ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?


Team Udayavani, Dec 15, 2018, 7:53 AM IST

d-102.jpg

ನಾವು ನಿಜವಾಗಲೂ ಕಾಳಜಿಯಿಂದ ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಿದು. ನಾವಿರುವ ನಗರ ಸಾಯದಂತಿರಲು ನಾವು ಏನು ಮಾಡಬೇಕು ಎಂಬ ಪ್ರಶ್ನೆಗೆ ಬರೀ ಉತ್ತರ ಹುಡುಕುತ್ತಾ ಕುಳಿತರೆ ಸಾಲದು. ನಾವೇ ಉತ್ತರವಾಗಬೇಕು, ಆ ಅನುಪಮ ಅವಕಾಶದ ಬುಟ್ಟಿ ನಮ್ಮ ಮುಂದಿದೆ ಎಂಬುದನ್ನು ಮೊದಲು ನೆನಪು ಮಾಡಿಕೊಳ್ಳಬೇಕು.

ಸಾಯುವ ನಗರಗಳನ್ನು ಉಳಿಸಿಕೊಳ್ಳಲು ಏನು ಮಾಡಬೇಕು ? ಈ ಪ್ರಶ್ನೆ ಜಗತ್ತಿನಾದ್ಯಂತ ಕಾಡತೊಡಗಿದೆ. ನಗರದ ಅವಿಭಾಜ್ಯ ಭಾಗವಾದ ನಾವು ಏನು ಮಾಡಬಹುದೆಂಬ ಪ್ರಶ್ನೆಯೂ ನಮ್ಮ ಮುಂದಿದೆ. ಅದನ್ನು ಒಪ್ಪಿಕೊಳ್ಳಲೇಬೇಕು. ಅಂಥದ್ದೇನೂ ನಮ್ಮ ಎದುರಿಲ್ಲ ಎಂದು ಕುರುಡು ಜಾಣತನವನ್ನೂ ಪ್ರದರ್ಶಿಸಿದರೂ ಪ್ರಯೋಜನವಿಲ್ಲ. ಒಂದಂತೂ ಸ್ಪಷ್ಟ. ಸಾಯುವ ನಗರಕ್ಕೆ ನಾವು ಪರಿಹಾರವಾಗುವ ಅವಕಾಶವಂತೂ ನಮಗಿದೆ. 

ನಗರಗಳು ಏಕೆಲ್ಲಾ ಸಾಯುತ್ತವೆ ಎಂಬುದಕ್ಕೆ ಒಂದೇ ಕಾರಣಗಳಿಲ್ಲ. ಹಲವು ಕಾರಣಗಳಿವೆ. ನಗರಗಳು ಸೃಷ್ಟಿಯಾಗುವುದು ಹಲವು ನೆಲೆಗಳಿಂದ. ಅದರಲ್ಲೂ ಹೆಚ್ಚಾಗಿ ಕೈಗಾರಿಕಾ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನಗರಗಳೇ ಸಾಕಷ್ಟಿವೆ. ಯುರೋಪ್‌ನಿಂದ ಹಿಡಿದು ನಮ್ಮ ಭಾರತದವರೆಗೂ. ಅದಲ್ಲದೇ, ಇನ್ನೂ ಹತ್ತಾರು ಕಾರಣಗಳಿಗೆ ನಗರ ಬೆಳೆದಿದ್ದೂ ಇದೆ. ಅಮೆರಿಕದ ಡೆಟ್ರಾಯಿಟ್‌, ಪಿಟ್ಸ್‌ಬರ್ಗ್‌ನಂಥ ನಗರಗಳು ಅವತರಿಸಿದ್ದೇ ಕೈಗಾರಿಕೆಗಳಿಂದಾಗಿ. ಅದರಂತೆಯೇ, ಅದೇ ದೇಶದ ನ್ಯೂಯಾರ್ಕ್‌ ಸಿಟಿ ಗುರುತಿಸಿಕೊಂಡಿದ್ದು ಬಂದರಿನಂದಾಗಿ. ವ್ಯಾಪಾರ, ರಫ್ತು ವಹಿವಾಟುಗಳೂ ನಗರಗಳನ್ನು ಸೃಷ್ಟಿಸಿವೆ.

