ಕಾಂಗ್ರೆಸ್‌ ಉತ್ತರದಾಯಿತ್ವಕ್ಕೆ ಹೆದರುತ್ತದೆಯೇ


Team Udayavani, Mar 21, 2019, 12:30 AM IST

modid-800.jpg

ಪ್ರಸ್‌ನಿಂದ ಹಿಡಿದು ಪಾರ್ಲಿಮೆಂಟ್‌ವರೆಗೂ, ಸೇನೆಯಿಂದ ಹಿಡಿದು ವಾಕ್‌ ಸ್ವಾತಂತ್ರ್ಯದವರೆಗೂ, ಸಂವಿಧಾನದಿಂದ ಹಿಡಿದು ನ್ಯಾಯಾಲಯಗಳ ವರೆಗೂ…ಸರ್ಕಾರಿ ಸಂಸ್ಥೆಗಳಿಗೆ ಅವಮಾನ ಮಾಡುವುದೇ ಕಾಂಗ್ರೆಸ್‌ನ ವೈಖರಿಯಾಗಿದೆ. ಅದರ ಪ್ರಕಾರ ಯಾರೂ ಸರಿಯಲ್ಲ,  ಕಾಂಗ್ರೆಸ್‌ ಒಂದೇ ಸರಿ!

2014ರ ಬೇಸಿಗೆಯ ದಿನಗಳವು. ಅಂದು ದೇಶವಾಸಿಗಳೆಲ್ಲ ನಿರ್ಣಾಯಕ ಮತ ನೀಡಿದ್ದು:
ಕುಟುಂಬ ರಾಜಕಾರಣದ ಬದಲು ಪ್ರಾಮಾಣಿಕತೆಗೆ 
ಅವನತಿಯ ಬದಲು ಅಭಿವೃದ್ಧಿಗೆ
ಶಿಥಿಲತೆಯ ಬದಲು ಸುರಕ್ಷತೆಗೆ 
ಅಡಚಣೆಗಳ ಬದಲು ಅವಕಾಶಕ್ಕೆ
ವೋಟ್‌ ಬ್ಯಾಂಕ್‌ ರಾಜಕೀಯದ ಬದಲು ವಿಕಾಸಕ್ಕೆ
ಆ ಸಮಯದಲ್ಲಿ ಭಾರತೀಯರೆಲ್ಲ ತಮ್ಮ ಪ್ರೀತಿಯ ಭಾರತವು “ಫ್ರಾಜೈಲ್‌ ಫೈವ್‌'(ಅಸ್ಥಿರ) ದೇಶಗಳ ಪಟ್ಟಿಯಲ್ಲಿರುವುದನ್ನೂ, ದೇಶವು ಸಕಾರಾತ್ಮಕ ಸುದ್ದಿಗಳ ಬದಲಾಗಿ ಕೇವಲ ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಸಂಬಂಧಿಸಿದ ಸುದ್ದಿಗಳಿಂದಲೇ ಸದ್ದು ಮಾಡುತ್ತಿದ್ದದ್ದನ್ನೂ ನೋಡಿ ಬೇಸತ್ತಿದ್ದರು. 

2014ರ ಲೋಕಸಭಾ ಚುನಾವಣೆಯಲ್ಲಿ ಅವರು, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅಂದಿನ ಸರ್ಕಾರದಿಂದ ಮುಕ್ತಿ ಪಡೆಯಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಿದರು.  

2014ರ ಜನಾದೇಶ ಅಭೂತಪೂರ್ವವಾಗಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿ ಒಂದು ಕುಟುಂಬಕ್ಕೆ ಸೇರದ ರಾಜಕೀಯ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿತು. ಸರ್ಕಾರವೊಂದು ಯಾವಾಗ “ಕುಟುಂಬ ಮೊದಲು’ ಎನ್ನುವುದರ ಬದಲು “ಭಾರತ ಮೊದಲು’ ಎಂಬ ಭಾವನೆಯೊಂದಿಗೆ ಮುನ್ನಡೆಯುತ್ತದೋ ಆಗ ಮಾತ್ರ ಸಕಾರಾತ್ಮಕತೆ ಅದರ ಕೆಲಸಗಳಲ್ಲೂ ಪ್ರತಿಫ‌ಲಿಸುತ್ತದೆ. 
ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆ ಜಗತ್ತಿನ ಕಣ್ಮನ ಸೆಳೆಯುತ್ತಿದೆ. 

