ನೀರು ನಿರ್ವಹಣೆಯಲ್ಲಿ ನಾವು ಕಲಿಯಬೇಕಾದದ್ದೇನು?


Team Udayavani, Mar 31, 2018, 7:30 AM IST

1.jpg

ಕೇಪ್‌ ಟೌನ್‌ ಬಗ್ಗೆ ಹೇಳಲಿಕ್ಕೆ ಇನ್ನೂ ಬಹಳಷ್ಟಿದೆ. ಇಂದು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಗತ್ತಿನ ಮೊದಲ ಕಾಸ್ಮೋಪಾಲಿಟನ್‌ ನಗರವಾಗಿ ಕೇಪ್‌ ಟೌನ್‌ ಪ್ರಸಿದ್ಧಿ ಪಡೆದಿದೆ. ಜತೆಗೆ ಪ್ರಪಂಚದ ಹಲವು ಕಾಸ್ಮೋಪಾಲಿಟನ್‌ ನಗರಗಳಲ್ಲಿನ ಜನತೆಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಸಣ್ಣದೊಂದು ನಡುಕ ಹುಟ್ಟಿಸಿದೆ. “ನಮ್ಮ ಅಂಗಳದಲ್ಲೂ ಇಂಥದೊಂದು ಚಂಡಮಾರುತ ಎದ್ದರೆ ಪರಿಸ್ಥಿತಿ ಏನು?’ ಎಂಬ ಪ್ರಶ್ನೆಗಿಂತ ಅದನ್ನು ನಿಭಾಯಿಸುವ ಬಗೆ ಹೇಗೆ ಎಂಬ ಪ್ರಶ್ನೆ ದೊಡ್ಡದಾಗಿ ಕಾಣುತ್ತಿದೆ. ಬಹುಪಾಲು ಸ್ಥಳೀಯ ಆಡಳಿತಗಳ ಸರದಾರರಿಗೆ ವಿಷನ್‌ನ ಕೊರತೆ ಇರುವುದರಿಂದ ಸಮಸ್ಯೆಯ ಭೂತಾಕಾರವಷ್ಟೇ ತಿಳಿಯತ್ತದೆ, ಭವಿಷ್ಯದ ಆಕಾರವಲ್ಲ. ಅಥವಾ ಹೀಗೂ ಇರಬಹುದು- ಕೆಲವರಿಗೆ ಸಮಸ್ಯೆ ಅರ್ಥವಾದರೂ, ನಿಜರೂಪ ದಕ್ಕಿದರೂ ಜನರು ಒತ್ತಡಕ್ಕೆ ಒಳಗಾಗುತ್ತಾರೆ ಎಂದೋ, ಮತಾöವುದೋ ರಾಜಕೀಯ ಲಾಭಕ್ಕಾಗಿ ನೈಜ ಸ್ಥಿತಿಯನ್ನು ಹೇಳದೆ ಮುಂದೂಡು ವುದುಂಟು. ಅವೆಲ್ಲವೂ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆಯೇ ಹೊರತು ಮತ್ತೇನೂ ಅಲ್ಲ. 

