್ಟೋಬರ್‌ ಬಂದಾಗ ಕಡಲ ತಡಿಯಲಿ ನಡೆ ದಾಡಿದ ವಿಶ್ವಕೋಶದ ನೆನಪಾಗುತ್ತದೆ. ನಿಜಾರ್ಥ ದಲ್ಲಿ ವಿಚಾರವಾದಿ, ಬುದ್ಧಿಜೀವಿ, ಚಿಂತಕ, ಪ್ರಗತಿ ಪರರಾಗಿದ್ದ ನಮ್ಮ ನಲ್ಮೆಯ ಕಾರಂತಜ್ಜ ನಮಗೆಲ್ಲ ಸ್ಫೂರ್ತಿಯಾಗಿ, ಶಕ್ತಿಯಾಗಿ ಬಾಳಿಗೊಂದು ದಾರಿ ತೋರಲಿ ಎಂದು ಆಶಿಸೋಣ. ಕಡಲ ತಡಿಯ ಭಾರ್ಗವನಿಗೆ, ಕಡಲ ತಡಿಯಲಿ ನಡೆದಾಡಿದ ವಿಶ್ವಕೋಶಕ್ಕೆ ನುಡಿ ನಮನಗಳು.

ಸಾಹಿತ್ಯಾಕಾಶದ ಧ್ರುವತಾರೆ
ಶಿವರಾಮ ಕಾರಂತರು ನಾಸ್ತಿಕರಾಗಿದ್ದರೂ ಆಸ್ತಿಕರನ್ನು ಗೌರವಿಸುತ್ತಿದ್ದರು. ಸಮಯ ಪಾಲನೆಯಲ್ಲಿ ಶಿಸ್ತಿನ ಶಿಸ್ತಿನ ಸಿಪಾಯಿಯಾಗಿದ್ದರು. ಸಮನ್ವಯ ದೃಷ್ಟಿಯನ್ನು ಹೊಂದಿ, ಹರಿತವಾದ ಮಾತು ಮತ್ತು ವಿಚಾರಧಾರೆಗಳಿಂದ, ಭಿನ್ನ ವ್ಯಕ್ತಿತ್ವವನ್ನು ಹೊಂದಿ ಒಂಟಿ ಸಲಗವಾಗಿ ಕನ್ನಡ ನಾಡಿನಲ್ಲಿ ಜನಮನ ಗೆದ್ದರು. ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರರಾಗಿ ಸಾಹಿತ್ಯಾಕಾಶದ ಧ್ರುವತಾರೆಯಾಗಿ ಮಿನುಗಿದರು. ಕಾರಂತರು ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ, ಶಿಲ್ಪಕಲೆ ಹೀಗೆ ಸರ್ವ ಕ್ಷೇತ್ರಗಳಲ್ಲೂ ಸಾಧನೆಗಳನ್ನು
ಮಾಡಿದ ಪ್ರಬುದ್ಧ ಸಾಧಕ.

ಪ್ರೊ| ಕೆ.ಕೃಷ್ಣಮೂರ್ತಿ ಮಯ್ಯ ಬೆಂಗಳೂರು

ಟಾಪ್ ನ್ಯೂಸ್

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

4-kaup

ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.