ನನಗೆ ನಾನೇ ಬರೆದುಕೊಂಡ 10 ಮಿಲಿಯನ್‌ ಡಾಲರ್‌ ಚೆಕ್‌!

ಜಗವನ್ನೇ ನಗಿಸುವ ನಟನ, ನೋವು-ಹೋರಾಟದ ಕಥನ

Team Udayavani, Dec 14, 2019, 7:15 AM IST

xd-21

ನಾನು 10ನೇ ತರಗತಿಯಲ್ಲಿದ್ದೆ. ಪ್ರತಿ ರಾತ್ರಿ 8 ಗಂಟೆ ನೈಟ್‌ ಶಿಫ್ಟ್ ಮಾಡಿ, ಬೆಳಗ್ಗೆ ಶಾಲೆಗೆ ಹೋಗುತ್ತಿದ್ದೆ. ಡಿಸ್ಲೆಕ್ಸಿಯಾದ ಸಮಸ್ಯೆಯಿತ್ತು, ಕೆಲಸದ ಒತ್ತಡದಿಂದ ವಿಪರೀತ ದಣಿವೂ ಕಾಣಿಸಿಕೊಳ್ಳುತ್ತಿತ್ತು. ಓದಿನ ಮೇಲೆ ಒಂದಿಷ್ಟೂ ಗಮನ ಹರಿಸಲು ಆಗಲೇ ಇಲ್ಲ. ಮುಖ ಕಳಾಹೀನವಾಗಿತ್ತು, ಬಡತನದ ಕಾರಣದಿಂದ ಒಳ್ಳೆಯ ಬಟ್ಟೆ ಇರಲಿಲ್ಲ.

ಅವು ನನ್ನ ಶಾಲಾ ದಿನಗಳು. ನಾನು ಅಂತರ್ಮುಖೀ ಅಲ್ಲದಿದ್ದರೂ, ಅದೇಕೋ ತಿಳಿಯದು, ನನಗೆ ಹೇಳಿಕೊಳ್ಳುವಷ್ಟು ಸ್ನೇಹಿತರೇ ಇರಲಿಲ್ಲ. ನನಗೆ ಡಿಸ್ಲೆಕ್ಸಿಯಾ ಎನ್ನುವ ಮಾನಸಿಕ ಸಮಸ್ಯೆ ಇದ್ದ ಕಾರಣ ಓದಲು, ಪದಗಳನ್ನು ಅರ್ಥಮಾಡಿಕೊಳ್ಳಲು, ಸರಿಯಾಗಿ ವಾಕ್ಯ ರಚಿಸಲು ಆಗುತ್ತಲೇ ಇರಲಿಲ್ಲ. ಆ ಸಮಯದಲ್ಲೇ ನನಗೆ ಒಂದು ಅದ್ಭುತ ಶಕ್ತಿಯಿದೆ ಎನ್ನುವುದು ನನಗೆ ಅರಿವಾಯಿತು- ಅದೇ ಹಾಸ್ಯಪ್ರಜ್ಞೆ! ಪ್ರಾಣಿಗಳ, ಶಿಕ್ಷಕರ ಮಿಮಿಕ್ರಿ ಮಾಡುತ್ತಿದ್ದ ನಾನು ಎದುರಿನವರು ಬಿದ್ದೂ ಬಿದ್ದೂ ನಗುವಂತೆ ಮಾಡುತ್ತಿದ್ದೆ(ಆದರೆ ಶಾಲಾ ಸಮಯದಲ್ಲಿ ಅಲ್ಲ).

ಇದನ್ನು ಅರಿತ ಶಿಕ್ಷಕಿಯೊಬ್ಬರು “ನೀನು ಕ್ಲಾಸಲ್ಲಿ ಯಾರೊಂದಿಗೂ ಮಾತನಾಡೋಲ್ಲ. ಹೀಗಾಗಿ, ಪ್ರತಿ ದಿನ ತರಗತಿ ಮುಗಿದ ಮೇಲಾದರೂ ಮಿಮಿಕ್ರಿ ಮಾಡಿ ಎಲ್ಲರನ್ನೂ ನಗಿಸಬೇಕು’ ಎಂಬ ಷರತ್ತು ಇಟ್ಟರು. ನಾನೂ ಒಪ್ಪಿಕೊಂಡೆ.