ಸಾಮಾನ್ಯವಾಗಿ ಯಾರೋ ಅಥವಾ ಯಾವುದೋ ವ್ಯಕ್ತಿ/ಪ್ರದೇಶ ನೀರಿನ ಕೊರತೆ ಎದುರಿಸುತ್ತಿದೆ ಎಂಬುದನ್ನು ಕೇಳಿದ ಕೂಡಲೇ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. “ಇದ್ದಾಗ ಬೇಕಾಬಿಟ್ಟಿಯಾಗಿ ಬಳಸಿದ್ದಕ್ಕೆ ಈಗ ದಂಡ ತೆರಬೇಕಾಗಿದೆ’ ಎಂದೋ, “ದುಂದುವೆಚ್ಚದ ಪರಮಾವಧಿ ನಿರ್ಮಿಸಿದ ಸ್ಥಿತಿ’ ಎಂದೆಲ್ಲಾ ಹೇಳುತ್ತೇವೆ. ಇದು ಸಹಜವಾದುದೂ ಸಹ. ಆದರೆ ಈ ಮಾತನ್ನು ನಿಜಕ್ಕೂ ಕೇಪ್‌ ಟೌನ್‌ಗೆ ಅನ್ವಯಿಸುವಂತೆಯೂ ಇಲ್ಲ. ಯಾಕೆಂದರೆ ನಮ್ಮ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನೀರನ್ನು ಖಾಲಿ ಮಾಡಿದಂತೆ ಎಲ್ಲೂ ಮಾಡರು.  ಕೇಪ್‌ಟೌನ್‌ನಲ್ಲಿ ನೀರೆಂಬುದನ್ನು ಸಂಪನ್ಮೂಲವಾಗಿ ಪರಿಗಣಿಸಲಾಗಿದೆ. ಅಲ್ಲಿ ನೀರಿನ ಮರು ಬಳಕೆ, ಮಿತ ಬಳಕೆ, ಸದ್ಬಳಕೆ-ಈ ಮೂರೂ ಕುರಿತು ಪಾಠ ಮಾಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ನೈತಿಕ ಪಾಠಕ್ಕೆ ಒಗ್ಗದವರಿಗೆ ದಂಡ ವಿಧಿಸಿಯೂ ಕ್ರಮ ಕೈಗೊಳ್ಳಲಾಗಿದೆ. ಒಂದು ಹಂತದಲ್ಲಿ ತುರ್ತು ನೆಲೆಯಲ್ಲಿ ಕೈಗೊಳ್ಳಬಹುದಾದ ಉಪಕ್ರಮಗಳನ್ನೆಲ್ಲಾ ಮುಂಜಾಗ್ರತಾ ನೆಲೆಯಲ್ಲಿ ಕೈಗೊಳ್ಳಲಾಗಿತ್ತು. ಆದರೂ ಇಂದು ಇಡೀ ನಗರದ ಮೇಲೆ “ಜೀರೋ ಡೇ’ಯ ತೂಗುಕತ್ತಿ ತೂಗುತ್ತಿದೆ. 

ಹೀಗೊಂದು ಸಿನಿಮಾ
“ಕತ್ತಿ’ 2015ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಸಿನಿಮಾ. ನಟ ವಿಜಯ್‌ರದ್ದು ದ್ವಿಪಾತ್ರ ಅಭಿನಯ. ಜತೆಗೆ ಸಮಂತಾ ಪ್ರಭು ಮತ್ತಿತರರಿದ್ದರು. ಖ್ಯಾತ ನಿರ್ದೇಶಕ ಮುರುಗದಾಸ್‌ ನಿರ್ದೇಶಿಸಿದ್ದರು. ಈ ಸಿನಿಮಾದ ಎರಡು ಎಳೆಯಲ್ಲಿ ಒಂದು ಎಳೆ ಇಂಥದ್ದೇ ಒಂದು ನೀರಿನ ಸಮಸ್ಯೆ ಕುರಿತಾದದ್ದು,. ಅದರಲ್ಲಿ ನಗರದಲ್ಲಿ ಒಂದು ದಿನ ನೀರಿಲ್ಲದಿದ್ದರೆ ಹೇಗೆ ಎಂಬುದನ್ನು ಊಹಾತ್ಮಕ ನೆಲೆಯಲ್ಲಿ ಬಿಂಬಿಸಲಾಗಿದೆ. ನೀರಿನ ಪ್ರಕರಣವೊಂದರ ಕುರಿತಂತೆ ಎಷ್ಟು ಹೋರಾಟ ನಡೆಸಿದರೂ ಮಾಧ್ಯಮದವರಿಗಾಗಲೀ, ನಗರದ ಜನರಿಗಾಗಲೀ ಅರ್ಥ ವಾಗದು. ಅದನ್ನು ಅವರು ಲಘುವಾಗಿಯೇ ಪರಿಗಣಿಸುತ್ತಾರೆ. ಆಗ ನಾಯಕ ನಟ ತಮ್ಮ ಜನರೊಂದಿಗೆ ಚೆನ್ನೈಗೆ ನದಿಯಿಂದ ನೀರು ಸರಬರಾಜು ಮಾಡುವ ಪ್ರಮುಖ ಕೇಂದ್ರಕ್ಕೆ ಹೋಗಿ ಆ ಬೃಹತ್ತಾದ ಪೈಪ್‌ಲೈನ್‌ನೊಳಗೆ ಹೋಗಿ ಕುಳಿತುಕೊಳ್ಳುತ್ತಾರೆ. ನಮ್ಮನ್ನು ಇಲ್ಲಿಂದ ಹೊರಹಾಕುವುದಾದರೆ ನೀರು ಹರಿಸಿ ಎಂದು ಆಗ್ರಹಿಸುತ್ತಾರೆ. 