ಕಳೆದ ಐದು ವರ್ಷದಲ್ಲಿ ನೈರ್ಮಲ್ಯದ ವಿಚಾರದಲ್ಲಿ ಭಾರತ ಅಭೂತಪೂರ್ವ ಯಶಸ್ಸನ್ನು ಪಡೆದಿದೆ (2014ರಲ್ಲಿ 38 ಪ್ರತಿಶತದಷ್ಟಿದ್ದ ಸ್ವತ್ಛತಾ ಪ್ರಮಾಣ ಇಂದು 98 ಪ್ರತಿಶತದಷ್ಟಾಗಿದೆ), ನಮ್ಮ ಸರ್ಕಾರದ ಪ್ರಯತ್ನದ ಫ‌ಲವಾಗಿ ಇಂದು ಬಡವರಿಗೆ ಬ್ಯಾಂಕ್‌ ಖಾತೆಗಳು ದೊರೆತಿವೆ, ಆರ್ಥಿಕ ನೆರವು ಸಿಗುತ್ತಿದೆ, ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ನಿರ್ಮಾಣ ಮಾಡಲಾಗಿದೆ, ಮನೆಯಿಲ್ಲದವರಿಗೆ ಮನೆ ಒದಗಿಸಲಾಗಿದೆ, ಬಡವರಿಗೆ ಉಚಿತ ಚಿಕಿತ್ಸೆಯ ಸೌಲಭ್ಯ ದೊರೆತಿದೆ ಮತ್ತು ಯುವಜನಾಂಗಕ್ಕೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ದೊರೆತಿವೆ. ದೇಶದ ಸಂಸ್ಥೆಗಳಿಗೆ ಸರ್ಕಾರ ಮನ್ನಣೆ ಕೊಟ್ಟಿರುವುದೇ ಈ ಬದಲಾವಣೆಗೆ ದ್ಯೋತಕ.  

ಸಂಸತ್ತು: 16ನೇ ಲೋಕಸಭೆ 85 ಪ್ರತಿಶತದಷ್ಟಿತ್ತು ಫ‌ಲಪ್ರದವಾಗಿತ್ತು, ಇದು 15ನೇ ಲೋಕಸಭೆಗಿಂತಲೂ ಎಷ್ಟೋ ಅಧಿಕ. 2014-2019ರ ನಡುವೆ ರಾಜ್ಯಸಭೆಯ ಫ‌ಲಪ್ರದತೆ 68 ಪ್ರತಿಶತದಷ್ಟಿತ್ತು. ಇನ್ನು ಮಧ್ಯಂತರ ಬಜೆಟ್‌ ಅಧಿವೇಶನದಲ್ಲಿ ಲೋಕಸಭೆಯ ಫ‌ಲಪ್ರದತೆ 89 ಪ್ರತಿಶತವಿದ್ದರೆ, ರಾಜ್ಯಸಭೆಯಲ್ಲಿದ್ದದ್ದು ಕೇವಲ 8 ಪ್ರತಿಶತ ಮಾತ್ರ! ಒಂದಂಶವಂತೂ ಸ್ಪಷ್ಟ. ಕುಟುಂಬೇತರ ಪಕ್ಷವು ಎಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೋ ಅಲ್ಲಿನ ಫ‌ಲಪ್ರದತೆ ಹೆಚ್ಚಾಗುತ್ತದೆ.