ಬೆಂಗಳೂರನ್ನು ನೋಡಿ
ನಮ್ಮ ಬೆಂಗಳೂರನ್ನೇ ತೆಗೆದುಕೊಂಡರೆ ಅದು ಕೈಗಾರಿಕೆಯ ನೆಲೆಯಲ್ಲಿ ಹುಟ್ಟಿಕೊಂಡದ್ದಲ್ಲ. ನಗರ ಬೆಳೆದಂತೆ ಕೈಗಾರಿಕೆ ಪ್ರದೇಶಗಳು ಹುಟ್ಟಿಕೊಂಡಿದ್ದು ಇತಿಹಾಸ. ಡೆಟ್ರಾಯಿಟ್‌ ಮಾದರಿಯಲ್ಲಿ ಕಣ್ಣಿಗೆ ಕಾಣುವ ನಮ್ಮ ಪುಟ್ಟ ನಗರವೆಂದರೆ ಭದ್ರಾವತಿ. ಅದರ ಬೆಳವಣಿಗೆಯ ಹಿಂದೆ ಕೈಗಾರಿಕೆಗಳ ನೆರಳಿದೆ. ಸರ್‌ ಎಂ. ವಿಶ್ವೇಶ್ವರಯ್ಯನವರು ಮೈಸೂರು ಕಾಗದ ಕಾರ್ಖಾನೆ ಹಾಗೂ ವಿಶ್ವೇಶ್ವರಯ್ಯ ಕಬ್ಬಿಣ ಕಾರ್ಖಾನೆಯನ್ನು ಸ್ಥಾಪಿಸಿದರು. 

ನೂರಾರು ಜನ ಕಾರ್ಮಿಕರು ಅಲ್ಲಿಗೆ ವಲಸೆ ಬಂದು ನೆಲೆಸಿದರು. ಸ್ಥಳೀಯವಾಗಿಯೂ ಒಂದಿಷ್ಟು ಜನರಿಗೆ ಉದ್ಯೋಗ ದೊರಕಿತು. ಎಲ್ಲದರ ಪರಿಣಾಮ ಭದ್ರಾವತಿ ಕೈಗಾರಿಕಾ ನಗರವಾಗಿಯೇ ಬಿಂಬಿತವಾಯಿತು. ಇಂದು ಅದರ ಚಿತ್ರಣ ಸಂಪೂರ್ಣ ಭಿನ್ನವಾಗಿದೆ. 

70 ರ ದಶಕದಲ್ಲಿ ಡೆಟ್ರಾಯಿಟ್‌ ಮತ್ತು ಪಿಟ್ಸ್‌ಬರ್ಗ್‌ ಸಹ 1970 ರ ಮೆರೆದಿದ್ದು ಕಂಡರೆ ಎಲ್ಲರಿಗೂ ಆಶ್ಚರ್ಯವಾಗಬೇಕು. ಮೊದಲನೆಯದ್ದು ಆಟೋಮೊಬೈಲ್‌ ಕೈಗಾರಿಕೆಯ ಕೇಂದ್ರವಾಗಿದ್ದರೆ, ಎರಡನೆಯದು ಉಕ್ಕಿನ ಕ್ಷೇತ್ರದ್ದು. ಎರಡೂ ನಗರಗಳು ಸಾವಿರಾರು ಮಂದಿಗೆ ಉದ್ಯೋಗ ಒದಗಿಸಿತ್ತು. ಅಷ್ಟೇ ಏಕೆ, ಸಾವಿರಾರು ಕುಟುಂಬಗಳ ಆಧಾರವಾಗಿತ್ತು. ಇಂದು ಎರಡೂ ನಗರಗಳ ಕಥೆ ಹೇಗಾಗಿದೆ ಎಂಬುದು ಎಲ್ಲರಿಗೂ ತಿಳಿದದ್ದೇ. ಅದರಲ್ಲೂ ಡೆಟ್ರಾಯಿಟ್‌ ನಂತೂ ಸಾಯುತ್ತಿರುವ ನಗರವೆಂದೇ ಬಿಂಬಿಸಲಾಗಿತ್ತು. ಯಾಕೆಂದರೆ, ಆ ನಗರ ನಿರಂತರವಾಗಿ ಜನಸಂಖ್ಯೆಯನ್ನು ಕಳೆದು ಕೊಳ್ಳುತ್ತಿದೆ. ಬೇರೆಡೆ ಅವಕಾಶಗಳನ್ನು ಬಯಸಿ ವಲಸೆ ಹೋಗುವವರ ಸಂಖ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಹಾಗೆ ಹೇಳಿದರೆ ಪಿಟ್ಸ್‌ಬರ್ಗ್‌ ಒಂದಿಷ್ಟು ಜೀವಂತಿಕೆಯನ್ನು ತುಂಬಿ ಕೊಂಡಿದೆ. 

ಹೀಗೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡಿದ್ದೆಲ್ಲವೂ ಆ ಉದ್ದೇಶ ಈಡೇರುವವರೆಗೆ ಮಾತ್ರ ಜೀವಂತಿಕೆಯಿಂದ ಇರಬಲ್ಲವು. ಆ ಬಳಿಕ ನಿಧಾನವಾಗಿ ಕರಗತೊಡಗುತ್ತವೆ. ಈ ಮಾತು ಇನ್ನೂ ಭಾರತದ ಬಹುಪಾಲು ನಗರಗಳಿಗೆ ಅನ್ವಯಿಸುವ ದಿನಗಳು ಬಂದಿಲ್ಲ. ಹಾಗೆಂದು ಸುಮ್ಮನೆ ಇರುವ ಸ್ಥಿತಿಯೂ ಇಲ್ಲ. ಆದರೆ, ನಮ್ಮ ನಗರಗಳು ಒಂದುವೇಳೆ ಪತನಗೊಳ್ಳತೊಡಗಿದರೆ ಅದಕ್ಕೆ ನಮ್ಮ ಅವ್ಯವಸ್ಥಿತ ಯೋಜನೆಗಳೇ ಕಾರಣವಾಗಬಹುದು.

ಚೆನ್ನಾದ ಬರಹ
ಅಂತರ್ಜಾಲದಲ್ಲಿ ಹೀಗೆ ಜಾಲಾಡುತ್ತಿದ್ದಾಗ ಸಿಕ್ಕ ಒಂದು ಸಣ್ಣ ಬರಹ ಆಕರ್ಷಿಸಿತು. ಚೀನಾದ ಒಂದು ಒಳ್ಳೆಯ ಐತಿಹಾಸಿಕ ಊರು-ಪಟ್ಟಣದವಳಾದ ಮಹಿಳೆಯೊಬ್ಬಳು, ನನ್ನ ಊರು-ಪಟ್ಟಣ ಬಹಳ ಚೆನ್ನಾಗಿತ್ತು. ಇಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಮಹಾನ್‌ ರಾಜನಾದ. ಮತ್ತೂಬ್ಬನೂ ದೊಡ್ಡ ವ್ಯಕ್ತಿಯಾದ. ಅವರೆಲ್ಲರೂ ನನ್ನ ಮಾದರಿ ವ್ಯಕ್ತಿಗಳು. ಎಂಥಾ ಜೀವಂತಿಕೆ ಇರುವಂಥ ಊರು. ಆದರೀಗ ಯಾಕೋ ಬೀಜಿಂಗ್‌ ನೊಂದಿಗೆ ಸ್ಪರ್ಧೆಗಿಳಿದಂತೆ ತೋರುತ್ತಿದೆ. ಸಹಜತೆ, ಸ್ವಾಭಾವಿಕತೆಗಳೆಲ್ಲಾ ಮುದುಡತೊಡಗಿವೆ. ಯಾಕೋ ಊರಿನ ಬಗ್ಗೆ ಚಿಕ್ಕದೊಂದು ಅಸಹನೆಯ ಮೊಳಕೆ ಕಾಣತೊಡಗಿದೆ. ಸತ್ಯಕ್ಕೂ ನನ್ನ ಪಟ್ಟಣ ಹೀಗಿರಲಿಲ್ಲ.

