ಜೀವನ್ಮುಖಿ ಮಾರುಕಟ್ಟೆಗೆ ಮಾರು ಹೋಗೋಣ


Team Udayavani, Mar 17, 2018, 7:30 AM IST

5.jpg

“ನಮ್ಮ ನಗರದಲ್ಲಿರುವ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ಕೊಟ್ಟಿದ್ದೀರಾ?’.  ಇಂಥದೊಂದು ಪ್ರಶ್ನೆ ಹಿಡಿದು ನಗರದ ರಸ್ತೆಗಳಲ್ಲಿ ಸಮೀಕ್ಷೆಗೆ ಹೊರಟರೆ ಸಿಗುವ ಉತ್ತರ ಮೂರು ಮಾದರಿಯದ್ದಾಗಿರುತ್ತದೆ. ಶೇ. 60 ರಷ್ಟು ಮಂದಿ “ಅಪರೂಪ’ಕ್ಕೆ ಹೋಗುವುದಾಗಿ ಹೇಳಬಹುದು. ಶೇ. 30 ರಷ್ಟು ಮಂದಿ “ಹಿಂದೆ ಹೋಗುತ್ತಿದ್ದೆ, ಈಗಿಲ್ಲ’ ಎನ್ನಬಹುದು. ಉಳಿದವರು “ಈಗಲೂ ಹೋಗುತ್ತೇನೆ’ ಎನ್ನಬಹುದೇನೋ? ನಮ್ಮ ನಗರದೊಳಗಿನ ಉಪನಗರಗಳಲ್ಲೆಲ್ಲಾ ಸೂಪರ್‌ ಮಾರ್ಕೆಟ್‌ಗಳು ಬಂದಿವೆ. ಮಾಲ್‌ಗ‌ಳು ತಲೆ ಎತ್ತಿವೆ. ಎದುರಿನ ಅಂಗಡಿಯನ್ನೂ ಬೆಳಗಿಸುವಷ್ಟು ಕಣ್ಣು ಕೋರೈಸುವ ಲೈಟುಗಳು ರಸ್ತೆಯಲ್ಲಿ ಸೆಳೆಯದೇ ಬಿಡಲಾರವು. ಜತೆಗೆ ಅಲ್ಲಿನ ಆಯ್ಕೆ ಸ್ವಾತಂತ್ರ್ಯದ ಭಾವದೊಳಗೆ ಮುಳುಗಿ ಬಿಡುತ್ತೇವೆ. ಸಣ್ಣದೊಂದು ಗಾಡಿ ಹಿಡಿದುಕೊಂಡು ನಮಗೆ ಬೇಕಾದದ್ದನ್ನೆಲ್ಲಾ ತುಂಬಿಕೊಂಡು ಕೌಂಟರ್‌ ಎದುರು ಬಂದು ಸಾಲುಗಟ್ಟಿ ನಿಲ್ಲುವುದೆಂದರೆ ಒಂದು ಸಂಭ್ರಮದ ಕ್ಷಣವೂ ಹೌದು. ವಾಸ್ತವವಾಗಿ ನಾವೆಲ್ಲರೂ ಸಿಟಿಯವರು ಎಂದು ಎನ್ನಿಸುವುದು ಆಗಲೇ.  ಇವೆಲ್ಲವೂ ಇರಬಹುದು. ಆದರೆ ನಗರದೊಳಗೂ ಸಂತೆಗಳನ್ನು ಸೃಷ್ಟಿಸಲು ಸಾಧ್ಯವೇ? ಹಳ್ಳಿಗಳಲ್ಲಿನ ನಳನಳಿಸುವ ಸೊಬಗನ್ನು ಉಳಿಸಿಕೊಳ್ಳಲು ಸಾಧ್ಯವೇ? ಮಾರುಕಟ್ಟೆಗಳನ್ನು ತುಂಬಿಕೊಳ್ಳಲು ಸಾಧ್ಯವಾಗದೇ? ಪಾಶ್ಚಿಮಾತ್ಯ ನಗರಗಳ ಜನರಿಗೂ ಈ ಸೂಪರ್‌ ಮಾಲ್‌ಗ‌ಳು ಏಕತಾನತೆಯ ತಾಣಗಳಂತೆ ಅನ್ನಿಸ ತೊಡಗಿವೆ. “ನಮ್ಮಷ್ಟಕ್ಕೆ ಹೋಗಿ, ಬೇಕಾದದ್ದನ್ನು ಮೌನವಾಗಿ ತುಂಬಿಕೊಂಡು ತರುವುದು ಯಾಕೋ ಇತ್ತೀಚೆಗೆ ಮಜಾ ಎನ್ನಿಸುತ್ತಿಲ್ಲ’ ಎಂದರು ನನ್ನ ಬೆಂಗಳೂರಿನ ಗೆಳೆಯರೊಬ್ಬರು. ಬಹುಶಃ ಸೂಪರ್‌ಮಾರ್ಕೆಟ್‌ಗಳಲ್ಲಿನ ಆಯ್ಕೆ ಸ್ವಾತಂತ್ರ್ಯ ಭಾವವೇ ಅನಾಥ ಭಾವ ಸೃಷ್ಟಿಸುತ್ತಿದೆಯೋ? 