ಆ ಸಮಯದಲ್ಲಿ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಮ್ಮನಿಗಂತೂ, ನಾನು ಮಾಡುತ್ತಿದ್ದ ಪ್ರಾಣಿಗಳ ಮಿಮಿಕ್ರಿ(ನಕಲು) ಬಹಳ ಮಜಾ ಕೊಡುತ್ತಿತ್ತು. ಆಗ ನನಗಿನ್ನೂ 10 ವರ್ಷ. ಆ ವಯಸ್ಸಲ್ಲೇ ನನಗೆ ಕೇವಲ ಶಾಲೆ-ಮನೆಗಷ್ಟೇ ನನ್ನ ಕಾಮಿಡಿ ಸೀಮಿತವಾಗಬಾರದು ಎಂದು ಬಲವಾಗಿ ಅನಿಸಲಾರಂಭಿಸಿತು. ಈ ಕಾರಣಕ್ಕಾಗಿ, ಅಂದಿನ ಖ್ಯಾತ ಚಿತ್ರನಟಿ/ಹಾಸ್ಯನಟಿ ಕ್ಯಾರೋನ್‌ ಬ್ರೂನೆಟ್‌ಗೆ- “ನಿಮ್ಮ ಕಾರ್ಯಕ್ರಮದಲ್ಲಿ ನನಗೂ ಒಂದು ಚಾನ್ಸ್‌ ಕೊಡಿ’ ಎಂದು ಪತ್ರ ಬರೆದಿದ್ದೆ!

ದಿನಗಳು ಕಳೆದಂತೆ ಅಮ್ಮ ಚೇತರಿಸಿಕೊಳ್ಳಲಾರಂಭಿಸಿದಳು. ಎಲ್ಲವೂ ಸರಿಯಾಗುತ್ತಿದೆ ಎಂಬ ಸಮಾಧಾನದ ನಿಟ್ಟುಸಿರುಬಿಟ್ಟೆವು. ಆದರೆ, ನಮ್ಮ ಕುಟುಂಬಕ್ಕೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿಬಿಟ್ಟಿತು. ಅಪ್ಪ, ತನ್ನೆಲ್ಲ ಉಳಿತಾಯದ ಹಣವನ್ನೂ ಅಮ್ಮನ ಚಿಕಿತ್ಸೆಗಾಗಿ ಖರ್ಚುಮಾಡಿಬಿಟ್ಟಿದ್ದ. ಕೈಯಲ್ಲಿ ಪುಡಿಗಾಸೂ ಇರಲಿಲ್ಲ. ಅನ್ಯ ದಾರಿ ತೋಚದೇ ನಾನು-ನನ್ನ ಸಹೋದರ, ಅಪ್ಪ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲೇ ಕೆಲಸಕ್ಕೆ ಸೇರಿಕೊಂಡೆವು. ಸಹೋದರಿಯರಿಬ್ಬರೂ ಅಮ್ಮನ ಮನೆಗೆಲಸಕ್ಕೆ ಸಹಾಯ ಮಾಡುತ್ತಿದ್ದರು. ಆಗ ನಾನು 10ನೇ ತರಗತಿಯಲ್ಲಿದ್ದೆ. ಪ್ರತಿ ರಾತ್ರಿ 8 ಗಂಟೆ ನೈಟ್‌ ಶಿಫ್ಟ್ ಮಾಡಿ, ಬೆಳಗ್ಗೆ ಶಾಲೆಗೆ ಹೋಗುತ್ತಿದ್ದೆ. ಮೊದಲೇ ಡಿಸ್ಲೆಕ್ಸಿಯಾದ ಸಮಸ್ಯೆಯಿತ್ತು, ಅದು ಸಾಲದೆಂಬಂತೆ ಕೆಲಸದ ಒತ್ತಡದಿಂದ ವಿಪರೀತ ದಣಿವೂ ಕಾಣಿಸಿಕೊಳ್ಳುತ್ತಿತ್ತು. ಇದರಿಂದಾಗಿ ಓದಿನ ಮೇಲೆ ಒಂದಿಷ್ಟೂ ಗಮನ ಹರಿಸಲು ಆಗಲೇ ಇಲ್ಲ. ನನ್ನ ಕಣ್ಣುಗಳೆಲ್ಲ ನಿದ್ದೆಯಿಲ್ಲದೇ ನಿಸ್ತೇಜವಾಗಿದ್ದವು, ಮುಖ ಕಳಾಹೀನವಾಗಿತ್ತು, ಬಡತನದ ಕಾರಣದಿಂದ ಒಳ್ಳೆಯ ಬಟ್ಟೆ ಇರಲಿಲ್ಲ. ಹೀಗಾಗಿ, ಯಾರಾದರೂ ನನ್ನ ಜತೆ ಸ್ನೇಹ ಸಂಪಾದಿಸಲು ಬಂದರೆ, ಎಲ್ಲಿ ಅವರಿಗೆ ನಮ್ಮ ಬಡತನದ ಬಗ್ಗೆ ತಿಳಿದುಹೋಗುತ್ತದೋ ಎಂಬ ಕೀಳರಿಮೆಯಿಂದಾಗಿ ದೂರ ಸರಿದುಬಿಡುತ್ತಿದ್ದೆ.