ಅದೇಕೆ ಲೋಕಸಭೆಯಷ್ಟು ಪರಿಣಾಮಕಾರಿಯಾಗಿ ರಾಜ್ಯಸಭೆ ಕಾರ್ಯ ನಿರ್ವಹಿಸುತ್ತಿಲ್ಲ? ಅದ್ಯಾವ ಶಕ್ತಿಗಳು ಸದನದ ಒಳಗೆ ಈ ಪಾಟಿ ಗದ್ದಲ ನಡೆಸಿವೆ ಮತ್ತು ಏಕೆ ಹೀಗೆ ಮಾಡುತ್ತಿವೆ? ಎಂದು ಭಾರತವಿಂದು ಪ್ರಶ್ನಿಸಲೇಬೇಕಿದೆ. ವಂಶಪಾರಂಪರ್ಯದ ಪಕ್ಷಗಳೆಂದಿಗೂ ಮುಕ್ತ ಮತ್ತು ನಿರ್ಭೀತ ಪತ್ರಿಕೋದ್ಯಮವನ್ನು ಸಹಿಸಿಕೊಳ್ಳುವುದಿಲ್ಲ. ಕಾಂಗ್ರೆಸ್‌ ಪಕ್ಷದ ಮೊದಲ ಸಾಂವಿಧಾನಿಕ ತಿದ್ದುಪಡಿಯು ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕೆ ಪ್ರಯತ್ನಿಸಿತ್ತು. 

ಸ್ವತಂತ್ರ ಮಾಧ್ಯಮದ ಗುಣವೇನೆಂದರೆ ಅದು ಅಧಿಕಾರದಲ್ಲಿ ಇರುವವರಿಗೆ ಸತ್ಯದ ಕನ್ನಡಿಯನ್ನು ಎದುರೊಡ್ಡುತ್ತದೆ. ಆದರೆ ಮಾಧ್ಯಮಗಳ ಈ ಸ್ವಭಾವವನ್ನು “ಅಶ್ಲೀಲ’ ಮತ್ತು “ಅಸಭ್ಯ’ವೆಂದು ಕರೆಯುವ ಪ್ರಯತ್ನಗಳು ಕಾಂಗ್ರೆಸ್‌ನಿಂದ ನಡೆದವು.

ಯುಪಿಎ ಆಡಳಿತಾವಧಿಯಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ಒಂದು ವೇಳೆ ನೀವೇನಾದರೂ ಸಾಮಾಜಿಕ ಮಾಧ್ಯಮಗಳಲ್ಲಿ “ಅವಮಾನಕಾರಿ’ ಪೋಸ್ಟ್‌ಗಳನ್ನು ಹಾಕಿದರೆ ನಿಮ್ಮನ್ನು ಜೈಲಿಗೆ ಹಾಕಬಹುದಾದಂಥ ಕಾನೂನನ್ನು ತಂದಿತು ಯುಪಿಎ.  ಅಂದರೆ ಯುಪಿಎ ಸರ್ಕಾರದ ಬಲಿಷ್ಠ ಸಚಿವರ ಮಗನ ವಿರುದ್ಧ ಒಂದು ಟ್ವೀಟ್‌ ಮಾಡಿದರೂ ಅಮಾಯಕ ಜನರನ್ನು ಜೈಲಿನಲ್ಲಿ ಹಾಕಬಹುದಾಗಿತ್ತು! 

ಕಾಂಗ್ರೆಸ್‌ ಆಡಳಿತವಿರುವ ಕರ್ನಾಟಕದಲ್ಲಿ ಕೆಲವೇ ದಿನಗಳ ಹಿಂದಷ್ಟೇ ಕೆಲವು ಯುವಕರು ಕಾರ್ಯಕ್ರಮವೊಂದರಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಅರೆಸ್ಟ್‌ ಮಾಡಲಾಗಿದೆ. 

ನಾನು ಕಾಂಗ್ರೆಸ್‌ಗೆ ಹೇಳುವುದಿಷ್ಟೆ, ನೀವೆಷ್ಟೇ ಬೆದರಿಕೆ ಒಡ್ಡಿದರೂ ಗ್ರೌಂಡ್‌ ರಿಯಾಲಿಟಿ ಬದಲಾಗುವುದಿಲ್ಲ. ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಿದಾಕ್ಷಣ ಕಾಂಗ್ರೆಸ್‌ ಬಗ್ಗೆ ಜನರಿಗಿರುವ ಧೋರಣೆಯೇನೂ ಬದಲಾಗುವುದಿಲ್ಲ. 