ಈ ಪ್ರತಿಭಟನೆಯಿಂದ ಚೆನ್ನೈಗೆ ನಿರಂತರವಾಗಿ ಹರಿಯುವ ನೀರು ನಿಲ್ಲುತ್ತದೆ. ಆಗ ನಮ್ಮ ಮುಂದೆ ಕಾಣುವ ಕೊಲಾಜ್‌ ಮಾದರಿಯ ಸನ್ನಿವೇಶಗಳು ತೀರಾ ಊಹಾತ್ಮಕ ಎನಿಸಿದರೂ ಒಂದು ದಿನ ನೀರಿಲ್ಲದಿದ್ದರೆ ಹೇಗೆ ಎಂಬುದನ್ನು ಕಣ್ಣೆದುರು ನಿಲ್ಲಿಸುತ್ತದೆ. ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದವರ ನಲ್ಲಿಗಳು ಒಮ್ಮೆ ಬಂದ್‌ ಆಗುತ್ತವೆ, ನಲ್ಲಿ ಬಿಟ್ಟುಕೊಂಡು ಪಾತ್ರೆ ತೊಳೆಯುತ್ತಿದ್ದವರು ಗಕ್ಕನೆ ನಿಲ್ಲುತ್ತಾರೆ, ಶವರ್‌ನಲ್ಲಿದ್ದವರಿಗೆ ನೀರೇ ಬಾರದೇ ನಿಂತುಕೊಳ್ಳುತ್ತಾರೆ. ಚೆನ್ನೈನ ನೀರು ಪೂರೈಕೆ ಮಂಡಳಿಗೆ ಒಂದು ಕ್ಷಣದಲ್ಲಿ ನೂರಾರು ಫೋನ್‌ ಕರೆಗಳು ಬರುತ್ತವೆ. ಒಟ್ಟೂ ಪರಿಸ್ಥಿತಿಯೇ ಆಯೋಮಯ. ಇಂತದ್ದೇ ಒಂದು ಸ್ಥಿತಿ ನಮ್ಮ ನಗರಗಳಲ್ಲೂ ಉದ್ಭವಿಸಬಹುದು. 

