ಭಾರತದ ಬಗ್ಗೆ ನಾನು ಅತ್ಯುತ್ಸಾಹಿ


Team Udayavani, Feb 24, 2017, 3:50 AM IST

23-pti-11.jpg

ನಾವು ಸೃಷ್ಟಿಸಿದ ಅಥವಾ ರೂಪಿಸಿದ ತಂತ್ರಜ್ಞಾನ ಜನರನ್ನು ತಲುಪಬೇಕು, ಅವರ ಸುಭಿಕ್ಷೆಗೆ ಕಾರಣವಾಗಬೇಕು. ನನ್ನದೇ ಉದಾಹರಣೆಗೆ ತೆಗೆದುಕೊಳ್ಳಿ. ನಾನು ಭಾರತದಲ್ಲಿ ಇದ್ದಾಗ ಅಂದರೆ ನನ್ನ ಬಾಲ್ಯ – ಯೌವ್ವನದಲ್ಲಿ ಮೈಕ್ರೊಸಾಫ್ಟ್ ತಂತ್ರಜ್ಞಾನ ನನ್ನನ್ನು ತಲುಪದೆ ಇದ್ದಿದ್ದರೆ ನಾನು ಎಲ್ಲಿರುತ್ತಿದ್ದೆ?! ಇಂಥದ್ದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತ ಹೋಗಬೇಕು ಎಂಬುದು ಮೈಕ್ರೊಸಾಫ್ಟ್ ಉದ್ದೇಶ.