ಸಂವಿಧಾನ ಮತ್ತು ನ್ಯಾಯಾಲಯಗಳು: 1975ರ ಜೂನ್‌ 25ರ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ, ಭಾರತದ ಪ್ರಜಾಪ್ರಭುತ್ವದ ತತ್ವಗಳೂ ಮುಳುಗಿದವು. ಅಂದಿನ ಪ್ರಧಾನಿಯಿಂದ ರೇಡಿಯೋ ಮೂಲಕ ಹೊರಬಿದ್ದ ಅವಸರದ ಘೋಷಣೆಯು, “ಒಂದು ಕುಟುಂಬದ ಹಿತಾಸಕ್ತಿಯನ್ನು ಉಳಿಸಲು ಕಾಂಗ್ರೆಸ್‌ ಯಾವ ಮಟ್ಟಕ್ಕಾದರೂ ಹೋಗಬಲ್ಲದು’ ಎನ್ನುವುದನ್ನು ಸಾರಿತು. 

ತುರ್ತುಪರಿಸ್ಥಿತಿಯಿಂದಾಗಿ ಇಡೀ ದೇಶವೇ ರಾತ್ರೋರಾತ್ರಿ ಸೆರೆಮನೆಯಾಗಿ ಬದಲಾಯಿತು. ಮಾತನಾಡುವುದನ್ನೂ ಕೂಡ ಪಾಪವೆಂಬಂತೆ ಪರಿಗಣಿಸಲಾಯಿತು. 42ನೇ ತಿದ್ದುಪಡಿಯು ನ್ಯಾಯಾಲಯಗಳ ಕೈಕಟ್ಟಿಹಾಕಿತು. ಸಂಸತ್ತು ಮತ್ತು ಇತರೆ ಸಂಸ್ಥೆಗಳೂ ಇದಕ್ಕೆ ಹೊರತಾಗಿ ಉಳಿಯಲಿಲ್ಲ.  

ಹೆಚ್ಚುತ್ತಿರುವ ಜನಾಕ್ರೋಶವನ್ನು ಪರಿಗಣಿಸಿ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಲಾಯಿತಾದರೂ, ಅದನ್ನು ಹೇರಿದವರ ಮನಸ್ಥಿತಿಯಂತೂ ಬದಲಾಗಲಿಲ್ಲ. ಕಾಂಗ್ರೆಸ್‌ ಇದುವರೆಗೂ ಆರ್ಟಿಕಲ್‌ 356 ಅನ್ನು ಸುಮಾರು 100 ಬಾರಿಯಾದರೂ ಹೇರಿರಬಹುದು. ಖುದ್ದು ಶ್ರೀಮತಿ ಇಂದಿರಾಗಾಂಧಿಯವರೇ ಏನಿಲ್ಲವೆಂದರೂ 50 ಬಾರಿಯಾದರೂ ಆರ್ಟಿಕಲ್‌ 356 ಅನ್ನು ಹೇರಿದ್ದಾರೆ. ಒಂದು ವೇಳೆ ಅವರಿಗೆ ಯಾವುದಾದರೂ ರಾಜ್ಯ ಸರ್ಕಾರ ಇಷ್ಟವಾಗದೇ ಇದ್ದರೆ, ಸರ್ಕಾರವನ್ನೇ ವಜಾಮಾಡಲಾಗುತ್ತಿತ್ತು. 