ನನ್ನನ್ನು ಈ ಸಂಕಷ್ಟಗಳಿಂದಾಗಿ ಸಂಪೂರ್ಣವಾಗಿ ಕುಸಿದುಹೋಗದಂತೆ ಕಾಪಾಡಿದ್ದು ನನ್ನಲ್ಲಿದ್ದ ಕಾಮಿಡಿಯನ್‌! ಪ್ರತಿ ದಿನವೂ ಮನೆಯಲ್ಲಿ ಕನ್ನಡಿಯ ಮುಂದೆ ನಿಂತು ವಿವಿಧ ನಟ-ನಟಿಯರ ಮುಖಭಾವಗಳನ್ನು ನಕಲು ಮಾಡುತ್ತಿದ್ದೆ, ಹೊಸ ಜೋಕುಗಳನ್ನು ಬರೆದು, ಒಬ್ಬನೇ ಅವನ್ನು ಜೋರಾಗಿ ಹೇಳಿಕೊಳ್ಳುತ್ತಿದ್ದೆ. ನನ್ನ ಈ ಹುಚ್ಚಾಟಗಳಿಗೆ ಅಪ್ಪನ ಪ್ರೋತ್ಸಾಹವಂತೂ ಇತ್ತು, ಆತ ನನ್ನನ್ನು ಟೊರೊಂಟೋದ ಕಾಮಿಡಿ ಕ್ಲಬ್‌ಗಳಿಗೆ ನಿಯಮಿತವಾಗಿ ಕರೆದೊಯ್ಯುತ್ತಿದ್ದ. ಆದರೆ ಆರಂಭದ ದಿನಗಳಲ್ಲಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದ ಅಮ್ಮ, ದಿನಗಳೆದಂತೆ ನನ್ನ ವರ್ತನೆಯಿಂದ ಭಯಭೀತಳಾಗಿಬಿಡುತ್ತಿದ್ದಳು.