ಭಾರತದ ಬಗ್ಗೆ, ಈ ದೇಶದಲ್ಲಿ ಹುದುಗಿರುವ ಔದ್ಯಮಿಕ ಚೈತನ್ಯದ ಬಗ್ಗೆ ನನಗೆ ಅಪಾರವಾದ ನಂಬಿಕೆ, ವಿಶ್ವಾಸಗಳಿವೆ. ಮುಂದಿನ ಕೆಲವು ವರ್ಷಗಳಲ್ಲಿ ಕೌಡ್‌ ಕಂಪ್ಯೂಟಿಂಗ್‌ ಮತ್ತು ಕಂಪ್ಯೂಟರ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಕ್ರೊಸಾಫ್ಟ್ ಇಲ್ಲಿ ಏನೇನನ್ನೆಲ್ಲ ಮಾಡಬೇಕು ಎಂಬ ಬಗ್ಗೆ ನಾನು ತುಂಬ ಉತ್ಸಾಹಿತನಾಗಿದ್ದೇನೆ. ಇಲ್ಲಿ ಡಾಟಾ ಸೆಂಟರ್‌ಗಳನ್ನು ತೆರೆದಿದ್ದೇವೆ. ಜಾಗತಿಕ ದರ್ಜೆಯ ಆರ್ಟಿಫಿಶಿಯಲ್‌ ಇಂಜೆಲಿಜೆನ್ಸ್‌ (ಎಐ) ಮತ್ತು ಕೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನವನ್ನು ಭಾರತಕ್ಕೆ ತರುತ್ತಿರುವ ಬಗ್ಗೆ ಮೈಕ್ರೊಸಾಫ್ಟ್ ಭಾರೀ ಸಂತಸದಲ್ಲಿದೆ. ಅದಷ್ಟೇ ನನಗೆ ಮುಖ್ಯವಲ್ಲ. ನನ್ನನ್ನು ರೋಮಾಂಚನಗೊಳಿಸುವುದು ಯಾವುದು ಗೊತ್ತಾ- ಉದ್ಯಮಿಗಳು, ಸ್ಟಾರ್ಟಪ್‌ಗ್ಳು; ಫ್ಲಿಪ್‌ಕಾರ್ಟ್‌ನಂತಹ ಈಗಾಗಲೇ ಗಟ್ಟಿಯಾಗಿರುವ ಸಂಸ್ಥೆಗಳು ಈ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಇನ್ನಷ್ಟು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವುದು, ತಮ್ಮ ಅದ್ಭುತ ಐಡಿಯಾಗಳನ್ನು ಹೊರಗೆಡಹಲು ಈ ತಂತ್ರಜ್ಞಾನಗಳನ್ನು ಬಳಸುತ್ತಿರುವುದು. ಇದು ಖಾಸಗಿ ರಂಗದ ಮಾತಾಯಿತು; ಸಾರ್ವಜನಿಕ ರಂಗದ ಸಂಸ್ಥೆಗಳು ಕೂಡ ಈ ತಂತ್ರಜ್ಞಾನಗಳ ಉಪಯೋಗಕ್ಕೆ ಮುಂದಡಿ ಇರಿಸಿವೆ. ಉದಾಹರಣೆಗೆ ನೋಡಿ, ಆಂಧ್ರಪ್ರದೇಶ ಸರಕಾರ ಕೌÉಡ್‌ ನೆರವಿನಿಂದ ಹೈಸ್ಕೂಲ್‌ ಹಂತದಲ್ಲಿ ಶಾಲೆ ತ್ಯಜಿಸುವ ಮಕ್ಕಳ ಅಂದಾಜು ನಡೆಸುತ್ತಿದೆ, ಪಂಜಾಬ್‌ ಸರಕಾರ ತನ್ನ ಕಾಲ್‌ಸೆಂಟರ್‌ಗಳ ಸೇವೆಯನ್ನು ಉತ್ತಮಪಡಿಸಲು ಸ್ಪೀಚ್‌ ಸ್ಯಾಂಪಲ್‌ಗ‌ಳ ವಿಶ್ಲೇಷಣೆಗೆ ಕೌÉಡ್‌ ಸಹಾಯ ಪಡೆಯುತ್ತಿದೆ. ಸಾರ್ವಜನಿಕ ರಂಗದ ಸಂಸ್ಥೆಗಳು, ದೊಡ್ಡ ಮತ್ತು ಸಣ್ಣ ಉದ್ದಿಮೆಗಳು ತಂತ್ರಜ್ಞಾನ ಕ್ಷೇತ್ರದ ಈ ಹೊಸ ಬೆಳವಣಿಗೆಯ ಉಪಯೋಗ ಪಡೆಯುತ್ತಿರುವುದು ನನ್ನ ಮಟ್ಟಿಗೆ ಬಹಳ ಮುಖ್ಯ. ಈಗ ನಮ್ಮ ಮುಂದಿರುವುದು ಕೌÉಡ್‌ ಕಂಪ್ಯೂಟಿಂಗ್‌ ಯುಗ. ಈ ಹಿಂದೆ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು, ಸರಕಾರಿ ಇಲಾಖೆಗಳು ಹೊಸ ತಂತ್ರಜ್ಞಾನಗಳಿಗೆ ಅಷ್ಟು ಸುಲಭವಾಗಿ ತೆರೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ನೋಡಿ, ಉತ್ತರಪ್ರದೇಶ ಚುನಾವಣೆಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮತದಾನ ಕೇಂದ್ರಗಳಲ್ಲಿ ಕೆಮರಾಗಳನ್ನು ಅಳವಡಿಸಿದ್ದಾರೆ, ದೃಶ್ಯಗಳನ್ನು ಕೌÉಡ್‌ಗೆ ಸ್ಟ್ರೀಮ್‌ ಮಾಡಿದ್ದಾರೆ, ಆ ಮೂಲಕ ಮತದಾನದ ಮೇಲೆ ನಿಗಾ ಮತ್ತು ವಿಶ್ಲೇಷಣೆ ಮಾಡಲು ಸಾಧ್ಯವಾಗಿದೆ. ಹೀಗೆ ಸಣ್ಣ ಉದ್ದಿಮೆಗಳು, ದೊಡ್ಡ ಉದ್ದಿಮೆಗಳು  ಮತ್ತು ಪಬ್ಲಿಕ್‌ ಸೆಕ್ಟರ್‌ – ಹೀಗೆ ಮೂರು ಕಡೆಗೂ ತಂತ್ರಜ್ಞಾನ ಸುಲಭಗ್ರಾಹ್ಯವಾಗಿದೆ. ಕಳೆದ 30 ವರ್ಷಗಳಲ್ಲಿ ಮೈಕ್ರೊಸಾಫ್ಟ್ ಇಲ್ಲಿ ಕಟ್ಟಿ ಬೆಳೆಸಿದ್ದೇನಿದೆಯೋ ಅದು ಇನ್ನಷ್ಟು ವೇಗವರ್ಧನೆಗೊಳ್ಳಲಿದೆ ಎಂದೇ ನಾನು ನಿರೀಕ್ಷಿಸುತ್ತೇನೆ. ಯಾಕೆಂದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಕಂಪ್ಯೂಟಿಂಗ್‌ ನಡೆಯಲಿದೆ ಮತ್ತು ಆ ಕಂಪ್ಯೂಟಿಂಗ್‌ನ ಬಳಕೆಯೂ ಹೆಚ್ಚು ಹೆಚ್ಚಾಗಿ ಆಗಲಿದೆ. 