ಕೇಪ್‌ ಟೌನ್‌ ಕಥೆ 
ಕೇಪ್‌ ಟೌನ್‌ ಅತ್ಯುತ್ತಮ ನೀರು ನಿರ್ವಹಣೆಗೆ 2015 ರಲ್ಲಿ ಪ್ರಶಸ್ತಿ ಪಡೆದ ನಗರ. 1996ರಿಂದಲೇ, ಅಂದರೆ 20 ವರ್ಷಗಳ ಹಿಂದಿನಿಂದಲೇ ಹಲವಾರು ಉಪ್ರಕಮಗಳನ್ನು ಕೈಗೊಂಡಿದೆ. 2001ರಿಂದ 2011ರಲ್ಲಿ ಹತ್ತು ವರ್ಷದಲ್ಲಿ ಶೇ.30ರಷ್ಟು ಜನಸಂಖ್ಯೆ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ನೀರು ಪೂರೈಕೆ ತಂತ್ರಜ್ಞಾನದಿಂದ ಆರಂಭಿಸಿ ವಿಧಾನ, ಮೂಲ ಸೌಕರ್ಯ ಹಾಗೂ ಜನ ಜಾಗೃತಿ-ಎಲ್ಲ ಬಗೆಯ ಸುಧಾರಣಾ ಕ್ರಮಗಳಿಗೆ ಮತ್ತಷ್ಟು ವೇಗ ಕಲ್ಪಿಸಿತು. ಮೂಲಸೌಕರ್ಯದ ಭಾಗವಾಗಿ 2007ರಲ್ಲಿ ಬರ್ಗ್‌ ಎಂಬಲ್ಲಿ ಹೊಸ ಅಣೆಕಟ್ಟನ್ನು ನಿರ್ಮಿಸಿತು. ಆಗಲೇ ವಾರ್ಷಿಕ ಶೇ. 4.7 ರಷ್ಟು ನೀರಿನ ಬೇಡಿಕೆ ಹೆಚ್ಚುತ್ತಿತ್ತು. ಅದನ್ನು ಗಮನಿಸಿಯೇ ಕೇಪ್‌ ಟೌನ್‌ ಸ್ಥಳೀಯ ಆಡಳಿತ ಆತಂಕಕ್ಕೀಡಾಗಿತ್ತು. ಏಕೆಂದರೆ, ಆ ಬೇಡಿಕೆಯ ಪೂರೈಕೆ ತನ್ನ ಕೈ ದಾಟಿ ಹೋಗಲಿದೆ ಎಂಬ ಆತಂಕ ಹೆಚ್ಚು ಕ್ರಿಯಾಶೀಲವಾಗುವಂತೆ ಮಾಡಿತು. ಇವೆಲ್ಲವನ್ನೂ ಮಾಡಿದ್ದರಿಂದ ಜನಸಂಖ್ಯೆಯ ಏರಿಕೆಯ ಗತಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ನೀರಿನ ಬೇಡಿಕೆಯೂ ಹೆಚ್ಚಳವಾಗದಂತೆ ಅದರ ಗತಿಯನ್ನು ನಿಯಂತ್ರಿಸಿತು. ನೀರಿನ ಬೇಡಿಕೆಯನ್ನು ಶೇ.2ಕ್ಕೆ ಮಿತಗೊಳಿಸಿ, ಸುಮಾರು ಶೇ.30ರಷ್ಟು ಜಲಸಂಪನ್ಮೂಲ ಉಳಿಸುವಲ್ಲಿ ಯಶ ಸಾಧಿಸಿತು. ಈ ನೀರು ಉಳಿತಾಯದಿಂದ ಬೇಡಿಕೆಗೆ ತಕ್ಕಂತೆ ಮೂಲಸೌಕರ್ಯ ಒದಗಿಸಲು (ಮತ್ತಷ್ಟು ಅಣೆಕಟ್ಟು ಇತ್ಯಾದಿ) ಹೂಡಬೇಕಾದ ಬಂಡವಾಳ ಪ್ರಮಾಣವೂ ಉಳಿತಾಯವಾಯಿತು. ಇದರೊಂದಿಗೆ ಬಳಸಿದ ನೀರನ್ನು ಸಂಸ್ಕರಿಸಿ ಸಾರ್ವಜನಿಕ ಉದ್ಯಾನ ಹಾಗೂ ಇತರೆ ಹಸಿರು ವಲಯಕ್ಕೆ ಬಳಸಿತು. ಜತೆಗೆ ನಲ್ಲಿ ನೀರಿನ ಸಂಪರ್ಕಗಳಲ್ಲಿ ಆಗುತ್ತಿದ್ದ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿತು. ಸುಮಾರು 258ಕಿ.ಮೀ ನಷ್ಟು ಉದ್ದದ ನೀರು ಪೂರೈಕೆಯ ಹಳೆಯ ಪೈಪ್‌ಲೈನನ್ನು ಬದಲಾಯಿಸಿತು. ಇದರಿಂದ ಪೈಪುಗಳು ಒಡೆದು ನೀರು ಸೋರಿಕೆಯಾಗುವುದನ್ನು ತಡೆಯಲಾಯಿತು. 

