ಕೆ.ಕೆ.ಪೈ ಮತ್ತು ಪರ್ಯಾಯದ ಪಳಮೆ
Team Udayavani, Jan 14, 2020, 6:18 AM IST
ಕೆ.ಕೆ. ಪೈ ಹೇಳುತ್ತಿದ್ದ ಹಾಗೆ ಉಡುಪಿ ಪರ್ಯಾಯ ಎಲ್ಲರಿಗೂ ಅವಕಾಶಗಳನ್ನೊದಗಿಸುವ ನಾಡಹಬ್ಬ. ಪರ್ಯಾಯವು ಕೇವಲ ಸಂಭ್ರಮಿಸುವ ಅವಕಾಶವನ್ನು ಮಾತ್ರ ಒದಗಿಸುವುದಿಲ್ಲ. ಪರ್ಯಾಯ ಕಾಲದ ವ್ಯಾಪಾರ ವ್ಯವಹಾರಗಳ ವಿಸ್ತರಣೆಯಿಂದ ಉಡುಪಿಯ ಆರ್ಥಿಕತೆಗೆ ಪುಷ್ಟಿ ದೊರೆಯುತ್ತದೆ.
ಕೆ.ಕೆ. ಪೈಯವರು ನಮ್ಮನ್ನಗಲಿ ಇಂದಿಗೆ ಹನ್ನೊಂದು ವರ್ಷಗಳಾದವು. 2009ರ ಜನವರಿ 14ರಂದು ಅವರು ವಿಧಿವಶರಾದರು.
ಕೆ.ಕೆ. ಪೈ ಉಡುಪಿ ಪರ್ಯಾಯದ ಕುರಿತಾಗಿ ಅದರ ಮಹತ್ವ ಮತ್ತು ಅರ್ಥಪೂರ್ಣತೆಯ ಕುರಿತಾಗಿ ಮತ್ತು ಪರ್ಯಾಯದ ವಿವಿಧ ಆಯಾಮಗಳ ಕುರಿತಾಗಿ ಯಾವಾಗಲೂ ಸುದೀರ್ಘವಾಗಿ ಮಾತಾಡುತ್ತಿದ್ದರು. ಕೆ.ಕೆ. ಪೈಯವರು ಶ್ರೀ ಕೃಷ್ಣ ಮಠದ ಕುರಿತಾಗಿ ಮತ್ತು ಅದರ ಇತಿಹಾಸ ಹಾಗೂ ಅಷ್ಟಮಠಗಳ ಕುರಿತಾಗಿ ವಿಸ್ತೃತ ತಿಳಿವಳಿಕೆಯುಳ್ಳವರಾಗಿದ್ದರು.
ಉತ್ಕೃಷ್ಟತೆಯ ಮಾದರಿ
ಉಡುಪಿ ಪರ್ಯಾಯ ಒಂದು ವಿಶಿಷ್ಠವಾದ ಮತ್ತು ಸಾಟಿಯಿಲ್ಲದ ಆಡಳಿತ ಮತ್ತು ಪ್ರಶಾಸನ ವ್ಯವಸ್ಥೆ ಎಂಬುದು ಕೆ.ಕೆ. ಪೈಯವರ ಅಭಿಪ್ರಾಯವಾಗಿತ್ತು. ಅವರು ಇಂಗ್ಲಿಷ್‌ನಲ್ಲಿ ಪರ್ಯಾಯದ ಕುರಿತು ಸಂದರ್ಶನವೊಂದರಲ್ಲಿ ಈ ರೀತಿ ಹೇಳಿದ್ದರು. “Udupi Paryaya is a unique system of administration and governance of Shri Krishna Mutt. It has no parallal elsewhere’ ಉಡುಪಿ ಪರ್ಯಾಯ ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾದು ದಲ್ಲ. ಅದಕ್ಕೆ ಸಾಂಸ್ಕೃತಿಕ ಹಾಗೂ ಲೌಕಿಕ, ಮತ್ತು ಸಾಮಾಜಿಕ ಆಯಾಮಗಳೂ ಇವೆ. ತ್ಯಾಗವೂ ಸೇರಿದಂತೆ ವಿವಿಧ ಉದಾತ್ತ ತತ್ವಗಳ ಪಾಯವನ್ನು ಹೊಂದಿರುವ ಉಡುಪಿ ಪರ್ಯಾಯ ವ್ಯವಸ್ಥೆ ಒಂದು ಉತ್ಕೃಷ್ಟತೆಯ ಮಾದರಿ ಎಂದು ಕೆ.ಕೆ. ಪೈ ಹೇಳುತ್ತಿದ್ದರು.