ರಾತ್ರಿಯಿಡೀ ದುಡಿಯುವುದು, ಬೆಳಗ್ಗೆಯೆಲ್ಲ ಶಾಲೆಗೆ ಹೋಗುವುದು, ಸಮಯ ಸಿಕ್ಕಾಗ ನಿದ್ರೆ…ಇಂಥ ದಾರುಣ ಸ್ಥಿತಿಯಿಂದ ಕಂಗೆಟ್ಟು, 10ನೇ ತರಗತಿಯಲ್ಲೇ ಶಾಲೆ ಬಿಟ್ಟುಬಿಟ್ಟೆ. ನಾನು ಶಾಲೆ ಬಿಟ್ಟದ್ದೇ ನನ್ನ ಅಪ್ಪ-ಅಮ್ಮ ಗಾಬರಿಯಾದರು. ಇನ್ನು ಇದೇ ಊರಿನಲ್ಲಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದರಿತು ಕೆನಡಾದ ಟೊರೊಂಟೋ ನಗರಿಗೆ ಹೊರಟುನಿಂತೆವು. ಹೊಸ ಊರಲ್ಲಿ ಆರಂಭದ 9 ತಿಂಗಳು ಬಹಳ ಕಷ್ಟಕರವಾಗಿದ್ದವು. ನಮಗೆ ತಂಗಲು ಮನೆಯೇ ಇರಲಿಲ್ಲ. ನಮ್ಮ ಫೋಕ್ಸ್‌ವ್ಯಾಗನ್‌ ವ್ಯಾನ್‌ ಅನ್ನು ಯಾವುದಾದರೂ ಗ್ರೌಂಡ್‌ನಲ್ಲಿ ನಿಲ್ಲಿಸಿ, ಅದರಲ್ಲೇ ಮಲಗುತ್ತಿದ್ದೆವು. ದಿನಗಳೆದಂತೆ ನಮ್ಮ ಸ್ಥಿತಿ ಸುಧಾರಿಸಲಾರಂಭಿಸಿತು, ಅಪ್ಪನ ಹೊಸ ನೌಕರಿ ನಮ್ಮೆಲ್ಲರ ಕೈ ಹಿಡಿಯಿತು. ಕೊನೆಗೂ ಬಾಡಿಗೆ ಮನೆಯೊಂದಕ್ಕೆ ಶಿಫ್ಟ್ ಆದೆವು.

ನನ್ನ ಹದಿಹರೆಯದ ಪ್ರಮುಖ ವರ್ಷಗಳೆಲ್ಲ ದುಡಿಮೆಗೇ ಪೋಲಾದವು. ಡಿಸ್ಲೆಕ್ಸಿಯಾ, ಬಡತನದ ಕಷ್ಟಗಳು, ಮುಜುಗರಗಳು ನನ್ನನ್ನು ಪೀಡಿಸಿದವು. ಬಹುಶಃ ಈ ಕೀಳರಿಮೆಯೇ ನನಗೆ ಯಶಸ್ಸಿಗಾಗಿ ಹೆಚ್ಚು ಹಂಬಲಿಸುವಂತೆ, ಎಲ್ಲರಿಗಿಂತ ಹೆಚ್ಚು ಶ್ರಮಪಡುವಂತೆ ಪ್ರೇರೇಪಿಸಿತೇನೋ? ಬಾಡಿಗೆ ಮನೆ ಸಿಕ್ಕದ್ದೇ ನನಗೆ ಹಾಲಿವುಡ್‌ ಪ್ರವೇಶಿಸಬೇಕೆಂಬ ಹಂಬಲ ವಿಪರೀತವಾಗಲಾರಂಭಿಸಿತು. ಟಾಕ್‌ಶೋಗಳ ನಿರೂಪಕರಿಗೆಲ್ಲ ನನ್ನ ಸ್ಟಾಂಡ್‌ ಅಪ್‌ ಕಾಮಿಡಿಯ ವಿಡಿಯೋ ರೆಕಾರ್ಡಿಂಗ್‌ಗಳನ್ನು ಕಳುಹಿಸಲಾರಂಭಿಸಿದೆ, ಆಗಾಗ ಟಿ.ವಿ. ಚಾನೆಲ್‌ಗಳಿಂದ ನನಗೆ ಹಾಸ್ಯ ಪ್ರದರ್ಶನ ನೀಡಲು ಆಹ್ವಾನಗಳೂ ಬರಲಾರಂಭಿಸಿತು.