ಕೌಡ್‌ ಕಂಪ್ಯೂಟಿಂಗ್‌ ಯುಗ
ಭಾರತದಲ್ಲಿ ವಿವಿಧ ಕಂಪೆನಿಗಳ ಜತೆಗೆ ಮೈಕ್ರೊಸಾಫ್ಟ್ ನಡೆಸುವ ಪಾಲುದಾರಿಕೆ ಕೂಡ ಹೆಚ್ಚಲಿದೆ. ಫ್ಲಿಪ್‌ಕಾರ್ಟ್‌ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇನ್‌-ಕಾರ್‌ ಕನೆಕ್ಟಿವಿಟಿಯಂತಹ ಕನೆಕ್ಟೆಡ್‌ ತಂತ್ರಜ್ಞಾನಗಳ ಬಳಕೆಯ ವಿಚಾರದಲ್ಲಿ ಟಾಟಾ ಮೋಟರ್ ಜತೆಗೆ ಒಪ್ಪಂದಕ್ಕೆ ಸಹಿ ಬಿದ್ದಿದೆ. ಇಂಥದ್ದೇ ಇನ್ನೊಂದು ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ ಜತೆಗೆ ಮಾಡಿಕೊಂಡಿರುವ ಒಪ್ಪಂದ. ನನ್ನ ಪ್ರಕಾರ ಇದೊಂದು ಮೈಲಿಗಲ್ಲು. ಎಸ್‌ಬಿಐ ತನ್ನ ಸೇವೆಗಳನ್ನು ಕೌಡ್‌ಗೆ ವರ್ಗಾಯಿಸಲಿದೆ. ಒಂದು ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದುಕೊಂಡು ಎಸ್‌ಬಿಐ, ಕೌಡ್‌ ಕಂಪ್ಯೂಟಿಂಗ್‌ ಅಳವಡಿಸಿಕೊಳ್ಳುತ್ತಿರುವುದು ಒಂದು ಮಹತ್ವದ ಬೆಳವಣಿಗೆ. ಭಾರತೀಯ ಡಾಟಾ ಹರಿವಿನ ವಿಚಾರದಲ್ಲಿಯೂ ಮೈಕ್ರೊಸಾಫ್ಟ್ ಬಹಳ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಉದಾಹರಣೆಗೆ, ಆಧಾರ್‌ ಆಧಾರಿತ ಸ್ಕೈಪ್‌ ಲೈಟ್‌ ಬಿಡುಗಡೆ ಮಾಡಿರುವುದು ಭಾರತೀಯ ಬಳಕೆದಾರರಿಗೆ ಅನುಕೂಲವಾಗಲಿ ಎಂದೇ. ಇದರಿಂದಾಗಿ ಈಗ ಭಾರತೀಯ ಬಳಕೆದಾರ ಬ್ಯಾಂಕ್‌ ಅಕೌಂಟ್‌ ನಿರ್ವಹಣೆ, ರೇಶನ್‌ ಅಂಗಡಿಯ ಸೇವೆ ಪಡೆಯುವುದು ಹೀಗೆ ಅನೇಕ ರೀತಿಗಳಲ್ಲಿ ಸ್ಕೈಪ್‌ ಬಳಕೆ ಮಾಡಬಹುದು. ಮೈಕ್ರೊಸಾಫ್ಟ್, ಕೌಡ್‌ ಕಂಪ್ಯೂಟಿಂಗ್‌ ಮತ್ತು ಡಾಟಾ ಹರಿವನ್ನು ಭಾರತೀಯ ಸನ್ನಿವೇಶಕ್ಕೆ ಸರಿಯಾಗಿ ರೂಪಿಸಿರುವುದಕ್ಕೆ ಇದು ಒಂದು ಉದಾಹರಣೆ. 

