ಕುಶಲಕರ್ಮಿಗಳ ದಿನವಾಗಬೇಕಾದ ವಿಶ್ವಕರ್ಮ ಜಯಂತಿ


Team Udayavani, Sep 17, 2019, 5:09 AM IST

vishwakarma

ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ ಭಾರತೀಯರಿಗೆಷ್ಟು ಔಚಿತ್ಯಪೂರ್ಣ?

ಇಂದು ವಿಶ್ವಕರ್ಮ ದಿನ. ವಿಶ್ವಕರ್ಮನು ಪಂಚಬ್ರಹ್ಮರ ಮೂಲಕ, ಲೋಕಕ್ಕೆ ಪಂಚಶಿಲ್ಪಕಾರ್ಯಗಳ ಮೂಲಕ ಸೃಷ್ಟಿಯಲ್ಲಿ ಸೃಜನಶೀಲತೆ ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಂಡವನು. ಇಡಿಯ ವಿಶ್ವವೇ ವಿಶ್ವಕರ್ಮನಿಗೆ ಋಣಿಯಾಗಿದೆ.

ವಿಶ್ವಕರ್ಮನೇ ಮಹಾವಿಷ್ಣು, ಮಹಾವಿಷ್ಣುವೇ ವಿಶ್ವಕರ್ಮ. ಬ್ರಹ್ಮನೇ ವಿಶ್ವಕರ್ಮ ಎಂದೂ ಹೇಳಲಾಗಿದೆ. ವಿಶ್ವಕರ್ಮ ತತ್ವವನ್ನು, ಎಂದರೆ ಇದರ ಬಗೆಗಿನ ಸಂಪೂರ್ಣ ಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ, ಸಾûಾತ್ಕರಿಸಿಕೊಂಡ “ಭೌವನ’ ಎಂಬ ಹೆಸರಿನ ಮಹರ್ಷಿಯು ಲೋಕಕ್ಕೆ ತಿಳಿಸಿರುವುದರಿಂದ ಈ ಮಹರ್ಷಿಗೆ ಭೌವನ ವಿಶ್ವಕರ್ಮ ಎಂದು ಹೆಸರಾಯಿತು. ಈ ಮಹರ್ಷಿಯ ಸಂತಾನಕ್ಕೆ “ವಿಶ್ವಕರ್ಮ ಬ್ರಾಹ್ಮಣರು’ ಎಂಬ ಹೆಸರು ಬಂದಿತು.

ವಿಶ್ವಕರ್ಮನಿಗೆ “ವಿಶ್ವಬ್ರಹ್ಮ’ ಎಂಬ ಹೆಸರೂ ಇರುವುದರಿಂದ ಈ ಸಮಾಜಕ್ಕೆ “ವಿಶ್ವಕರ್ಮ ಸಮಾಜ’ ಎಂಬ ಹೆಸರೂ ಇದೆ. ವಿಶ್ವಕರ್ಮನೇ ಶಿವ, ವಿಷ್ಣು ಮತ್ತು ಬ್ರಹ್ಮ ಆಗಿರುವ ಕಾರಣ ಸೃಷ್ಟಿ, ಸ್ಥಿತಿ, ಲಯ ಈ ಮೂರೂ ವಿಶ್ವಕರ್ಮನ ಕಾರ್ಯವೇ. ಬ್ರಹ್ಮ ಎಂಬ ಹೆಸರಿನ ಪರಮಾತ್ಮನು ಸುವ್ಯವಸ್ಥಿತವಾದ ಈ ಜಗತ್ತನ್ನು ಸೃಷ್ಟಿಸಿದುದರಿಂದ ಬ್ರಹ್ಮ ಹೆಸರಿನ ಭಗವಂತನಿಗೆ ವಿಶ್ವಕರ್ಮ ಎಂದೂ ಹೆಸರಿದೆ. ವೇದದಲ್ಲಿ, ವೇದಾಂತದಲ್ಲಿ ಪರಮಪುರುಷನಾಗಿ, ವಿರಾಟ್‌ ಪುರುಷನಾಗಿ ಪ್ರತಿಪಾದಿತನಾಗಿರುವ ಭಗವಂತನೇ ವಿಶ್ವಕರ್ಮ. ಆತನೇ ಸೃಷ್ಟಿಕರ್ತ.

