ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ


Team Udayavani, Jun 8, 2022, 6:10 AM IST

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಇಂದು(ಜೂನ್‌ 8) ಕನ್ನಡದ ಮೇರುಕವಿ, ಗಡಿನಾಡ ಕಿಡಿ ಡಾ| ಕಯ್ಯಾರ ಕಿಂಞಣ್ಣ ರೈ ಅವರ ಜನ್ಮ ದಿನ. ಕನ್ನಡಕ್ಕಾಗಿ ತಮ ¾ಜೀವನವನ್ನೇ ಮುಡಿಪಿಟ್ಟು ಹೋರಾಡಿದ ಮಹಾಕವಿ ಕಯ್ನಾರ ಅವರ ಬದುಕು-ಬರೆಹ, ಸಾಧನೆ-ಸಿದ್ಧಿಯ ಮೇಲೆ ಬೆಳಕು ಚೆಲ್ಲುವ ಲೇಖನವಿದು.

ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡ ಗಡಿಕಾಯೆ, ಗುಡಿ ಕಾಯೆ, ನುಡಿ ಕಾಯೆ,
ಕಾಯಲಾರನೆ ಸಾಯೆ! ಓ ಬನ್ನಿ ಬನ್ನಿ.
ಹಾರೆ ಗುದ್ದಲಿ ಕೊಡಲಿ ನೊಗ ನೇಗಿಲೆತ್ತುತಲಿ
ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡ ನಾಡಿನಿಂದ ಕಾಡಿಂದ ಗೂಡಿಂದ
ಕಡಲಿಂದ ಸಿಡಿಲಿಂದ ಗುಡುಗಿ ಬನ್ನಿ…

ಹೀಗೆ ಕನ್ನಡದ ಮನೆಗೆ ಬೆಂಕಿ ಬಿದ್ದಿದೆ ಎಂದು ಎಚ್ಚರಿಸಿದ ಉಜ್ವಲ ಕನ್ನಡಾಭಿಮಾನಿ, ಪ್ರಚಂಡ ಭಾಷಾ ಪ್ರೇಮಿ, ಅಪ್ರತಿಮ ದೇಶಾಭಿಮಾನಿ, ಕನ್ನಡ ಹೋರಾಟದ ಗಡಿನಾಡ ಕಿಡಿ, ಸಾಹಿತ್ಯ ಲೋಕದ ಸವ್ಯಸಾಚಿ, ಕನ್ನಡಮ್ಮನ ಕೀರ್ತಿ ಮುಕುಟ ನಾಡೋಜ ಕಯ್ಯಾರ ಕಿಂಞಣ್ಣ ರೈ ಯಾರಿಗೆ ತಾನೆ ಗೊತ್ತಿಲ್ಲ? ತಮ್ಮ ಮೌಲಿಕ ಸಾಹಿತ್ಯ ಕೃಷಿಯಿಂದ, ಕೃತಿಗಳಿಂದ, ಅಸಾಮಾನ್ಯ ಕನ್ನಡಪರ ಹೋರಾಟದಿಂದ, ಅತ್ಯಮೂಲ್ಯ ಶೈಕ್ಷಣಿಕ ಕೈಂಕರ್ಯದಿಂದ ಸಮಸ್ತ ಕನ್ನಡಿಗರ ಹೃನ್ಮನವನ್ನು ಆವರಿಸಿಕೊಂಡಿರುವ ಕನ್ನಡ ನುಡಿ ಭಕ್ತ ರಿವರು. ನಿಜ ಅರ್ಥದಿ ಕರ್ನಾಟಕ ರತ್ನರಿವರು. ವಿಶೇಷವಾಗಿ ಗಡಿ ನಾಡ ಕನ್ನಡಿಗರ ದನಿಯಾಗಿದ್ದ ಕಯ್ನಾರರು, ಭಾಷಾವಾರು ರಚನೆ ಸಂದರ್ಭದಲ್ಲಿ ಅಪ್ಪಟ ಕನ್ನಡ ನೆಲ ಕಾಸರಗೋಡು ಪ್ರದೇ ಶವನ್ನು ಕೇರಳ ರಾಜ್ಯಕ್ಕೆ ಸೇರಿಸಿದ ಅನ್ಯಾಯ ಆದ ದಿನದಿಂದಲೂ ಇದರ ವಿರುದ್ಧ ತಾವು ಬದುಕಿರುವ ವರೆಗೂ ಉಗ್ರ ಹೋರಾಟ ನಡೆಸುತ್ತಲೇ ಬಂದಿದ್ದರು. ಕೇರಳ ರಾಜ್ಯದಲ್ಲಿರುವ ಅಚ್ಚ ಕನ್ನಡ ನೆಲ ಕಾಸರಗೋಡು ಕರ್ನಾಟಕಕ್ಕೇ ಸೇರಬೇಕೆಂದು ಪಣ ತೊಟ್ಟು ಇವರು ನಡೆಸಿದ್ದ ಹೋರಾಟ ಕಾಸರಗೋಡು ಪ್ರಾಂತದಲ್ಲಿ ರುವ ಕನ್ನಡಿಗರೆಲ್ಲರ ನೋವಿನ ಪ್ರಾತಿನಿಧಿಕ ಧ್ವನಿಯಾಗಿತ್ತು.