ಜನಸಾಮಾನ್ಯ ಕೈಗೆ ತಂತ್ರಜ್ಞಾನ
ಮೈಕ್ರೊಸಾಫ್ಟ್ ಮೂಲಕ ತಂತ್ರಜ್ಞಾನದ ಆಧುನಿಕ ಬೆಳವಣಿಗೆಗಳನ್ನು ಭಾರತೀಯ ಜನಸಾಮಾನ್ಯರಿಗೂ ಒದಗಿಸುವ ಪ್ರಯತ್ನದ ಭಾಗವಾಗಿ ನಾವು ಕೇಂದ್ರ, ರಾಜ್ಯ ಸರಕಾರಗಳು ಮತ್ತು ಸರಕಾರದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಬೇಕಾಗಿ ಬರುತ್ತದೆ. ಈ ವಿಚಾರದಲ್ಲಿ ನಾನು ಗಮನಿಸಿರುವ ಮಹತ್ವದ ಬದಲಾವಣೆಯೊಂದಿದೆ: ತಂತ್ರಜ್ಞಾನಕ್ಕೆ ಸಂಬಂಧಿಸಿ ಭಾರತದಲ್ಲಿ ಅಭೂತಪೂರ್ವ ಬದಲಾವಣೆ ಉಂಟಾಗಿದೆ. ಆಧಾರ್‌ ಇನ್‌ಫ್ರಾಸ್ಟ್ರಕ್ಚರ್‌, ವ್ಯಕ್ತಿಗತ ಹಾಜರಾತಿ ಅಗತ್ಯ ಬೀಳದ ಡಿಜಿಟಲ್‌ ಬ್ಯಾಂಕಿಂಗ್‌ ಅಥವಾ ಇನ್ನಿತರ ವ್ಯವಹಾರ ಸಾಧ್ಯತೆಗಳು, ಪೇಪರ್‌ಲೆಸ್‌ ವ್ಯವಹಾರ – ಆಡಳಿತ ಹೀಗೆ ಉದಾಹರಣೆಗಳನ್ನು ನೀಡಬಹುದು. ಒಂದು ಮಾಹಿತಿ ತಂತ್ರಜ್ಞಾನ ಕಂಪೆನಿಯಾಗಿ ನಾವು ಈ ಬೆಳವಣಿಗೆಯನ್ನು ಹೇಗೆ ನೋಡುತ್ತೇವೆ ಎಂದರೆ – ಉದ್ದಿಮೆಗಳು ಮತ್ತು ಆರ್ಥಿಕತೆಯ ವಿಶಾಲ ಕ್ಯಾನ್ವಾಸ್‌ನಲ್ಲಿ ತಂತ್ರಜ್ಞಾನದ ಅಳವಡಿಕೆ ನಡೆಯುವಾಗ ನಮ್ಮ ಕೆಲಸಗಳು ಅದಕ್ಕೆ ಪೂರಕವಾಗಿರಬೇಕು, ಅದರ ವೇಗವನ್ನು ವರ್ಧಿಸುವಂತಿರಬೇಕು. ಸರಕಾರಗಳೂ  ಇದೇ ರೀತಿ ಕೆಲಸ ಮಾಡಬೇಕು. ಅಂತಿಮವಾಗಿ ನಾವು ಸಾಧಿಸಬೇಕಾಗಿರುವ ಗುರಿ ಏನೆಂದರೆ ತಂತ್ರಜ್ಞಾನ ಸ್ವೀಕಾರ ಮತ್ತು ಅಳವಡಿಕೆಯ ಈ ಪ್ರಕ್ರಿಯೆಯಲ್ಲಿ ಸಂಘರ್ಷಗಳು ಕಡಿಮೆಯಾಗಬೇಕು ಮತ್ತು ತಂತ್ರಜ್ಞಾನ  ಮಿತವ್ಯಯಿಯಾಗಬೇಕು. ಆಗ ಪ್ರತೀ ಭಾರತೀಯನೂ ಪ್ರತೀ ಭಾರತೀಯ ಸಂಸ್ಥೆಯೂ ಕಂಪ್ಯೂಟರ್‌ ತಂತ್ರಜ್ಞಾನದ ಲಾಭಗಳನ್ನು ಪಡೆಯಲು ಸಾಧ್ಯವಾಗುತ್ತದೆ. 

