ಜೀವಜಲವ‌ ಉಳಿಸೋಣ ಬನ್ನಿ


Team Udayavani, Sep 7, 2017, 7:46 AM IST

07-ANKANA-2.jpg

ನದಿಗಳಿಗೆ ನೀರುಣಿಸಬೇಕೆಂದರೆ, ಅದರ ಸುತ್ತಲಿನ ಭೂಮಿಯಲ್ಲಿ ತೇವಾಂಶ ಸದಾಕಾಲ ಇರಬೇಕು. ನಮ್ಮ ನದಿಗಳಿಗೆ ಕಾಡುಗಳೇ ಆಸರೆ. ಮಳೆಕಾಡು ಭೂಮಿಯನ್ನು ಆವರಿಸಿದ್ದಾಗ, ನೀರು ಭೂಮಿಯಲ್ಲಿ ಹೆಚ್ಚು ಶೇಖರಣೆಗೊಂಡು, ಸಣ್ಣ ತೊರೆಗಳು ಹಾಗೂ ನದಿಗಳಿಗೆ ಧಾರಾಳವಾಗಿ ನೀರುಣಿಸುತ್ತಿತ್ತು

ಪ್ರಕೃತಿಯೊಂದಿಗಿನ ನನ್ನ ಸಂಬಂಧ ಪರಿಸರತಜ್ಞನಾಗಿ ಬೆಸೆದಿಲ್ಲ. ನಾನು ಯಾವುದೇ ವಿಜ್ಞಾನಿಯೂ ಅಲ್ಲ. ಪ್ರಕೃತಿಯ ಒಡನಾಟವೇ ನನ್ನ ಜೀವನವಾಗಿದೆ. ಬಾಲ್ಯದಿಂದಲೂ ನಾನು ಮನೆಗಿಂತಲೂ ಪ್ರಕೃತಿಯ ಮಡಿಲಲ್ಲೇ ಹೆಚ್ಚಿನ ಸಮಯ ಕಳೆದಿದ್ದೇನೆ. ನಾನು 12-17 ವರ್ಷ ವಯಸ್ಸಿನಲ್ಲಿ ಪ್ರತಿದಿನವೂ ಕಾವೇರಿಯಲ್ಲಿ ಈಜುತ್ತಿದ್ದೆ ಹಾಗೂ 17ನೇ ವಯಸ್ಸಿನಲ್ಲಿ ನಾಲ್ಕು ಲಾರಿ ಚಕ್ರಗಳು ಹಾಗೂ ಹನ್ನೆರಡು ಬೊಂಬುಗಳಿಂದ ಮಾಡಿದ ತೆಪ್ಪದಲ್ಲಿ ಭಾಗಮಂಡಲದಿಂದ ಮೈಸೂರಿನವರೆಗೆ ಕಾವೇರಿ ನದಿಯಲ್ಲಿ ತೇಲುತ್ತಾ ಸಂಚರಿಸಿದ್ದೇನೆ. ಇವತ್ತಿಗೂ ನನ್ನನ್ನು ಮನೆಯಲ್ಲಿರಿ ಸುವುದು ಬಹಳ ಕಷ್ಟದ ಕೆಲಸ! 

ನದಿ, ಜಲ, ಪ್ರಕೃತಿ, ಇವುಗಳ ನನ್ನ ಅರಿವು ಕಲಿಕೆಯಿಂದ ಬಂದದ್ದಲ್ಲ, ಇದೆಲ್ಲವೂ ನನ್ನ ಅವಲೋಕನಾ ಸಾಮರ್ಥ್ಯದಿಂದ ಬಂದಿರುವುದು. ನಾನು ವಾರಗಟ್ಟಲೆ ಈ ಹೊರಜಗತ್ತಿನ ಸಂಪರ್ಕವೂ ಇಲ್ಲದೆ ಒಬ್ಬನೇ ಕಾಡುಮೇಡುಗಳಲ್ಲಿ ಕಳೆದಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಪ್ರತಿಯೊಂದು ಜೀವಿಯೂ ಇದನ್ನೇ ಮಾಡುತ್ತದೆ. ನಾನು ನನ್ನನ್ನು ಹಾಗೂ ಬೇರೆಲ್ಲವನ್ನೂ ಪ್ರಕೃತಿಯ ಒಂದು ಭಾಗ(ಕಣ)ವಾಗಿಯೇ ಕಾಣುತ್ತೇನೆ.

