ನನಗೆ ಗೊತ್ತು, ನೀವು ಖುಷಿಯಾಗಿಲ್ಲ…


Team Udayavani, Dec 1, 2017, 10:01 AM IST

01-15.jpg

ನಮಗೆ ನಮ್ಮೊಬ್ಬರನ್ನು ಬಿಟ್ಟು ಉಳಿದವರ ಜಗತ್ತಿನ ಆಳ ಗೊತ್ತೇ ಆಗುವುದಿಲ್ಲ. ಹೌದು, ನಿಮ್ಮ ತಂದೆ-ತಾಯಿಗಾಗಲಿ, ಸಂಗಾತಿಗಾಗಲಿ, ಮಕ್ಕಳಿಗಾಗಲಿ ನೀವು ಎಷ್ಟೇ ಹತ್ತಿರವಾಗಿರಿ ನಿಮನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಆದರೆ..

ವೃತ್ತಿಯಲ್ಲಾಗಲಿ ಅಥವಾ ಖಾಸಗಿ ಬದುಕಿನಲ್ಲಾಗಲಿ ಸವಾಲುಗಳು ಎದುರಾದಾಗ “ಅಯ್ಯೋ ನನ್ನಂಥ ವ್ಯಕ್ತಿಗೆ ಇದನ್ನು ಎದುರಿಸಲು ಸಾಧ್ಯವಾಗದು, ಸುಖ, ಯಶಸ್ಸು ಅಥವಾ ಶ್ರೀಮಂತಿಕೆ ನನ್ನ ಹಣೆಬರಹದಲ್ಲಿ ಬರೆದಿಲ್ಲ.’ ಎಂದುಕೊಂಡು ಸುಮ್ಮನಾಗುತ್ತೇವೆ. ಮೇಲ್ನೋಟಕ್ಕೆ ಸುಮ್ಮನಾಗುತ್ತೇವಷ್ಟೆ. ಆದರೆ ನಿರಂತರ ವಿಷಾದವೊಂದು ನಮ್ಮ ತಲೆಯ ಮೇಲೆ ಭಾರ ಹೇರಿಕೊಂಡು ಕುಳಿತುಬಿಟ್ಟಿರುತ್ತದೆ. ಈ ಭಾರ ದಿನಗಳೆದಂತೆ ಎಷ್ಟು ಹೆಚ್ಚುತ್ತಾ ಹೋಗುತ್ತದೆಂದರೆ, ನಾರ್ಮಲ್‌ ಎನಿಸುವ ಜೀವನವನ್ನು ನಾವು ಅಪ್ಪಿಕೊಂಡುಬಿಡುತ್ತೇವೆ. ನನ್ನ ಜೀವನವಿರುವುದೇ ಹೀಗೆ ಎಂದು ಸುಮ್ಮನೇ ಬದುಕುತ್ತಾ ಹೋಗುತ್ತೇವೆ (ಒಳಗೆ ನಿರಂತರ ವಿಷಾದವಂತೂ ಇರುತ್ತದೆ).