ಇದೆಲ್ಲದರ ಒಟ್ಟೂ ಪರಿಣಾಮ ಬರೀ ನೀರಿನ ಉಳಿತಾಯದ ಮೇಲಾಗಲಿಲ್ಲ. ಜತೆಗೆ ಸುಮಾರು ವಾರ್ಷಿಕ 58,473 ಟನ್‌ ಇಂಗಾಲಾಮ್ಲ ಉತ್ಪತ್ತಿಯ ಸಾಧ್ಯತೆಯನ್ನು ಕೊಂದಿತು. ಯಾಕೆಂದರೆ, ಉಳಿತಾಯವಾದಷ್ಟು ಪ್ರಮಾಣದ ನೀರನ್ನು ಜನರಿಗೆ ಪೂರೈಸಲು (ಮಿತ ಬಳಕೆಗಿಂತ ಹೆಚ್ಚಿನದ್ದನ್ನು ದುಂದು ವೆಚ್ಚ, ಮಿತಬಳಕೆಯನ್ನು ಉಳಿತಾಯ) ಪಂಪ್‌ ಮಾಡುವುದಕ್ಕೆ, ಹಾಗೆ ಬಳಸಲಾದ ನೀರನ್ನು ಮತ್ತೆ ಸಂಸ್ಕರಿಸಲು ಬಳಸುತ್ತಿದ್ದ ವಿದ್ಯುತ್‌ನಿಂದ ಉಂಟಾಗುತ್ತಿದ್ದ ನಷ್ಟವದು. ಇದರಿಂದ ಪರಿಸರಕ್ಕೂ ನಷ್ಟ ಹಾಗೂ ಜಲಸಂಪನ್ಮೂಲವೂ ವ್ಯರ್ಥ. ಬೇಡಿಕೆಯನ್ನು ಮಿತಗೊಳಿಸುವುದು ಹಾಗೂ ನಿಯಂತ್ರಿಸುವುದು ಕೇವಲ ಆರ್ಥಿಕ ಲಾಭವನ್ನಷ್ಟೇ ತಂದುಕೊಡದು. ಜತೆಗೆ ಪಾರಿಸರಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ನಮಗೆ ಅರ್ಥವಾಗಬೇಕಾದ ಪಾಠ. ಇದರೊಂದಿಗೇ ಕೇಪ್‌ ಟೌನ್‌ ಎಲ್ಲಿ ಎಡವಿದ್ದು ಎಂಬುದನ್ನು ಮತ್ತೂಮ್ಮೆ ಹೇಳುತ್ತೇನೆ. ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಂತರ್ಜಲವನ್ನು ಬಸಿಯುವುದು, ನದಿ ಮತ್ತು ಕೆರೆಗಳಿಂದ ಅನಗತ್ಯವಾಗಿ ನೀರು ಪಂಪ್‌ ಮಾಡಿ ಪೋಲು ಮಾಡುವುದು - ಎಲ್ಲದಕ್ಕೂ ಬೇಡಿಕೆ ಮಿತಗೊಳಿಸುವುದಷ್ಟೆ ಮಾರ್ಗೋಪಾಯ. ಸುಸ್ಥಿರ ಅಭಿವೃದ್ಧಿಯ ನೆಲೆಯಲ್ಲಿ ಯೋಚಿಸುವುದೆಂದರೆ ಇದೇ. ಅಂಗೈಯಲ್ಲಿರುವ ಸಂಪನ್ಮೂಲದ ಮೌಲ್ಯವನ್ನು ಅರಿತು, ಅಗತ್ಯದಷ್ಟೇ ಬಳಸಿ, ಉಳಿದದ್ದನ್ನು ಸಂರಕ್ಷಿಸಿಕೊಳ್ಳುವ ಪ್ರಯತ್ನ. ಒಂದು ಹೆಚ್ಚು ಚಿನ್ನದ ಮೊಟ್ಟೆಗಾಗಿ ನಿರಂತರವಾಗಿ ಚಿನ್ನದ ಮೊಟ್ಟೆ ಕೊಡುವ ಕೋಳಿಯನ್ನೇ ಕೊಲ್ಲುವುದಲ್ಲ. 