ವಾದಿರಾಜ ಸ್ವಾಮಿಗಳ ಕಾಲದವರೆಗೆ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು ಮತ್ತು ಪರ್ಯಾಯದ ಅವಧಿಯನ್ನು ಎರಡು ವರ್ಷಗಳಿಗೆ ಏರಿಸಿದವರೇ ವಾದಿರಾಜರು ಎಂದು ಕೆ.ಕೆ. ಪೈ ಹೇಳಿದ್ದರು. ಕೆ.ಕೆ. ಪೈ ಅಂದು ವಿವರಿಸಿದಂತೆ ವಾದಿರಾಜರು ಎರಡು ತಿಂಗಳ ಮೂರು ಪರ್ಯಾಯ ಮತ್ತು ಎರಡು ವರ್ಷದ ಒಂದು ಪರ್ಯಾಯವನ್ನು ಉಡುಪಿಯಲ್ಲಿ ಪೂರೈಸಿದರು. ಮಾತ್ರವಲ್ಲದೆ ಉತ್ತರ ಕನ್ನಡದ ಸೋಂದಾದಲ್ಲಿ ಒಂದು ಪರ್ಯಾಯ ನಡೆಸಿದ್ದರಂತೆ. ಈ ವಿಷಯವನ್ನು ಸಂದರ್ಶನವೊಂದರಲ್ಲಿ ಕೆ.ಕೆ. ಪೈ ತಿಳಿಸಿದ್ದರು.
ಸ್ಪಷ್ಟ ಭವಿಷ್ಯ
ಇತ್ತೀಚೆಗೆ ಕೃಷ್ಣೆ „ಕ್ಯರಾದ ಪೇಜಾವರ ವಿಶ್ವೇಶ್ವರ ಶ್ರೀಗಳ, ಆರೋಗ್ಯ ಚೆನ್ನಾಗಿದ್ದು ಅವರು ಖಂಡಿತ ಐದನೆಯ ಪರ್ಯಾಯ ಪೂರೈಸುತ್ತಾರೆ ಎಂದು ಕೆ.ಕೆ.ಪೈ ತಾವು ಬದುಕಿರುವಾಗ ಹೇಳಿದ್ದರು. ಇದು ಅವರ ಸ್ಪಷ್ಟ ಭವಿಷ್ಯವಾಗಿತ್ತು. ಪೇಜಾವರ ಹಿರಿಯ ಶ್ರೀಗಳು ಐದನೆಯ ಪರ್ಯಾಯ ವನ್ನು ಪೂರೈಸಿ ಇತಿಹಾಸ ಸೃಷ್ಟಿಸಿದ್ದಾರೆ. ವಾದಿರಾಜರು ಸೋಂದಾದ ಒಂದು ಪರ್ಯಾಯ ಮತ್ತು ಉಡುಪಿಯ ನಾಲ್ಕು ಪರ್ಯಾಯ ಪೂರೈಸಿದ್ದರೆ ಪೇಜಾವರ ಹಿರಿಯ ಶ್ರೀಗಳು ಉಡುಪಿಯಲ್ಲಿಯೇ ಐದು ಪರ್ಯಾಯ ನಡೆಸಿದ್ದಾರೆ. ಇದೊಂದು ಹೊಸ ದಾಖಲೆ.
ಕೆ.ಕೆ. ಪೈಯವರು ಯಾವಾಗಲೂ ಪರ್ಯಾಯ ಶ್ರೀಪಾದಲ ರೊಂದಿಗೆ ಕೃಷ್ಣಮಠದ ಆಡಳಿತದೊಂದಿಗೆ ಮತ್ತು ಅಷ್ಟ ಮಠಗಳೊಂದಿಗೆ ನಿಕಟ ಸಂಪರ್ಕ ಹೊಂದಿದವರಾಗಿದ್ದರು. ಶ್ರೀಕೃಷ್ಣ ಮಠದಲ್ಲಿ ಕಾಲಕಾಲಕ್ಕೆ ನಡೆಯುವ ವಿವಿಧ ಕಾರ್ಯಕ್ರಮಗಳ ಮತ್ತು ಉತ್ಸವಗಳ ಕುರಿತಾಗಿ ಕೆ.ಕೆ. ಪೈ ಬಹಳಷ್ಟು ಅರಿವು ಹೊಂದಿದ್ದರು. ಅಕ್ಕಿ ಮುಹೂರ್ತ, ಬಾಳೆ ಮುಹೂರ್ತವೂ ಸೇರಿದಂತೆ ವಿವಿಧ ಮುಹೂರ್ತಗಳ ವೈಶಿಷ್ಟé ಮತ್ತು ಮಹತ್ವದ ಕುರಿತಾಗಿ ಮತ್ತು ಅರ್ಥಪೂರ್ಣತೆಯ ಕುರಿತಾಗಿ ಕೆ.ಕೆ. ಪೈ ವಿವರಿಸುತ್ತಿದ್ದರು. ಉಡುಪಿಯ ಸಂಸ್ಕೃತಿ, ಕೃಷ್ಣಮಠದಿಂದಾಗಿ ತನ್ನದೇ ಆದ ವೈಶಿಷ್ಟéವನ್ನು ಮೈಗೂಡಿಸಿಕೊಂಡಿದೆ ಎಂದು ಅವರು ಹೇಳುತ್ತಿದ್ದರು.