ನೆಲ, ಜಲ ಒಂದು ಸರಕಲ್ಲ ಇಲ್ಲಿ ಕುಳಿತಿರುವ ನಿಮ್ಮ ದೇಹವೇ ಒಂದು ಮಣ್ಣು-ನೀರಿನ ಮುದ್ದೆ,  ಅಷ್ಟೇ. ಆದರೆ ಬಹಳ ಜನರು ತಮ್ಮ ಜೀವನ ಮುಗಿಸಿ ಮಣ್ಣು ಸೇರು ವವರೆಗೂ ಇದನ್ನು ನಂಬುವುದೇ ಇಲ್ಲ. ನಾವು ಮಣ್ಣಿನಲ್ಲಿ ಮಣ್ಣಾದಾಗಲೇ ಇದರ ಅರಿವಾಗುವುದು. ಪ್ರಸ್ತುತ ನಾವೇ ಓಡಾಡಿಕೊಂಡಿರುವುದರಿಂದ ಇದನ್ನು ನಂಬುವುದು ಕಷ್ಟ. ಒಂದು ವೇಳೆ ಮರಗಳ ಹಾಗೇ ನಾವು ಭೂಮಿ ಯಲ್ಲಿ ಬೇರೂರಿ ನಿಂತಿದ್ದರೆ, ಆಗ ನಮಗದು ಸ್ಪಷ್ಟವಾಗಿ ಅರಿವಾಗುತ್ತಿತ್ತು. ನೆಲದಂತೆಯೇ ನೀರೂ ಕೂಡ ಒಂದು ಸರಕಲ್ಲ. ಇದು ಜೀವಚೈತನ್ಯದ ಒಂದು ಅಂಶ. ಮನುಷ್ಯ ಶರೀರವು 72% ನೀರಿನಿಂದಲೇ ಆದುದು. ಅಂದರೆ ನೀವೂ ಜಲಚರರು. ಈ ಭೂಮಿಯ ಮೇಲಿರುವ ನದಿಗಳೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಆದರೆ ಇಂದು ನದಿಗಳು ತೀವ್ರವಾಗಿ ಕ್ಷೀಣಿಸಿವೆ, ಹಾಗೂ ಅಳಿವಿನ ಅಂಚಿನಲ್ಲಿವೆ. ಬರೀ ಎರಡು ತಲೆಮಾರಿನಲ್ಲೇ, ಸರ್ವಕಾಲಿಕವಾಗಿದ್ದ ನದಿಗಳು ಋತುಕಾಲಿಕವಾಗಿ ಬಿಟ್ಟಿವೆ. ಇನ್ನು ಮುಂದಿನ ದಿನಗಳಲ್ಲಿ ನದಿಗಳು ಶರವೇಗದಲ್ಲಿ ಕ್ಷೀಣಿ ಸುತ್ತವೆ. ಈಗಾಗಲೇ ಹಲವಾರು ನದಿಗಳು 60% ಬತ್ತಿಹೋಗಿವೆ. ಕೃಷ್ಣ, ಕಾವೇರಿ ಮತ್ತು ಹಲವು ನದಿಗಳು ವರ್ಷದ ಮೂರುನಾಲ್ಕು ತಿಂಗಳು ಸಮುದ್ರವನ್ನೇ ತಲುಪುತ್ತಿಲ್ಲ. ಈ ಪರಿಸ್ಥಿತಿ ಬರೀ ಕೆಲವು ನದಿಗಳದ್ದಲ್ಲ. ದೇಶದೆಲ್ಲೆಡೆ ಎಲ್ಲಾ ನದಿಗಳೂ ಬತ್ತಿ ಹೋಗುತ್ತಿವೆ. 