ಇವರ ಮಾತು ಕೇಳ್ಳೋಣ: ಬಾರ್ಸಿಲೋನಾದ ಜನರು ತಮಗೆ ಅತ್ಯಂತ ಇಷ್ಟವಾದ ಸಾರ್ವಜನಿಕ ಸ್ಥಳ ಯಾವುದು ಎಂಬ ಪ್ರಶ್ನೆಗೆ “ಸಾರ್ವಜನಿಕ ಗ್ರಂಥಾಲಯದ ಬಳಿಕ ಮಾರುಕಟ್ಟೆ’ ಎಂದು ಹೇಳಿದ್ದರು. ಎಂಥದೊಂದು ಅಸಾಮಾನ್ಯ ಹೋಲಿಕೆ. ಗ್ರಂಥಾಲಯದ ಬಳಿಕ ಮಾರುಕಟ್ಟೆ. ಇದಕ್ಕೆ ಹಲವು ಕಾರಣಗಳನ್ನೂ ನೀಡುತ್ತಾ ಹೋಗುತ್ತಾರೆ ಅಲ್ಲಿಯವರು. ಅದು ಕೇವಲ ಭಾವನಾತ್ಮಕ ಕೇಂದ್ರವಾಗಿಯೂ ನೋಡುವುದಿಲ್ಲ, ಆರ್ಥಿಕ ನೆಲೆಯಾಗಿಯೂ ಗುರುತಿಸುತ್ತಾರೆ. ಅದಕ್ಕೆ ನೀಡುವ ಕಾರಣ ಕೇಳಿ, “ಮಾರುಕಟ್ಟೆಗಳು ನಮಗೆ ಈ ರೆಫ್ರಿಜರೇಟರ್‌ಗಳು ಹಾಗೂ ಆಹಾರ ಸಂರಕ್ಷಕಗಳಿಂದ ಕಾಪಾಡುತ್ತಿವೆ’. ಹಾಗಾಗಿ ನಮಗೆ ಮಾರುಕಟ್ಟೆ ನಗರಗಳು ಬೇಕು ಎನ್ನುತ್ತಾರೆ ಅವರು. ಬಾರ್ಸಿಲೋನಾದ ಜನರ ದೃಷ್ಟಿಯಲ್ಲಿ ಮಾರುಕಟ್ಟೆಗಳು ಒಂದು ಬಗೆಯ ಸಮಾಜ ಸುಧಾರಕರ ಪಾತ್ರವನ್ನು ನಿರ್ವಹಿಸಬಲ್ಲವು ಎಂಬ ನಂಬಿಕೆ.