ನ್ಯಾಯಾಲಯಗಳನ್ನು ಅವಮಾನ ಮಾಡುವ ವಿಚಾರದಲ್ಲಂತೂ ಕಾಂಗ್ರೆಸ್‌ನದ್ದು ಎತ್ತಿದ ಕೈ. ಶ್ರೀಮತಿ ಇಂದಿರಾಗಾಂಧಿಯವರಂತೂ “Committed Judiciary’ ‘ ಅರ್ಥಾತ್‌ “ಪ್ರತಿಬದ್ಧ ನ್ಯಾಯಾಂಗ’ವನ್ನು ಬಯಸುತ್ತಿದ್ದರು. ನ್ಯಾಯಾಲಯಗಳು ಸಂವಿಧಾನದ ಬದಲಾಗಿ ತಮ್ಮ ಕುಟುಂಬಕ್ಕೆ ನಿಷ್ಠರಾಗಿರಬೇಕೆಂದು ಅವರು ಬಯಸುತ್ತಿದ್ದರು. ಈ ರೀತಿಯ ನ್ಯಾಯಾಂಗ ವ್ಯವಸ್ಥೆ ಇರಬೇಕೆಂಬ ಹಂಬಲದಲ್ಲಿ ಕಾಂಗ್ರೆಸ್‌, ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ಸಮಯದಲ್ಲಿ ಅರ್ಹ ಜಡ್ಜ್ಗಳನ್ನು ಕಡೆಗಣಿಸಿತ್ತು. 

ಕಾಂಗ್ರೆಸ್‌ನ ಕಾರ್ಯವೈಖರಿಯಂತೂ ಸ್ಪಷ್ಟವಾಗಿದೆ. ಮೊದಲು ನಿರಾಕರಿಸುವುದು, ನಂತರ ಅಪಮಾನ ಮಾಡುವುದು, ಆಮೇಲೆ ಬೆದರಿಸುವುದು. ಅಂದರೆ ಒಂದು ವೇಳೆ ತೀರ್ಪೊಂದು ತಮ್ಮ ವಿರುದ್ಧ ಬಂತೆಂದರೆ, ಮೊದಲು ಅವರು ಅದನ್ನು ನಿರಾಕರಿಸುತ್ತಾರೆ, ಆಮೇಲೆ ಅವರು ಜಡ್ಜ್ಗಳ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಅದಾದ ನಂತರ ಜಡ್ಜ್ಗಳ ವಿರುದ್ಧ ಮಹಾಭಿಯೋಗ ತರುವ ಕೆಲಸದಲ್ಲಿ ನಿರತವಾಗುತ್ತಾರೆ. 

ಸರ್ಕಾರಿ ಸಂಸ್ಥಾನ: ಪೂರ್ವ ಪ್ರಧಾನಮಂತ್ರಿ ರಾಜೀವ್‌ ಗಾಂಧಿಯವರು ಮನಮೋಹನ್‌ ಸಿಂಗ್‌ ನೇತೃತ್ವದ ಯೋಜನಾ ಆಯೋಗವನ್ನು ‘A bunch of jokers’ ಎಂದು ಕರೆದಿದ್ದರು. ಅಂದರೆ “ಜೋಕರ್‌ಗಳ ಗುಂಪು’ ಎಂದು. ಕಾಂಗ್ರೆಸ್‌ ಪಕ್ಷ, ಸರ್ಕಾರಿ ಸಂಸ್ಥೆಗಳ ಬಗ್ಗೆ ಯಾವ ರೀತಿ ಯೋಚಿಸುತ್ತದೆ ಎನ್ನುವುದಕ್ಕೆ ರಾಜೀವ್‌ ಗಾಂಧಿಯವರ ಆ ಮಾತೇ ಸಾಕು. 

ಯುಪಿಎ ಆಡಳಿತಾವಧಿಯನ್ನು ನೆನಪುಮಾಡಿಕೊಳ್ಳಿ. ಆ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ನಡೆಸಿದ 2ಜಿ, ಕಲ್ಲಿದ್ದಲು ಹಗರಣಗಳನ್ನು ಹೊರಗೆಡವಿದ ಕಾರಣಕ್ಕಾಗಿ ಸಿಎಜಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಲಾಯಿತು. 

ಯುಪಿಎ ಆಡಳಿತಾವಧಿಯಲ್ಲಿ ಸಿಬಿಐ ಸಂಸ್ಥೆಯು “ಕಾಂಗ್ರೆಸ್‌ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌’ ಆಗಿ ಉಳಿದುಬಿಟ್ಟಿತ್ತು. ಲೋಕಸಭಾ ಚುನಾವಣೆಗಳ ಸಮಯದಲ್ಲಿ ಎದುರಾಳಿಗಳ ಪಕ್ಷಗಳ ವಿರುದ್ಧ ಈ ಸಂಸ್ಥೆಯನ್ನು ಪದೇ ಪದೆ ದುರ್ಬಳಕೆ ಮಾಡಿಕೊಳ್ಳಲಾಯಿತು. 