“ಎಲ್ಲರಂತೆ ನಾವೇಕಿಲ್ಲ’ ಎನ್ನುವ ನೋವು ನಿಮಗಿದೆಯೇ? ಒಂದು ಮಾತು ಹೇಳುತ್ತೇನೆ ಕೇಳಿ. ಇಲ್ಲಿ ಎಲ್ಲರೂ ಎಲ್ಲರಂತೆಯೇ ಇದ್ದಾರೆ! “ಇಲ್ಲ ಇಲ್ಲ ಅವರ ಜೀವನ ಯಾವ ಅಡ್ಡಿ ಆತಂಕಗಳೂ ಇಲ್ಲದೆ ಹೊರಟಿದೆ ನೋಡಿ’ ಎನ್ನುತ್ತೀರಿ ನೀವು.  ಈ ರೀತಿಯ ಯೋಚನೆಗೆ ಕಾರಣವಿದೆ. ಅದೇನೆಂದರೆ ನಮಗೆ ನಮ್ಮೊಬ್ಬರನ್ನು ಬಿಟ್ಟು ಉಳಿದವರ ಜಗತ್ತಿನ ಆಳ ಗೊತ್ತೇ ಆಗುವುದಿಲ್ಲ. (ಹೌದು, ನಿಮ್ಮ ತಂದೆ-ತಾಯಿಗಾಗಲಿ, ಸಂಗಾತಿಗಾಗಲಿ, ಮಕ್ಕಳಿಗಾಗಲಿ ನೀವು ಎಷ್ಟೇ ಹತ್ತಿರವಾಗಿರಿ ನಿಮ್ಮ ಮನೋಲೋಕದ ವಿಸ್ತಾರವನ್ನು ಅವರಿಗೆ ಅರಿಯಲು ಸಾಧ್ಯವಾಗುವುದೇ ಇಲ್ಲ. ಅಂತೆಯೇ ನಿಮಗೂ ಕೂಡ ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು). ಪ್ರತಿಯೊಬ್ಬರ ವೈಯಕ್ತಿಕ ಜಗತ್ತೂ ವಿಸ್ತಾರವಾದದ್ದು. ಈ ವಿಸ್ತಾರ ನಮಗಷ್ಟೇ ಗೊತ್ತು. ನಮ್ಮೊಳಗಿರುವ ಹುಳುಕುಗಳೇನು, ನಾವೆಷ್ಟು ಆಸೆಬುರುಕರು, ನಾವೆಷ್ಟು ಪುಕ್ಕಲರು, ನಾವೆಷ್ಟು ಕಪಟಿಗಳು, ನಾವೆಷ್ಟು ನೋವಿನಲ್ಲಿದ್ದೇವೆ ಎನ್ನುವುದರ ತೀವ್ರತೆ ನಮ್ಮನ್ನು ಬಿಟ್ಟು ಇನ್ನೊಬ್ಬರಿಗೆ ತಿಳಿಯುವುದಕ್ಕೇ ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿಯೇ ನನ್ನನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ನಾನೇ ಬೇರೆ ಎಂದು ನಿಮಗನಿಸುವುದು. 

ವ್ಯಂಗ್ಯವೆಂದರೆ, ನಾವು ಹೊರಗೆ ಕಾಣಿಸಿಕೊಳ್ಳುವಂತೆ ನಮ್ಮನ್ನು ನಾವು ಬಿಂಬಿಸಿಕೊಳ್ಳುವಂತೆ ನಿಜಕ್ಕೂ ಇಲ್ಲ. ನಮ್ಮ ಒಳಗಿನ ಲೋಕ ಬಹಳ ನೋವು, ಹತಾಶೆ, ಭಯದಿಂದ ಕೂಡಿದೆ ಎಂದು ನಮಗೆ ಗೊತ್ತಿರುತ್ತದೆ ತಾನೆ? ಆದರೆ ಇದೇ ಮಾತನ್ನು ನಾವು ಬೇರೆಯವರ ವಿಚಾರದಲ್ಲಿ ಅನ್ವಯಿಸುವುದನ್ನು ಮರೆತುಬಿಡುತ್ತೇವೆ. ಈ ಕಾರಣಕ್ಕಾಗಿಯೇ ಬೇರೆಯವರೆಲ್ಲ ನಮಗೆ ಸುಖವಾಗಿಯೇ ಕಾಣಿಸುತ್ತಾರೆ! 