ನಮ್ಮ ದೇಶದಲ್ಲಿ 1950ನೇ ದಶಕದಲ್ಲಿ ಲಕ್ಷಾಂತರ ಜನರನ್ನು ನುಂಗಿ ದಂತಹ ಬರ ಬಡಿದಿತ್ತು. 1943ನೇ ಇಸವಿಯಲ್ಲಿ ಯೂರೋಪಿನಲ್ಲಿ ಅಡಾಲ್ಫ್ ಹಿಟ್ಲರನು 6-7 ವರ್ಷಗಳಲ್ಲಿ ಆರು ಶತ ಕೋಟಿ ಜನರನ್ನು ನಿರ್ದಯೆಯಿಂದ ಹೀನಾಯವಾಗಿ ಕೊಂದನೆಂಬ ಸುದ್ದಿ ಬಯಲಾಗುವ ಸಮಯದಲ್ಲೇ, ಬರೀ ಎರಡು-ಎರಡೂವರೆ ತಿಂಗಳಿನಲ್ಲೇ ಲಕ್ಷಾಂತರ ಜನರು ಪ, ಬಂಗಾಲದಲ್ಲಿ ಬರದಿಂದ ಸತ್ತಿದ್ದರು. ನಂತರ ಐವತ್ತು ವರ್ಷಗಳಿಂದ ಹೇಗೋ ಈ ಬರವೆಂಬ ಮಹಾಮಾರಿಯನ್ನು ತೊಲಗಿಸಿ ತಡೆಗಟ್ಟಿದ್ದೆವು. ಆದರೆ ಈಗ ಮತ್ತೆ ನಾವೇ ಸ್ವಯಂ ಅದೇ ವಿಷಮ ಸ್ಥಿತಿಗೆ ಜಾರುತ್ತಿದ್ದೇವೆ.

ಇಂದು ಅಷ್ಟೊಂದು ಸಂಖ್ಯೆಯಲ್ಲಿ ಜನರು ಸಾಯದೇ ಹೋಗ ಬಹುದು, ಆದರೆ ಜನಜೀವನ ಗಂಭೀರವಾಗಿ ಅಸ್ತವ್ಯಸ್ತಗೊಳ್ಳುವುದಂತೂ ಖಚಿತ. ಒಮ್ಮೆ ನೀರಿಗೆ ಬರವುಂಟಾದರೆ ವಲಸಿಗರ ಜಾತ್ರೆಯೇ ಆಗುತ್ತದೆ. ನಿಮ್ಮ ರಸ್ತೆಗಳಲ್ಲಿ, ನಗರಗಳಲ್ಲಿ, ಎಲ್ಲೆಂದರಲ್ಲಿ ಜನರು ತುಂಬಿ ಹೋಗುತ್ತಾರೆ. ನೀವು ಅವರನ್ನೇನಾದರೂ ತಾಕಿದರೂ ಅವರು ವ್ಯಗ್ರರಾಗುತ್ತಾರೆ. ಮುಂದಿನ 30-40 ವರ್ಷಗಳಲ್ಲಿ ಅಪರಿಮಿತ ಪೌರ ಕಲಹಗಳನ್ನು ಎದುರಿಸಬೇಕಾಗುತ್ತದೆ. 