ಅಂದು ಕೇಂದ್ರ ಮಂತ್ರಿಮಂಡಲವೇ ತೆಗೆದುಕೊಂಡ ಒಂದು ನೀತಿ ನಿರ್ಣಯವನ್ನು ಕ್ಯಾಬಿನೆಟ್‌ನ ಸದಸ್ಯರೂ ಆಗಿರದವರೊಬ್ಬರು ಹರಿದುಹಾಕಿದ್ದರು; ಅದೂ ಪತ್ರಿಕಾಗೋಷ್ಠಿಯಲ್ಲಿ.

ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಮಾನಾಂತರವಾಗಿ ರಾಷ್ಟ್ರೀಯ ಸಲಹಾ ಸಮಿತಿ(ಎನ್‌ಎಸಿ)ಯನ್ನು ಎತ್ತಿ ನಿಲ್ಲಿಸಲಾಯಿತು. ಈಗ ಅದೇ ಕಾಂಗ್ರೆಸ್‌ ಸರ್ಕಾರಿ ಸಂಸ್ಥೆಗಳ ಬಗ್ಗೆ ಮಾತನಾಡುತ್ತದೆ. 

ಬರೀ ಇಷ್ಟೇ ಅಲ್ಲ, ಸ್ವಲ್ಪ ನೆನಪು ಮಾಡಿಕೊಳ್ಳಿ. 1990ರ ದಶಕದಲ್ಲಿ ಕೇರಳ ಕಾಂಗ್ರೆಸ್‌ಗೆ ಲಾಭವಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ, ದೇಶದ ಪ್ರಮುಖ ಸಂಸ್ಥೆಯಾಗಿರುವ ಇಸ್ರೋದಲ್ಲಿ ಒಂದು “ಕಾಲ್ಪನಿಕ ಗೂಢಚರ್ಯೆ’ಯ ಕಾಂಡವನ್ನು ಸೃಷ್ಟಿಸಲಾಯಿತು. ಇದರ ಪರಿಣಾಮವನ್ನು ಇಡೀ ದೇಶ ಮತ್ತು ಒಬ್ಬ ಪ್ರತಿಭಾಶಾಲಿ ವಿಜ್ಞಾನಿ ಎದುರಿಸಬೇಕಾಯಿತು ಎನ್ನುವುದರ ಬಗ್ಗೆ ಕಾಂಗ್ರೆಸ್‌ ತಲೆಕೆಡಿಸಿಕೊಳ್ಳಲೇ ಇಲ್ಲ. 

ಕಾಂಗ್ರೆಸ್‌ ಮೊದಲಿನಿಂದಲೂ ರಕ್ಷಣಾ ವಲಯವನ್ನು “ಆದಾಯದ ಮೂಲ’ ಎಂದು ನೋಡುತ್ತದೆ. ಈ ಕಾರಣಕ್ಕಾಗಿಯೇ, ನಮ್ಮ ಸಶಸ್ತ್ರದಳಗಳಿಗೆ ಕಾಂಗ್ರೆಸ್‌ನಿಂದ ಸಿಗಬೇಕಾದ ಗೌರವ ಸಿಗಲೇ ಇಲ್ಲ.  1947ರ ನಂತರ ಕಾಂಗ್ರೆಸ್‌ನ ಪ್ರತಿಯೊಂದು ಸರ್ಕಾರದಲ್ಲೂ ಅನೇಕ ರಕ್ಷಣಾ ಹಗರಣಗಳು ಆಗಿವೆ. ಜೀಪ್‌ಗ್ಳಿಂದ ಆರಂಭವಾದ ಹಗರಣಗಳು, ನಂತರ ಬಂದೂಕು, ಜಲಾಂತರ್ಗಾಮಿ ಮತ್ತು ಹೆಲಿಕಾಪ್ಟರ್‌ಗಳ ವಿಷಯದಲ್ಲೂ ನಡೆದವು. ಇದರಲ್ಲಿನ ಎಲ್ಲಾ ಮಧ್ಯವರ್ತಿಗಳಿಗೂ ಒಂದು ಕುಟುಂಬದೊಂದಿಗೆ ಸಂಪರ್ಕವಿತ್ತು. 

ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ನಮ್ಮ ಸೇನಾ ಮುಖ್ಯಸ್ಥರನ್ನು “ಗೂಂಡಾ’ ಎಂದು ಕರೆಯುತ್ತಾರೆ, ಇದಾದ ಕೆಲವೇ ಸಮಯದಲ್ಲಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ನಮ್ಮ ಸೇನೆಯ ಬಗ್ಗೆ ಆ ಪಕ್ಷಕ್ಕೆ ಎಳ್ಳಷ್ಟೂ ಗೌರವವಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ನಮ್ಮ ಸೇನಾಪಡೆಯು ಉಗ್ರ ಶಕ್ತಿಗಳ ಮೇಲೆ ದಾಳಿ ಮಾಡಿದಾಗ, ಕೇಂದ್ರ ಸರ್ಕಾರ “ಸಾವಿನ ವ್ಯಾಪಾರ’ ನಡೆಸುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದರು. ನಮ್ಮ ವಾಯುಪಡೆ ಧೀರರು ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದಾಗಲೂ ಕಾಂಗ್ರೆಸ್‌ ಅದನ್ನು ಪ್ರಶ್ನಿಸುತ್ತದೆ. 

ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆ: ರಾಜಕೀಯ ಪಕ್ಷಗಳೆನ್ನುವವು ಜೀವಂತ ಸಂಸ್ಥೆಗಳಿದ್ದಂತೆ, ಅಲ್ಲಿ ಭಿನ್ನ-ಭಿನ್ನ ವಿಚಾರಗಳಿಗೆ ಜಾಗವಿರಬೇಕು. ದುಃಖದ ವಿಷಯವೇನೆಂದರೆ ಕಾಂಗ್ರೆಸ್‌ಗೆ ಆಂತರಿಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ. ಒಂದು ವೇಳೆ ಅದರಲ್ಲಿನ ನಾಯಕರೊಬ್ಬರು ತಾವು ಪಕ್ಷವನ್ನು ಮುನ್ನಡೆಸಬೇಕು ಎಂದು ಕನಸು ಕಂಡರೆಂದರೆ, ಆತ ಅಥವಾ ಆಕೆಗೆ ಕಾಂಗ್ರೆಸ್‌ ನಿರ್ಗಮನ ದ್ವಾರವನ್ನು ತೋರಿಸುತ್ತದೆ. ಒಂದು ಸಾಮಾನ್ಯ ಕಾನೂನು ಪ್ರಕ್ರಿಯೆಯ ವಿಚಾರದಲ್ಲೂ ಕಾಂಗ್ರೆಸ್‌ ನಾಯಕರ ವರ್ತನೆಯಲ್ಲಿ ಅಧಿಕಾರ ಎದ್ದು ಕಾಣುತ್ತದೆ. ಈಗ ಪಕ್ಷದ ಅನೇಕ ಪ್ರಮುಖ ನಾಯಕರು ದೊಡ್ಡ-ದೊಡ್ಡ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಸಂಬಂಧಪಟ್ಟ ಸಂಸ್ಥೆಗಳು ಈ ಹಗರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೆ, ಕಾಂಗ್ರೆಸ್‌ ನಾಯಕರು ಅದಕ್ಕೆ ಉತ್ತರಿಸುವ ಗೊಡವೆಗೂ ಹೋಗುವುದಿಲ್ಲ.  ಇವರೆಲ್ಲ ಉತ್ತರದಾಯಿತ್ವಕ್ಕೆ ಹೆದರುತ್ತಾರಾ? ಅಥವಾ ಉತ್ತರದಾಯಿತ್ವದ ಮೇಲೆ ಕಾಂಗ್ರೆಸ್‌ಗೆ ನಂಬಿಕೆಯೇ ಇಲ್ಲವೇ? 