ಡಾಟಾ ಎಂಬ ಕರೆನ್ಸಿ
ಶಿಕ್ಷಣವಿರಲಿ, ಆರೋಗ್ಯ ಸೇವಾ ಕ್ಷೇತ್ರವಿರಲಿ, ಉತ್ಪಾದನೆಯಿರಲಿ ಅಥವಾ ಸಾರ್ವಜನಿಕ ರಂಗವಿರಲಿ; ಡಾಟಾ ಅಥವಾ ದತ್ತಾಂಶ ಈಗ ಚಲಾವಣೆಯಲ್ಲಿ ಇರುವ “ಕರೆನ್ಸಿ’! ಬರೇ ಡಾಟಾ ಸಂಗ್ರಹ ಮಾತ್ರ ಅಲ್ಲ; ಸಂಗ್ರಹಿತ ಡಾಟಾದಿಂದ ವಿವೇಚನಾಯುತವಾದ, ಬುದ್ಧಿವಂತಿಕೆಯ ಹೊಳಹುಗಳನ್ನು ಸೃಷ್ಟಿಸುವುದು ಮತ್ತು ಅದನ್ನು ಮೇಲ್‌ಸ್ತರದ ಮತ್ತು ತಳಮಟ್ಟದ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳುತ್ತೀರಿ ಅನ್ನುವುದು ಪ್ರಾಮುಖ್ಯ. ಕೃಷಿಯಲ್ಲಿ ಹೆಚ್ಚು ಇಳುವರಿ ಸಾಧನೆ ಇರಬಹುದು ಅಥವಾ ಫ್ಯಾಕ್ಟರಿಯಲ್ಲಿ ಉತ್ಪಾದನೆಯ ವೃದ್ಧಿಯಿರಬಹುದು; ನನ್ನ ಪ್ರಕಾರ ಯಾವ ಹೊಸ ತಂತ್ರಜ್ಞಾನ ಬಳಕೆಯಾಗುತ್ತಿದೆ ಎಂಬುದಲ್ಲ, ಲಭ್ಯ ತಂತ್ರಜ್ಞಾನವನ್ನು ಸಮಾಜದ ಅಭಿವೃದ್ಧಿಗಾಗಿ ಹೇಗೆ ಉಪಯೋಗಿಸಲಾಗುತ್ತಿದೆ ಎಂಬುದು ಗಮನಿಸಬೇಕಾದ ಅಂಶ. ಇದನ್ನು ಸಾಧಿಸುವುದಕ್ಕಾಗಿ ಮೈಕ್ರೊಸಾಫ್ಟ್ ಭಾರತೀಯ ಬಳಕೆದಾರರಿಗಾಗಿಯೇ ರೂಪಿಸಿದ ಡಾಟಾ ಹರಿವನ್ನು ಒದಗಿಸುತ್ತಿದೆ. ಇದರಿಂದಾಗಿ  ಭಾರತೀಯ ಆರ್ಥಿಕತೆ ಉತ್ಪಾದಕ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ ಹಾಗೂ ಸಂವಹನ ವೆಚ್ಚ ತಗ್ಗುತ್ತದೆ ಎಂಬುದು ನನ್ನ ನಿರೀಕ್ಷೆ. 