1915ರ ಜೂನ್‌ 8ರಂದು ಕಾಸರಗೋಡು ತಾಲೂಕಿನ ಪೆರ ಡಾಲ ಎಂಬ ಪುಟ್ಟ ಗ್ರಾಮದಲ್ಲಿ ದುಗ್ಗಪ್ಪ ರೈ ಮತ್ತು ದೆಯ್ಯಕ್ಕೆ ದಂಪತಿಯ ಪುತ್ರನಾಗಿ ಜನಿಸಿದ ಇವರಿಗೆ ಹೆತ್ತವರು ಇಟ್ಟ ಹೆಸರು ಕಯ್ಯಾರ ಕಿಂಞಣ್ಣ ರೈ. ಕಿಂಞಣ್ಣ ಎಂದರೆ ತುಳು ಭಾಷೆಯಲ್ಲಿ ಚಿಕ್ಕ ಣ್ಣ ಅರ್ಥಾತ್‌ ಕಿರಿಯಣ್ಣ ಎಂದರ್ಥ.

ಬದಿಯಡ್ಕ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಅನಂತರ ನೀರ್ಚಾಲಿನಲ್ಲಿದ್ದ ಮಹಾಜನ ಸಂಸ್ಕೃತ ಕಾಲೇಜಿಗೆ ಸೇರಿದರು. ಕನ್ನಡ ಮತ್ತು ಸಂಸ್ಕೃತ ಭಾಷೆ ಗಳೆರಡರಲ್ಲಿಯೂ ಪ್ರವೇಶ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಂದ ತೇರ್ಗಡೆ ಹೊಂದಿ ಮುಂದೆ ವಿದ್ವಾನ್‌, ಶಿರೋಮಣಿ ಎಂಬ ಕನ್ನಡ, ಸಂಸ್ಕೃತ ಪದವಿಗಳನ್ನು ಪಡೆದರು. ವಿಶ್ವವಿದ್ಯಾನಿಲಯದ ಉತ್ತಮ ವಿದ್ಯಾರ್ಥಿ ಎನಿಸಿ ಬಿ.ಎ. ಪದವಿಯಲ್ಲಿ ಪ್ರಥಮ ವಾಗಿ, ಎಂ.ಎ. ಪದವಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಉತ್ತೀರ್ಣ ರಾದ ಇವರು ಅಧ್ಯಾಪಕ ತರಬೇತಿ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ‌ರು.