ವೇದ ಉಪನಿಷತ್‌ಗಳಲ್ಲಿ ವರ್ಣಿತನಾದ ವಿಶ್ವಕರ್ಮ ಸೃಷ್ಟಿಕರ್ತ. ಪುರಾಣಗಳಲ್ಲಿ ಬರುವವರು ಮಹಿಮಾನ್ವಿತ ಶಿಲ್ಪಿಗಳು. ಈ ಸುಂದರ ವಿಶ್ವವನ್ನು ವಿಶ್ವಕರ್ಮ ಸೃಷ್ಟಿಸಿದ. ಬಳಿಕ, ಈ ವಿಶ್ವದ ಅಭಿವೃದ್ಧಿಗಾಗಿ ಪಂಚಶಿಲ್ಪಗಳನ್ನು ರೂಪಿಸಿದ. ಈ ಪಂಚಶಿಲ್ಪಗಳು ಮನು, ಮಯ, ತ್ವಷ್ಟ್ರ, ಶಿಲ್ಪಿ, ವಿಶ್ವಜ್ಞ (ದೆ„ವಜ್ಞ) ಎಂದು ಪ್ರಸಿದ್ಧರಾದ ಪಂಚಬ್ರಹ್ಮರ ಮೂಲಕ ಲೋಕಕ್ಕೆ ಒದಗಿಬಂದವು. ಮನುವು ಕಬ್ಬಿಣದ ವಸ್ತುಗಳು (ಕೃಷಿ ಉಪಕರಣಗಳು-ಕತ್ತಿ , ಬಾಗಿಲ, ಚಿಲಕ ಇತ್ಯಾದಿ), ಮಯ ನು ಮರಗೆಲಸ, ತೃಷ್ಟ್ರನು ಕಂಚಿನ, ಶಿಲ್ಪಿಯು ಶಿಲಾ ಶಿಲ್ಪವನ್ನು, ವಿಶ್ವಜ್ಞನು ಸ್ವರ್ಣಕಾರ ಶಿಲ್ಪವನ್ನು-ಹೀಗೆ ಐವರು ಬದುಕಿಗೆ ಬೇಕಾದ ಐದು ಬಗೆಯ ಶಿಲ್ಪಕಾರ್ಯಗಳನ್ನು ನಿಯೋಜಿಸಿದನು.

ಶಿಲ್ಪ ಎಂದರೇನು?
ಧ್ಯಾನ ಸ್ಥಿತಿಯಲ್ಲಿ ಮನಸ್ಸಿನಲ್ಲಿ ರೂಪುಗೊಂಡದ್ದು ಭಾವಶಿಲ್ಪ. ಈ ಭಾವಶಿಲ್ಪವನ್ನು ವಸ್ತುಗಳಲ್ಲಿ ರೂಪಿಸಿದಾಗ ಅದು ನಮ್ಮ ಕಣ್ಣಿಗೆ ಗೋಚರಿಸುವ ಶಿಲ್ಪವಾಗುತ್ತದೆ. ಶಿಲ್ಪದಲ್ಲಿ ದೈವಶಿಲ್ಪ ಮತ್ತು ಲೌಕಿಕ ಶಿಲ್ಪ ಎಂಬ ಎರಡು ವಿಧಗಳಿವೆ.