ಯಶಸ್ಸಿನ ಕನಸು ಕಾಣುತ್ತಾ…
ನಾನು ಹಾಲಿವುಡ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದು ನನ್ನ 19ನೇ ವಯಸ್ಸಿನಲ್ಲಿ. ಆದರೆ ಎಲ್ಲಾ ಹೊಸ ನಟರಂತೆಯೇ ನನಗೂ ಆರಂಭಿಕ ಸಮಸ್ಯೆಗಳು ಎದುರಾದವು. ಮಾಡುತ್ತಿದ್ದ ಸಿನೆಮಾಗಳು ರಿಲೀಸ್‌ ಆಗುತ್ತಿರಲಿಲ್ಲ, ಹಣ ಸಿಕ್ಕರೆ ಸಿಗುತ್ತಿತ್ತು, ಇಲ್ಲವೆಂದರೆ ಇಲ್ಲ. ಅದು 1985ರ ಒಂದು ರಾತ್ರಿ, ವಿಪರೀತ ಬೇಸರ ಮನಸ್ಸನ್ನಾವರಿಸಿತ್ತು. ಮನೆಯಲ್ಲಿದ್ದ ಹಳೆಯ ಟೊಯೋಟಾ ಕಾರು ಏರಿ ಕುಳಿತವನೇ ಹಾಲಿವುಡ್‌ ಹಿಲ್ಸ್‌ನತ್ತ ಕಾರನ್ನು ಓಡಿಸಿದೆ.

ಆ ಎತ್ತರದ ಪ್ರದೇಶದಿಂದ ಲಾಸ್‌ ಏಂಜೆಲಿಸ್‌ ನಗರ ಕಾಣಿಸುತ್ತಿತ್ತು. ಕಾರಿನಲ್ಲಿ ಸುಮ್ಮನೇ ಕುಳಿತು ಲಾಸ್‌ ಎಂಜೆಲಿಸ್‌ ಅನ್ನು ನೋಡಿದೆ. ತಲೆಯಲ್ಲಿ ಯಶಸ್ಸಿನ ಕನಸುಗಳು ಓಡಾಡಲಾರಂಭಿಸಿದವು. ನನಗೆ ನಾನೇ ಸಾಂತ್ವನ ಹೇಳಿಕೊಳ್ಳಲು, ಒಂದು ಬ್ಯಾಂಕ್‌ ಚೆಕ್‌ ಹೊರತೆಗೆದು ಅದರ ಮೇಲೆ,
“”ನಟನೆಗಾಗಿ ಜಿಮ್‌ ಕೆರಿಗೆ “10 ಮಿಲಿಯನ್‌ ಡಾಲರ್‌”’ ಎಂದು ಬರೆದೆ (ಈಗಿನ ಲೆಕ್ಕದಲ್ಲಿ 70 ಕೋಟಿಗೂ ಅಧಿಕ). ಚೆಕ್‌ನ ದಿನಾಂಕವನ್ನು 1995 ಎಂದು ನಮೂದಿಸಿ ಪರ್ಸ್‌ನಲ್ಲಿಟ್ಟುಕೊಂಡೆ. ಸತ್ಯವೇನೆಂದರೆ, ಅಂದು ನನ್ನ ಬ್ಯಾಂಕ್‌ ಅಕೌಂಟಿನಲ್ಲಿ ಒಂದು ವಾರ ಊಟಕ್ಕಾಗುವಷ್ಟು ಮಾತ್ರ ಹಣವಿತ್ತು! ಒಟ್ಟಲ್ಲಿ, ಆ ಚೆಕ್‌ ನನ್ನ ಪರ್ಸ್‌ನಲ್ಲಿಯೇ ವರ್ಷಗಳವರೆಗೆ ಇತ್ತು.