ಇದು ಅಂತ್ಯದ ಭಯಾನಕತೆಯನ್ನು ಚಿತ್ರಿಸುವ ಪ್ರಯತ್ನವಲ್ಲ. ನಾವು ಒಂದು ಖಚಿತ ದಿಕ್ಕಿನಲ್ಲಿ ನಡೆಯುತ್ತಿದ್ದೇವೆ, ಈ ದಿಕ್ಕನ್ನು ಬದಲಿಸದಿದ್ದಲ್ಲಿ, ಖಂಡಿತವಾಗಿ ಪಶ್ಚಾತ್ತಾಪ ಪಡುವ ಸ್ಥಿತಿ ತಲುಪುತ್ತೇವೆ. ಕಳೆದ ನಾಲ್ಕು ವರ್ಷಗಳಲ್ಲಿ ದ್ವಿದಳ ಧಾನ್ಯಗಳ ಆಮದು 17% ಹೆಚ್ಚಿದೆ. ದ್ವಿದಳ ಧಾನ್ಯಗಳ ಬಳಕೆ ನಮ್ಮ ದೇಶದಲ್ಲಿ ಅತ್ಯಂತ ಅಧಿಕವಾದರೂ, ನೀರಿನ ಅಭಾವದಿಂದ ಅವುಗಳನ್ನು ಬೆಳೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಬೆಳೆಗಳು ಮಳೆ ಅವಲಂಬಿತ ಬೆಳೆಗಳು. ಆದರೆ ಇಂದು ನಾವು ಮಳೆಯನ್ನೇ ನಂಬುವಂತಿಲ್ಲ. ಒಂದು ಕಾಲದಲ್ಲಿ, ರೈತರು ಯಾವ ದಿನ ಮಳೆ ಬರುತ್ತದೆಯೆಂದು ಯಾವುದೇ ವಾತಾವರಣ ವಿಜಾnನದ ಸಹಾಯವೂ ಇಲ್ಲದೆಯೇ ಹೇಳುತ್ತಿದ್ದರು, ಆದರೆ ಇಂದು ಮಳೆ ಯಾವಾಗ ಬರಬಹುದೆಂಬ ಸುಳಿವೂ ಇಲ್ಲವಾದಾಗ ಬೆಳೆಯನ್ನು ಯಾವಾಗ ಬೆಳೆಯುವುದು?