ಇದಕ್ಕೆಲ್ಲ ಮೂಲ ಕಾರಣ ನಮ್ಮ ಬಾಲ್ಯದಲ್ಲಿದೆ. ಇದು ಆರಂಭವಾಗುವುದು ನಮ್ಮ ಪೋಷಕರ ಸನ್ನಿಧಾನದಲ್ಲಿ. ಮಣ್ಣಿನಲ್ಲಿ ಆಟವಾಡುವ ನಾಲ್ಕು ವರ್ಷದ ಮಗುವೊಂದಕ್ಕೆ ಟೇಬಲ್‌ನ ಮೇಲೆ ಕುಳಿತು ಫೋನಿನಲ್ಲಿ ಏನನ್ನೋ ಮಾತನಾಡುತ್ತಿರುವ ತನ್ನ ತಂದೆ ಅತ್ಯಂತ ಬಲಶಾಲಿ ವ್ಯಕ್ತಿಯಾಗಿ ಕಾಣಿಸುತ್ತಾನೆ, ಭರಭರನೆ ಕಾರು ಓಡಿಸಿಕೊಂಡು ಬರುವ ಅಂಕಲ್‌ ಅತ್ಯಂತ ವಿಭಿನ್ನವ್ಯಕ್ತಿಯಾಗಿ ಕಾಣಿಸುತ್ತಾರೆ, ಎತ್ತಿಕೊಂಡು ಮುತ್ತಿಡುವ ಅಮ್ಮನೂ ಆಗ ನಮ್ಮ ಪಾಲಿಗೆ ಶಕ್ತಿಶಾಲಿಯೇ.  ಆ ವಯಸ್ಸಿನಲ್ಲಿ ನಮ್ಮ ತಲೆಯಲ್ಲಿ ಬಲಿಷ್ಠ ಅನಿಸಿಕೆಯೊಂದು ರೂಪ ಪಡೆಯಲಾರಂಭಿಸುತ್ತದೆ. ಆ ಮಗು ಯಾರನ್ನು ನೋಡಿ ನಿಬ್ಬೆರಗಾಗಿರುತ್ತದೋ -ಅಂದರೆ ನಮ್ಮ 
ಸುತ್ತಲಿರುವ “ಶಕ್ತಿ’ವಂತರನ್ನು-ಅವರೆಲ್ಲ ತನಗಿಂತ ಭಿನ್ನ ಎಂಬ ಅನಿಸಿಕೆಯದು. 

ಬಾಲ್ಯದ ಈ ಅನುಭವಗಳು ಮಾನವ ಮನೋಲೋಕದ ಅತಿ ಬಲಿಷ್ಠ ನಂಬಿಕೆಯೊಂದಕ್ಕೆ ಬುನಾದಿಯಾಗಿಬಿಡುತ್ತವೆ. ನಾನು ಅವರಂತಿಲ್ಲ ಎನ್ನುವ ನಂಬಿಕೆಯದು. ನಮ್ಮ ಭಯ, ಅನುಮಾನಗಳು, ಮೂರ್ಖತನ, ಪೆದ್ದಗುಣ, ಕೆಟ್ಟ ಗುಣ, ದೌರ್ಬಲ್ಯದ ಬಗ್ಗೆ ನಮಗೆ ನಿರಂತರ ಅರಿವಿರುತ್ತದೆ. ಆದರೆ ಬೇರೆಯವರ ಬಗ್ಗೆ ನಮಗೆ ಗೊತ್ತಿರುವುದೇನು? ಅವರು ತಮ್ಮನ್ನು ಹೇಗೆ ಬಿಂಬಿಸಿಕೊಳ್ಳುತ್ತಾರೋ, ತಮ್ಮ ಬಗ್ಗೆ ಏನು ಹೇಳಿಕೊಳ್ಳುತ್ತಾರೋ ಅಷ್ಟು ಮಾತ್ರವೇ ತಾನೆ? ಉದಾಹರಣೆಗೆ ಚಿತ್ರನಟರನ್ನು ನೋಡಿ. ಅವರು ತಮ್ಮನ್ನು ಹೇಗೆ ಬಿಂಬಿಸಿಕೊಳ್ಳುತ್ತಾರೆ? ಬಹಳ ಕ್ಲಾಸಿ ಎಂದೇ ತಾನೆ? ನೋಡುವುದಕ್ಕೆ ಸ್ಟೈಲಿಶ್‌ ಆಗಿರುತ್ತಾರೆ, ಅಳೆದು ತೂಗಿ ಮಾತನಾಡುತ್ತಾರೆ, ಸದಾ ಹಸನ್ಮುಖೀಯಾಗಿರುತ್ತಾರೆ. ಈ ಕಾರಣಕ್ಕಾಗಿಯೇ ಚಿತ್ರನಟನೊಬ್ಬ ಇದನ್ನೆಲ್ಲ ಬಿಟ್ಟು ಸಾಮಾನ್ಯ ಜನರಂತೆ ತುಸು ಸರಳವಾಗಿ ವರ್ತಿಸಿದರೆ ಸಾಕು ಎಲ್ಲರಿಗೂ ಅಚ್ಚರಿಯಾಗಿಬಿಡುತ್ತದೆ! ನಮಗೆ ಅವನ ಸರಳತೆಯೇ ಅತಿದೊಡ್ಡ ಸಂಗತಿ ಎಂಬಂತೆ ಕಾಣಿಸಲಾರಂಭಿಸುತ್ತದೆ.