ಈ ಬರಹಕ್ಕೂ ನಮ್ಮ ಊರು-ಪಟ್ಟಣಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ನಮ್ಮ ಊರುಗಳೂ ಆಗುತ್ತಿರುವುದು ಅದೇ. ದೂರದ ಬೆಂಗಳೂರನ್ನು ಕಂಡುಕೊಂಡು ಇದ್ದ ವೇಷ ಕಳಚಿ ಹೊಸ ವೇಷ ಧರಿಸುತ್ತಿವೆ. ಇವೆಲ್ಲವೂ ನಮ್ಮ ಕಣ್ಣಮುಂದೆಯೇ ನಡೆಯತ್ತಿ ರುವಂಥದ್ದು. 

ನಗರ ಸಾಯುವುದೆಂದರೆ ಏನು?
ಹಾಗೆಂದರೆ ನಗರಗಳು ಸಾಯುವುದೆಂದರೆ ಏನು? ಹಾಗೆಂದರೆ ಇಷ್ಟೇ-ತಮ್ಮತನವನ್ನು ಕಳೆದುಕೊಳ್ಳುವುದು. ಇದು ತೀರಾ ಭಾವನಾತ್ಮಕವಾಗಿ ಹೇಳುವಂಥ ಮಾತು. ಅದೇ ಲೌಕಿಕ ನೆಲೆಯಲ್ಲಿ ಹೇಳುವುದಾದರೆ ತೀರಾ ಕಿಷ್ಕಿಂಧೆಯಾಗಿ, ಎಲ್ಲ ಅಪಸವ್ಯಗಳ ಮೂರ್ತ ಸ್ವರೂಪದಂತೆ ತೋರುವುದು. ಯಾವುದೇ ಅವ್ಯವಸ್ಥೆ ಕೇಳಿದರೂ ನಮ್ಮಲ್ಲಿ ಇದೆ ಬನ್ನಿ ಎಂದು ಕರೆಯುವಂಥದ್ದು. ದಿಲ್ಲಿ ಒಂದು ಬಗೆಯಲ್ಲಿ ಸಾಯಲು ಸಿದ್ಧವಾಗುತ್ತಿರುವ ಬಗೆ ಎಲ್ಲರಿಗೂ ಗೊತ್ತಿದ್ದದ್ದೇ. ಮಿತಿಮೀರಿದ ವಾಯುಮಾಲಿನ್ಯ ಇಡೀ ನಗರದ ಆಯುಷ್ಯವನ್ನು ಕಬಳಿಸತೊಡಗಿದೆ. ಪ್ರತಿ ಬಾರಿಯೂ ವಾಯು ಮಾಲಿನ್ಯದ ಗದ್ದಲ ಎದ್ದಾಗ ಪಕ್ಕದ ರಾಜ್ಯದವರು ಹೊಗೆ ಹಾಕಿದರು, ಪಕ್ಕದ ಮನೆಯವರು ಇನ್ನೇನನ್ನೋ ಸುಟ್ಟರು ಇತ್ಯಾದಿ ಸಬೂಬುಗಳನ್ನು ಹೇಳಲಾಗುತ್ತಿದೆಯೇ ಹೊರತು ಶಾಶ್ವತ ನೆಲೆಯ ಉಪಕ್ರಮಗಳು ನಡೆದದ್ದು ಕಡಿಮೆಯೇ. ವಾಯು ಮಾಲಿನ್ಯ ಅಳೆಯುವ ವಿಧಾನ ಅಥವಾ ಉಪಕರಣಗಳನ್ನು ಅಳವಡಿಸಿದ ಕೂಡಲೇ ಎಲ್ಲವೂ ಆದಂತೆ ಎಂದರ್ಥವಲ್ಲ. ಅದೇನಿದ್ದರೂ ವಾಯು ಮಾಲಿನ್ಯದ ಬಗ್ಗೆ ಜನರಲ್ಲಿ ಸಣ್ಣದೊಂದು ಜಾಗೃತಿಯ ಕಿಡಿ ಹಚ್ಚಬಹುದೇ ಹೊರತು ಬೇರೇನೂ ಅಲ್ಲ. ಅದಕ್ಕೆ ಪೂರಕವಾಗಿ ಸ್ಥಳೀಯ ಸರಕಾರಗಳು ಮತ್ತಷ್ಟು ವ್ಯವಸ್ಥಿತ ಕ್ರಮಗಳನ್ನು ಆಲೋಚಿಸಬೇಕು. ಅಂಥ ಬರೀಗಣ್ಣಿಗೆ ಕಾಣುವಂಥ ಉಪಕ್ರಮಗಳು ಆದದ್ದು ಕಡಿಮೆ.