1994ನೇ ಇಸವಿ. ನಾನು ಮಾಡಿದ “ಏಸ್‌ ವೆಂಚುರಾ’ ಸಿನೆಮಾ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯ ದಿನವಂತೂ ಮನೆಮಂದಿಯಲ್ಲಿ ಕಾತರದಿಂದ ವಿಮರ್ಶೆಗಳಿಗಾಗಿ ಕಾಯುತ್ತಿದ್ದೆವು. ದುರದೃಷ್ಟವೆಂದರೆ, ಅಂದು ಸಿನೆಮಾ ವಿಮರ್ಶಕರೆಲ್ಲ “ಇದು ಅತ್ಯಂತ ಕಳಪೆ ಸಿನೆಮಾ’ ಎಂದು ತೀರ್ಪುಕೊಟ್ಟರು! ಆದರೆ, ಪ್ರೇಕ್ಷಕನ ಅಭಿಪ್ರಾಯವೇ ಬೇರೆ ಇತ್ತು. ಆತ ಈ ಸಿನೆಮಾವನ್ನು ವಿಪರೀತ ಇಷ್ಟ ಪಟ್ಟ. ಎಲ್ಲರ ನಿರೀಕ್ಷೆಯನ್ನು ಉಲ್ಟಾ ಮಾಡಿದ ಏಸ್‌ ವೆಂಚುರಾ ಆಗಿನ ಕಾಲದಲ್ಲೇ 70 ದಶಲಕ್ಷ ಡಾಲರ್‌(ಈಗಿನ ಲೆಕ್ಕದಲ್ಲಿ 495 ಕೋಟಿ) ಲಾಭಗಳಿಸಿತು.

ಅದೇ ವರ್ಷದ ಜುಲೈ ತಿಂಗಳಲ್ಲಿ ರಿಲೀಸ್‌ ಆದ ನನ್ನ ಅತಿಮೆಚ್ಚಿನ “ದಿ ಮಾಸ್ಕ್’ ಸಿನೆಮಾ ಕೂಡ ಜಗತ್ತಿನಾದ್ಯಂತ ವಿಖ್ಯಾತವಾಯಿತು. ಈ ಯಶಸ್ಸಿನಿಂದ ಆ ಸಿನೆಮಾದ ಪ್ರೊಡ್ನೂಸರ್‌ಗಳು ಎಷ್ಟು ಖುಷಿಯಾದರೆಂದರೆ, ಸಕ್ಸಸ್‌ ಪಾರ್ಟಿ ಆಯೋಜಿಸಿ, ಪಾರ್ಟಿ ಮುಗಿದ ಮೇಲೆ ನನ್ನ ಕೈಗೆ ಮತ್ತೂಂದು ಚೆಕ್‌ ಕೊಟ್ಟರು! ಆ ಚೆಕ್‌ನಲ್ಲಿ ಬರೆದಿತ್ತು: ಜಿಮ್‌ ಕೆರ್ರಿಗೆ “10 ಮಿಲಿಯನ್‌ ಡಾಲರ್‌’!! ಆ ವರ್ಷ ನನ್ನ ನಸೀಬು ಎಷ್ಟು ಉತ್ಕೃಷ್ಟವಾಗಿತ್ತೆಂದರೆ, ಆ ವರ್ಷ ಬಂದ “ದಿ ಡಂಬ್‌ ಆ್ಯಂಡ್‌ ಡಂಬರ್‌’ ಸಿನೆಮಾ ಅಂತೂ 1000 ಕೋಟಿ ರೂಪಾಯಿಗಳಿಗೂ ಅಧಿಕ ಲಾಭ ಗಳಿಸಿ ಲೋಕ ವಿಖ್ಯಾತವಾಯಿತು.