ಉದ್ದೇಶ ಸ್ಪಷ್ಟವಿದ್ದರೆ ಗುರಿ ಸಾಧನೆ
ನಾನು ಮೈಕ್ರೊಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ನಾವು ಮುಖ್ಯವಾಗಿ ಮೂರು ಪ್ರಮುಖ ಉದ್ದೇಶಗಳನ್ನು ಇರಿಸಿಕೊಂಡಿದ್ದೇವೆ. ಕಂಪೆನಿ ಅಸ್ತಿತ್ವದಲ್ಲಿ ಇರುವ ಉದ್ದೇಶ, ಕಂಪೆನಿಯ ಐಡೆಂಟಿಟಿ ಮತ್ತು ಒಂದು ಕಂಪೆನಿಯಾಗಿ ಯಾಕೆ ಇದೆ – ಈ ಮೂರು ಪ್ರಶ್ನೆಗಳಿಗೆ ಖಚಿತ ಉತ್ತರಗಳನ್ನು ಕಂಡುಕೊಳ್ಳುತ್ತ ನಾವು ಕಾರ್ಯಾಚರಿಸುತ್ತಿದ್ದೇವೆ. ಬಿಲ್‌ ಗೇಟ್ಸ್‌ ಮತ್ತು ಪಾಲ್‌ ಅಲನ್‌ ಮೈಕ್ರೊಸಾಫ್ಟ್ ಸ್ಥಾಪಿಸಿದರಲ್ಲ? ಅಲ್ಲಿಂದೀಚೆಗೆ ತಂತ್ರಜ್ಞಾನಗಳಲ್ಲಿ ಬಹಳ ಬಹಳ ಬದಲಾವಣೆಗಳಾಗಿವೆ. ಆದರೆ, ನಾವು ಸ್ಥಾಪನೆಯಾದುದರ ಉದ್ದೇಶ ಮತ್ತು ಕಂಪೆನಿಯ ಜೀನ್‌ನಲ್ಲಿರುವ ಐಡೆಂಟಿಟಿ ಸ್ಥಾಯಿಯಾದದ್ದು. ತಂತ್ರಜ್ಞಾನವನ್ನು ಸೃಷ್ಟಿಸಿಜನರ ಕೈಗಿಡುವುದು ಮತ್ತು ಅವರ ಮೂಲಕ ಇನ್ನಷ್ಟು ತಂತ್ರಜ್ಞಾನ ಸೃಷ್ಟಿ – ಮೈಕ್ರೊಸಾಫ್ಟ್ನ ಸ್ಥೂಲ ಉದ್ದೇಶ ಇದು. ಕಂಪ್ಯೂಟಿಂಗ್‌ಗೆ ಸಂಬಂಧಿಸಿದ ಏನೇ ಹೊಸತನ್ನು ರೂಪಿಸುವಾಗಲೂ ನಾನು ಕಂಪೆನಿಯ ಈ ಉದ್ದೇಶ ಸಫ‌ಲವಾಗುತ್ತದಾ ಎಂದು ಯೋಚಿಸುತ್ತೇನೆ. 

ಇದಕ್ಕಿಂತಲೂ ಮುಖ್ಯವಾದ ವಿಚಾರ ಇನ್ನೊಂದಿದೆ. “ಮೈಕ್ರೊಸಾಫ್ಟ್ತಂತ್ರಜ್ಞಾನ’ ಎಂಬುದು ಅಮುಖ್ಯ. ಆಧುನಿಕ ಕಂಪ್ಯೂಟರ್‌ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಯೊಬ್ಬ ಪ್ರಾಜೆಕ್ಟ್ ತಯಾರಿಸುವುದಿರಲಿ, ಸಣ್ಣ ಉದ್ದಿಮೆಯೊಂದು ಹೆಚ್ಚು ಉತ್ಪಾದನೆ ಸಾಧಿಸುವುದಿರಲಿ, ಒಂದು ದೊಡ್ಡ ಉದ್ಯಮ ಮತ್ತಷ್ಟು ಸ್ಪರ್ಧಾತ್ಮಕವಾಗುವುದಿರಲಿ ಅಥವಾ ಒಂದು ಸಾರ್ವಜನಿಕ ಸಂಸ್ಥೆ ಇನ್ನಷ್ಟು ದಕ್ಷವಾಗುವುದಿರಲಿ – ಉತ್ತಮಿಕೆಯ ಕಡೆಗೆ ನಡೆಯುತ್ತಿರುವ ಆ ಬದಲಾವಣೆ ಪ್ರಧಾನವಾದದ್ದು. ಇದು ತಂತ್ರಜ್ಞಾನ ಸುಧಾರಣೆಯಿಂದ ಮಾತ್ರ ನಡೆಯುವುದಲ್ಲ, ಪರಿವರ್ತನೆ ಆಗಬೇಕು ಎಂಬ ಸ್ಪಷ್ಟ ಉದ್ದೇಶ ಹೊಂದಿದ್ದಾಗ ಮಾತ್ರ ಇದು ಸಾಧ್ಯ. ಇದು ಮುಖ್ಯ ಮತ್ತು ಇದುವೇ ಬಹಳ ಮುಖ್ಯ.

ಸತ್ಯ ನಾದೆಳ್ಲ ಮೈಕ್ರೊಸಾಫ್ಟ್ ಸಿಇಒ

ಟಾಪ್ ನ್ಯೂಸ್

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

suicide

Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.