ಕಯ್ಯಾರರ ಮಾತೃಭಾಷೆ ತುಳುವಾದರೂ ಇವರ ಮೈ-ಮನ  ಗಳಲ್ಲೆಲ್ಲ ಕನ್ನಡದ್ದೇ ದರ್ಬಾರು. ಬಾಲ್ಯದಿಂದಲೂ ಕನ್ನಡದ ಜತೆಗೆ ಸಂಸ್ಕೃತ ದಲ್ಲಿ ಆಸಕ್ತಿ ಹೊಂದಿದ್ದ ಇವರ ಮೇಲೆ ಅಕ್ಕಪಕ್ಕದ ಮನೆಯ ಮಲೆಯಾಳ ಭಾಷೆಯ ಪ್ರಭಾವ ಕೂಡ ಇತ್ತು. ಹಾಗಾಗಿ ಇವರು ಪದವೀಧರರಾಗುವಷ್ಟರಲ್ಲಿ ತುಳು, ಕನ್ನಡ, ಸಂಸ್ಕೃತ, ಮಲೆಯಾಳ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ್ದರು. ವಿದ್ಯಾರ್ಥಿ ದಿಶೆಯಲ್ಲೇ ಸಾಹಿತ್ಯ ಕೃಷಿಯತ್ತಲೂ ಹೆಜ್ಜೆಯಿರಿಸಿದ್ದ ಕಯ್ಯಾರ ರು, ಗಾಂಧೀಜಿ ಅವರನ್ನು ಕಾಣುವ ತವಕದಿಂದ 1943ರಲ್ಲಿ ಪೆರಡಾಲದಿಂದ ಕಾಲು ನಡಿಗೆಯಲ್ಲೇ ಸಹಪಾಠಿಗಳೊಡನೆ ಮಂಗಳೂರಿನ ಕೊಡಿಯಾಲಬೈಲಿಗೆ ಬಂದು ಗಾಂಧೀಜಿಯವರ ದರ್ಶನ ಪಡೆದಿದ್ದರು. ಆ ಕ್ಷಣ ಅವರಿಗೆ ಈ ದೇವಮಾನವನ ಮುಂದೆ ಬೇರೆ ದೇವರು ಏಕೆ? ಎಂಬ ಭಾವ ಮೂಡಿತ್ತಂತೆ. ಆಗ ಅವರು ಗಾಂಧೀ ದರ್ಶನ ಎಂಬ ಕವಿತೆ ಬರೆದರು. ಇವತ್ತಿಗೂ ಅದು ಅತ್ಯಂತ ಮೌಲಿಕ ಕವಿತೆಯಾಗಿದೆ.

ಬಾಲ್ಯದಲ್ಲೇ ಪತ್ರಿಕೋದ್ಯಮದ ಸೆಳೆತಕ್ಕೂ ಒಳಗಾಗಿದ್ದ ಕಯ್ಯಾರರು ತಮ್ಮ ಶಾಲಾ ದಿನಗಳಲ್ಲೇ ಸುಶೀಲಾ ಎಂಬ ಹಸ್ತಪ್ರತಿ ಪತ್ರಿಕೆಯನ್ನು ಶಿಕ್ಷಕರ ಪ್ರೇರಣೆಯಿಂದ ಹೊರತಂದಿದ್ದರು. ಆಶ್ಚರ್ಯ ವೆಂದರೆ ಆಗ ಇವರಿಗೆ ಕೇವಲ ಹನ್ನೆರಡು ವರ್ಷ. ಮುಂದೆ ಸ್ವದೇಶಾಭಿಮಾನ, ಜಯಕರ್ನಾಟಕ, ದೇಶಾಭಿಮಾನಿ, ರಾಷ್ಟ್ರಬಂಧು ಮುಂತಾದ ಪತ್ರಿಕೆಗಳ ಒಡನಾಡಿಯಾಗಿ ತಮ್ಮ ಲೇಖನಿಯನ್ನು ಹರಿಯಬಿಟ್ಟು ಬರೆವಣಿಗೆಯ ಬೆಟ್ಟವನ್ನೇ ಕಟ್ಟಿದರು. ಕಯ್ಯಾರರು ಆ ಕಾಲದ ಎಲ್ಲ ಪತ್ರಿಕೆಗಳಲ್ಲೂ ಕಥೆ, ಕವನ, ಲೇಖನಗಳನ್ನು ಬರೆದು ಆ ಮುಖೇನ ಕನ್ನಡ ಸಾರಸ್ವತ ಲೋಕ ದಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲೂ ಪ್ರಸಿದ್ಧರಾದರು.

ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಅವರ ಗರಡಿಯಲ್ಲಿ ಪಳಗಿದ ಕಯ್ಯಾರರು ಸೃಜನಶೀಲ ಸಾಹಿತ್ಯ ಮತ್ತು ಸೃಜನೇ ತರ ಸಾಹಿತ್ಯಗಳೆರಡರಲ್ಲೂ ಬಹಳ ಎತ್ತರದ ಸಾಧನೆ ಮಾಡಿದ ವರು. ವಿದ್ವತ್ತಿನ ಮೇರು ಶಿಖರವಾಗಿ ಬೆಳೆದವರು. ಬರೆವಣಿಗೆ ಹಾಗೂ ಕನ್ನಡಪರ ಹೋರಾಟವಲ್ಲದೆ ಗಾಂಧೀಜಿ ಅವರಿಂದ ಪ್ರಭಾ ವಿತರಾಗಿ ಅಪ್ರತಿಮ ದೇಶಪ್ರೇಮಿಯೂ ಆಗಿದ್ದರು. 1935ರಲ್ಲಿ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದ ನಾರಾಯಣ ಕಿಲ್ಲೆ, ಕೆ.ಕೆ. ಶೆಟ್ಟಿ, ಕೃಷ್ಣಪ್ಪ ತಿಂಗಳಾಯ, ಡಾ| ಯು.ಪಿ.ಮಲ್ಯ, ಶ್ರೀನಿವಾಸ ಮಲ್ಯ ಮುಂತಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಜತೆಗೂಡಿದ್ದ ಕಯ್ಯಾರರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮ ದನಿಯನ್ನು ಕರಾವಳಿಯಲ್ಲಿ ಮೊಳಗಿಸಿದ್ದರು.
ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡುವಂತಹ ಸಾಹಿತ್ಯಗಳನ್ನು ರಚಿಸಿದ್ದರು.