ನಮ್ಮ ನದಿಗಳ ಪುನಃಶ್ಚೇತನ
ನದಿಗಳ ಕ್ಷೀಣತೆಗೆ ಕಾಡುಗಳ ಅವಸಾನವೇ ಮುಖ್ಯ ಕಾರಣ. ನದಿ ಗಳಿಗೆ ನೀರುಣಿಸಬೇಕೆಂದರೆ, ಅದರ ಸುತ್ತಲಿನ ಭೂಮಿಯಲ್ಲಿ ತೇವಾಂಶ ಸದಾಕಾಲ ಇರಬೇಕು. ನಮ್ಮ ನದಿಗಳಿಗೆ ಕಾಡುಗಳೇ ಆಸರೆ. ಮಳೆಕಾಡು ಗಳು ಭೂಮಿಯನ್ನು ಆವರಿಸಿದ್ದಾಗ, ಗಿಡಮರಗಳಿಂದ ನೀರು ಭೂಮಿ ಯಲ್ಲಿ ಹೆಚ್ಚುಹೆಚ್ಚು ಶೇಖರಣೆಗೊಂಡು, ಸಣ್ಣ ತೊರೆಗಳು ಹಾಗೂ ನದಿಗಳಿಗೆ ಧಾರಾಳವಾಗಿ ನೀರುಣಿಸುತ್ತಿತ್ತು ಮತ್ತು ನದಿಗಳು ಸದಾಕಾಲ ತುಂಬಿ ನಳನಳಿಸುತ್ತಿದ್ದವು. ಹೀಗಾಗಿ ಕಾಡುಗಳು ನಾಶವಾದರೆ, ನದಿಗಳೂ ಕ್ಷೀಣಿಸುತ್ತವೆ ಹಾಗೂ ಕಾಲಕ್ರಮೇಣ ಬತ್ತಿ ಹೋಗುತ್ತವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು: ಜನರು ನದಿಗಳಿಂದ ಮರಗಳು ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ, ಆದರೆ ಅದು ಹಾಗಲ್ಲ, ಮರಗಳಿಂದ ನದಿಗಳು. ಹಾಗಾಗಿ ನದಿಗಳ ಹರಿವಿನುದ್ದಕ್ಕೂ ಮರಗಳನ್ನು ಬೆಳೆಸಬೇಕು. ಆದರೆ ಇದು ಬರೀ ನಾನು-ನೀನು ಎಂದು ಸ್ವತಃ ಹುಮಸ್ಸಿನಿಂದ ಬರಿ ಹಲವು ಸಾವಿರ ಮರಗಳನ್ನು ಬೆಳೆಸುವುದರಿಂದ ಆಗುವ ಕೆಲಸವಲ್ಲ. ಹಾಗೇನಾದರೂ ಇದ್ದರೆ 40 ವರ್ಷಗಳ ಹಿಂದೆ ಈ ಕೆಲಸ ಆಗಬೇಕಿತ್ತು. ಆದರೆ ಇಂದು ನದಿಗಳ ಸುತ್ತಮುತ್ತ ನಾವು ಏನು ಮಾಡಬೇಕು, ಏನು ಮಾಡಬಾರದು ಎಂಬ ಹತ್ತು ಹಲವು ಕಾರ್ಯನೀತಿಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕು.
ಇದಕ್ಕಾಗಿ ನಾವು ಕೆಲವು ಕಾರ್ಯನೀತಿಗಳನ್ನು ಸೂಚಿಸಲು ಹಲವು ಪರಿಣತರ ಮತ್ತು ವಿಜ್ಞಾನಿಗಳ ತಂಡದ ಸಮಿತಿ ರಚಿಸಿದ್ದೆವು. ಈ ಸಮಿ ತಿಯು ಈ ನಿಟ್ಟಿನಲ್ಲಿ ರೂಪುರೇಷೆಯನ್ನು ತಯಾರಿಸಿದೆ. ನದಿಗಳ ಇಕ್ಕೆಲ ದಲ್ಲಿ ಕನಿಷ್ಟ ಒಂದು ಕಿ.ಮೀ. ಅಗಲ ಹಾಗೂ ತೊರೆಗಳಾದರೆ ಅರ್ಧ ಕಿ.ಮೀ ಅಗಲಕ್ಕೆ ಸರ್ಕಾರಿ ಭೂಮಿಯಾದರೆ ಕಾಡು ಮರಗಳನ್ನು ಬೆಳೆಸ ಬೇಕು. ಖಾಸಗಿ ಜಾಗವಾದರೆ ಭೂಮಿಯ ಸತ್ವಗಳನ್ನು ಕ್ಷೀಣಿಸುವ ಬೆಳೆಗಳ  ಬದಲು ತೋಟಗಾರಿಕೆಗೆ ಒತ್ತು ಕೊಡಬೇಕು. ಇದರಿಂದ ರೈತರ ಆದಾ ಯವೂ ದುಪ್ಪಟ್ಟಿಗಿಂತ ಜಾಸ್ತಿಯಾಗುತ್ತದೆ ಎನ್ನುವುದು ಇದಕ್ಕೆ ಪರಿಹಾರ. 

ನಾವು ಇನ್ನು 8-10 ವರ್ಷಗಳು ಇದನ್ನು ಕಡ್ಡಾಯವಾಗಿ ಅನುಷ್ಟಾನ ಗೊಳಿಸಿದರೆ, ನದಿಗಳ ನೀರಿನ ಹರಿವು ಇನ್ನು 15 ರಿಂದ 25 ವರ್ಷ ಗಳಲ್ಲಿ 15% ರಿಂದ 20% ಹೆಚ್ಚುತ್ತದೆ. ಆದರೆ ನಾವು ಈ ನೀತಿ ಜಾರಿ ಗೊಳಿಸುವುದನ್ನೇ 15-20 ವರ್ಷ ಮುಂದೂಡಿದರೆ, ನಾವು ಪ್ರತಿಫಲ ಪಡೆಯಲು 100 ರಿಂದ 150 ವರ್ಷ ಕಾಯಬೇಕಾಗುತ್ತದೆ. ಇದು ಚಳುವಳಿಗಾರನ ಮಾತಲ್ಲ, ಇದು ಸರಿಯಾದ ವಿಜ್ಞಾನ.