ಈ ಮಾತು ಸುಳ್ಳು ಎಂದು ನನಗನಿಸುವುದಿಲ್ಲ. ಮೈಸೂರಿಗೆ ಭೇಟಿ ನೀಡಿದವರು ಅಲ್ಲಿನ ದೇವರಾಜ ಮಾರುಕಟ್ಟೆಯ ಸೊಬಗು ಸವಿದಿರಬಹುದು. ಒಂದುವೇಳೆ ಹೋಗದಿದ್ದರೆ, ಖಂಡಿತಾ ಹೋಗಿಬನ್ನಿ. ಅದರೊಳಗೆ ತಿರುಗಾಡಿದ ಮೇಲೆ ನಮಗೊಂದು ಇಂಥದ್ದೇ ಮಾರುಕಟ್ಟೆ ಬೇಕು ಎನ್ನದೇ ಇರುವುದಿಲ್ಲ. ಹಾಗೆಂದು ಅದರ ಇತಿಹಾಸವನ್ನೆಲ್ಲಾ ಹೇಳಲು ಹೋಗುವುದಿಲ್ಲ. ಸರಳವಾಗಿ ಕೆಲವೇ ಸಾಲುಗಳಲ್ಲಿ ಹೇಳಿ ಮುಗಿಸುವುದಾದರೆ, ಶತಮಾನ ಕಂಡಿರುವ ಮಾರುಕಟ್ಟೆ. ಮೈಸೂರಿನ ಅತ್ಯಂತ ಜನಪ್ರಿಯತಾಣ. ಒಂದು ಸಂದರ್ಭದಲ್ಲಿ ಸುಮಾರು 750ರಷ್ಟು ಮಂದಿ ವ್ಯಾಪಾರಿಗಳು ಇದರಲ್ಲಿ ವ್ಯಾಪಾರ ನಡೆಸುತ್ತಿದ್ದರಂತೆ. ಇದರೊಳಗೆ ಎಲ್ಲವೂ ಇದೆ. ದಿನಸಿ ಸಾಮಾನುಗಳಿಂದ ಹಿಡಿದು ಹಬ್ಬಗಳಿಗೆ ಬೇಕಾಗುವ ಸರಂಜಾಮುಗಳವರೆಗೂ ಪ್ರತಿಯೊಂದೂ ಲಭ್ಯ. ಅದಕ್ಕಿರುವ ನಾಲ್ಕು ದ್ವಾರಗಳ ವಿಶೇಷವೂ ಚೆನ್ನಾಗಿದೆ. ಒಂದೊಂದು ದ್ವಾರವೂ ಕರೆದೊಯ್ಯುವುದು ಒಂದೊಂದು ಲೋಕಕ್ಕೆ.

ಎದುರಿನ ದ್ವಾರದಿಂದ ಹೋದರೆ ಹಣ್ಣುಗಳ ಸಾಮ್ರಾಜ್ಯ ನಿಮ್ಮನ್ನು ಸ್ವಾಗತಿಸಬಹುದು. ಹಿಂದಿನಿಂದ (ಮತ್ತೂಂದು ಮುಖ್ಯರಸ್ತೆಯ ಭಾಗದಿಂದ) ಒಳಹೊಕ್ಕರೆ ಪರಿಮಳ ದ್ರವ್ಯಗಳ ಅಂಗಡಿಗಳು ಸ್ವಾಗತಿಸುತ್ತವೆ. ಇನ್ನೆರಡು ಬದಿಯಿಂದ ಹೊಕ್ಕರೆ, ಒಂದೆಡೆ ಬಳೆಗಳ ವ್ಯಾಪಾರ, ಮತ್ತೂಂದೆಡೆ ದಿನಸಿ ಸಾಮ್ರಾಜ್ಯ. ಒಳ ಹೊಕ್ಕರೆ ಹೊರಗೆ ಬರಲಿಕ್ಕೆ ಕನಿಷ್ಠ ಎರಡು ಗಂಟೆ ಬೇಕು. ತರಕಾರಿಗಳು ಹಾಗೂ ಇತರೆ ಸಾಮಾನುಗಳ ಬಣ್ಣಗಳ ಸಾಮ್ರಾಜ್ಯದಲ್ಲಿ ನಾವು ಕಳೆದುಹೋಗುತ್ತೇವೆ. ಅಲ್ಲಿ ಪ್ರತಿ ವ್ಯಾಪಾರಿಯ ಹಿಂದೆಯೂ ಒಂದೊಂದು ಜೀವನ ಕಥೆಗಳಿವೆ. ಬಹಳ ಹಿಂದೆ ಕೇಳಿದ್ದು ಮತ್ತು ಅನುಭವಿಸಿದ ಕಥೆ. ಮಾರುಕಟ್ಟೆಯ ಬಾಗಿಲ ಎದುರಲ್ಲೇ ಒಂದು ಅಜ್ಜಿ ಕುಳಿತಿರುತ್ತಿದ್ದಳು. ಅವಳು ಸುಮಾರು ವರ್ಷಗಳಿಂದ ಮಾರುತ್ತಿದ್ದುದು ಒಂದೇ. ಅದು ಸಂಪಿಗೆ. ಹೆಚ್ಚಾಗಿ ಕೆಂಡಸಂಪಿಗೆ. ಅವರ ಯಜಮಾನರ ಕಾಲದಿಂದಲೂ ಅದನ್ನೇ ಮಾರುತ್ತಿದ್ದರು. ವಿಚಿತ್ರವೆಂದರೆ ಇಡೀ ಮಾರುಕಟ್ಟೆಯಲ್ಲಿ ಆ ಅಜ್ಜಿಯ ಬಳಿ ಬಿಟ್ಟರೆ ಬೇರೆಲ್ಲೂ ಸಂಪಿಗೆ ಹೂವು ಸಿಗುತ್ತಿರಲಿಲ್ಲ. ಅಂದ ಹಾಗೆ ಇಂದಿಗೂ ಆ ಮಾರುಕಟ್ಟೆಯಲ್ಲಿ ಕನಿಷ್ಠವೆಂದರೆ ನೂರಕ್ಕೂ ಹೆಚ್ಚು ಹೂವಿನ ಅಂಗಡಿಗಳಿವೆ. ಹಲವು ತಲೆಮಾರುಗಳಿಂದಲೂ ಮಾರುಕಟ್ಟೆಯೊಳಗೆ ಮಳಿಗೆ ಹಿಡಿದು ವ್ಯಾಪಾರ ಮಾಡುವವರೂ ಇದ್ದಾರೆ. ಬಾಳೆಹಣ್ಣಿನ ಮಂಡಿ ನೋಡಬೇಕು. ಅಲ್ಲಿಯೂ ಹಾಗೆಯೇ. ನಂಜನಗೂಡಿನ ರಸಬಾಳೆಯಿಂದ ಆರಂಭಿಸಿ ಕೇರಳದ ನೇಂದ್ರಬಾಳೆಯವರೆಗೂ ಸಿಗುತ್ತದೆ. ಅವರ ಮಾತು, ಗ್ರಾಹಕರೊಂದಿಗಿನ ಚರ್ಚೆ ಎಲ್ಲವೂ ಹೊಸ ಲೋಕವನ್ನು ತೆರೆಯುವುದು ನಿಜಕ್ಕೂ ಸುಳ್ಳಲ್ಲ.