ವಿಶ್ವಕ್ಕೆ ವಿಶ್ವಕರ್ಮನ ಕೊಡುಗೆ
ವಾಲ್ಮೀಕಿ ರಾಮಾಯಣದ ಪ್ರಕಾರ ವಿಶ್ವಕರ್ಮನು ಸ್ವರ್ಗದಲ್ಲಿ ಬ್ರಹ್ಮದೇವರಿಗಾಗಿ ಸರ್ವರತ್ನ ಖಚಿತ, ದೀಪ್ತಿವಂತ ಪುಷ್ಪಕ ವಿಮಾನವನ್ನು ರಚಿಸಿದನು. ಶಿಲ್ಪ ಸಂಹಿತೆಯ 18ನೇ ಅಧ್ಯಾಯದ ಪ್ರಕಾರ ವಿಶ್ವಕರ್ಮನು ಮೊತ್ತಮೊದಲ ದೂರದರ್ಶಕವನ್ನು ರೂಪಿಸಿದ. ಮುಂದೆ ವಿಜ್ಞಾನಿಗಳು ಈ ದೂರದರ್ಶಕವನ್ನು ಸುಧಾರಿತ ಮಾದರಿಯಲ್ಲಿ ತಯಾರಿಸಿದರು. ಎಲ್ಲ ದೇವರುಗಳಿಗೆ ಲಿಂಗಗಳನ್ನು ಮಾಡಿಕೊಟ್ಟು, ಪೂಜಾವಿಧಾನ ಹೇಳಿಕೊಟ್ಟವನು ವಿಶ್ವಕರ್ಮ. ಪಂಚಬ್ರಹ್ಮರಾದ ಮನುವು ತಿಥಿಯನ್ನು, ಮಯನು ವಾರವನ್ನು, ತೃಷ್ಟ್ರನು ನಕ್ಷತ್ರಗಳನ್ನು , ಶಿಲ್ಪಿಯು ಯೋಗವನ್ನು, ವಿಶ್ವಜ್ಞನು ಕರಣವನ್ನು ಸೃಷ್ಟಿಸಿದನು. ಯಜ್ಞಯಾಗಾದಿಗಳನ್ನು ವಿಶ್ವಕರ್ಮನೇ ಸೃಷ್ಟಿಸಿದನೆಂದು ಪ್ರತೀತಿ.

ಕೃಷ್ಣನು ದ್ವಾರಕಾ ನಗರವನ್ನು ನಿರ್ಮಾಣ ಮಾಡುವಾಗ, ಶಂಕರನು ಶಿವಮಂದಿರವನ್ನು ನಿರ್ಮಿಸುವಾಗ ವಿಶ್ವಕರ್ಮನನ್ನು ಧ್ಯಾನಾದಿ ಷೋಡಶೋಪಚಾರಗಳಿಂದ ಪೂಜೆ ಮಾಡಿ ಸ್ತೋತ್ರ ಮಾಡಲಾಯಿತು. ವಾಯುದೇವ-ಅಂಜನಾದೇವಿಯ ಪುತ್ರ ಹನುಮಂತನಿಗೆ, ಆತನಿನ್ನೂ ಗರ್ಭದಲ್ಲಿರುವಾಗಲೇ ಉಡದಾರ, ಯಜೊnàಪವೀತ, ಕೌಪೀನ, ಕರ್ಣಕುಂಡಲಗಳನ್ನು ವಿಶ್ವಕರ್ಮ ದಯಪಾಲಿಸಿದ. ಇದಕ್ಕೆ ಪ್ರತಿಯಾಗಿ, (ವಿಶ್ವಕರ್ಮೋಪಖ್ಯಾನದಲ್ಲಿ ಹೇಳಿದಂತೆ) ಹನುಮಂತನು ವಿಶ್ವಕರ್ಮನ ಧ್ವಜದಲ್ಲಿ ಪ್ರಕಾಶಿಸತೊಡಗಿದ ಎನ್ನಲಾಗಿದೆ.