ಇದು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜವಾಬ್ದಾರಿ. ಈ ತಲೆಮಾರಿಗೆ ಸೇರಿದ ಜನರಾಗಿ ನಾವೆಲ್ಲಾ ಈಗಾಗಲೇ ಗರಿಷ್ಟ ಹಾನಿ ಮಾಡಿಬಿಟ್ಟಿದ್ದೇವೆ. ಕನಿಷ್ಟಪಕ್ಷ ಸಂಪೂರ್ಣವಾಗಿ ಸರಿಪಡಿಸದಿದ್ದರೂ, ಉತ್ತಮವಾಗಿ ಸರಿಪಡಿಸಬೇಕಾದ ದಾರಿಯನ್ನಾದರೂ ತೋರಿಸೋಣ. 

ಇದರ ಮೊದಲ ಹೆಜ್ಜೆಯಾಗಿ ಸೆಪ್ಟೆಂಬರ್‌ 3 ರಿಂದ ಅಕ್ಟೋಬರ್‌ 2ರ ವರೆಗೆ, ಒಟ್ಟು ಮೂವತ್ತು ದಿನಗಳು ನದಿಗಳ ಉಳಿವಿಗಾಗಿ ರ್ಯಾಲಿಯನ್ನು ಹಮ್ಮಿಕೊಂಡಿದ್ದೇವೆ. 16 ರಾಜ್ಯಗಳ ಮೂಲಕ ಹಾದು, 7000 ಕಿ.ಮೀ ನಾನೇ ಖುದ್ದಾಗಿ ವಾಹನ ಚಲಾಯಿಸುತ್ತಿದ್ದೇನೆ ಮತ್ತು 23 ಪ್ರಮುಖ ನಗರಗಳಲ್ಲಿ ನದಿಗಳನ್ನು ಉಳಿಸಲು ಬಲವಾಗಿ ಪ್ರೇರೇಪಿಸುವಂತಹ ವಿವಿಧ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದೇವೆ. ಈ ಅಭಿಯಾನವು ದೆಹಲಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಅಲ್ಲಿ ನಾವು ನದಿಗಳ ಪುನಃಶ್ಚೇತನದ ಕಾರ್ಯನೀತಿಗಳ ಮಂಡನೆಯನ್ನು ಸರ್ಕಾರಕ್ಕೆ ಒಪ್ಪಿಸುತ್ತೇವೆ. ನಾವು ಈ ಜಾಗೃತಿಯನ್ನು ದೇಶದೆಲ್ಲೆಡೆ ಇರುವ ಜನರಲ್ಲಿ ಮೂಡಿಸಿ, ಎಲ್ಲರೂ ಒಮ್ಮತದಿಂದ ಇದನ್ನು ಪಾಲಿಸಿದರೆ, ಖಂಡಿತವಾಗಿ ಇದು ಸಫಲವಾಗುತ್ತದೆ. ಇದು ನಮ್ಮ ದೇಶಕ್ಕೂ ಭಾರಿ ಯಶಸ್ಸಾಗುತ್ತದೆ ಮತ್ತು ನಮ್ಮ ಮುಂದಿನ ಪೀಳಿಗೆಯ ಏಳಿಗೆಗೂ ನಾಂದಿಯಾಗುತ್ತದೆ.

ಸದ್ಗುರು ಜಗ್ಗಿ ವಾಸುದೇವ ಆಧ್ಯಾತ್ಮಿಕ ಗುರು

ಟಾಪ್ ನ್ಯೂಸ್

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.