ಇದರರ್ಥವಿಷ್ಟೆ. ಪ್ರತಿಯೊಬ್ಬರೂ ನಮ್ಮಷ್ಟೇ ಹತಾಶರಾಗಿ, ದಿಕ್ಕು ತೋಚದವರಂತಾಗಿ ಇರಬಹುದು ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ವಿಫ‌ಲವಾಗುತ್ತಿದ್ದೇವೆ. ಹೀಗಾಗಿ ಇನ್ನೊಬ್ಬರಿಗೆ ಕಂಪೇರ್‌ ಮಾಡಿಕೊಂಡು ಕೊರಗುವ ರೋಗವಿದೆಯಲ್ಲ, ಇದರಿಂದ ಮುಕ್ತಿ ಪಡೆಯಲು ಒಂದೇ ಮಾರ್ಗವಿದೆ. ಎಲ್ಲಾ ಮನುಷ್ಯರ ಮನಸ್ಸೂ ಒಂದೇ ರೀತಿಯಾಗಿ ಕೆಲಸ ಮಾಡುತ್ತದೆ. ಎಲ್ಲರಿಗೂ ಅಷ್ಟೇ ಗೊಂದಲಗಳಿವೆ, ಎಲ್ಲರಿಗೂ ಜೀವನದ ಬಗ್ಗೆ ಅಷ್ಟೇ ಅನಿಶ್ಚಿತತೆ  ಇದೆ, ಎಲ್ಲರಿಗೂ ಮುಂದೇನಾಗುತ್ತದೋ ಎಂಬ ಭಯವಿದೆ 
ಎಂದು ಅರ್ಥಮಾಡಿಕೊಳ್ಳುವುದೇ ಈ ಮಾರ್ಗ. ಪ್ರತಿಯೊಬ್ಬರಲ್ಲೂ “ಜಗತ್ತಿಗೆ ತಿಳಿಯಬಾರದಂಥ’ ದುರ್ಗುಣಗಳಿವೆ ಎನ್ನುವುದನ್ನು ತಿಳಿಯಬೇಕು.  