ಸ್ವಲ್ಪ ಯೋಚಿಸಿ: ಪ್ರಸ್‌ನಿಂದ ಹಿಡಿದು ಪಾರ್ಲಿಮೆಂಟ್‌ವರೆಗೂ, ಸೇನೆಯಿಂದ ಹಿಡಿದು ವಾಕ್‌ ಸ್ವಾತಂತ್ರ್ಯದವರೆಗೂ, ಸಂವಿಧಾನದಿಂದ ಹಿಡಿದು ನ್ಯಾಯಾಲಯಗಳ ವರೆಗೂ…ಸರ್ಕಾರಿ ಸಂಸ್ಥೆಗಳಿಗೆ ಅವಮಾನ ಮಾಡುವುದೇ ಕಾಂಗ್ರೆಸ್‌ನ ವೈಖರಿಯಾಗಿದೆ. ಅದರ ಪ್ರಕಾರ ಎಲ್ಲರೂ ತಪ್ಪು, ಕಾಂಗ್ರೆಸ್‌ ಒಂದೇ ಸರಿ! ನೀವು ಮತಗಟ್ಟೆಗೆ ಹೋಗುವ ಮುನ್ನ ನೆನಪುಮಾಡಿಕೊಳ್ಳಿ- ಹೇಗೆ ಒಂದು ಕುಟುಂಬದ ಅಧಿಕಾರದ ದಾಹದಿಂದಾಗಿ ಇಡೀ ದೇಶವೇ ಎಷ್ಟು ಬೆಲೆ ತೆರಬೇಕಾಯಿತು ಎನ್ನುವುದನ್ನು. ಅವರು ಹಿಂದೆಯೂ ಸ್ವಹಿತಾಸಕ್ತಿಗಾಗಿ ದೇಶವನ್ನು ಪಣಕ್ಕಿಟ್ಟಿದ್ದರು ಎಂದರೆೆ, ಈಗಲೂ ಅದನ್ನೇ ಮಾಡುತ್ತಾರೆ. ನೆನಪಿರಲಿ, ನಾವು ನಮ್ಮ ಸ್ವಾತಂತ್ರÂವನ್ನು ರಕ್ಷಿಸಿಕೊಳ್ಳಬೇಕೆಂದರೆ ನಿರಂತರವಾಗಿ ಜಾಗೃತರಾಗಿರಬೇಕು. 

ಬನ್ನಿ  ನಾವೆಲ್ಲರೂ ಜಾಗರೂಕರಾಗೋಣ. ನಮ್ಮ ಸಂವಿಧಾನದ ನಿರ್ಮಾತೃಗಳು ನಮಗೆ ಕೊಟ್ಟುಹೋದ ಸಂಸ್ಥೆಗಳನ್ನು ಬಲಿಷ್ಠಗೊಳಿಸಲು ಪರಿಶ್ರಮ ಪಡೋಣ. 

ನೀರವ್‌ ಅರೆಸ್ಟ್‌ ಆಗಿದ್ದಾನೆ. ಆದರೂ ಚೌಕೀದಾರ ಮೋದಿಯನ್ನು ಚೋರ್‌ ಎನ್ನುತ್ತಾರೆ ರಾಹುಲ್‌. ನೀರವ್‌ ಮೋದಿಯನ್ನು ತಾವು ಭೇಟಿಯಾಗಿಲ್ಲ ಎಂದು ರಾಹುಲ್‌ ಒಪ್ಪಿಕೊಳ್ಳಲಿ  ನೋಡೋಣ. 
– ಶೆಹಜಾದ್‌ ಪೂನಾವಾಲಾ

ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣೆಗಳಿಗಾಗಿ ನೀರವ್‌ರನ್ನು ವಾಪಸ್‌ ಕರೆಸಿಕೊಳ್ಳುತ್ತಿದೆ. ಚುನಾವಣೆ ಮುಗಿದ ನಂತರ ವಾಪಸ್‌ ಕಳಿಸುತ್ತದೆ! 
– ಗುಲಾಂ ನಬಿ ಆಜಾದ್‌

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.