ದ್ವಾರಕಾ ನಗರ ನಿರ್ಮಾಣ-ಕನ್ಯಾ ಸಂಕ್ರಮಣ-ವಿಶ್ವಕರ್ಮ ಪೂಜಾ ದಿನ ವಿಶ್ವಕರ್ಮನು ಶ್ರೀಕೃಷ್ಣನ ಕೋರಿಕೆಯಂತೆ ಸಾಗರದ ಮಧ್ಯೆ ಶತ್ರುರಾಜರಿಂದ ಭೇದಿಸಲಸಾಧ್ಯವಾದಂಥ ನಗರವನ್ನು ನಿರ್ಮಿಸಿ ಅದಕ್ಕೆ “ದ್ವಾರಕಾ’ ಎಂಬ ನಾಮಕರಣ ಮಾಡಿದನು. ಶಿಲ್ಪ ವಿಜ್ಞಾನದ ನೈಪುಣ್ಯದೊಂದಿಗೆ ನಿರ್ಮಾಣವಾದ ದ್ವಾರಕಾ ನಗರವು ಅಲಂಕೃತ ಗೃಹಗಳು, ಕಲ್ಪಲತೆಗಳಿಂದ ತುಂಬಿರುವ ಉದ್ಯಾನವನಗಳನ್ನು ಹೊಂದಿದ್ದು ಗೋಪುರಗಳು, ಬಂಗಾರದ ಕಲಶಗಳಿಂದ ಮುಗಿಲನ್ನು ಮುಟ್ಟುವಂತಿದ್ದವು. ಬೆಳ್ಳಿ, ಹಿತ್ತಾಳೆಗಳಿಂದ ನಿರ್ಮಿತವಾದ ಅನ್ನಶಾಲೆಗಳು, ವ್ಯವಸ್ಥಿತ ಅಶ್ವಶಾಲೆಗಳು, ಪದ್ಮರಾಗಾದಿ ಮಣಿಗಳಿಂದ, ಮರಕತಗಳಿಂದ ವಿಜೃಂಭಿಸುತ್ತಿದ್ದ ದೇವಾಲಯಗಳು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರಾದಿಗಳಿಗೆ ವಾಸಯೋಗ್ಯವಾದ ಗೃಹಗಳಿಂದಲೂ ಸುಸಜ್ಜಿತವಾಗಿದ್ದ ದ್ವಾರಕಾ ನಗರವನ್ನು ಶ್ರೀಕೃಷ್ಣನು ಕನ್ಯಾ ಸಂಕ್ರಮಣದಂದು ವಿಶ್ವಕರ್ಮನಿಂದ ಸ್ವೀಕರಿಸಿದ ಎಂಬ ಪ್ರತೀತಿ ಇದೆ. ಹಾಗಾಗಿ ಕನ್ಯಾ ಸಂಕ್ರಮಣವನ್ನು ಶ್ರೀ ವಿಶ್ವಕರ್ಮ ದಿನವನ್ನಾಗಿ ಆಚರಿಸುವ ಪದ್ಧತಿ ರೂಢಿಯಲ್ಲಿದೆ.

ವಿಶ್ವಕರ್ಮನ ಸೃಷ್ಟಿಯ ಅಭಿವೃದ್ಧಿಗೆ, ಸೃಜನಶೀಲ ಅಭಿವ್ಯಕ್ತಿಗೆ ಕಾರಣರಾದ ಪಂಚಶಿಲ್ಪಿಗಳಿಗಷ್ಟೇ ಅಥವಾ ವಿಶ್ವಕರ್ಮ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ವಿಶ್ವಕರ್ಮ ಪೂಜಾ ದಿನ ಅಲ್ಲ. ಯಾರೆಲ್ಲ ಈ ಪಂಚಶಿಲ್ಪ ಅಂತರ್ಗತ ಸೃಜನಶೀಲತೆಯನ್ನು ಹೊಂದಿರುವರೋ, ಯಾರೆಲ್ಲ ಈ ಪಂಚಶಿಲ್ಪಗಳ ಫಲಾನುಭವಿಗಳ್ಳೋ ಅವರೆಲ್ಲರೂ ಭಗವಾನ್‌ ವಿಶ್ವಕರ್ಮನನ್ನು ನೆನೆದು, ಪೂಜಿಸುವ ದಿನವಾಗಿದೆ; ಆಗಬೇಕಾಗಿದೆ. ಯಾವುದೇ ವೃತ್ತಿ ಒಂದು ಸಮುದಾಯಕ್ಕೆ ಸೀಮಿತವಾಗದೇ ಇರುವ ಪ್ರಸಕ್ತ ಸನ್ನಿವೇಶದಲ್ಲಿ, ಶಿಲ್ಪ ಎಂಬುದರ ಅರ್ಥವ್ಯಾಪ್ತಿ ಬದಲಾಗುತ್ತಿರುವುದನ್ನು ಮತ್ತು ಎಲ್ಲರೂ ವಿಶ್ವ ಕರ್ಮನನ್ನು ನೆನೆಯುವುದರ ಔಚಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