ಸತ್ಯವೇನೆಂದರೆ ಕಲೆ-ಸಾಹಿತ್ಯ-ಸಿನೆಮಾ ಇದೆಯಲ್ಲ. ಇದು ಇತರೆ ಮನುಷ್ಯರ ಮನಸ್ಸಿನೊಳಗೆ ನಮಗೆ ಪ್ರವೇಶ ಒದಗಿಸುತ್ತದೆ. ಎಲ್ಲರ ಜೀವನದಲ್ಲೂ ರಾಡಿಯಿದೆ ಎನ್ನುವುದನ್ನು ಅರ್ಥಮಾಡಿಸುತ್ತದೆ. ಇದರಿಂದ ಪ್ರಯೋಜನವೂ ಇದೆ. ಅವ ಸಾಧಿಸಿದ್ದನ್ನು ನಾನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸ ನಮಗೆ ಮೂಡುತ್ತದೆ. ಈ ಮಾತನ್ನೇ 16ನೇ ಶತಮಾನದ ಫ್ರೆಂಚ್‌ ತತ್ವಶಾಸ್ತ್ರಜ್ಞ ಮಾಂಟೇನ್‌ ತನ್ನ ಓದುಗರಿಗೆ ಸ್ವಲ್ಪ ತಮಾಷೆಯಾಗಿ ಹೀಗೆ ಹೇಳಿದ-“”ಮಾನ್ಯರೆ, ಸಾಮಾನ್ಯ ಜನರಷ್ಟೇ ಅಲ್ಲ ರಾಜಮಹಾರಾಜರು, ಮಹಾರಾಣಿಯರು, ತತ್ವಶಾಸ್ತ್ರಜ್ಞರೂ ಕೂಡ ಬೆಳಗ್ಗೆ ಸಂಡಾಸ್‌ ಮಾಡುತ್ತಾರೆ!”

ಈ ಮಾತು ಕೇಳಲು ತಮಾಷೆಯೆನಿಸಿದರೂ ಅತಿದೊಡ್ಡ ಪಾಠವನ್ನು ತನ್ನೊಡಲಲ್ಲಿ ಹೊತ್ತಿದೆ ಇದು. ನೀವೇ ಯೋಚಿಸಿ ನೋಡಿ. ರಾಜರು, ತತ್ವಶಾಸ್ತ್ರಜ್ಞರು ಟಾಯ್ಲೆಟ್‌ಗೆ ಹೋಗುತ್ತಿದ್ದರೋ ಇಲ್ಲವೋ? ಆದರೆ ಅದರ ಬಗ್ಗೆ ನಾವು ಯೋಚಿಸುವುದಕೂ, ಊಹಿಸುವುದಕ್ಕೂ ಕಷ್ಟವಾಗುತ್ತದೆ. ಏಕೆಂದರೆ ಯಶಸ್ವಿ ಪುರುಷರು ನಮಗಿಂತ ಭಿನ್ನ ಎಂಬ ಭಾವನೆಯೇ ಅವರನ್ನೂ ಅನ್ಯ ಜೀವಿಗಳನ್ನಾಗಿಸಿಬಿಡುತ್ತದೆೆ. ಮಾಂಟೇನ್‌ಮಾತನ್ನು ಕೇವಲ ದೈಹಿಕ ಕಾರ್ಯಗಳಿಗಷ್ಟೇ ಅನ್ವಯಿಸುವುದು ತಪ್ಪಾಗುತ್ತದೆ. ಆತನ ಮಾತು ಮನೋಲೋಕಕ್ಕೂ ಅನ್ವಯವಾಗುವಂಥದ್ದು. ಅಂದರೆ ರಾಜರು, ಮಹಾರಾಣಿಯರು ಮತ್ತು ತತ್ವಶಾಸ್ತ್ರಜ್ಞರೂ ಕೂಡ ಅನಿಶ್ಚಿತತೆ, ಭಯ, ಅಪನಂಬಿಕೆ ಮುಂತಾದ ಅನೇಕ ಯಾತನೆಗಳಿಂದ ಬಳಲುತ್ತಿರುತ್ತಾರೆ ಎಂದು ಅರ್ಥಮಾಡಿಕೊಳ್ಳುವುದು. 