ಅಪ್ಪನ ಹಣೆಗೆ ಮುತ್ತಿಟ್ಟು ವಿದಾಯ ಹೇಳಿದೆ
ಒಂದು ಕಾಲದಲ್ಲಿ ನನ್ನ ಬ್ಯಾಂಕಿನಲ್ಲಿ ನಯಾಪೈಸೆ ಇಲ್ಲದಿರುವಾಗ ನನಗೆ ನಾನೇ “10 ಮಿಲಿಯನ್‌ ಡಾಲರ್‌’ನ ಚೆಕ್‌ ಬರೆದಿಟ್ಟುಕೊಂಡಿದ್ದೆ. ಅಲ್ಲದೇ ಚೆಕ್‌ನ ದಿನಾಂಕವನ್ನು 1995 ಎಂದು ನಮೂದಿಸಿದ್ದೆ. ಬದುಕು ಯಾವ್ಯಾವ ರೀತಿಯಲ್ಲಿ ಕೆಲಸ ಮಾಡುತ್ತದೋ ನೋಡಿ. 1995ಕ್ಕಿಂತ ಒಂದು ವರ್ಷ ಮುನ್ನವೇ ನನ್ನ ಬ್ಯಾಂಕ್‌ ಅಕೌಂಟ್‌ನಲ್ಲಿ ಅಷ್ಟು ಹಣ ಬಂದುಬಿದ್ದಿತ್ತು!

ಈ ಯಶಸ್ಸಿನ ಆನಂದದಲ್ಲಿರುವಾಗಲೇ, ನನ್ನ ಜೀವನದಲ್ಲಿ ಅತಿದೊಡ್ಡ ಆಘಾತವೊಂದು ಬಂದಪ್ಪಳಿಸಿತು. ಶ್ವಾಸಕೋಶ ಕ್ಯಾನ್ಸರ್‌ ಮತ್ತು ಅಲ್‌ಝೈಮರ್ಸ್‌ನಿಂದ ಬಳಲುತ್ತಿದ್ದ ಅಪ್ಪ, ಅದೇ ವರ್ಷವೇ ನಮ್ಮನ್ನು ಬಿಟ್ಟು ಅಗಲಿದ. ಜೀವಮಾನದುದ್ದಕ್ಕೂ ನಮಗಾಗಿ ಬೆವರು ಹರಿಸಿ, ನನ್ನ ಯಶಸ್ಸಿಗೆ ಮೆಟ್ಟಿಲಾಗಿ, ನನ್ನ ಕಷ್ಟದ ಸಮಯದಲ್ಲೆಲ್ಲ ಹೆಗಲಾಗಿದ್ದ ಅಪ್ಪ, ಶವವಾಗಿ ಮಲಗಿಬಿಟ್ಟಿದ್ದ. “ಅಪ್ಪಾ, ಥ್ಯಾಂಕ್ಯೂ. ನಿನ್ನಿಂದಲೇ ಇದೆಲ್ಲ ಸಾಧ್ಯವಾಗಿದ್ದು…’ ಎಂದು ಆತನ ಹಣೆಗೆ ಮುತ್ತಿಟ್ಟೆ. ಆ ನೋವಿನಲ್ಲೇ ನಾನು ನನ್ನ ಪರ್ಸ್‌ ಹೊರತೆಗೆದು, ಅದರ ಒಳಗೆ ಅಡಗಿಸಿಟ್ಟಿದ್ದ ಆ ಹಳೆಯ ಚೆಕ್‌ ಅನ್ನು ಶವಪೆಟ್ಟಿಗೆಯೊಳಗೆ ಸೇರಿಸಿಬಿಟ್ಟೆ. ನನ್ನ ಸೂಪರ್‌ ಹೀರೋ, ಅಪ್ಪನ ಶವಪೆಟ್ಟಿಗೆ ನಿಧಾನಕ್ಕೆ ನೆಲದಾಳದಲ್ಲಿ ಇಳಿಯಲಾರಂಭಿಸಿತು…

ಯಾರಾದರೂ ಸ್ನೇಹ ಸಂಪಾದಿಸಲು ಬಂದರೆ, ಎಲ್ಲಿ ಅವರಿಗೆ ನನ್ನ ಬಡತನದ ಬಗ್ಗೆ ತಿಳಿದುಹೋಗುತ್ತದೋ ಎಂಬ ಕೀಳರಿಮೆಯಿಂದಾಗಿ ದೂರ ಸರಿದುಬಿಡುತ್ತಿದ್ದೆ.

ಜಿಮ್‌ ಕೆರ್ರಿ , ಹಾಲಿವುಡ್‌ ನಟ

ಟಾಪ್ ನ್ಯೂಸ್

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.