ಔದಾರ್ಯ ಸಹಕಾರ
1970ರ ಮತ್ತು 80ರ ದಶಕಗಳಲ್ಲಿ ಎರಡು ಮಠಗಳ ಯುವ ಯತಿಗಳು ಪೀಠತ್ಯಾಗ ಮಾಡಿ ಸನ್ಯಾಸ ತ್ಯಜಿಸಿದ್ದರು. ಇದರ ಕುರಿತಾಗಿ ಬಹಳಷ್ಟು ಟೀಕೆಗಳು ನಡೆಯುತ್ತಿದ್ದ ಕಾಲ ಅದು. ಈ ಪೀಠ ತ್ಯಾಗ ವಿವಿಧ ಟೀಕೆ ಟಿಪ್ಪಣಿಗಳಿಗೆ ಗ್ರಾಸವಾಗಿತ್ತು. ಕೆ.ಕೆ. ಪೈ ಅಂತ ತೀಕ್ಷ್ಣ ಟೀಕೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಪೀಠತ್ಯಾಗ ಮಾಡಿದ ಯುವಕರಿಗೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗ ನೀಡಿ, ಔದಾರ್ಯ ತೋರಿಸಿದರು, ಸಹಕಾರ ನೀಡಿದರು.
ನವ್ಯ ಯೋಜನೆಗಳು
1948ರಲ್ಲಿ ಉಡುಪಿ ಮದ್ರಾಸ್ ರಾಜ್ಯದಲ್ಲಿದ್ದಾಗ ನಗರಸಭೆ ಚುನಾವಣೆ ನಡೆಯಿತು. ಎರಡು ಪಕ್ಷಗಳಾದ ಪಿ.ಎಸ್.ಪಿ. ಮತ್ತು ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ಪರ್ಧಿಸಿದವು. ಟಿ.ಎ. ಪೈ ನಾಯಕತ್ವದಲ್ಲಿದ್ದ ಉಡುಪಿ ಕಾಂಗ್ರೆಸ್‌ನಿಂದ ಕೆ.ಕೆ. ಪೈ ಸ್ಪರ್ಧಿಸಿ ಗೆದ್ದರು. ಆದರೆ 11 ಸದಸ್ಯ ಬಲ ಹೊಂದಿದ್ದ ಎ.ಎಸ್.ಪಿ. ಅಧಿಕಾರಕ್ಕೆ ಬಂತು. ಕೆ.ಕೆ. ಪೈ ವಿರೋಧ ಪಕ್ಷದಲ್ಲಿದ್ದರು. ಆನಂತರದ ಚುನಾವಣೆ ಎರಡನೆಯ ಸಲ ಗೆದ್ದ ಕೆ.ಕೆ. ಪೈ ನಗರಸಭಾ ಅಧ್ಯಕ್ಷರಾದರು. ಮತ್ತೂಂದು ಸಲ ಕೂಡ ಕೆ.ಕೆ. ಪೈ ಅಧ್ಯಕ್ಷರಾದರು. ಹೀಗೆ ಎರಡು ಅವಧಿಗಳಲ್ಲಿ ಅಧ್ಯಕ್ಷರಾಗಿದ್ದ ಕೆ.ಕೆ. ಪೈ ಹಲವಾರು ನವ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಕೃತಿಗಳಿಸಿದರು. ನಗರ ಸಭೆಯ ಅಧ್ಯಕ್ಷ ಸ್ಥಾನ ಅವರಿಗೆ ತನ್ನ ಕನಸಿನ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಅವಕಾಶವನ್ನೊದಗಿಸಿತು. ಕೆ. ಕೆ. ಪೈಯವರೇ ಹೀಗೆ ಹೇಳಿದ್ದರು. “As a member of Udupi Municipality and as President of Udupi Municipality I got lot of opportunities to be with people. My tenure in the Municipality provided me lot of insight into the problems and difficulties of people. This prompted me to keep social objectives upper most in my mind during my tenure in Syndicate Bank’
ಪೌರ ಸನ್ಮಾನಕ್ಕೆ ನಾಂದಿ
ಕೆ.ಕೆ. ಪೈ ನಗರಸಭಾ ಅಧ್ಯಕ್ಷರಾಗಿ ಆರಂಭಿಸಿದ ಹೊಸ ಯೋಜನೆ ಗಳಲ್ಲಿ ಉಡುಪಿ ಕೃಷ್ಣ ಮಠದ ಪರ್ಯಾಯ ಪೀಠವನ್ನೇರುವ ಸ್ವಾಮೀಜಿ ಯವರಿಗೆ ಮತ್ತು ಎರಡು ವರ್ಷದ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಅಧಿಕಾರ ಬಿಟ್ಟು ಹೊರಬರುವ ಸ್ವಾಮಿಯವರಿಗೆ ಪೌರ ಸಮ್ಮಾನ ನೀಡುವ ಕಾರ್ಯಕ್ರಮ. ಕೆ.ಕೆ. ಪೈ ಪೌರ ಸಮ್ಮಾನ ಕಾರ್ಯಕ್ರಮಕ್ಕೆ ನಾಂದಿ ಹಾಡಿದವರು. ಕೆ.ಕೆ. ಪೈ ಆರಂಭಿಸಿದ ಈ ಪೌರ ಸಮ್ಮಾನ ಕಾರ್ಯಕ್ರಮ ಈಗ ಪ್ರತಿ ಪರ್ಯಾಯದಲ್ಲೂ ನಡೆಯುತ್ತಿದೆ.