ಪ್ರೌಢ ಶಿಕ್ಷಣ ಮುಗಿಯುತ್ತಿದ್ದಂತೆಯೇ 1945ರಲ್ಲಿ ಪೆರಡಾ ಲದ ನವಜೀವನ ಪ್ರೌಢಶಾಲೆಯಲ್ಲಿ ಉಪಾಧ್ಯಯರಾಗಿ ವೃತ್ತಿ ಜೀವನ ಆರಂಭಿಸಿದ ಕಯ್ಯಾರರು ಶಿಕ್ಷಕರಾಗಿದ್ದುಕೊಂಡೇ ಮುಂದಿನ ತಮ್ಮೆಲ್ಲ ಉನ್ನತ ವಿದ್ಯಾಭ್ಯಾಸವನ್ನು ಮಾಡಿಕೊಂಡು ಸಾಧನೆಯ ಮೆಟ್ಟಿಲೇರಿದರು. ಉಪಾಧ್ಯಾಯ ವೃತ್ತಿ, ವ್ಯಾಸಂಗ ಇವೆಲ್ಲದರ ಜತೆಜತೆಯಲ್ಲೇ ಹೋರಾಟ, ಬರೆವಣಿಗೆ ಎಲ್ಲವನ್ನೂ ಮಾಡಿ ಕನ್ನಡವನ್ನು ಕಟ್ಟಿದ ಕನ್ನಡ ಕಟ್ಟಾಳಿವರು. 32 ವರ್ಷಗಳ ಸುದೀರ್ಘ‌ ಕಾಲ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೇಷ್ಠ ಶಿಕ್ಷಕರಾದ ಇವರು ಕೇಂದ್ರ ಸರಕಾರದಿಂದ ಶ್ರೇಷ್ಠ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಣೋತ್ತಮರೂ ಹೌದು.

“ಶ್ರೀಮುಖ’ ಕವನ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕ ಪ್ರವೇಶಿಸಿದ ಕಯ್ಯಾರರು ಕಥೆ, ಕವನ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಶಿಶು ಸಾಹಿತ್ಯ, ಖಂಡಕಾವ್ಯ, ವ್ಯಾಕ ರಣ, ಪ್ರಬಂಧ, ಸಂಪಾದನೆ, ಅನುವಾದ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು ನೂರು ಕೃತಿಗಳನ್ನು ಕನ್ನಡ ಮ್ಮನ ಸಾಹಿತ್ಯ ಭಂಡಾರಕ್ಕೆ ನೀಡಿದ್ದಾರೆ. ಇಷ್ಟೊಂದು ವೈವಿಧ್ಯಮಯವಾಗಿ ಸಾಹಿತ್ಯ ಕೃಷಿ ಮಾಡಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಯ್ಯಾರರ ಪುಸ್ತಕಗಳು ಬಂದಿದ್ದರೂ ಇವರು ಕವಿಯಾಗಿಯೇ ಹೆಚ್ಚು ಪ್ರಸಿದ್ಧರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಭಾರತ ಸರಕಾರದಿಂದ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸರಕಾರದಿಂದ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ, ಪ್ರಥಮ ಅಖಿಲ ಭಾರತ ಜನಪರ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷತೆ, ಅಖಿಲ ಭಾರತ ತುಳು ಸಮ್ಮೇ ಳನದ ಗೌರವ ಪ್ರಶಸ್ತಿ, 66ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಮಹಾಗೌರವ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ನಾಡೋಜ ಪುರ ಸ್ಕಾರ, ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ-ಪುರಸ್ಕಾರ, ಸಮ್ಮಾನ-ಗೌರವಗಳಿಗೆ ಕಯ್ಯಾರರು ಭಾಜನರಾಗಿದ್ದಾರೆ.