“ಋಗ್ವೇದ ಕಾಲದಲ್ಲಿ ಶಿಲ್ಪವಿದ್ಯೆ ಉನ್ನತ ಸ್ಥಿತಿಯಲ್ಲಿದ್ದು ವಿವಿಧ ಪ್ರಕಾರದ ಅಲಂಕಾರಗಳು, ಪಾತ್ರೆಗಳು, ನಿವಾಸಗಳು, ಯಜ್ಞ ವೇದಿಕೆಗಳು, ಪ್ರಾಕಾರಗಳ ರಚನೆ ತಜ್ಞರಿಂದಲ್ಲದೆ ಬೀದಿ ಹೋಕರಿಂದಾಗದು’ ಎಂದು ಹಿರಿಯ ಸಂಶೋಧಕ ಶಂಬಾ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ವಿದ್ವಾಂಸ ಜಿ.ಕೆ. ಪಿಳ್ಳೆ, “ಕಲೆ ಮತ್ತು ವಿಜ್ಞಾನಗಳಲ್ಲಿ ನುರಿತ ಪ್ರಥಮರು ಶಿಲ್ಪಿಗಳೇ. ಖಗೋಳಶಾಸ್ತ್ರ, ಗಣಿತ ಶಾಸ್ತ್ರಗಳಿಗೆ ಅವರ ಕೊಡುಗೆ ಮಹತ್ತರವಾದುದು. ಶಿಲ್ಪಿಯ ಮತ್ತು ಶಿಲ್ಪಶಾಸ್ತ್ರದ ಸಮಗ್ರ ಆಧ್ಯಯನದಿಂದ ಪಂಡಿತ ಪಾಮರರೂ ಅರಿಯಬೇಕಾಗಿರುವ ಭಾರತೀಯ ಸಂಸ್ಕೃತಿಯ ಉಗಮ ಮತ್ತು ವಿಕಾಸದ ವಿವರವಾದ ಇತಿಹಾಸವನ್ನು ಆಧಾರಯುಕ್ತವಾಗಿ ಅರಿಯಲು ಸಾಧ್ಯವಾಗುತ್ತದೆ. ಶಿಲ್ಪಿಯನ್ನು ಗುರುತಿಸಿ ತಿಳಿಯದಿದ್ದರೆ ಯಾರೂ ಭಾರತದ ಬಗ್ಗೆ ಸಮಗ್ರ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗದಗಲ ವಿಶ್ವಕರ್ಮರ ಉಲ್ಲೇಖ
ಕ್ರಿಸ್ತ ಪೂರ್ವ 600ರಲ್ಲಿ ಭಾರತದ ಅಂಗವಾಗಿದ್ದ ಸಿಂಹಳ ದ್ವೀಪದ ಮಹಾಂತೆ (ಇಂದಿನ ಮಂಟೊಟ್ಟಿ) ಪಟ್ಟಣದಲ್ಲಿ ಸೂರ್ಯ ವಂಶದ ಕಮ್ಮಾರರು (ವಿಶ್ವಕರ್ಮರು) ಅಭೇದ್ಯ ಆಯಸ್ಕಾಂತ ಕೋಟೆಯನ್ನು ಕಟ್ಟಿಕೊಂಡು ಆಳುತ್ತಿದ್ದರು. ಪರಮತೀಯರ ಕುಟಿಲ ಕಾರ್ಯಾಚರಣೆಯಿಂದ ಕೋಟೆಯ ರಹಸ್ಯ ಬಯಲಾಗಿ ಕೋಟೆ ನಾಶವಾಯಿತು. ಸುರಂಗ ತೋಡಿಕೊಂಡು ಅದರ ಮೂಲಕ ಅಲ್ಲಿದ್ದ ವಿಶ್ವಕರ್ಮರು ತಮ್ಮ ಸಲಕರಣೆಗಳೊಂದಿಗೆ ಅಲ್ಲಿಂದ ಪಾರಾದರು.