ಇದು ನಮಗೆ ಅರ್ಥವಾಗಬೇಕಾದದ್ದು
ಸಂಪನ್ಮೂಲದ ಮಹತ್ವ ಅರಿಯುವಲ್ಲಿ ಮತ್ತು ವಿವೇಚನೆಯಿಂದ ಬಳಸುವಲ್ಲಿ ಸೋಲುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಬರಕ್ಕೆ ತುತ್ತಾಗುವ ಪ್ರದೇಶಗಳು ಹೆಚ್ಚುತ್ತಿವೆ. ನೀರಿನ ಕೊರತೆಯೆಂಬುದೂ ಎಲ್ಲೆಲ್ಲೂ ಕಾಣುತ್ತಿದೆ. ಒಂದು ಸಂದರ್ಭದಲ್ಲಿ ಈ ಮಾತು ಕೆಲವೇ ಪ್ರದೇಶಗಳಿಗೆ ಸೀಮಿತಗೊಂಡಿತ್ತು. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲೂ ಇಂದು ನೀರಿನ ಕೊರತೆ ಉದ್ಭವಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ನೀರಿನ ಅಭಾವ ತಲೆದೋರಿದೆ. ಹಾಗೆಂದು ನಾವಿನ್ನೂ ಬೇಕಾಬಿಟ್ಟಿ ಬಳಸುವ ನಮ್ಮ ಮನೋಧರ್ಮಕ್ಕೆ ಕೊನೆ ಹಾಡಿಲ್ಲ. ಹಾಗೆಂದ ಮೇಲೆ ಅದರ ಪರಿಣಾಮ ಅನುಭವಿಸಲಿಕ್ಕೆ ಸಿದ್ಧವಾಗಬೇಕು. ಈ ಹಿನ್ನೆಲೆಯಲ್ಲೇ ಬೆಂಗಳೂರು ನೀರಿನ ಅಭಾವಕ್ಕೆ ತುತ್ತಾಗುವ ನಗರಗಳಲ್ಲಿ ಎರಡನೇ ಸ್ಥಾನ ಹೊಂದಿರುವುದು. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಲ್ಲ, ಅದು ಸಾಧ್ಯವೇ ಎಂಬುದಕ್ಕೆ ಬರೀ ಆಡಳಿತದವರು ಉತ್ತರಿಸಿದರೆ ಸಾಲದು, ನಾಗರಿಕರಾದ ನಾವೂ ಉತ್ತರಿಸಬೇಕಿದೆ. ಇಷ್ಟಕ್ಕೂ ಕೇಪ್‌ ಟೌನ್‌ ಅನುಸರಿಸಿದ ಉಪಕ್ರಮಗಳು ಏನು ಗೊತ್ತೇ? ಗೊತ್ತಾದರೆ ನಮ್ಮಿಂದ ಸಾಧ್ಯವೇ ಇಲ್ಲವೆಂದು ಬಿಡುತ್ತೇವೆ, ಪ್ರತಿಭಟನೆಗಿಳಿಯುತ್ತೇವೆ, ನಮ್ಮ ಹಕ್ಕನ್ನು ಕಸಿಯಲಾಗುತ್ತಿದೆ ಎಂದೆಲ್ಲಾ ಬೊಬ್ಬೆ ಹಾಕುತ್ತೇವೆ. ಅದ್ಯಾವುದರಿಂದಲೂ ಬರದ ನೆರಳನ್ನು ಒಂದಿಂಚೂ ಮುಂದೂಡಲಾಗದು ಎಂಬುದು ಅಕ್ಷರಶಃ ಸತ್ಯ.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.