ಕೆ.ಕೆ. ಪೈ ಹೇಳುತ್ತಿದ್ದ ಹಾಗೆ ಉಡುಪಿ ಪರ್ಯಾಯ ಎಲ್ಲರಿಗೂ ಅವಕಾಶಗಳನ್ನೊದಗಿಸುವ ನಾಡಹಬ್ಬ. ಪರ್ಯಾಯವು ಕೇವಲ ಸಂಭ್ರಮಿಸುವ ಅವಕಾಶವನ್ನು ಮಾತ್ರ ಒದಗಿಸುವುದಿಲ್ಲ. ಪರ್ಯಾಯ ಕಾಲದ ವ್ಯಾಪಾರ ವ್ಯವಹಾರಗಳ ವಿಸ್ತರಣೆಯಿಂದ ಉಡುಪಿಯ ಆರ್ಥಿಕತೆಗೆ ಪುಷ್ಟಿ ದೊರೆಯುತ್ತದೆ. ಪರ್ಯಾಯ ಒದಗಿಸುವ ಪಾಠ ಧಾರ್ಮಿಕ ಜಾಗೃತಿ ರೂಪದಲ್ಲಿ ಮಾತ್ರ ಅಲ್ಲ. ನೈತಿಕತೆಯ ಕುರಿತಾಗಿ, ಪ್ರಾಮಾಣಿಕತೆಯ ಕುರಿತಾಗಿ, ಅಧ್ಯಾತ್ಮದ ಕುರಿತಾಗಿ, ತ್ಯಾಗದ ಕುರಿತಾಗಿ, ನಿಸ್ವಾರ್ತದ ಕುರಿತಾಗಿ, ಶಿಸ್ತಿನ ಕುರಿತಾಗಿ ಹೀಗೆ ಜೀವನದ ಯಶಸ್ಸಿಗೆ ಬೇಕಾದ ವಿವಿಧ ವಿಷಯಗಳ ಕುರಿತಾಗಿ ಪಾಠಗಳನ್ನು ಒದಗಿಸುತ್ತದೆ ಎಂದು ಕೆ.ಕೆ. ಪೈ ಹೇಳುತ್ತಿದ್ದರು. ರಾಜಕೀಯ ವ್ಯಕ್ತಿಗಳು ಮತ್ತು ಆಡಳಿತ ನಡೆಸುವವರು ಈ ಪಾಠಗಳನ್ನು ಅಳವಡಿಸಿಕೊಂಡರೆ ಒಳ್ಳೆಯದು ಎಂದು ಅವರು ಆಗಾಗ ಎಚ್ಚರಿಸುತ್ತಿದ್ದರು. ಅಂತೂ ಒಟ್ಟಿನಲ್ಲಿ ಉಡುಪಿ ಪರ್ಯಾಯ ಉಡುಪಿಯ ಸಂಸ್ಕೃತಿಯನ್ನು ಖಾಯಂ ನೆಲೆಯಲ್ಲಿ ಶ್ರೀಮಂತಗೊಳಿಸಿದೆ ಎಂಬುದೇ ಈ ಪರ್ಯಾಯ ಪಳಮೆಯ ತಾತ್ಪರ್ಯವಾಗಿದೆ.
– ಡಾ| ಕೆ. ಕೆ. ಅಮ್ಮಣ್ಣಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.