ಇನ್ನು, ನಮ್ಮ ಬೆಂಗಳೂರು ಸಹ ಮತ್ತೂಂದು ನೆಲೆಯಲ್ಲಿ ಸ್ಫೋಟಗೊಳ್ಳುವ ಸ್ಥಿತಿಯನ್ನು ತಲುಪುತ್ತಿದೆ. ಅಲ್ಲಿನ ಟ್ರಾಫಿಕ್‌, ರಸ್ತೆಗಳ ಮೇಲಿನ ವಾಹನಗಳ ಒತ್ತಡ, ಕೇಂದ್ರ ವಸತಿ ಪ್ರದೇಶಗಳಲ್ಲಿನ ಜನಸಂಖ್ಯೆಯ ಒತ್ತಡ, ಅದಕ್ಕೆ ಕರಗುತ್ತಿರುವ ಹಸಿರುಪಟ್ಟಿ-ಎಲ್ಲವೂ ತಂದು ನಿಲ್ಲಿಸುವುದು ಅವನತಿಯ ಅರಮನೆಗೇ. ಅದನ್ನು ಇನ್ನಾದರೂ ಅರ್ಥ ಮಾಡಿಕೊಂಡರೆ ಉತ್ತಮ. 

ನಾವು ಹೀಗೆ ಮಾಡಬಹುದೇ?
ಇಂಥ ಹೊತ್ತಿನಲ್ಲಿ ನಾಗರಿಕರಾದ ನಾವು ಮಾಡಬಹುದಾದರೂ ಏನು ಎಂದು ಕೇಳಿಕೊಳ್ಳೋಣ. ಪರಿಸರ ಮಾಲಿನ್ಯದಿಂದ ಹಿಡಿದು ಅವ್ಯವಸ್ಥಿತ ಎಲ್ಲ ಉಪಕ್ರಮಗಳ ವಿರುದ್ಧವೂ ಸಣ್ಣದೊಂದು ದನಿ ಎತ್ತುವುದರಿಂದ ಹಿಡಿದು ದೊಡ್ಡ ಮಟ್ಟದ ಕ್ರಾಂತಿಕಾರಿ ಬದಲಾವಣೆ ಮಾಡುವವರೆಗೂ. ನಮ್ಮ ಮನೆಯ ಪಕ್ಕದಲ್ಲೇ ಸಣ್ಣದೊಂದು ಜಾಗವಿದೆ ಎಂದುಕೊಳ್ಳೋಣ. ಅಲ್ಲಿಗೆ ಯಾರೋ ಬಂದು ಕಸ ಸುರಿಯುತ್ತಿದ್ದಾರೆಂದುಕೊಳ್ಳಿ ಅಥವಾ ನಮ್ಮ ಮನೆ ಎದುರೇ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದಾರೆಂದುಕೊಳ್ಳಿ. ಅವರನ್ನು ಒಂದು ದಿನ ತಡೆದು, ಸ್ವಾಮಿ ಸರಿಯಾಗಿ ನಿಲ್ಲಿಸಿ, ಸ್ವಾಮಿ ಕಸವನ್ನು ಸುರಿಯಬೇಡಿ ಎಂದು ಹೇಳಿ ತಡೆಯುವುದು, ವಿರೋಧ ವ್ಯಕ್ತಪಡಿಸುವುದೂ ಅಂಥದ್ದೇ ಒಂದು ಕ್ರಮ. ಈ ಉದಾಹರಣೆ ಸಣ್ಣದಷ್ಟೇ.