ಈಗ ಫ್ರಾನ್ಸ್‌ನ ರಾಜಮಹಾರಾಜರು, ಮಹಾರಾಣಿಯರು ಮತ್ತು ತತ್ವಶಾಸ್ತ್ರಜ್ಞರನ್ನಷ್ಟೇ ಉದಾಹರಣೆಯನ್ನಾಗಿ ನೋಡುವ ಬದಲು ಈ ಮಾತನ್ನು ಈಗಿನ ಕಾಲಕ್ಕೂ ಅನ್ವಯಿಸೋಣ. ಅಂದರೆ ಕಂಪನಿಯೊಂದರ ಸಿಇಒಗೆ, ಕಾರ್ಪೊರೇಟ್‌ ಲಾಯರ್‌ಗಳಿಗೆ, ಸಿನೆಮಾ ತಾರೆಯರು, ಉದ್ಯಮಪತಿಗಳಿಗೆ ಅನ್ವಯಿಸಿ. ಅವರ ಮನೋಲೋಕದಲ್ಲೂ ಅಷ್ಟೇ ಭಯ, ನೋವು, ಹತಾಶೆಯಿರುತ್ತದೆ. ಅವರೂ ತಮ್ಮ ಕೆಲವು ನಿರ್ಧಾರಗಳನ್ನು ಹಿಂದಿರುಗಿನೋಡಿ ಕುಗ್ಗಿಹೋಗುತ್ತಿರುತ್ತಾರೆ. ಭವಿಷ್ಯದ ಬಗ್ಗೆ ಭಯದಲ್ಲಿ ಬದುಕುತ್ತಿರುತ್ತಾರೆ. ಆರ್ಥಿಕವಾಗಿ ಒಬ್ಬರ ಕೈ ಮೇಲಿರಬಹುದು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಅದರ ಹೊರತಾಗಿಯೂ ನಾವೆಲ್ಲ ಮನುಷ್ಯರೇ ಅಲ್ಲವೇ? ನಮ್ಮೆಲ್ಲರದ್ದೂ ಪೆದ್ದು-ಗೊಂದಲಮಯ ಮನಸ್ಸೇ ಅಲ್ಲವೇ? 

ಎಲ್ಲರೂ ನಮ್ಮಂತೆಯೇ ಇದ್ದಾರೆ ಎಂದು ಯಾವಾಗ ನಾವು ಅತಿದೊಡ್ಡ ನಂಬಿಕೆಯನ್ನು ಬೆಳೆಸಿಕೊಳ್ಳುತ್ತೀವೋ ಆಗ ನಿಶ್ಚಿತವಾಗಿಯೂ ಜಗತ್ತು ಹೆಚ್ಚು ಮಾನವೀಯವಾಗುತ್ತದೆ. ಇದರರ್ಥವಿಷ್ಟೆ. ನಾವು ಒಬ್ಬ ಅಪರಿಚಿತನನ್ನು ಭೇಟಿಯಾದಾಗ ಆತನ ನಮಗೆ ಪರಿಚಿತನಾಗಿ ಕಾಣಿಸಲಾರಂಭಿಸುತ್ತಾನೆ. ಹೊರನೋಟಕ್ಕೆ ಎಷ್ಟೇ ಭಿನ್ನವಾಗಿ ಆತ ತನ್ನನ್ನು ಬಿಂಬಿಸಿಕೊಂಡರೂ ಒಳಗಿನ ಅವನೂ-ನಾನು ಒಂದೇ ಆಗಿರುತ್ತೇವೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಯಶಸ್ಸು ಮತ್ತು ಸಮೃದ್ಧತೆಯನ್ನು ಸಾಧಿಸುವ ಎಲ್ಲಾ ಅವಕಾಶಗಳು ಎಲ್ಲರಿಗೂ ಇವೆ. 

ಆ ಎಲ್ಲರಲ್ಲಿ “ನಾವೂ’ ಇದ್ದೇವೆ… 

ಅಲೆನ್‌ ಡಿ ಬಾಟನ್‌, ಬ್ರಿಟನ್‌ನ ಉದ್ಯಮಿ-ತತ್ವಶಾಸ್ತ್ರಜ್ಞ

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.