ಮತ್ತೆ ಬಾರ್ಸಿಲೋನಾಕ್ಕೆ ಬರೋಣ: ಬಾರ್ಸಿಲೋ ನಾದವರು ಹೇಳುವ ಮತ್ತೂಂದು ಮಾತು ಕೇಳಿ. “ಈ ಮಾರುಕಟ್ಟೆ ನಮಗೆ ತಾಜಾ ತರಕಾರಿಗಳನ್ನು, ವಸ್ತುಗಳನ್ನು ಪೂರೈಸುವ ತಾಣ. ನಮ್ಮ ಆರೋಗ್ಯವನ್ನು ಕಾಪಾಡುವ ತಾಣ’ ಎನ್ನುತ್ತಾರೆ. ನಮ್ಮ ಸಂತೆಗಳೂ ಇಂಥದ್ದೇ ಒಂದು ಪರಿಕಲ್ಪನೆಯಲ್ಲಿ ಹುಟ್ಟಿಕೊಂಡದ್ದು. ಇಂದಿಗೂ ನಮ್ಮ ಹಳ್ಳಿಗಳಲ್ಲಿನ ಸಂತೆಗಳು ಬದುಕಿರುವುದೇ ಹೀಗೆ. ಊರ ದೇವಸ್ಥಾನದ ಎದುರೋ, ಸರ್ಕಲ್‌ನ ಎದುರೋ ನಿಗದಿತ ಒಂದು ದಿನ ಸಾಲಾಗಿ ಸುತ್ತಲಿನ ತರಕಾರಿ ಬೆಳೆಗಾರರು ತಾಜಾ ತರಕಾರಿಗಳನ್ನು ತಂದು ಮಾರಿ ಹೋಗುವ ಸಂಪ್ರದಾಯ. ಹನುಮಂತನ ಗುಡಿಗೆ ಶನಿವಾರ ಹೆಚ್ಚು ಜನ ಬರುತ್ತಾರೆಂದರೆ ಅಲ್ಲಿಯೇ ಅಂದು ಸಂತೆ ಆರಂಭವಾಗಬಹುದು. ಹೀಗೆ ಸ್ಥಳೀಯ ಬೆಳೆಗಾರರಿಗೆ ಸ್ಥಳೀಯವಾಗಿಯೇ ಗ್ರಾಹಕರನ್ನು ಹುಡುಕಿಕೊಡುವ ಸುಂದರ ವೇದಿಕೆ ಸಂತೆ. ಮಾರುಕಟ್ಟೆಯೂ ಅದರ ಸಣ್ಣದೊಂದು ಸಾಂಸ್ಥಿಕ ರೂಪ. ಅಂದರೆ ಬಾರ್ಸಿಲೋನಾದವರ ಅಭಿಪ್ರಾಯ ಸುಳ್ಳಲ್ಲ.