– ಕ್ರಿ.ಶ. 2ರಿಂದ 6ನೇ ಶತಮಾನದವರೆಗೆ ಅಮೆರಿಕದ ಮೆಕ್ಸಿಕೋದಲ್ಲಿ ರಾಜ್ಯಭಾರ ಮಾಡಿದ ಮಹಾಭಾರತದ ಮಹಾವಾಸ್ತುಶಿಲ್ಪ ನಿರ್ಮಾಪಕರಾದ ಮಯ ಸಂತತಿಯವರು ಹಡಗು ನಿರ್ಮಾಣದಲ್ಲಿ ಚತುರರಾಗಿದ್ದರು.

– ಅಶೋಕ ಚಕ್ರವರ್ತಿಯು ಬೌದ್ಧಮತವನ್ನು ಹರಡಲು ಭಾರತದಿಂದ ಸಿಂಹಳಕ್ಕೆ ರಾಜಕುಮಾರಿ ಸಂಘಮಿತ್ರೆಯನ್ನು ಕಳುಹಿಸುವಾಗ ಶಿಲ್ಪಿ ಬ್ರಾಹ್ಮಣರನ್ನೂ ಕಳುಹಿಸುತ್ತಾನೆ. ಸಿಂಹಳ ಅರಸರ ಕಿರೀಟಧಾರಣೆಯನ್ನು ವಿಶ್ವಕುಲಶೇಖರ ಎಂಬ ಶಿಲ್ಪಾಚಾರ್ಯ ನಡೆಸಿದನು. ಭಾರತದ ಶಿಲ್ಪಿಗಳಿಗೆ ಸಿಂಹಳದ ಅರಸರು ಉಂಬಳಿ, ಬಿರುದು ಪ್ರದಾನ ಮಾಡಿದ ಉದಾಹರಣೆಗಳು ಕ್ರಿಸ್ತ ಪೂರ್ವದಿಂದ ತೊಡಗಿ ಕ್ರಿ.ಶ 16ನೇ ಶತಮಾನದವರೆಗೆ ಸಿಗುತ್ತವೆ.
ನಿಜಕ್ಕಾದರೆ ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ ಭಾರತೀಯರಿಗೆಷ್ಟು ಔಚಿತ್ಯಪೂರ್ಣ ಎಂಬುದರ ಕುರಿತು ಮುಕ್ತ ಚಿಂತನೆ ನಡೆಸಿದಾಗ ಅದು ಸಾಧ್ಯವಾಗಬಹುದು.

(ವಿವಿಧ ಮೂಲಗಳಿಂದ:
ವಿಶ್ವಕರ್ಮ ಸಾಹಿತ್ಯ ಸಂಪದ-ಡಾ| ಕೆ.ಪಿ. ಈರಣ್ಣ, ಡಾ. ಮತ್ತೂರು ಕೃಷ್ಣಮೂರ್ತಿ, “ವಿಶ್ವರೂಪ’ ಸಂ.:ಮೌನೇಶ್ವರ ಆಚಾರ್ಯ)

– ಧನಂಜಯ

ಟಾಪ್ ನ್ಯೂಸ್

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.