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಕಯ್ಯಾರ ಕಿಂಞಣ್ಣ ರೈ ಅವರು ತಮ್ಮ ಬದುಕಿನಲ್ಲಿ ಶತಮಾನೋತ್ಸವ ಕಂಡು 101 ವರ್ಷಗಳ ಸಾರ್ಥಕ ಜೀವನ ನಡೆಸಿದವರು. 2015ರ ಆಗಸ್ಟ್‌ 9ರಂದು ಇವರು ಇಹಲೋಕದಿಂದ ಕಣ್ಮರೆಯಾದರೂ ಸಮಗ್ರ ಕರ್ನಾಟಕದ ಕಯ್ಯಾರರು ಎಂದೂ ಆರದ ನಂದಾದೀಪ.
(ಲೇಖಕರು: ಸಾಹಿತಿ, ಪತ್ರಕರ್ತರು)

-ಬನ್ನೂರು ಕೆ.ರಾಜು

ಟಾಪ್ ನ್ಯೂಸ್

Kolluru-tem

ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ

SDM-Anche

ಜೀವನ ಶಿಕ್ಷಣದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ: ಸಂಗೀತ ನಿರ್ದೇಶಕ ವಿ.ಮನೋಹರ್‌

Udupi: ಗೀತಾರ್ಥ ಚಿಂತನೆ-170: ಪ್ರತಿಬಿಂಬದಲ್ಲಿ ದೋಷವಿದ್ದರೂ ಬಿಂಬದಲ್ಲಲ್ಲ

Udupi: ಗೀತಾರ್ಥ ಚಿಂತನೆ-170: ಪ್ರತಿಬಿಂಬದಲ್ಲಿ ದೋಷವಿದ್ದರೂ ಬಿಂಬದಲ್ಲಲ್ಲ

Republic Day ಪಥಸಂಚಲನ: ಅಲೋಶಿಯಸ್‌ ಎನ್‌ಸಿಸಿ ಕೆಡೆಟ್‌ಗಳ ಸಾಧನೆ

Republic Day ಪಥಸಂಚಲನ: ಅಲೋಶಿಯಸ್‌ ಎನ್‌ಸಿಸಿ ಕೆಡೆಟ್‌ಗಳ ಸಾಧನೆ

U19 World Cup: G. Trisha century ; Scotland surrenders to India

U19 World Cup: ಜಿ. ತಿೃಷಾ ಶತಕ ದಾಖಲೆ; ಭಾರತಕ್ಕೆ ಶರಣಾದ ಸ್ಕಾಟ್ಲೆಂಡ್‌

DCM-Shivakumar

Uniform Civil Code: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಡಿ.ಕೆ.ಶಿವಕುಮಾರ್‌

INDvENG: ಭಾರತದ ‌ಬ್ಯಾಟಿಂಗ್‌ ಕುಸಿತ: ರಾಜಕೋಟ್‌ ನಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್

INDvENG: ಭಾರತದ ‌ಬ್ಯಾಟಿಂಗ್‌ ಕುಸಿತ: ರಾಜಕೋಟ್‌ ನಲ್ಲಿ ಗೆಲುವಿನ ನಗೆ ಬೀರಿದ ಇಂಗ್ಲೆಂಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ವಿಶ್ವ ಮಾನವ ಮಹಾಕವಿ ಕುವೆಂಪು

ವಿಶ್ವ ಮಾನವ ಮಹಾಕವಿ ಕುವೆಂಪು

MUST WATCH

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

ಹೊಸ ಸೇರ್ಪಡೆ

Kolluru-tem

ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ

Arrest

Kumbale: ಆರಿಕ್ಕಾಡಿ ಕೋಟೆ: ನಿಧಿ ಶೋಧ: ಐವರ ಸೆರೆ

SDM-Anche

ಜೀವನ ಶಿಕ್ಷಣದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡಿ: ಸಂಗೀತ ನಿರ್ದೇಶಕ ವಿ.ಮನೋಹರ್‌

Byndoor-Short

short circuit: ಶಿರೂರು ಗ್ರಾಮದ ಅಳ್ವೆಗದ್ದೆಯಲ್ಲಿ ಮನೆಗೆ ಬೆಂಕಿ

Suside-Boy

Malpe: ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.