ಇಂದು ಏಕೆ ತುರ್ತು?: ಈ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವ ತುರ್ತು ಸದ್ಯದ್ದು. ನಾವೆಲ್ಲಾ ಬ್ಯುಸಿಯ ಪಂಜರದಲ್ಲಿ ಸಿಲುಕಿಕೊಂಡಿರುವಾಗ, ನಮ್ಮದೆಂದು ಎರಡು ಗಳಿಗೆ ಕಳೆಯಲು ಸ್ಥಳಗಳಿಲ್ಲ ಎನ್ನಿಸುವುದುಂಟು. ಜೀವನ ಸ್ಫೂರ್ತಿಯನ್ನು ತುಂಬಿಕೊಳ್ಳಲು ಆಕ್ಸಿಜನ್‌ ಸೆಂಟರ್‌ಗಳು ಬೇಕು. ಅಂಥ ಹೊತ್ತಿನಲ್ಲಿ ನಮ್ಮ ಪೂರ್ವ ಊರಿನ ಪರಿಮಳದೊಂದಿಗೆ ಇಂದಿನ ಬದುಕನ್ನು ಜೋಡಿಸಿಕೊಳ್ಳಲು ಇರಬಹುದಾದ ಏಕಮೇವ ಜಾಗವದು ಮಾರುಕಟ್ಟೆಗಳು. ಅಲ್ಲಿನ ಪರಿಸರ ರಂಗೇರಿಕೊಳ್ಳುವುದೇ ಹಾಗೆ. ನಮ್ಮ ಪೂರ್ವ ಊರಿನವನ ಭಾಷೆ ಸೊಗಡು, ಉತ್ಪನ್ನಗಳ ಬಣ್ಣ ಈ ನಿಯಾನ್‌ ಬೆಳಕಿನ ಬಣ್ಣಗಳಿಗಿಂತ ಮೇಲುಗೈ ಸಾಧಿಸುತ್ತವೆ. ಅವುಗಳು ಸದಾ ತೋರುವುದು ಸಂಸ್ಕೃತಿ ವಾಹಕಗಳಂತೆ. ಹಳ್ಳಿ ಸೊಗಡಿನ ಚಿತ್ರವನ್ನು ನೀಡುತ್ತಲೇ ನಮ್ಮ ಪೂರ್ವ ಊರುಗಳನ್ನು ನಮ್ಮೊಳಗೆ ಕಾಪಾಡುತ್ತವೆ. ಅಂಥ ಮಾರುಕಟ್ಟೆಗಳನ್ನು ನಗರದೊಳಗೆ ಸೃಷ್ಟಿಸಿಕೊಳ್ಳುವ ಚಳವಳಿ ಆರಂಭವಾಗಬೇಕಿದೆ. ಅದು ನಮ್ಮನ್ನು ಮತ್ತೂಂದಿಷ್ಟು ವರ್ಷ ಮನುಷ್ಯ ಸಂಬಂಧಗಳ ಬಂಧದೊಳಗೆ ಕಾಪಿಡಬಹುದು. ಅಂಥದೊಂದು ಶಕ್ತಿ ಅವುಗಳಿಗಿವೆ. ಮತ್ತೂಂದು ಮಾರುಕಟ್ಟೆಯ ಬಗ್ಗೆ ಹೇಳುವುದಿದೆ.  ಅಂದ ಹಾಗೆ, ನಾವೀಗ ಇಂಥದೊಂದು ಚಳವಳಿಗೆ ಸಿದ್ಧವಾಗಬೇಕಿದೆ. ನಮ್ಮೂರಿನ ಸಂತೆಗಳನ್ನು ಮರು ಸ್ಥಾಪಿಸೋಣ, ಮಹಾನಗರಗಳಲ್ಲಿ ಮಾರುಕಟ್ಟೆಗಳನ್ನು ಪುನರ್‌ ಕಟ್ಟೋಣ.

ಅರವಿಂದ ನಾವಡ

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.