ಹಲವಾರು ಸಂಘಟನೆಗಳು ಇಂದು ನಗರದ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿವೆ. ಅವುಗಳ ನೈಜ ಉದ್ದೇಶ ಅರಿತು ಒಂದುವೇಳೆ ನಿಜಕ್ಕೂ ನಗರದ ಆರೋಗ್ಯವನ್ನು ಕಾಪಾಡುವಂತಿದ್ದರೆ ಬೆಂಬಲಿಸಬಹುದು. ಅವುಗಳ ಚಟುವಟಿಕೆಗಳಲ್ಲಿ ಭಾಗವಹಿ ಸಬಹುದು. ಆ ಮೂಲಕ ಅವರ ದನಿಗೆ ಶಕ್ತಿ ತುಂಬಬಹುದು. ನಮ್ಮದೇ ಒಂದಿಷ್ಟು ನಿಯಮಗಳನ್ನು ರೂಪಿಸಿಕೊಂಡು ಪಾಲಿಸಬಹುದು. 

ಕಾರ್‌ ಪೂಲಿಂಗ್‌ ಎನ್ನುವ ಉಪಕ್ರಮ ಈ ದೃಷ್ಟಿಯಲ್ಲಿ ಒಳ್ಳೆಯ ಉದಾಹರಣೆ. ನೀವು ಮತ್ತು ನಿಮ್ಮ ಪಕ್ಕದ ಮನೆಯವರು ಒಂದೇ ಕಚೇರಿಗೆ ಹೋಗುತ್ತಿದ್ದೀರೆಂದು ಕೊಳ್ಳಿ ಅಥವಾ ಪರಸ್ಪರ ಹತ್ತಿರವೇ ಕಚೇರಿಗಳಿವೆ ಎಂದುಕೊಳ್ಳಿ. ಇಬ್ಬರೂ ಪ್ರತ್ಯೇಕ ವಾಹನಗಳನ್ನು ತೆಗೆದು ಕೊಂಡು ಹೋಗುವುದಕ್ಕಿಂತ ಒಂದೇ ವಾಹನದಲ್ಲಿಯೇ ಹೋಗಿ. ಖರ್ಚೂ ಉಳಿತಾಯ, ವಾಯು ಮಾಲಿನ್ಯವೂ ಕಡಿಮೆ. ಎಷ್ಟೋ ಮಂದಿ ಅಂದುಕೊಳ್ಳುವುದು ಹೀಗೆ- ನನ್ನದೊಂದು ವಾಹನ ರಸ್ತೆಗಿಳಿಯದಿದ್ದರೆ ಆಕಾಶವೇನೂ ಶುಭ್ರವಾದೀತೆ?  ಖಂಡಿತಾ ಆದೀತು. ಹನಿಹನಿಗೂಡಿದರೆ ಹಳ್ಳವಲ್ಲವೇ, ಹಾಗೆಯೇ ಇದೂ ಸಹ. 

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

27-jodhpur-3.jpg

ನಮ್ಮ ನಗರಗಳಿಗೂ ಒಂದು ಬಣ್ಣಬೇಕು, ಅದು ಸುಸ್ಥಿರವಾಗಬೇಕು! 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.